Showing posts with label ಪುಟ್ಟಿ ಫೋಟೋಸ್. Show all posts
Showing posts with label ಪುಟ್ಟಿ ಫೋಟೋಸ್. Show all posts

Monday, January 16, 2012

ಸಂಕ್ರಾಂತಿ 2012

ಈ ವರ್ಷ ಸಂಕ್ರಾಂತಿ ಹಬ್ಬದ ಫೋಟೋಗಳು ಇಲ್ಲಿವೆ

Tuesday, March 29, 2011

ಗೌರ್ನ್ ಮೆಂಟ್ ಬಸ್ಸಲ್ಲಿ...

Buzzers ನವರ ಶಿಶುಗೀತೆಗಳ ವಿಡಿಯೋ ಸಿಡಿ ’ಚಿನ್ನಾರಿ ಮುತ್ತಿನ ಹಾಡುಗಳು". ಇದರ ಎಲ್ಲಾ ಹಾಡುಗಳು ಈಗ ಬಹಳಷ್ಟು ಜನಪ್ರಿಯ ಜೊತೆಗೆ ಇವು ಯೂಟ್ಯೂಬಿನಲ್ಲಿ ಕೂಡ ಲಬ್ಯವಿದೆ. ಇವರದೇ ಎರಡನೆ ವಿಡಿಯೋ ಸಿಡಿ 'ಚಿಣ್ಣರ ಚಿಲಿಪಿಲಿ’ ಯಲ್ಲಿನ ಬಹಳಷ್ಟು ಕನ್ನಡ ಪದ್ಯ( ರೈಮ್ಸ್) ಪುಟ್ಟಿ ಈಗ ಕಲ್ತಿದ್ದಾಳೆ. ಅದರ ಒಂದು ರೈಮ್ ಪುಟ್ಟಿ ಹಾಡೋದು ಹೀಗೆ :


ಗೌರ್ನ್ ಮೆಂಟ್ ಬಸ್ಸಲ್ಲಿ
ಮೂರ್ನೆ ಸೀಟಲ್ಲಿ
ಡುಮ್ಮ ಡುಮ್ಮಿ ಕೂತಿದ್ರು
ಡುಮ್ಮನ ಹೊಟ್ಟೆ ಹೊಡೆದು ಹೋಯ್ತು
ಡುಮ್ಮಿ ಅಳ್ತಾ ಕೂತಿದ್ಲು

ಇದೇ ತರಹ ನಾವು ಚಿಕ್ಕಂದಿನಲ್ಲಿ ಹಾಡ್ತಾಯಿದ್ದ ಇನ್ನೊಂದು ಹಾಡು ಸ್ವಲ್ಪ ನೆನಪಾಯ್ತು.
ಡುಮ್ಮ ಡುಮ್ಮಿ ಡುಪ್ಲಿಕೇಟ್
Door  ನಂಬರ್ 88 .......

ಮುಂದಕ್ಕೆ ನೆನಪಿಲ್ಲ :(

ವಿ.ಸೂ: ಈ ಸಿಡಿಯಲ್ಲಿರುವ ರೈಮ್ಸ್ ಅನ್ನು ಯೂ ಟ್ಯೂಬಿನಲ್ಲಿ ಅಪ್ಲೋಡ್ ಮಾಡೋದು ಹೇಗೆ ಗೊತ್ತಿದ್ರೆ ತಿಳಿಸಿ. ಇವೆಲ್ಲಾ swf ಫೈಲ್ಸ್ ಜೊತೆಗೆ ಕಾಪಿರೈಟೆಡ್ ಬೇರೆ!!

Tuesday, January 04, 2011

ಹುಟ್ಟುಹಬ್ಬ ಪಾರ್ಟಿ ಫೋಟೋಗಳು..

 ಪುಟ್ಟಿ
  
 ಸ್ನೇಹಿತರು
ಕೇಕ್ ಕತ್ತರಿಸುತ್ತಾ..


ಮಿಕ್ಕ ಫೋಟೋಗಳು ಮತ್ತು ಆಡಿದ ಆಟಗಳ ವಿವರ ಮುಂದಿನ ಪೋಸ್ಟ್ ನಲ್ಲಿ...

Monday, October 25, 2010

ಮಲ್ಟಿ ಕಲ್ಚರ್ ಡೇ!!

ಪುಟ್ಟಿ ಶಾಲೆಯಲ್ಲಿ ನಿನ್ನೆ ಭಾನುವಾರ ’ಮಲ್ಟಿ ಕಲ್ಚರ್ ಡೇ’ ಆಚರಿಸಿದರು. ಎಲ್ಲರೂ ಅವರವರ ದೇಶದ ಉಡುಗೆ ತೊಟ್ಟು ಹೋಗಬೇಕಿತ್ತು. ಪುಟ್ಟಿ ಎಂದಿನಂತೆ ಉತ್ಸಾಹದಿಂದ ಸಿಂಗರಿಸಿಕೊಂಡು ಹೊರಟಳು. ಅಲ್ಲಿ ಎಲ್ಲಾ ಮಕ್ಕಳಿಂದ ಒಂದು ಸಣ್ಣ ಕಾರ್ಯಕ್ರಮವೂ ಇತ್ತು. ಅದರ ವಿಡಿಯೋ ತುಣುಕು.....

ನಮ್ಮ ತ್ರಿರಂಗ..
ನೆಚ್ಚಿನ ಐರೀನ್ ಜೊತೆಯಲ್ಲಿ...

