Showing posts with label Birthday. Show all posts
Showing posts with label Birthday. Show all posts

Thursday, December 29, 2011

ಪುಟ್ಟಿಗೆ ನಾಲ್ಕು ವರ್ಷ


ಪುಟ್ಟಿಗೆ ಇವತ್ತಿಗೆ ನಾಲ್ಕು ವರ್ಷ ಅಂದ್ರೆ ನಂಬೋಕೆ ಆಗ್ತಾಯಿಲ್ಲ! ಆಸ್ಪತ್ರೆಯಲ್ಲಿ ಇವಳು ಜನಿಸಿದ ತಕ್ಷ್ಣಣ ಡಾಕ್ಟರ್ "ಓಹ್! ಮುದ್ದಾದ ಮಗು" ಎಂದು ಉದ್ಗರಿಸಿದ್ದು ಈಗಷ್ಟೇ ಕೇಳಿದಂತೆ ಅನಿಸುತ್ತಿದೆ. ಈ ಪುಟ್ಟಿ ನನ್ನ ಮಡಿಲು ತುಂಬಿ ನಾಲ್ಕು ವರ್ಷಗಳಾಗಿವೆ.  ಅಂದಿನ ಮುದ್ದು ಮುಖದಲ್ಲೀಗ ತುಂಟತನ ತುಂಬಿದೆ:)
ಅಪ್ಪ ಅಮ್ಮನ ಮುದ್ದಿನ ಪುಟ್ಟಿಗೆ ಹುಟ್ಟುಹಬ್ಬದ ಶುಭಾಶಯಗಳು!

Tuesday, January 04, 2011

ಹುಟ್ಟುಹಬ್ಬ ಪಾರ್ಟಿ ಫೋಟೋಗಳು..

 ಪುಟ್ಟಿ
  
 ಸ್ನೇಹಿತರು
ಕೇಕ್ ಕತ್ತರಿಸುತ್ತಾ..


ಮಿಕ್ಕ ಫೋಟೋಗಳು ಮತ್ತು ಆಡಿದ ಆಟಗಳ ವಿವರ ಮುಂದಿನ ಪೋಸ್ಟ್ ನಲ್ಲಿ...

Wednesday, December 29, 2010

ಪುಟ್ಟಿಗೆ ಇವತ್ತಿಗೆ ಮೂರು ವರ್ಷ!!


ಮಯ ಎಷ್ಟು ಬೇಗ ಕಳೆದು ಹೋಗುತ್ತದಲ್ಲ? ಮೂರು ವರ್ಷ ನೋಡುತ್ತ ನೋಡುತ್ತ ಕಳೆದು ಹೋಗಿದೆ. ಪುಟ್ಟಿಗೆ ಇವತ್ತಿಗೆ ಮೂರು ವರ್ಷ!!! ನನ್ನನ್ನು ಬ್ಲಾಗ್ ಬರೆಯುವಂತೆ ಮಾಡಿ, ದಿನಕ್ಕೊಂದು ಹೊಸ ಆಟ ಕಲಿತು ಬ್ಲಾಗಿನಲ್ಲಿ ಬರೆಯಲು ಹೊಸ ವಿಚಾರ ಕೊಡುತ್ತಿರುವವಳು ಇವಳು.  ಅವಳೆಷ್ಟೇ ದೊಡ್ಡವಳಾದರೂ ಇಂದಿನ ಮುಗ್ಧತೆ ಹೀಗೆ ಇರಲಿ ಮತ್ತು ಸದಾ ಸಂತಸದಿ ಬಾಳಲಿ ಎಂಬುದೇ ಜನುಮದಿನದಂದು ನನ್ನ ಹಾರೈಕೆ.
ಅಂದ ಹಾಗೆ, ‘ಪ್ರೇಮದ ಕಾಣಿಕೆ’ ಚಿತ್ರದಲ್ಲಿರುವ ಈ ಹುಟ್ಟುಹಬ್ಬದ ಹಾಡು ನೆನಪಿದೆಯಾ? ಇಲ್ಲ ಅಂದ್ರೆ ಒಮ್ಮೆ ನೋಡಿ ಮೆಲುಕು ಹಾಕಿಬಿಡಿ. 


