Showing posts with label Learning. Show all posts
Showing posts with label Learning. Show all posts

Saturday, September 18, 2010

ABC ಆಟ!!



A for Apple, B for Ball ಕಲಿಯಲು ಪುಟ್ಟಿ ಜೊತೆ ಮನೆಯಲ್ಲಿ ನಾವು ಆಡೋ ಕೆಲವು ಆಟಗಳಿವು......

ಆಟ ಒಂದು:
ಅಕ್ಷರಗಳ ಕಾರ್ಡ್ಸ್ ಪುಟ್ಟಿಗೆ ಕೊಡೋದು... ಪುಟ್ಟಿಯ ಆಟದ ವಸ್ತುಗಳು ಜೊತೆಗೆ ಮನೆಯಲ್ಲಿರುವ ಯಾವುದೇ ಪುಟ್ಟ ದೊಡ್ಡ ಸಾಮಾನುಗಳನ್ನು ಒಂದೆಡೆ ಕಲೆ ಹಾಕೋದು. ಆಮೇಲೆ ಒಂದೊಂದಾಗಿ ಅವುಗಳ ಹೆಸರನ್ನು ಹೇಳೋದು. ಪುಟ್ಟಿ ball ಅಂದ್ರೆ ನಾವು ಕರೆಕ್ಟ್ ಪುಟ್ಟಿ bbbbbball ಅನ್ನೋದು ಜೊತೆಗೆ ಅದು ಶುರುವಾಗುವ ಅಕ್ಷರವನ್ನ ಗುರುತಿಸೊಕೆ ಪ್ರಯತ್ನಿಸೋದು. ಪುಟ್ಟಿಗೆ ಈಗಾಗಲೇ ಎಲ್ಲಾ ಅಕ್ಷರಗಳ ಸೌಂಡ್ ಗೊತ್ತಿರುವುದರಿಂದ ಇದು ಸ್ವಲ್ಪ ಸುಲಭ. ಮೊದಲ ಕೆಲವು ಸರ್ತಿ ಅವಳಿಗೆ ಇನ್ನೂ ಆಟ ಆರ್ಥವಾಗದೇ ಇದ್ದಾಗ ನಾವೇ ಅವಳಿಗೆ "ball , bbb ಸೌಂಡ್ ಮಾಡೋದು ಏನು"? ಅಂತ ಹಿಂಟ್ ಕೊಟ್ಟು ಸಹಾಯ ಮಾಡ್ತಾಯಿದ್ವಿ. ಅವಳು "b" ಅಂತ ಗುರುತಿಸದ ಮೇಲೆ ball ಅನ್ನು ’b' ಕಾರ್ಡ್ ಮೇಲಿಡುವುದು. ಹೀಗೆ ಎಲ್ಲಾ ವಸ್ತುಗಳನ್ನೂ ಮಾಡಿ ಮುಗಿಸೋದು.

ಆಟ ಎರಡು:
Alphabet matching treasure hunt
ಒಂದು ಅಕ್ಷರದ ಕಾರ್ಡ್ ಹಿಡಿದು ಆ ಅಕ್ಷರದಿಂದ ಶುರುವಾಗುವ ಎಲ್ಲಾ ವಸ್ತುಗಳನ್ನು ಗುರುತಿಸುತ್ತಾ ಮನೆಯಲ್ಲೆಲ್ಲಾ ಓಡಾಡೋದು. ಹೀಗೆ ಮಾಡುತ್ತಾ ಮೊದಲಿನ ಆಟದಲ್ಲಿ ಉಪಯೋಗಿಸಲಾಗದ ದೊಡ್ಡ ವಸ್ತುಗಳನ್ನೂ ಇಲ್ಲಿ ಕಲಿಯಬಹುದು. (ಉದಾ- Television, Bed, Table....)