ಇದಾದ ನಂತರ ಎಲ್ಲರ ಜೊತೆಗೂಡಿ ಊಟ ಮಾಡುವ ಕಾರ್ಯಕ್ರಮ. ಎಲ್ಲರೂ ಅವರವರ ದೇಶದ ಒಂದು ಅಡಿಗೆಯನ್ನು ತಂದಿದ್ದರು. ಇದೊಂದು ತರಹ ವಿಶೇಷ ಅನುಭವ!!
ನಮ್ಮ ಶ್ಯಾವಿಗೆ ಪಾಯಸ...

Wednesday, August 18, 2010

ಅಪ್ಪನಿಗೆ ಬುದ್ಧಿವಾದ ....


ಇವತ್ತು ಬೆಳಗ್ಗೆ ತಿಂಡಿಗೆ ರೊಟ್ಟಿ ತಿನ್ನೋವಾಗ ಹೇಮಂತ್ ಒಂದೂವರೆ ತಿಂದು ನಂಗೆ ಸಾಕಾಯ್ತು ಅಂದ್ರು. ನಾನು ಇನ್ನರ್ಧ ತಿನ್ನಿ ಅಂದೆ. ಅವರು ಸುಮ್ನೆ ಯಾಕೆ ನಂಗೆ ಬಲವಂತ ಮಾಡ್ತೀಯ ಬೇಡ ಅಂದ್ರು. ನಾನು ಸುಮ್ಮನಿರದೆ, ಅರ್ಧ ರೊಟ್ಟಿ ಹೆಚ್ಚೇನಾಗೊಲ್ಲ ತಿನ್ನಿ ಅಂತ ವತ್ತಾಯಿಸುತ್ತಿದ್ದೆ. ಅಡುಗೆಮನೆಲಿ exhaust fan ಓಡ್ತಾಯಿದ್ದರಿಂದ ಸ್ವಲ್ಪ ಧ್ವನಿ ಏರಿಸಿ ಮಾತಾಡುತ್ತಿದ್ದೆ. ಅವರೂ ಬೇಡ ಬೇಡ ಅಂತನೇ ಇದ್ದ್ರು. ಅಷ್ಟ್ರಲ್ಲಿ ತನ್ನ ಡ್ರಾಯಿಂಗ್ ಟೇಬಲ್ ನಲ್ಲಿ ತಿಂಡಿ ತಿನ್ನುತ್ತಿದ್ದ ಪುಟ್ಟಿ ಬಂದು “ಅಪ್ಪ ಸುಮ್ನೆ ರೊಟ್ಟಿ ತಿನ್ನು, ಅಮ್ಮ ಕೊಟ್ಟಿದ್ದು ನಾನು ತಿಂತಾಯಿಲ್ಲ(ತಿಂತಾಯಿಲ್ವಾ) ಹಂಗೆ ತಿನ್ನು” ಅಂತಂದ್ಲು. ಆಹಾ! ನನ್ನ ಖುಶಿಗೆ ಮಿತಿಯೇ ಇರಲಿಲ್ಲJ

Thursday, May 06, 2010

ಯಾರು ನಗಿಸಿದರೋ ನಿನ್ನ ಕಂದ ....


ಯಾರು ನಗಿಸಿದರೋ
ನಿನ್ನ ಕಂದ ..
ನಿನ್ನ ನಗುವೆ ನಮಗೆಲ್ಲ
ಆನಂದ ಆನಂದ...

ಪೀಲಾಂಗೋವಿ ಕಳ್ಳ ಕೃಷ್ಣ
ನಿನ್ನ ನಗಿಸಿದನ?
ತನ್ನ ನವಿಲುಗರಿಯಿಂದ
ತನ್ನ ಮುರಳಿ ರಾಗದಿಂದ
ನಿನ್ನ ನಗಿಸಿದನಾ ಕಂದ ಕಂದ....?

ಏಕದಂತ ಗಣಪಾ
ನಿನ್ನ ನಗಿಸಿದನ?
ತನ್ನ ಸೊಂಡಲಿಂದ
ತನ್ನ ಡುಮ್ಮು ಹೊಟ್ಟೆಯಿಂದ
ನಿನ್ನ ನಗಿಸಿದನಾ ಕಂದ ಕಂದ...?

ಕಪಿಯರಾಜ ಹನುಮ
ನಿನ್ನ ನಗಿಸಿದನ?
ತನ್ನ ಬಲದಿಂದ
ತನ್ನ ಕಪೀಚೆಸ್ಟೆಯಿಂದ
ನಿನ್ನ ನಗಿಸಿದನಾ ಕಂದ ಕಂದ... ?


ಈ ಪದ್ಯ ಇಲ್ಲಿಂದ ಎರವಲು ಪಡೆದದ್ದು...

Thursday, October 30, 2008

ಹತ್ತರ ಗಮ್ಮತ್ತು !!!