ಚಿತ್ರ : ಪ್ರೇಮದ ಕಾಣಿಕೆ [1976]
ಗಾಯಕರು : ಪಿ . ಬಿ . ಶ್ರೀನಿವಾಸ್





ಚಿನ್ನ ಎಂದು ನಗುತಿರು ನನ್ನ ಸಂಗ ಬಿಡದಿರು
ಚಿನ್ನ ಎಂದು ನಗುತಿರು ನನ್ನ ಸಂಗ ಬಿಡದಿರು
ಸರದ ಸಮಯದಿ ಸದಾ ವಿರಸವೇನು ?

Happy birthday to you...
Happy birthday to you...
Happy birthday to you...Putti 

ಸ್ನೇಹವ ತೋರು ಎಲ್ಲರ ಸೇರು
ಸ್ನೇಹವ ತೋರು ಎಲ್ಲರ ಸೇರು
ದಿನವು ಸಂತೋಷದಿ ನಲಿ ನಲಿದಾಡು
ದಿನವು ಸಂತೋಷದಿ ನಲಿ ನಲಿದಾಡು
ನೂರಾರು ವರುಷ ಕಂಡ ಸುಖದಿ ಬಾಳು

ಚಿನ್ನ ಎಂದು ನಗುತಿರು ನನ್ನ ಸಂಗ ಬಿಡದಿರು
ನನ್ನ ಚಿನ್ನ ಎಂದು ನಗುತಿರು ನನ್ನ ಸಂಗ ಬಿಡದಿರು

ಯಾರೋಲೋ ಕೋಪ ಯಾರಿಗೋ ಶಾಪ
ಯಾರೋಲೋ ಕೋಪ ಯಾರಿಗೋ ಶಾಪ
ದಿನವು ಇದೇನಿದು ಪರಿತಾಪ
ದಿನವು ಇದೇನಿದು ಪರಿತಾಪ
ನೀ ತಾಯಿಯಂತೆ ಬಿಡು ಇನ್ನು ಚಿಂತೆ

ಚಿನ್ನ ಎಂದು ನಗುತಿರು ನನ್ನ ಸಂಗ ಬಿಡದಿರು
ಚಿನ್ನ ಎಂದು ನಗುತಿರು ನನ್ನ ಸಂಗ ಬಿಡದಿರು
ಸರದ ಸಮಯದಿ ಸದಾ ವಿರಸವೇನು ?

ಚಿನ್ನ ಎಂದು ನಗುತಿರು ನನ್ನ ಸಂಗ ಬಿಡದಿರು
ಚಿನ್ನ ಎಂದು ನಗುತಿರು ನನ್ನ ಸಂಗ ಬಿಡದಿರು

Happy birthday to you...
Happy birthday to you...
Happy birthday to you...Putti 

Thursday, December 31, 2009

ಬರ್ತ್ ಡೇ ಪಾರ್ಟಿ ಫೋಟೋಸ್...