ಆಟ ಮೂರು:
ನಾನು ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಅಥವಾ ಇನ್ನೇನೋ ಮಾಡುವಾಗ ಪುಟ್ಟಿಗೆ ಈ ಆಟ ಆಡಬೇಕು ಅನಿಸಿದರೆ ಆಗ ಆಡೋದು ಹೀಗೆ. "ಪುಟ್ಟಿ ಈಗ ನಿನ್ನ ಆಟ ಸಾಮಾನಿಂದ B ನಿಂದ ಶುರುವಾಗುವ ಆಟಿಕೆ ತಗೊಂಡುಬಾ" ಅಂದ್ರೆ ಅವಳು ಹೋಗಿ ’Ball' ಅಥ್ವಾ ’Bunny' ತರಬೇಕು.



ಆಟ ನಾಲ್ಕು:
ಪುಟ್ಟಿಗೆ "I Spy" ಬುಕ್ಸ್ ತುಂಬಾ ಇಷ್ಟ , ಅದನ್ನು ನಾವು abc ಕಲಿಯಲು ಹೀಗೆ ಮಾಡ್ತೀವಿ. ಮೊದಲ ಆಟದಂತೆ ಹಲವು ಸಾಮಾನು ಒಂದೆಡೆ ಹಾಕಿಕೊಂಡು "I spy something that begins with the "b" sound" ಅನ್ನೋದು. ಪುಟ್ಟಿ ಆಗ ball ತೋರಿಸೋದು:)

೧. ನಾನಿಲ್ಲಿ ಅಂಗಡಿಯಲ್ಲಿ ಸ್ಯಾಂಪಲ್ ಗೆಂದು ಇಟ್ಟಿರುವ paint chips ಕಾರ್ಡ್ ಮೇಲೆ ABC - capital and lower case ಬರೆದಿರುವೆ. ಇದರ ಬದಲು ನೀವು ಪ್ರಿಂಟ್ ಕೂಡ ಮಾಡ ಬಹುದು.

೨. ಕೆಲವೊಮ್ಮೆ, ಪುಟ್ಟಿಯ ರೂಮಿನ alphabet matನ ಅಕ್ಷರಗಳನ್ನು ಕೂಡ ಬಳಸುತ್ತೇವೆ.
೩. Magnetic alphabets ಕೂಡ ಬಳಸ ಬಹುದು
೪. ಅಂಗಡಿಯಲ್ಲಿ ಸಿಗುವ alphabet flash cards ಕೂಡ ಉಪಯೋಗಿಸಬಹುದು.