ಮಕ್ಕಳಿಗೆ ಅಂಕಿ/ಲೆಕ್ಕ ಕಲಿಸುವ "ಹತ್ತು ಹತ್ತು ಇಪ್ಪತ್ತು ತೋಟಕೆ ಹೋದನು ಸಂಪತ್ತು" ಪದ್ಯ ನಿಮಗೆಲ್ಲ ಗೊತ್ತೇ ಇದೆ. ಇದನ್ನ ನಮ್ಮ್ ಪುಟ್ಟಿ ಹಾಡೋದು ಹೀಗೆ...
ಹತ್ತು ಹತ್ತು ಇಪ್ಪತ್ತು
ಹುಟ್ಟುಹಬ್ಬ ಮತ್ತೆ ಬಂತು
ಇಪತ್ತು ಹತ್ತು ಮೂವತ್ತು
ಮನೆಯವರಿಗೆಲ್ಲ ಸಂತಸ ತಂತು

ಮೂವತ್ತು ಹತ್ತು ನಲವತ್ತು
ನಂಗೆ ಹೊಸ ಬೈಕು ಸಿಕ್ತು

ನಲ್ವತ್ತು ಹತ್ತು ಐವತ್ತು

ಬಲ್ಗೇರಿಯಾ ಕುಟುಂಬ ಮನೆಗೆ ಬಂತು

ಐವತ್ತು ಹತ್ತು ಅರವತ್ತು

ಅವರ್ ಮಗಳು ಸಿಮೋನಾ ಅಂತ ಗೊತ್ತಾಯ್ತು

ಅರ್ವತ್ತು ಹತ್ತು ಎಪ್ಪತ್ತು

ಕೇಕ್ ಕಟ್ ಮಾಡಿ ತಿಂದಾಯ್ತು
ಎಪ್ಪತ್ತು ಹತ್ತು ಎಂಬತ್ತು

ಎಲ್ಲರ ಬಾಯಿ ಸಿಹಿ ಆಯ್ತು


ಎಂಬತ್ತು ಹತ್ತು ತೊಂಬತ್ತು
ಅಮ್ಮ ಕೊಟ್ಟ್ರು ನಂಗೆ ಮುತ್ತು
ತೊಂಬತ್ತು ಹತ್ತು ನೂರು
ಖುಶಿಯಾಗಿ ಎಲ್ಲ್ರೂ ಮನೆಗೆ ಹೋದ್ರು :)

Wednesday, October 01, 2008

ನವರಾತ್ರಿಯ ಕೃಷ್ಣ !!

ಗೋಕುಲಾಷ್ಟಮಿಯಂದು ಪುಟ್ಟಿಯನ್ನ ಕೃಷ್ಣ ಮಾಡಿ ಆನಂದಿಸಲು ಅವರಮ್ಮ ವಿಫಲ ಪ್ರಯತ್ನ ಮಾಡಿದ್ರು. ಮೊದಲೇ ಪುಟ್ಟಿಯಮ್ಮನಿಗೆ ಕಚ್ಚೆ ಉಡಿಸಲು ಬರೋಲ್ಲ, ಜೊತೆಗೆ ಪುಟ್ಟಿಯ ತುಂಟಾಟ. ಅಂತೂ ಇಂತೂ ೩-೪ ಸರಿ ಪ್ರಯತ್ನಿಸಿ ಕೈ ಚೆಲ್ಲಿದ್ದರು. ನಂತರ ಎಲ್ಲರ ಮನೆಯ ಕಂದಮ್ಮಗಳು ಕೃಷ್ಣ-ರಾಧೆಯರಾಗಿ ಮೆರೆದ ಫೋಟೋಗಳನ್ನು ನೋಡಿದ ಮೇಲೆ, ಮತ್ತೊಮ್ಮೆ ಪ್ರಯತ್ನಿಸೋಣ ಅಂತ ನವರಾತ್ರಿಯ ಮೊದಲ ಪುಟ್ಟಿಯನ್ನ ಪುಸಲಾಯಿಸುತ್ತಾ ಪಂಚೆ ಸುತ್ತಿದರು. ಅವತ್ತು ಅವಳ ೯ನೇ ತಿಂಗಳ ಬರ್ತ್-ಡೇ ಆದ್ದರಿಂದಲೋ ಏನೋ ಪುಟ್ಟಿ ಸಲೀಸಾಗಿ ರೆಡಿ ಆಗಿಬಿಟ್ಟಳು. ಅಮ್ಮ ಮಗಳ ಫೋಟೋ ತೆಗೆದು ಊರಿನವರಿಗೆಲ್ಲ ತೋರ್ಸಿದ್ದೇ ತೋರ್ಸಿದ್ದು :)

Tuesday, September 30, 2008

ನವರಾತ್ರಿಗೆ ನವಮಾಸ!!!

ನವರಾತ್ರಿಗೆ ನವಮಾಸಗಳು ತುಂಬಲು
ಮತ್ತೆ ಬಂದರು ಫ್ರೆಂಡ್-ಗಳು
ಅಪ್ಪ ತಂದರು ಪಿಯಾನೋ ಆಡಲು
ಹೊಸ ಡಿಸ್ನಿ ಚೇರ್ ಕೂರಲು
ಅಮ್ಮ ಮಾಡಿದರು ಸಿಹಿ ತಿನ್ನಲು


ಆಕಾಶ್-ಸಾಗರ್ ಸೋದರರು

ನನ್ನ ಜೊತೆಗೂಡಿ ಆಟವಾಡಿದರು

ಅವರಪ್ಪ-ಅಮ್ಮ ಸಂತಸದಿ ನನ್ನ ಹರಸಿದರು

ಅವರಜ್ಜ ನಗುನಗುತಿರೆಂದು ಹಾರೈಸಿದರು



Saturday, September 27, 2008

ಬಾ ಬಾ ಗಿಳಿಯೆ

ಪ್ರತಿ ವರ್ಷ ನಡೆಯೋ ಏಷಿಯನ್ ಫೆಸ್ಟಿವಲ್ ನೋಡಲು ಒಂಬತ್ತು ತಿಂಗಳ ಕಂದ ಪುಟ್ಟಿ ಅಪ್ಪನ ಜೊತೆ ಹೋಗಿದ್ಲು. ಅಲ್ಲಿ ನೋಡಿದ ಬಣ್ಣಬಣ್ಣದ ನ್ಯೂಜಿಲ್ಯಾಂಡಿನ ಗಿಳಿಗಳನ್ನ ನೋಡಿ ಖುಶಿಪಟ್ಟ್ಲು.