ಪುಟ್ಟಿದು ಈ ಸಾರ್ತಿ ಫಿಶ್ ಥೀಮ್ ಪಾರ್ಟಿ ಅಂತ ಅವಳ ಆಮಂತ್ರಣ ನೋಡಿದಾಗ್ಲೇ ನಿಮಗೆಲ್ಲಾ ಗೊತ್ತಾಗಿದೆ. ಫಿಶ್ ಅಂತ ತಕ್ಷಣ ಹೆಚ್ಚಾಗಿ ಎಲ್ಲೆಡೆ ’ಫೈಂಡಿಂಗ್ ನೀಮೋ’ ಚಲನಚಿತ್ರ ಆಧಾರಿತ ಪಾರ್ಟಿ ಸಾಮಾನುಗಳೇ ಸಿಗುತ್ತವೆ, ಆದ್ರೆ ನಂಗೆ ಬೇಕಿದ್ದು ಅದಲ್ಲ.. ಹಾಗಾಗಿ ಅಂತರ್ಜಾಲದಲ್ಲಿ ಬಹಳಷ್ಟು ಹುಡುಕಾಡಬೇಕಾಯ್ತು! ಫಿಶ್ ಬಲೂನ್ಸ್, ತಟ್ಟೆ, ಪಾರ್ಟಿ ಟೋಪಿ, ಟೇಬಲ್ ಕವರ್, ಸೆಂಟರ್ ಪೀಸ್, ಕ್ರೇಪ್ ರಿಬ್ಬನ್ ಎಲ್ಲವೂ ಸಿಕ್ಕ್ತು...
The party Deco....
ಫಿಶ್ ಫೋಟೊ ಫ್ರೇಮಿನಲ್ಲಿ ಪುಟ್ಟಿ ಫೋಟೋಗಳು..
ಡೆಕೊರೇಷನ್ ಹೇಗೋ ಹುಡುಕಾಡಿ ತರಿಸಿದ್ದಾತು, ಆದ್ರೆ ಫಿಶ್ ಶೇಪಿನ್ ಕೇಕ್ ಯಾವ ಅಂಗಡಿಯವರೂ ಮಾಡಿಕೊಡಲು ತಯಾರಿರಲಿಲ್ಲ. ಅಲ್ಲಿ ಇಲ್ಲಿ ವಿಚಾರಿಸಿ, ಕೊನೆಗೆ ನಮ್ಮೂರಿನ ಆನ್ಲೈನ್ ಫೋರಂ ನಲ್ಲಿ ಬಹಳಷ್ಟು ಜನ ಹೇಳಿದ ಹೆಸರು ’ಮಿಸ್. ಕ್ಯಾಥಿ ಕೋವನ್’. ಬೇರೆ ದಾರಿಯಿಲ್ಲದೆ ಅವರಿಗೇ ಆರ್ಡರ್ ಕೊಟ್ಟೆ. ಆದ್ರೆ ಮನಸಿನಲ್ಲಿ ಆತಂಕ ತುಂಬಿತ್ತು, ಯಾವತ್ತೂ ಅವರ ಕೇಕ್ ರುಚಿ ನೋಡಿಲ್ಲ, ಹೇಗಿರುತ್ತೋ ಏನೋ ಅಂತ. ಅವರು ಮಾಡಿದ ಕೇಕ್ ನೋಡಿ ಬಹಳ ಖುಶಿ ಆಯ್ತು, ತಿನ್ನಲೂ ಅಷ್ಟೇ ರುಚಿಯಾಗಿತ್ತು:))
ಫಿಶ್ ಕೇಕ್ ಮತ್ತು ಫಿಶ್ ಕ್ಯಾಂಡಲ್ಸ್.. 

ವಾರದ ದಿನವಾದ್ದರಿಂದ ಸಿಂಪಲ್ಲಾಗಿ ಪಿಜ್ಜಾ ಪಾರ್ಟಿ ಮಾಡೋಣ ಅಂತ ತೀರ್ಮಾನಿಸಿ, ಜೊತೆಗೆ ನಾನೇ ಮಾಡಿದ ಫಿಶ್ ಶೇಪಿನ ಸಿಹಿ ಮತ್ತು ಖಾರ ಬಿಸ್ಕತ್ತುಗಳು, ನೂಡಲ್ಸ್(ಮೇಲೆ ಕೆಚಪ್ ನಲ್ಲಿ ಮೀನಿನಾಕಾರ ಬರೆದೆ), ಸ್ಪ್ರಿಂಗ್ ರೋಲ್, ಚಿಪ್ಸ್ ಇತ್ಯಾದಿ..
ಬರ್ತ್ ಡೇ ಗರ್ಲ್ ಪುಟ್ಟಿ ..
ಕೇಕ್ ಕಟ್ ಮಾಡುತ್ತಾ ..ಎಲ್ಲಾ ಮಕ್ಕಳ ಜೊತೆಯಲ್ಲಿ ..
ಅಂಕಲ್ ಗಳ ಜೊತೆಯಲ್ಲಿ  ..


ತನ್ನ ರೂಮಿನಲ್ಲಿ ಫ್ರೆಂಡ್ಸ್ ಜೊತೆ ..
ತನ್ನ ಗಿಫ್ಟ್ ಗಳೊಂದಿಗೆ ಎಲ್ಲರಿಗೂ ಮತ್ತೊಮ್ಮೆ ಥ್ಯಾಂಕ್ಸ್ ಹೇಳುತ್ತಾ, ಜೊತೆಗೆ ನಿಮಗೆಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು!!

