Saturday, August 30, 2008

ಎಂಟನೇ ತಿಂಗಳ ಹುಟ್ಟು ಹಬ್ಬ !!

ಪುಟ್ಟಿ ಬೀಗ ಬೇಗ ದೊಡ್ಡವಳು ಆಗ್ತಾಯಿದ್ದಾಳೆ ಅನ್ನಿಸ್ತಾಯಿದೆ. ಆಗ್ಲೆ ಎಂಟನೇ ತಿಂಗಳ ಹುಟ್ಟು ಹಬ್ಬ ಬಂತು. ಈ ಸರ್ತಿ ಅವಳ ಜೊತೆ ಆಡಿ ನಲಿಯಲು ಬಂದವರು ಅವಳಿ ಅಕ್ಕ ತಂಗಿ, ಸಹನಾ - ಸುರಭಿ :) ತನ್ನ ಊಟದ ಚೇರ್ -ಹೈಚೇರ್ ನಲ್ಲಿ ಕುಳಿತು ಕೊಕೊನಟ್ ಕೇಕ್ ಕಟ್ ಮಾಡಿದ್ಲು. ಅವರಪ್ಪ ತಂದಿದ್ದ ಹೊಸ ಕುದುರೆಯೇರಿ ಆಟವಾಡಿದ್ಲು. ಮೂರೂ ಜನ ನಕ್ಕು ನಲಿದ್ರು. ಅವರ ಸಂತಸದಲ್ಲಿ ದೊಡ್ಡವರೂ ಜೊತೆಗೂಡಿದೆವು.

ಅಪ್ಪ ನನಗೆ ತಂದಕುದುರೆ
ಹಾಲಿನಂತ ಮೈಯ್ಯ ಬಿಳಿ ಕುದುರೆ
ನೀಲಯ ಬಾಲದ ಪುಟ್ಟು ಕುದುರೆ
ಕೆಂಪನೆ ಸೀಟಿನ ಅಂದದ ಕುದುರೆ !!



ಹೆಜ್ಜೆ ಹೆಜ್ಜೆಗೆ ಕುಣಿಯುವ ಕುದುರೆ
ಬ್ಯಾಟರಿಯ ಹಾಕಿದರೆ ನಡೆಯುವ ಕುದುರೆ
ಹಾಡನು ಹೇಳುತಾ ನಲಿಸುವ ಕುದುರೆ
ನನ್ನಯ ಮುದ್ದಿನ ಚೆಂದದ ಕುದುರೆ !!

Saturday, August 16, 2008

ನಮ್ಮ್ ಮನೆ ಪುಟ್ಟ್ ಲಕ್ಷ್ಮಿ !!

ವರಮಹಾಲಕ್ಷ್ಮಿ ಹಬ್ಬಕ್ಕೆ ಪುಟ್ಟಿ ಅವರಜ್ಜಿ ತಂದಿದ್ದ ರೇಶ್ಮೆ ಲಂಗ, ತಾತ ಕಳ್ಸಿದ್ದ ಸರ ಎಲ್ಲಾ ಹಾಕೊಂಡು ಮನೆ ತುಂಬಾ ಓಡಾಡಿದ್ಲು(ತೆವಳಿದ್ಲು). ಮನೆಗೆ ಬಂದ ಗೆಳೆಯರೆಲ್ಲಾ ಅವರಮ್ಮ ಕೂರ್ಸಿದ್ದ ದೇವಿಗಿಂತಾ ಈ ಪುಟ್ಟ್ ಲಕ್ಷ್ಮಿನೇ ನೋಡುವಂತೆ ಮಾಡಿದ್ಲು !!
ಇದೇ ಲಂಗನ ಅವಳು ೩ ತಿಂಗಳ ಮಗು ಇದ್ದಾಗ ಯುಗಾದಿಗೆ ಹಾಕೊಂಡಿದ್ಲು. ಆಗ ಅದು ಅವ್ಳಿಗೆ ತುಂಬಾ ದೊಡ್ಡದಿತ್ತು.