ಬಾ ಬಾ ಗಿಳಿಯೆ, ಬಣ್ಣದ ಗಿಳಿಯೇ
ಹಣ್ಣನು ಕೊಡುವೆನು ಬಾ ಬಾ,
ಹಸಿರು ಪುಕ್ಕದ ಚಂದದ ಗಿಳಿಯೆ
ನನ್ನೊಡನಾಡಲು ಬಾ ಬಾ.

ಕೆಂಪು ಮೂಗಿನ ಮುದ್ದಿನ ಗಿಳಿಯೆ
ಹಾಡನು ಕಲಿಸುವೆ ಬಾ ಬಾ,
ಮರದಲಿ ಕುಳಿತು ನೋಡುವೆ ಏಕೆ
ಹಾರುತ ಹತ್ತಿರ ಬಾ ಬಾ.

ಠಕ್ಕಿನ ಕಾಮಿ ಮನೆಯೊಳಗಿಲ್ಲ
ಹೆದರುವೆ ಏಕೆ ಬಾ ಬಾ,
ಸೊಕ್ಕಿನ ಟಾಮಿ ಹತ್ತಿರವಿಲ್ಲ
ಕುಣಿಕುಣಿದಾಡುತ ಬಾ ಬಾ.

ಹಾಡುವುದನ್ನು ಕಲಿಸುವೆ ನಿನಗೆ
ಹಾರಲು ಕಲಿಸಲು ಬಾ ಬಾ,
ಹಣ್ಣನು ತಿಂದು, ಹಾಲನು ಕುಡಿದು
ಮುಗಿಲಿಗೆ ಹಾರುವ ಬಾ ಬಾ.


-ಶಂಕರಗೌಡ ಗುರುಗೌಡ ಬಿರಾದಾರ

Wednesday, September 03, 2008

ನಮ್ಮ್ ಪುಟ್ಟ್ ಗೌರಿ !!!

ನಮ್ಮ್ ಪುಟ್ಟಿ ಗಣೇಶ ಹಬ್ಬದ ದಿನ ತನ್ನಜ್ಜಿ ಕೊಟ್ಟ ಗಾಗ್ರಾ ಹಾಕೊಂಡು ಮನೆತುಂಬಾ ಅಂಬೆಗಾಲಿಟ್ಟು ಓಡಾಡಿದ್ಲು. ಆಶ್ಚರ್ಯದ ವಿಷ್ಯ ಅಂದ್ರೆ ಎಲ್ಲವನ್ನೂ ಎಳೆಯಲು ಮುಂದಾಗುವ ನಮ್ಮ್ ಪುಟ್ಟಿ ಅವರಮ್ಮ ಮಾಡಿದ್ದ ಮಣ್ಣಿನ ಗಣಪನ ಅಲಂಕಾರವನ್ನ ಯಾಕೋ ದೂರದಿಂದಲೇ ನೋಡಿ ಖುಶಿ ಪಟ್ಟಳು. ಅಂದು ಮನೆಗೆ ಬಂದವರಿಗೆಲ್ಲಾ ಎಂದಿನಂತೆ ಹಾಯ್ ಹೇಳುವ ಬದಲು "ತಾರಮ್ಮಯ್ಯ" ಅನ್ನುವಂತೆ ತನ್ನ ಪುಟ್ಟು ಕೈಗಳನ್ನ ಆಡಿಸ್ತಿದ್ದ್ಲು. ರಾಗ ನಾದನಾಮಕ್ರಿಯ/ಆದಿ ತಾಳ