Wednesday, September 01, 2010

ಪುಟ್ಟಿ ಶಾಲೆಗೆ ಹೊರಟಳು





ಪುಟ್ಟಿಯ ಅಜ್ಜಿ ತಾತ ವಾಪಸ್ ಇಂಡಿಯಾಕ್ಕೆ ಹೋದಮೇಲೆ, ಮತ್ತೆ ಪುಟ್ಟಿಯ ಜೊತೆ ಆಟವಾಡುವವರು ಕಮ್ಮಿಯಾದ್ರು. ವಾರಾಂತ್ಯದಲ್ಲಿ ನಡೆಯುವ ಪಾರ್ಟಿಗಳಲ್ಲಿ ೨-೩ ಘಂಟೆಗಳ ಕಾಲ ಬೇರೆ ಮಕ್ಕಳೊಡನೆ ಬೆರೆಯುವುದು ಅಷ್ಟೆ!
ಹಾಗಾಗಿ ಪುಟ್ಟಿಯನ್ನ ’Preschool'ಗೆ (ಅಂದ್ರೆ ನಮ್ಮಲ್ಲಿ ನರ್ಸರಿ ಅಂತಾರಲ್ಲ ಹಾಗೆ) ಸೇರಿಸಿದ್ವಿ. ಅಲ್ಲಿ ABCD ಇಲ್ಲ...ಬರಿ ವ್ಯಕ್ತಿತ್ವ ವಿಕಸನ, ಮಕ್ಕಳನ್ನ ಅವರ ಅಭಿರುಚಿಗೆ ಅನುಗುಣವಾಗಿ ಬೆಳೆಸುತ್ತಾರೆ. ಹೊರೆಯಲ್ಲದ ಶಾಲೆ (ನಮ್ಮ ಜೇಬಿಗೆ ಹೊರೆಯೇ.. ವಾರಕ್ಕೆ ಎರಡು ಅರ್ಧ ದಿನಗಳು ಪುಟ್ಟಿ ಹೋಗೋದು ಅದಕ್ಕೆ ತಿಂಗಳ ಫೀ $240) ಮಕ್ಕಳು ಆಡಿದ್ದೇ ಆಟ,ಕಲಿತಿದ್ದೇ ಪಾಟ.
ಮೊದಲು ಒಂದೆರೆಡು ಕಡೆ ಹೋಗಿ ನೋಡಿಕೊಂಡು ಬಂದೆವು, ಆಗ ಪುಟ್ಟಿನೂ ಜೊತೆಗಿದ್ದಳು. ಅಲ್ಲಿ ಮಕ್ಕಳನ್ನ ನೋಡಿ ಅಲ್ಲಿಂದ ಬರಲು ಸುತಾರಮ್ ಇಷ್ಟವಿಲ್ಲ ಅವಳಿಗೆ. ಪ್ರತಿ ಸರ್ತಿಯೂ ಅಳುತ್ತಲೇ ಮನೆಗೆ ಬಂದಿದ್ದಳು. ಸರಿ, ಅಂತೂ ಅವಳು ಶಾಲೆಗೆ ಹೋಗೋ ದಿನ ಬಂದೇ ಬಿಡ್ತು. ಅವಳೋ ಭಾರಿ ಸಂಭ್ರಮದಿಂದ ರೆಡಿಯಾಗಿ ಹೊರಟಳು. ಅಲ್ಲಿ ಕೂಡ ಕೊಂಚವೂ ಬೆಸರಿಸದೆ "ಬಾಯ್ ಅಮ್ಮ, ಬಾಯ್ ಅಪ್ಪ" ಅಂತ ಇಬ್ಬರಿಗೂ ಟಾಟಾ ಮಾಡಿದಳು. ಮೊದಲ ಬಾರಿ ಸತತ ನಾಲ್ಕು ಘ೦ಟೆ ಪುಟ್ಟಿಯನ್ನು ಬಿಟ್ಟಿರುತ್ತಿದ್ದೇನಲ್ಲಾ ಎನ್ನುವ ತಳಮಳ. ಇಂಗ್ಳೀಷ್ ಬರದ ನನ್ನ ಪುಟ್ಟಿ ಅಲ್ಲಿ ಕಷ್ಟ ಪಡಬಹುದು ಎಂದೆಣಿಸಿದ್ದೆ. ಶಾಲೆಯ ಹೆಡ್ ಮಿಸ್ ಈ ವಯಸ್ಸಿನ ಮಕ್ಕಳ ಜೊತೆ ಮಾತಾಡಲು ’ಆಟ’ದ ಭಾಷೆ ಸಾಕು ನಾಮ್ಗೆ ಚಿಂತಿಸ ಬೇಡಿ ಅಂತ ಧೈರ್ಯ ಕೊಟ್ಟರು, ಆದ್ರೂ ಯಾಕೋ ಸಮಾಧಾನವಿರಲಿಲ್ಲ. ಅವಳ ಕ್ಲಾಸ್ ಟೀಚರಿಗೆ(ಐದು ಮಕ್ಕಳಿಗೆ ಒಬಾಕೆ ಟೀಚರ್) ಇವಳು pee, water, food...