ಪುಟ್ಟಿ Thank you ಅಂತಾಳೆ :))

ತನ್ನ ಹುಟ್ಟುಹಬ್ಬದ ದಿನ ಫೋನ್ ಮಾಡಿ ವಿಶ್ ಮಾಡಿದ, ಬ್ಲಾಗಿನಲ್ಲಿ ಮತ್ತು ಈ ಮೇಲ್ ನಲ್ಲಿ ಹರಸಿದ, ಮನೆಗೆ ಬಂದು ಹಾರೈಸಿದ ಎಲ್ಲರಿಗೂ ತಾಂತು (ಥ್ಯಾಂಕ್ಸ್) ಹೀಗೆ ಹೇಳಿದ್ದಾಳೆ:))


This isn't just a Fish,
as anyone can see.
I made it with my hand,
which is part of me.
It comes with lots of love,
especially to say,
Thanks for joining me
On my 2nd Birthday !!
-Sahitya

ಈ ತರಹ ತನ್ನ ಪುಟ್ಟ ಕೈಗಳಿಗೆ ಬಣ್ಣ ಹಚ್ಚಿಕೊಂಡು ಬಂದ ಗೆಳೆಯರಿಗೆಲ್ಲಾ ಮಾಡಿಕೊಡುವ ಆಸೆ ಪುಟ್ಟಿಗಿತ್ತು, ಆದ್ರೆ ನನ್ನ ಸೋಮಾರಿತನ !! ಅವಳು ಮಾಡಿದ ಈ ಫಿಶ್ ಅನ್ನು ಸ್ಕ್ಯಾನ್ ಮಾಡಿ, ಫೋಟೋ ಪ್ರಿಂಟ್ ಹಾಕಿಸಿ ಎಲ್ಲಾ ಮಕ್ಕಳಿಗೆ ಥ್ಯಾಂಕ್ ಯೂ ಕಾರ್ಡ್ ಮಾಡಿ ಕೊಟ್ಟು ಬಿಟ್ಟೆ :)
ಬಂದ ಮಕ್ಕಳಿಗೆ ಅವರದೇ ಹೆಸರಿನ ಬಿಸ್ಕತ್ತುಗಳು.. 

ಬಣ್ಣದ ಫಿಶ್ ಕವರಿನಲ್ಲಿ..

ಅಲ್ಲದೆ ವಯಸ್ಸಿಗನುಗುಣವಾಗಿ ಫಿಶ್ ಬುಕ್ಸ್ ...

ಕೆಲವು ಫಿಶ್ ಸ್ಟ್ಯಾಂಪ್ ಗಳು...

ಮತ್ತು ಸಿಡಿಗಳು, ಕ್ರಯಾನ್ಸ್, ಇತ್ಯಾದಿ...

Tuesday, December 29, 2009

ಹ್ಯಾಪಿ ಬರ್ತ್ ಡೇ ಪುಟ್ಟಿ!!

ಇಷ್ಟು ಬೇಗ ಪುಟ್ಟಿಗೆ ಎರಡು ವರ್ಷ ಆಗಿಬಿಡ್ತಾ ಅಂತ ಅನ್ನಿಸ್ತಾಯಿದೆ. ಒಮ್ಮೆ ಹಿಂತಿರುಗಿ ನೋಡಿದರೆ ಈ ಕಾಲ ಸರಿಯಾದ ಗತಿಯಲ್ಲೇ ಸಾಗುತ್ತಿದ್ದರೂ ನನಗೇಕೋ ಅದು ಓಡುತ್ತಿದೆ ಅನಿಸುತ್ತೆ. ನಿನಗ್ಯಾಕೆ ಪುಟ್ಟಿ ದೊಡ್ದವಳಾಗೊಕೆ ಇಷ್ಟು ಅವಸರ, ಸ್ವಲ್ಪ ನಿಧಾನಿಸು ಅನ್ನೋಣ ಅನಿಸುತ್ತೆ.
ಡಿಸಿಂಬರ್ ೨೦೦೭ರಿಂದ(ಅದಕ್ಕೂ ೯ ತಿಂಗಳ ಮುಂಚಿನಿಂದ) ಇಲ್ಲಿಯವರೆಗಿನ ನನ್ನ, ಪುಟ್ಟಿಯ ಒಡನಾಟ ನನ್ನಲ್ಲಿ ಪ್ರತಿದಿನ ಹೊಸ ಅಚ್ಚರಿ, ಉಲ್ಲಾಸಗಳನ್ನ ತುಂಬಿ, ನಾಳೆ ಬರಬಹುದಾದ ಹೊಸ ವಿಸ್ಮಯಗಳಿಗಾಗಿ ಕಾಯೋ ಹಾಗೆ ಮಾಡಿದೆ. ಅಮ್ಮನಾಗಿದ್ದಕ್ಕೆ ಬಂದಿರೋ ಎಲ್ಲಾ ಹೊಸ ಜವಾಬ್ದಾರಿಗಳು ನನ್ನಲ್ಲಿ ಸಹನೆ, ಸ್ಪೂರ್ತಿ ಹೆಚ್ಚೋ ಹಾಗೇ ಮಾಡ್ತಿರೋದಕ್ಕೆ ಪುಟ್ಟಿಗೆ ಥ್ಯಾಂಕ್ಸ್ ಹೇಳಿಕೊಳ್ಳುತ್ತಾ... 

