ವರುಷದ ಮೊದಲು
ಬಂದಿತು ಹಬ್ಬ
ಯುಗಾದಿ ಅದರ ಹೆಸರಣ್ಣ
ಬಂದಿತು ಹಬ್ಬ
ಯುಗಾದಿ ಅದರ ಹೆಸರಣ್ಣ
ಬೇವು ಬೆಲ್ಲವ ತಿಂದು
ಕಷ್ಟ ಸುಖ ಸಮನಾಗಿ
ನೋಡೋಣ ಬಾರಣ್ಣ
ಕಷ್ಟ ಸುಖ ಸಮನಾಗಿ
ನೋಡೋಣ ಬಾರಣ್ಣ
ಎಣ್ಣೆಯ ಹಚ್ಚಿ
ಸ್ನಾನ ಮಾಡಿ
ಹೊಸ ಬಟ್ಟೆಯನು ಧರಿಸೋಣ
ಮಾವಿನ ಬೇವಿನ
ತೋರಣ ಮಾಡಿ
ಬಾಗಿಲಿಗೆ ಕಟ್ಟೋಣ
ಸ್ನಾನ ಮಾಡಿ
ಹೊಸ ಬಟ್ಟೆಯನು ಧರಿಸೋಣ
ಮಾವಿನ ಬೇವಿನ
ತೋರಣ ಮಾಡಿ
ಬಾಗಿಲಿಗೆ ಕಟ್ಟೋಣ
ಭಟ್ಟರು ಓದುವ
ಪಂಚಾಂಗವ ಕೇಳೋಣ
ಅಮ್ಮನು ಮಾಡುವ
ಬಿಸಿಬಿಸಿ ಹೋಳಿಗೆ
ಸವಿಯನು ಸವಿಯೋಣ
ಹಬ್ಬದೂಟವ ಮಾಡೋಣ
ಬಿಸಿಬಿಸಿ ಹೋಳಿಗೆ
ಸವಿಯನು ಸವಿಯೋಣ
ಸಾಲಲಿ ಕೂತು
ಬಾಳೆಯ ಎಲೆಯಲ್ಲಿಹಬ್ಬದೂಟವ ಮಾಡೋಣ
ತಿಂದು ತೇಗಿ
ಆಟವ ಆಡಿಎಲ್ಲರಿಗೂ ಶುಭವ ಕೋರೋಣ
--ರೂpaश्रीಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು!! ಬೆಂಗ್ಳೂರಿಂದ ಅಜ್ಜಿ-ತಾತಾ ಬಂದಿರೋದ್ರಿಂದ ಪುಟ್ಟಿ ಈಗ ಬಹಳ ಬಿಜಿ. ಜೊತೆಗೆ ನನ್ನ ಕೆಲಸ ಹೆಚ್ಚಾಗಿ/ ಸೋಮಾರಿತನ ಜಾಸ್ತಿಯಾಗಿ ಪುಟ್ಟಿ ಬ್ಲಾಗ್ ಇದುವರೆಗೆ ಒಂದು ಸಣ್ಣ ಬ್ರೇಕ್ ತಗೊಂಡಿತ್ತು. ಪ್ರೀತಿಯಿಂದ ವಿಚಾರಿಸಿದ ಎಲ್ಲರಿಗೂ ವಂದನೆಗಳು:)
ಮತ್ತೆ ಸಿಗೋಣ!
ಮತ್ತೆ ಸಿಗೋಣ!