Showing posts with label Hand-Foot Print. Show all posts
Showing posts with label Hand-Foot Print. Show all posts
Friday, July 29, 2011
Sunday, August 15, 2010
ನಮ್ಮ ದೇಶ ಭಾರತ !!
ಭಾರತದ ಸ್ವಾತಂತ್ರ ದಿನೋತ್ಸವದ ಅಂಗವಾಗಿ ಪುಟ್ಟಿ ಕೈಯಲ್ಲಿ ಇವನ್ನು ಪೈಂಟ್ ಮಾಡಿಸಿದೆ.
ಕೇಸರಿ (ಇಲ್ಲಿ ಕಂದು ಬಣ್ಣವಾಗಿದೆ) ಮತ್ತು ಹಸಿರು ಬಣ್ಣದ ಪಟ್ಟಿಗಳನ್ನು ಅಗಲ ಬ್ರಷ್ ನಲ್ಲಿ ಪುಟ್ಟಿ ಬರೆದಳು. ನೀಲಿ ಬಣ್ಣದ ಚಕ್ರ Fiori pasta ದಿಂದ ಮಾಡಿದ್ದು. Ruote ಉಪಯೋಗಿಸಿದರೆ ಚಕ್ರದ ಆಕಾರ ಇನ್ನೂ ಚೆನ್ನಾಗಿ ಮೂಡುತ್ತದೆ, ಅದು ಮನೆಯಲ್ಲಿ ಇರಲಿಲ್ಲ:(ಹುಲಿ
ಅಂಗೈಗೆ ಬಣ್ಣ ಹಚ್ಚಿ ತಲೆ ಮಾಡಿದೆವು. ಆಮೇಲೆ ಹೆಬ್ಬೆರಳು ಬಿಟ್ಟು ಉಳಿದೆಲ್ಲಾ ಕಡೆ ಬಣ್ಣ ಬಳಿದು ದೇಹ, ಒಂದು ಬೆರಳಿನಿಂದ ಬಾಲ ಮತ್ತು ಕಾಲುಗಳು, ಬೆರಳ ತುದಿಯಿಂದ ಕಿವಿಗಳು. ಇದು ಒಣಗಿದ ಮೇಲೆ ಕಪ್ಪು ಬಣ್ಣದ ಗೆರೆ ಮತ್ತು ಚುಕ್ಕಿಗಳು!ನವಿಲು

ಕಮಲ
ಕೈ ಗುರುತು ಪುಟ್ಟಿಯದು. ಕಪ್ಪು ಪೆನ್ನಿನಲ್ಲಿ ಬರೆದದ್ದು ನಾನು. ಈ ನವಿಲು ಮತ್ತು ಕಮಲವನ್ನು ಇಲ್ಲಿ ನೋಡಿದ್ದೆ!ಮಾವಿನ ಹಣ್ಣು!

ಮೊದಲು ಒಂದು ಪೇಪರ್ ಪೂರ್ತಿ ಬಣ್ಣ ಬಳಿದು ಅದನ್ನು ಒಣಗಲು ಬಿಟ್ಟೆವು. ನಂತರ ಅದನ್ನು ಚಿಕ್ಕ ಚಿಕ್ಕ ಚೂರುಗಳಾಗಿ ಕತ್ತರಿಸಿ, (ಪುಟ್ಟಿ ಈಗಷ್ತೆ ಕತ್ತರಿಸಲು ಕಲಿಯುತ್ತಿದ್ದಾಳೆ) ಒಂದು ಹೊಸ ಹಾಳೆಯ ಮೇಲೆ ಮಾವಿನ ಚಿತ್ರವನ್ನು ಬರೆದು ಅದರ ಒಳಗೆ ಚೂರುಗಳನ್ನು ಅಂಟಿಸುವುದು. ಕೊನೆಯಲ್ಲಿ ಬರೆದ ಚಿತ್ರವನ್ನು ಅಳಿಸಿಬಿಟ್ಟೆವು :)
Thursday, December 31, 2009
ಪುಟ್ಟಿ Thank you ಅಂತಾಳೆ :))
ತನ್ನ ಹುಟ್ಟುಹಬ್ಬದ ದಿನ ಫೋನ್ ಮಾಡಿ ವಿಶ್ ಮಾಡಿದ, ಬ್ಲಾಗಿನಲ್ಲಿ ಮತ್ತು ಈ ಮೇಲ್ ನಲ್ಲಿ ಹರಸಿದ, ಮನೆಗೆ ಬಂದು ಹಾರೈಸಿದ ಎಲ್ಲರಿಗೂ ತಾಂತು (ಥ್ಯಾಂಕ್ಸ್) ಹೀಗೆ ಹೇಳಿದ್ದಾಳೆ:))


This isn't just a Fish,
as anyone can see.
I made it with my hand,
which is part of me.
It comes with lots of love,
especially to say,
Thanks for joining me
On my 2nd Birthday !!
-Sahitya
ಈ ತರಹ ತನ್ನ ಪುಟ್ಟ ಕೈಗಳಿಗೆ ಬಣ್ಣ ಹಚ್ಚಿಕೊಂಡು ಬಂದ ಗೆಳೆಯರಿಗೆಲ್ಲಾ ಮಾಡಿಕೊಡುವ ಆಸೆ ಪುಟ್ಟಿಗಿತ್ತು, ಆದ್ರೆ ನನ್ನ ಸೋಮಾರಿತನ !! ಅವಳು ಮಾಡಿದ ಈ ಫಿಶ್ ಅನ್ನು ಸ್ಕ್ಯಾನ್ ಮಾಡಿ, ಫೋಟೋ ಪ್ರಿಂಟ್ ಹಾಕಿಸಿ ಎಲ್ಲಾ ಮಕ್ಕಳಿಗೆ ಥ್ಯಾಂಕ್ ಯೂ ಕಾರ್ಡ್ ಮಾಡಿ ಕೊಟ್ಟು ಬಿಟ್ಟೆ :)
ಮತ್ತು ಸಿಡಿಗಳು, ಕ್ರಯಾನ್ಸ್, ಇತ್ಯಾದಿ...