Saturday, November 21, 2009

ಸೇರಾ ಬರ್ತ್ ಡೇ ಪಾರ್ಟಿ !!

ಪುಟ್ಟಿಯ ನೆಚ್ಚಿನ ಫ್ರೆಂಡ್ಸ್ ಗಳಲ್ಲಿ ಅನಿಸಾ- ಸೇರಾ ಅಕ್ಕಂದಿರು ಮೊದಲಿಗರು. ಪುಟ್ಟಿ ಹುಟ್ಟಿದಾಗ ಆಸ್ಪತ್ರೆಯಲ್ಲಿ ಮೊದಲು ಭೇಟಿ ಮಾಡಿದ್ದು ಇವರನ್ನೇ. ಇವತ್ತು ಸೇರಾಳ ಹುಟ್ಟಿದಹಬ್ಬ, ಸ್ಕೇಟ್ ವರ್ಲ್ಡ್ ನಲ್ಲಿ ಹುಟ್ಟಿದಹಬ್ಬ ಆಚರಿಸಿಕೊಂಡ ಅಕ್ಕನಿಗೆ ಶುಭ ಹಾರೈಸುತ್ತಾ ಅವಳೊಂದಿಗೆ ಕಳೆದ ಕೆಲವು ಮಧುರ ಕ್ಷಣಗಳ ಮೆಲಕು...

ನಾಲ್ಕು ತಿಂಗಳ ಪುಟ್ಟಿ ಜೊತೆ ಅಕ್ಕ ಅನೀಸಾ- ತಂಗಿ ಸೇರಾ:)

ಕಳೆದ ವರ್ಷ ಹ್ಯಾಲೋವೀನ್ ದಿನದಂದು!

ಇವತ್ತು ಬರ್ತ್ ಡೇ ಪಾರ್ಟಿಯಲ್ಲಿ...

ನಾನೂ ಸ್ಕೇಟ್ ಮಾಡ್ತೀನಿ...!!

Monday, July 20, 2009

ಅಪ್ಪಿ ಯೂ ಯೂ ಚಚ್ಚಿ!!!

ಶಕ್ತಿ ಅಕ್ಕನ ಪಾರ್ಟೀಲಿ ನಮ್ಮ್ ಪುಟ್ಟಿ ತುಂಬಾ ಮಜ ಮಾಡಿದ್ಲು. ಶಕ್ತಿಯ ಅಮ್ಮ ಬಹಳ ಕ್ರಿಯೇಟೀವ್, ಶಕ್ತಿ ಬರ್ತ್ಡೇಗೆ ಮಿಕ್ಕಿ ಥೀಮ್ ಆರೇಂಜ್ ಮಾಡಿದ್ರು. ಪಾರ್ಟಿ ಹಾಲಿನ ಪೂರ್ತಿ ಮಿಕ್ಕಿ ಮಿನ್ನಿಗಳೆ ಇದ್ದ್ವು. ಮಕ್ಕಳಿಗೆ ಅಂತ ತಿನ್ನೊಕೆ ಬಹಳಷ್ಟು ಕುರುಕುಲು ತಿಂಡಿಗಳಿತ್ತು. ಪುಟ್ಟಿಗೆ ಮನೆಯಲ್ಲಿ ಇದ್ಯಾವುದೂ ಸಿಕ್ಕೊಲ್ಲ, ಹಾಗಾಗಿ ಇಲ್ಲಿ ಎಲ್ಲಾವೂ ಹೊಸತಾಗಿತ್ತು. ಅಮ್ಮ ಬೇಡ ಅನ್ನೊ ಹಾಗಿಲ್ಲ ಅಂತ ತಿಳಿದದ್ದೇ ತಡ ಚಿಪ್ಸ್ ತಿಂದಿದ್ದೇ ತಿಂದಿದ್ದು:))