ತಾರಮ್ಮಯ್ಯ, ಯದುಕುಲ ವಾರಿಧಿ ಚಂದ್ರಮನ /ಪಲ್ಲವಿ /
ಮಾರಜನಕನ ಮೋಹನಾಂಗನ ಸೇರಿ ಸುಖಿಸಲು ಹಾರೈಸಿ ಬಂದೆವು /ಅನು ಪಲ್ಲವಿ /
ಬಿಲ್ಲ ಹಬ್ಬಗಳಂತೆ, ಅಲ್ಲಿ ಬೀದಿ ಶೃಂಗಾರವಂತೆ
ಮಲ್ಲರ ಕಾಳಗ ಮದ್ದಾನೆಯಂತೆ
ಪುಲ್ಲಾಕ್ಷನು ತಾನಲ್ಲಿಗೆ ತೆರಳಿದ /೧ /
ಮಧುರಾಪುರಿಯಂತೆ, ಅಲ್ಲಿ ಮಾವ ಕಂಸನಂತೆ
ಒದಗಿದ ಮದಗಜ ತುರಗ ಸಾಲಿನಲಿ
ಮದಮೋಹನ ಕೃಷ್ಣ ಮಧುರೆಗೆ ತೆರಳಿದ /೨/
ಅತ್ತೆ ಮಾವನ ಬಿಟ್ಟು, ಬಂದೆವು ಹಿತ್ತಲ ಬಾಗಿಲಿಂದ
ಭಕ್ತವತ್ಸಲನ ಬಹು ನಂಬಿದ್ದೆವು
ಉತ್ಸಾಹ ಭಂಗ ಮಾಡಿದನಮ್ಮ /೩ /
ರಂಗನ ಸೆರೆ ನಂಬಿ ಬಂದೆವು ಸಂಗ ಸುಖವ ಬಯಸಿ
ಭಂಗಿಸಿ ನಮ್ಮನು ಹ್ಯಾಂಗೆ ಪೋದನಮ್ಮ
ಮಂಗಳಮೂರುತಿ ಮದನಗೋಪಾಲನು /೪ /
ಶೇಷಗಿರಿಯ ಮೇಲೆ, ಹರಿ ತಾ ವಾಸವಾಗಿಹ ಕಾಣೆ
ಸಾಸಿರನಾಮದ ಒಡೆಯನೆಂದೆನಿಸಿದ
ಶ್ರೀಶ ಪುರಂದರವಿಠ್ಠಲರಾಯನ /೫ /
~~~ * ~~~
[ಶ್ರೀ ಕೃಷ್ಣನು ಗೋಕುಲವನ್ನು ಬಿಟ್ಟು, ಮಥುರೆಗೆ ಹೋದ ಸಂಗತಿ ತಿಳಿದು ಗೋಕುಲದ ಗೋಪಿಯರು ಕೃಷ್ಣನ ವಿರಹದಿಂದ ವ್ಯಾಕುಲಗೊಂಡ ಬಗೆ ಇಲ್ಲಿ ವರ್ಣಿತವಾಗಿದೆ]

Saturday, August 30, 2008

ಎಂಟನೇ ತಿಂಗಳ ಹುಟ್ಟು ಹಬ್ಬ !!

ಪುಟ್ಟಿ ಬೀಗ ಬೇಗ ದೊಡ್ಡವಳು ಆಗ್ತಾಯಿದ್ದಾಳೆ ಅನ್ನಿಸ್ತಾಯಿದೆ. ಆಗ್ಲೆ ಎಂಟನೇ ತಿಂಗಳ ಹುಟ್ಟು ಹಬ್ಬ ಬಂತು. ಈ ಸರ್ತಿ ಅವಳ ಜೊತೆ ಆಡಿ ನಲಿಯಲು ಬಂದವರು ಅವಳಿ ಅಕ್ಕ ತಂಗಿ, ಸಹನಾ - ಸುರಭಿ :) ತನ್ನ ಊಟದ ಚೇರ್ -ಹೈಚೇರ್ ನಲ್ಲಿ ಕುಳಿತು ಕೊಕೊನಟ್ ಕೇಕ್ ಕಟ್ ಮಾಡಿದ್ಲು. ಅವರಪ್ಪ ತಂದಿದ್ದ ಹೊಸ ಕುದುರೆಯೇರಿ ಆಟವಾಡಿದ್ಲು. ಮೂರೂ ಜನ ನಕ್ಕು ನಲಿದ್ರು. ಅವರ ಸಂತಸದಲ್ಲಿ ದೊಡ್ಡವರೂ ಜೊತೆಗೂಡಿದೆವು.

ಅಪ್ಪ ನನಗೆ ತಂದಕುದುರೆ
ಹಾಲಿನಂತ ಮೈಯ್ಯ ಬಿಳಿ ಕುದುರೆ
ನೀಲಯ ಬಾಲದ ಪುಟ್ಟು ಕುದುರೆ
ಕೆಂಪನೆ ಸೀಟಿನ ಅಂದದ ಕುದುರೆ !!



ಹೆಜ್ಜೆ ಹೆಜ್ಜೆಗೆ ಕುಣಿಯುವ ಕುದುರೆ
ಬ್ಯಾಟರಿಯ ಹಾಕಿದರೆ ನಡೆಯುವ ಕುದುರೆ
ಹಾಡನು ಹೇಳುತಾ ನಲಿಸುವ ಕುದುರೆ
ನನ್ನಯ ಮುದ್ದಿನ ಚೆಂದದ ಕುದುರೆ !!

Wednesday, July 30, 2008

ಏಳು ತಿಂಗಳು ತುಂಬಿತು...