ಪಾರ್ಟಿಗೆ ಮುಂಚೆ !!
ಇದೇನು ಹೊಸ ತಿಂಡಿ?
ಮಿಕ್ಕಿ, ಮಿನ್ನಿ
ಎಲ್ಲಾ ಕಡೆ ಮಿಕ್ಕಿ
ಶಕ್ತಿ ಅಕ್ಕನ ಜೊತೆ
ನನಗೆ ಬೇಕು ಚಾಕ್ಲೇಟ್ ಡಬ್ಬ..ಹ್ಹ ಹ್ಹ
ಹೇಗಿದೆ ನನ್ನ್ ಮಾಸ್ಕ್?ನನ್ಗೆ ಬಲೂನ್ಸ್ ತುಂಬಾ ಇಷ್ಟ:)
ಇತರೆ ಫ್ರೆಂಡ್ಸ್ ಜೊತೆ

Tuesday, July 07, 2009

ಅಮೋಘ್ ಬರ್ತ್ ಡೇ ಪಾರ್ಟೀ!!!

ಅಮೋಘ್ ನ ಮೊದಲ ವರ್ಷದ ಬರ್ತ್ ಡೇ ಪಾರ್ಟಿಗೆ ಪುಟ್ಟಿ ಎಂದಿನಂತೆ ಸಂಭ್ರಮದಿಂದ ತಯ್ಯಾರಾಗಿ ಹೊರಟ್ಲು. ಹೊರಗೆ ಹೋಗೋದು, ಮಕ್ಕಳ ಜೊತೆ ಕುಣಿಯೋದು ಪುಟ್ಟಿಗೆ ಬಲು ಇಷ್ಟ.
ಹೇಗಿದೆ ನನ್ನೀ ಹೊಸ ಡ್ರೆಸ್ಸು?ಅನಿಶಾ ಅಕ್ಕನ ಜೊತೆ ಮಾತು..ಚಿಪ್ಸ್ ತಿನ್ನೋ ಅಮೋಘ್ ...ಎಲ್ಲಾ ಮಕ್ಕಳು ಕೇಕ್ ಮುಂದೆ..ನಾನು, ಶಕ್ತಿ ಅಕ್ಕ ಇಬ್ರೂ ವೈಟ್ ವೈಟ್!!ಅಮೋಘ್ ಬೇಗ ಕಟ್ ಮಾಡು ! ಅಮ್ಮ, ಬೇಗ ಕೊಡು...ಚೂಪರ್ ಕೇಕ್!!

Saturday, May 23, 2009

ಹ್ಯಾಪಿ ಬಿರ್ತ್ ಡೇ ಅಮ್ಮು !!

ಪುಟ್ಟಿಯ ಬ್ಲಾಗ್ ಫ್ರೆಂಡ್ ನಂದಗೋಕುಲದ ಅಣ್ಣ ಅಮಾರ್ತ್ಯನಿಗೆ ಎರಡು ವರ್ಷ ತುಂಬಲಿದೆ. ಅವನಿಗೆ ಶುಭವನ್ನು ಹಾರೈಸುತ್ತೇವೆ.

From morning till night
May your birthday be bright
And nicer than ever before……
And as years come and go
May your happiness grow
And your dreams be fulfilled
Even more

Happy Birthday to you!

Thursday, March 05, 2009

ಖುಶಿ ಮೊದಲ ಹುಟ್ಟುಹಬ್ಬ !!!

ಇಂದು ಪುಟ್ಟಿಯ ಸೋದರಮಾವನ ಮಗಳು "ಖುಶಿ"ಯ ಹುಟ್ಟುಹಬ್ಬ. ಅಪ್ಪ-ಅಮ್ಮನ ಜೊತೆ ಇಂಗ್ಲ್ಯಾಂಡಿನಲ್ಲಿ ಹಬ್ಬ ಆಚರಿಸಿಕೊಳ್ಳ್ತಾಯಿರೋ ಬಂಗಾರಮ್ಮನಿಗೆ ನಮ್ಮೆಲ್ಲರ ತುಂಬು ಹೃದಯದ ಹಾರೈಕೆಗಳು.


ನೀ ಹುಟ್ಟಿದ ಆ ದಿನ
ಶಿವರಾತ್ರಿಯ ಸುದಿನ
ಮನೆಯವರೆಲ್ಲ ನಲಿದ ದಿನ


ನೀ ಬೋರಲು ಬೀಳಲು ಮನಕಾನಂದ
ಇಂಡಿಯಾಗೆ ಬಂದಾಗ ನೀ ಅಂಬೆಗಾಲ ಕಂದ
ಹಲ್ಲಿಲ್ಲದ ನಿನ್ನ ಬೊಚ್ಚು ಬಾಯ ನಗುವು ಚಂದ


ಬಲು ಬೇಗ ಸೆಳೆದೆ ನೀ ನಮ್ಮೆಲ್ಲರ ಮನ
ಕೃಷ್ಣನ ಕೊಳಲು ಹಿಡಿದು ಹಾಡಿದೆ ತನನನ
ಮರಳಿ ಹಾರಿ ಸೇರಿದೆ ನೀ ಲಂಡನ

ವರುಷ ತುಂಬಿದೆ ನಿನಗೆ ಇಂದು
ಆಯುರಾರೋಗ್ಯ ಕೊಡಲಿ ಎಂದು
ಪರಶಿವನಾ ನಾವೆಲ್ಲ ಬೇಡುವೆವು ಇಂದು




Saturday, August 30, 2008

ಎಂಟನೇ ತಿಂಗಳ ಹುಟ್ಟು ಹಬ್ಬ !!

ಪುಟ್ಟಿ ಬೀಗ ಬೇಗ ದೊಡ್ಡವಳು ಆಗ್ತಾಯಿದ್ದಾಳೆ ಅನ್ನಿಸ್ತಾಯಿದೆ. ಆಗ್ಲೆ ಎಂಟನೇ ತಿಂಗಳ ಹುಟ್ಟು ಹಬ್ಬ ಬಂತು. ಈ ಸರ್ತಿ ಅವಳ ಜೊತೆ ಆಡಿ ನಲಿಯಲು ಬಂದವರು ಅವಳಿ ಅಕ್ಕ ತಂಗಿ, ಸಹನಾ - ಸುರಭಿ :) ತನ್ನ ಊಟದ ಚೇರ್ -ಹೈಚೇರ್ ನಲ್ಲಿ ಕುಳಿತು ಕೊಕೊನಟ್ ಕೇಕ್ ಕಟ್ ಮಾಡಿದ್ಲು. ಅವರಪ್ಪ ತಂದಿದ್ದ ಹೊಸ ಕುದುರೆಯೇರಿ ಆಟವಾಡಿದ್ಲು. ಮೂರೂ ಜನ ನಕ್ಕು ನಲಿದ್ರು. ಅವರ ಸಂತಸದಲ್ಲಿ ದೊಡ್ಡವರೂ ಜೊತೆಗೂಡಿದೆವು.

ಅಪ್ಪ ನನಗೆ ತಂದಕುದುರೆ
ಹಾಲಿನಂತ ಮೈಯ್ಯ ಬಿಳಿ ಕುದುರೆ
ನೀಲಯ ಬಾಲದ ಪುಟ್ಟು ಕುದುರೆ
ಕೆಂಪನೆ ಸೀಟಿನ ಅಂದದ ಕುದುರೆ !!



ಹೆಜ್ಜೆ ಹೆಜ್ಜೆಗೆ ಕುಣಿಯುವ ಕುದುರೆ
ಬ್ಯಾಟರಿಯ ಹಾಕಿದರೆ ನಡೆಯುವ ಕುದುರೆ
ಹಾಡನು ಹೇಳುತಾ ನಲಿಸುವ ಕುದುರೆ
ನನ್ನಯ ಮುದ್ದಿನ ಚೆಂದದ ಕುದುರೆ !!