ನಮ್ಮ್ ಪುಟ್ಟಿಗೆ ಇವತ್ತಿಗೆ ಏಳು ತಿಂಗಳು ತುಂಬಿತು. ಸ್ವಲ್ಪ ಸಪೊರ್ಟ್ ಕೊಟ್ಟರೆ ಆರಾಮಾಗಿ ಕೂರುತ್ತಿದ್ದವಳು, ಈಗ ಸಲೀಸಾಗಿ ತಾನೆ ಆವುದೆ ಅಧಾರವಿಲ್ಲದೇ ಕೂರುತ್ತಾಳೆ. ಅವಳ ಬಿರ್ತ್’ಡೇಗೆ ಅವಳಪ್ಪ ದಿಸ್ನಿ ಪ್ರಿಂಸೆಸ್ಸ್ ಚೇರ್ ತಂದರು ಅದರಲ್ಲಿ ಕೂರೋದು ಪುಟ್ಟಿಗೆ ಬಲು ಇಷ್ಟ. ಬರ್ತ್’ಡೇ ಬಂದಿದ್ದ ’ಅಭಿ ಅಕ್ಕ’ ಕೇಕ್ ಕಟ್ ಮಾಡಿದ ಮೇಲೆ ಪುಟ್ಟಿಗೆ ಒಂದು ಚೂರು ಕೆಕ್ ತಿನ್ನಿಸಿದಳು. ಅದು ನಮ್ಮ್ ಪುಟ್ಟಿಗೆ ಸಾಕಾಗ್ಲಿಲ್ಲ ಅನ್ನ್ ಸುತ್ತೆ, ಎಲ್ಲರೂ ಆಚೀಚೆ ನೋಡುತ್ತಿದ್ದಾಗ ತಾನೆ ಕೈ ಹಾಕಿ ಒಂದು ದೊಡ್ಡ ಪೀಸ್ ಬಾಯಿಗೆ ಇಟ್ಟುಕೊಂಡೇ ಬಿಟ್ಟಳು ಪುಟ್ಟಿ :)

ನನ್ನ ಚಿನ್ನ ನನ್ನ ರನ್ನ
ನಮ್ಮ ಬಾಳ ಭಾಗ್ಯ ತಾರೆ
ಮುದ್ದು ಕಣ್ಮಣಿ
ನೀ ಪ್ರೀತಿ ಅರಗಿಣಿ!



ಮನೆಯ ಬೆಳಗೋ ದೀಪಲಕ್ಷ್ಮಿ ನೀನೆ ಮಗಳೆ
ದಿನ ಮನವ ಬೆಳಗೋ ಆದೀಲಕ್ಷ್ಮಿ ನೀನೇ
ಅದುಕ ಬೆಳಗೋ ಬಾಳ ಸೂರ್ಯ ನೀನೇ ಮಗಳೆ
ನಮ್ಮ ಕುಲವ ಬೆಳಗೋ ಜ್ಯೋತಿದಾರಿ ನೀನೆ
ತೇಲಾಡುವ ಬಿಳಿ ಹಂಸವೇ
ನಗುತಾಯಿರುವಾ ಬೆಳದಿಂಗಳೇ
ಸಿರಿ ಹೂವೆ ನನ್ನ ಒಲವೆ ನಮ್ಮ ಮುದ್ದು ಮಗುವೆ
ನಮ್ಮ ಮನೆಗೆ ಘಣಿಯೇ ನಮ್ಮ ನಲ್ಮೆನಿಧಿಯೇ
//ನನ್ನ ಚಿನ್ನ//






ಗೆಲುವಕೊಡುವ ಧೈರ್ಯಲಕ್ಷ್ಮಿ ನೀನೆ ಮಗಳೆ
ದಿನ ನಲಿವ ತರುವ ವಿಜಯಲಕ್ಷ್ಮಿ ನೀನೇ
ಮುದವ ಕೊಡುವ ನಿಜದ ದೈವ ನೀನೆ ಮಗಳೆ
ನಮ್ಮ ವಂಶ ಬೆಳೆಸೋ ಪ್ರೇಮದ ಕುವರಿ ನೀನೇ
ಒಡನಾಡುವ ಸಿಂಗಾರವೆ
ಹರಿದಾಡುವ ಬಂಗಾರವೆ
ನಮ್ಮ ಉಸಿರೆ ಪ್ರೀತಿ ಹಸಿರೆ
ಕಣ್ಣ ರಮ್ಯಾ ಚೆಲುವೆ
ಮುದ್ದು ಮನಸೆ ನಮ್ಮ ಕನಸೇ
ನಾವು ಪಡೆದ ಪುಣ್ಯವೇ //ನನ್ನ ಚಿನ್ನ//

Monday, July 28, 2008

ನಂಗೀಗ ಕೂರೋಕೆ ಬರುತ್ತೆ !!

ನಾನೀಗ ದೊಡ್ಡ್ ಹುಡ್ಗಿ, ನಂಗೀಗ ಕೂರೋಕೆ ಬರುತ್ತೆ. ಇಷ್ಟ್ ದಿನ ಮಲ್ಗಿ ಮಲ್ಗೀ ತುಂಬಾ ಬೋರ್ ಆಗಿತ್ತು. ಈಗ ಕೂತ್ಕೊಂಡು ಆಟ ಆಡಬಹುದು.
ಬರ್ತೀರಾ ನನ್ನ್ ಜೊತೆ ಆಟ ಆಡೋಕೆ?


ಇದು ABC ಬಾಲ್, ಜೊತೆಗೆ ಹಾಡೂ ಹೇಳುತ್ತೆ !!


ಚೆಂಡಾಟ ಆಡೋಣ ಬರ್ತೀರಾ?


ಆಟ ಆಡಿ ಸಾಕಾಯ್ತು, ಬನ್ನಿ ಊಟ ಮಾಡೋಣ !
ಊಟ ಆಯ್ತು ಈಗ ಪಾಠದ ಟೈಮು..

Thursday, July 17, 2008

ಕೈಗೆ ಸಿಕ್ಕಿದೆಲ್ಲಾ ಬಾಯಿಗೆ :)

ಪುಟ್ಟಿಗೆ ಈಗ ಎಲ್ಲವನ್ನು ತಿನ್ನೋ ಆಸೆ. ಇವಳು ಹೀಗೆ ಮಾಡಲು ಶುರು ಮಾಡಿ ಬಹಳ ದಿನ/ ತಿಂಗಳೇ ಆಯಿತು. ನೋಡಿದವರೆಲ್ಲಾ ಹಲ್ಲು ಬರುತ್ತಿರಬೇಕು ಅನ್ನುತ್ತಾರೆ. ಇವನೆಲ್ಲಾ ಇಷ್ಟು ಸಲೀಸಾಗಿ ಬಾಯಿಗೆ ಹಾಕೊಳ್ಳೊ ನನ್ನ್ ಕಂದ ಊಟ ಮಾಡಲು ಕುಳಿತರೆ, ಬಾಯೇ ಬಿಡೊಲ್ಲ. ಕೈಗೆ ಸಿಕ್ಕ ಆಟದ ಸಾಮನು, ಬಟ್ಟೆ, ಪೆನ್ನು, ಫೋನು, ಪೇಪರ್... ಹೀಗೆ ಎಲ್ಲವೂ ಪುಟ್ಟಿ ಬಾಯಿಗೆ ಹೋಗ್ತಾಯಿದೆ.

ಆಹಾ ಏನು ರುಚಿಯಾಗಿದೆ ಗೊತ್ತಾ ನನ್ನ ಈ ಪುಟ್ಟ crab!

ಇದು ನನ್ನ ಟೀತರ್ .... ಒಳಗೆ ನೀರು ತುಂಬಿರೋದ್ರಿಂದ ಅಗಿಯಲು ಬಲು ಮಜಾ...

ನೀವು ಟ್ರೈ ಮಾಡ್ತೀರಾ ಒಂದ್ ಸರ್ತಿ?


ಚಿಕ್ಕ ಸ್ಪೂನ್’ನಲ್ಲಿ ಊಟ ಮಾಡಿ ತುಂಬಾ ಬೋರ್ ಆಗಿದೆ.. ಇದ್ರಲ್ಲಿ ತಿಂದ್ರೆ ಹೇಗೆ.. ಊಟ ಬೇಗ ಖಾಲಿ ಆಗುತ್ತೆ, ಆಮೇಲೆ ಆಟ ಆಡ್-ಬಹುದು ಅಲ್ವಾ? ನೀವ್ ಎನ್ ಅಂತೀರಾ?



ನಮ್ಮ್ ಮನೆ ಕಿಟಕಿ ಬ್ಲೈಂಡ್ಸ್ ಸಕ್ಕತ್ ಸಿಹಿಯಾಗಿದೆ ಗೊತ್ತಾ ?



ಟಿ.ವಿ ರಿಮೋಟ್’ನ ಬಾಯಲ್ಲಿ ಹ್ಯಾಂಡಲ್ ಮಾಡೋದು ಹೇಗೆ ಅಂತಾ ಪ್ರ್ಯಾಕ್ಟೀಸ್ ಮಾಡ್ತಾಯಿದ್ದೀನಿ :)





ಇದು ನನ್ನ ಫೇವರೇಟ್.. ಅಪ್ಪನ ಕಾಫಿ ಮಗ್!

Wednesday, July 02, 2008

ಫ್ಲೋರಿಡಾದಲ್ಲಿ ತುಂಬಾ ಬಿಸಿಲು !!!

ಫ್ಲೋರಿಡಾದಲ್ಲಿ ತುಂಬಾ ಬಿಸಿಲು ... ಅಮ್ಮ ಅಪ್ಪ, ನೀವ್ ಮಾತ್ರ ಕಣ್ಣಿಗೆ ತಂಪು ಕನ್ನಡಕ ಹಾಕ್ತೀರಾ, ನಂಗೂ ಬೇಕು ಕೊಡ್ಸಿ ಅಂತ ಯಾವಾಗಲೂ ಅಪ್ಪನ ಅಮ್ಮನ ಕಣ್ಣಿಗೆ ಕೈ ಹಾಕ್ತಾಯಿದ್ದಳು ಪುಟ್ಟಿ. ಸರಿ, ತಗೋ ಕಂದ ನಿನ್ನದೇ ಗಾಗಲ್ಸ್ ಹಾಕಿ ನಲಿದಾಡು ಅಂತ ಅವರಪ್ಪ ಅವಳಿಗೇಂತ ತಂದೇಬಿಟ್ಟರು. ಪುಟ್ಟಿಗೆ ಖುಷಿಯೋ ಖುಷಿ :)


Monday, June 30, 2008

ಪುಟಿಗೀಗ ಆರು !!!

ಸಮಯ ಎಷ್ಟು ಬೇಗ ಕಳೆಯುತ್ತೆ ಗೊತ್ತೆ ಆಗೊಲ್ಲ. ಆಗ್ಲೇ ನಮ್ಮ್ ಪುಟ್ಟಿಗೆ ಆರು ತಿಂಗಳು. ಅವಳೀಗ ಕುರ್ಚಿ ಅಥವಾ ಅಮ್ಮ/ ಅಪ್ಪನಿಗೆ ಒರಗಿ ಕುಳಿತುಕೊಳ್ಳುತ್ತಾಳೆ. ಇಷ್ಟು ದಿನ ತನ್ನ ಬರ್ತ್-ಡೇಗಳಲ್ಲಿ ಅಮ್ಮನ ತೊಡೆಯೇರಿ ಕುಳಿತು ಕೇಕ್ ಕಟ್ ಮಾಡುತ್ತಿದ್ದವಳು ಈ ಸರ್ತಿ ಅಪ್ಪ ತಂದಿದ್ದ ವಾಕರ್ ನಲ್ಲಿ ಕುಳಿತು ಅಮ್ಮ ಮಾಡಿದ್ದ ಚಾಕಲೇಟ್ ಕೇಕ್ ಸವಿದಳು :)

ಪರಷುರಾಮ್ ಚಿತ್ರದಲ್ಲಿ ಡಾ.ರಾಜ್ ಹಾಡಿರುವ ಹಾಡು....

ಲ ಲ ಲ ಲ ಲಾ ಲ ಲ ಲ ಲಾ....
ನಗುತ ನಗುತಾ ಬಾಳು ನೀನು ನೂರು ವರುಷ
ಎಂದು ಹೀಗೆ ಇರಲ್ಲಿ ಇರಲ್ಲಿ ಹರುಷ ಹರುಷ
ಬಾಳಿನ ದೀಪಾ ನೀನ ನಗು, ದೇವರ ರೂಪ ನೀನೆ ಮಗು
ನಗುತ ನಗುತಾ ಬಾಳು ನೀನು ನೂರು ವರುಷ
ಎಂದು ಹೀಗೆ ಇರಲ್ಲಿ ಇರಲ್ಲಿ ಹರುಷ ಹರುಷ
ಉಲ್ಲಾಸದ ಶುಭದಿನಕೆ ಸಂತೋಷವೆ ಉಡುಗೋರೆಯು..

ಹೂವು ನಕ್ಕಗಾತನೆ ಅಂದ ಇರುವುದು ದುಂಬಿ ಬರುವುದು
ಚಂದ್ರ ನಕ್ಕಗಾತನೆ ಬೆಳಕು ಬರುವುದು ಕಡಳು ಕುಣಿವುದೊ
ಸೊರ್ಯ್ನಾಡೊ ಜಾರೋಟ ಬಾನು ನಗಲ್ಲೆಂದೆ
ಬೀಸೊ ಗಾಳಿ ತುಗೊ ಪೈರು ಭೋಮಿ ನಗಲ್ಲೆಂದೆ
ದೇವರು ತಂದ ಶ್ರುಷ್ಟಿಯ ಅಂದ ಎಲ್ಲಾರು ನಗಲ್ಲೆಂದೆ

ನಗುತ ನಗುತಾ ಬಾಳು ನೀನು ನೂರು ವರುಷ
ಎಂದು ಹೀಗೆ ಇರಲ್ಲಿ ಇರಲ್ಲಿ ಹರುಷ ಹರುಷ

ಆಕಾಶದಾಚೆ ಎಲೋ ದೇವರ್ ಇಲ್ಲವೊ ಹುಡುಕಬೆಡವೋ
ಆ ಮಾಯಗಾರ ತಾನು ಗಿರಿಯಲಿಲ್ಲವೋ ಗುಡಿಯಲಿಲ್ಲವೋ
ಪ್ರೀತಿಯಲ್ಲಿ ಸ್ನೆಹದಲ್ಲಿ ಇರವನು ಒಂದಾಗಿ
ತಂಪಿನಲ್ಲು ಕಂಪಿನಲ್ಲು ಬರುವನು ಹಿತಾವಗಿ
ಸಂತಸದಲ್ಲಿ ಸಂಬ್ರಮದಲ್ಲಿ ಮಕ್ಕಳ ನಗುವಾಗಿ

ನಗುತ ನಗುತಾ ಬಾಳು ನೀನು ನೂರು ವರುಷ
ಎಂದು ಹೀಗೆ ಇರಲ್ಲಿ ಇರಲ್ಲಿ ಹರುಷ ಹರುಷ
ಉಲ್ಲಾಸದ ಶುಭದಿನಕೆ ಸಂತೋಷವೆ ಉಡುಗೋರೆಯು..

Friday, May 30, 2008

ಐದು ತಿಂಗಳ ಕಂದ!!!

ಪುಟ್ಟಿಗೆ ಐದು ತಿಂಗಳು ತುಂಬಿತು. ಮತ್ತೊಮ್ಮೆ ಹಬ್ಬ ಮಾಡುವ ಸಮಯ ಬಂತು. ಅಜ್ಜಿ ಅಜ್ಜ ಇಬ್ಬ್ರು ವಾಪಸ್ ಬೆಂಗಳೂರಿಗೆ ಹೋಗಿ ಆಗಿತ್ತು. ಅವರಿಲ್ಲದೆ ಪುಟ್ಟಿಗೆ ಬೇಜಾರಾಗ್ತಾಯಿತ್ತು. ಆದರೆ ಬರ್ತ್ ಡೇಗೆ ಬಂದ ಗೆಳೆಯರ ಮಕ್ಕಳ ಜೊತೆಗೂಡಿ ಆಡಿ ನಲಿದು ಸಂತಸ ಪಟ್ಟಳು ನಮ್ಮ್ ಪುಟ್ಟಿ.


’ಪೆದ್ದಗೆದ್ದ’ ಚಿತ್ರದಲ್ಲಿ ಇರುವ ಈ ಹಾಡು ನಿಮ್ಮಲ್ಲಿ ಯಾರಿಗಾದರು ಪೂರ್ತಿ ಗೊತ್ತಿದ್ದರೆ ಅಥವಾ ನಿಮ್ಮ ಬಳಿ ಈ ಹಾಡಿನ ಲಿಂಕ್ ಇದ್ದರೆ ತಿಳಿಸಿ.

ಬ ಬ ಪ ಬ ಬ ಪ

ಹುಟ್ಟಿದ ಹಬ್ಬ ಬಂದಾಯ್ತು

ಚಿರೋಟಿ ಲಾಡು ತಿಂದಾಯ್ತು

ಹೊಟ್ಟೆ ಎಲ್ಲ ತುಂಬೋಯ್ತು

ಗೌ ಎಂದು ತೇಗಾಯ್ತು!!!