ಇವುಗಳಿಗೆ ಹೇಳೋ ಪದಗಳನ್ನು ಬರೆದು ಕೊಟ್ಟು ಬಂದೆ.
ಮೊದಲ ದಿನ ಆ ನಾಲ್ಕು ಘಂಟೆಗಳು ಕಳೆಯುವುದು ನಂಗೆ ಬಹಳ ಕಷ್ಟವಾಯ್ತು. ಸರಿ, ಘಂಟೆ ಒಂದಾಗುತ್ತಲೇ ಶಾಲೆಗೆ ಹೋದ್ರೆ ಪುಟ್ಟಿ ಎಲ್ಲರೊಡನೆ ಖುಶಿಯಾಗಿ ಆಟವಾಡುತ್ತಿದ್ದಳು. ಮನೆಗೆ ಹೋಗೋಣ ಬಾರೆ ಪುಟ್ಟಿ ಅಂದ್ರೆ ಜೋರಾಗಿ ಅಳೋಕೆ ಶುರು ಮಾಡಿದ್ಲು, ಅವಳ ಮಿಕ್ಕ ಫ್ರೆಂಡ್ಸ್ ಅಲ್ಲಿ ಫುಲ್ಲ್ ಡೇ ಇದ್ದರಲ್ಲ ಅದಕ್ಕೆ .. ಜೊತೆಗೆ ಮುಂಚಿನ ಹಾಗೆ ಸ್ಕೂಲ್ ನೋಡಲು ಹೋದ ಹಾಗೆನೇ ಇವತ್ತು ಅಂದುಕೊಂಡಲೋ ಏನೊ ಅಳುತ್ತಲೇ ಬಂದ್ಲು!!
ಶಾಲೆ ಈಗ ನಮ್ಮ ದಿನನಿತ್ಯದ ಜೀವನವಾಗಿದೆ, ಬೆಳಗ್ಗೆ ಸ್ಕೂಲಿದೆ ಅಂದ್ರೆ ಸಾಕು ಯಾವುದೇ ಗಲಾಟೆಯಿಲ್ಲದೆ ರೆಡಿಯಾಗುತ್ತಾಳೆ. ಮದ್ಯಾಹ್ನ ವಾಪಸ್ ಕರೆತರ್ರ್ಲಲು ಹೋದಾಗ ತಾನು ಮತ್ತೆ ಶಾಲೆಗೆ ಬರುತ್ತೇನೆ ಅನ್ನುವ ನಂಬಿಕೆ ಬಂದಿದೆ ಹಾಗಾಗಿ ನಗುತ್ತಲೇ ಮನೆಗೆ ಬರುತ್ತಾಳೆ:) ಶಾಲೆಯಲ್ಲಿ ಊಟ ಒಂದು ಬಿಟ್ಟು ಇನ್ನೇಲ್ಲಾ ಚೆನ್ನಾಗಿಯೇ ಮಾಡುತ್ತಾಳೆ

Tuesday, July 13, 2010

ಬರೆಯೋ ಹಾದಿಯಲ್ಲಿ ಪುಟ್ಟಿಯ ಮೊದಲ ಕೆಲವು ಹೆಜ್ಜೆ!

ಪುಟ್ಟಿ ABC ಹಾಡು ಹೇಳೋಕೆ ಶುರು ಮಾಡಿ ಬಹಳ ದಿನಗಳೇ ಆಗಿದೆ. ಆದ್ರೆ ಎಲ್ಲಾ ಅಕ್ಷರಗಳನ್ನ ಗುರುತಿಸೋದು ಬರುತ್ತಿರಲಿಲ್ಲ, ಆದ್ರೆ ಆಗ್ಲೇ A,B,D ಬರಿಯೋಕೆ ಶುರು ಮಾಡಿದ್ಲು. ವಾರಕ್ಕೊಂದು ಅಕ್ಷರ ಹೇಳಿ ಕೊಡಿ, ಜೊತೆಗೆ ಆ ವಾರವಿಡೀ ಒಂದೇ ಅಕ್ಷರದ ಕಲರಿಂಗ್ ಮಾಡಿಸಿ ಅನ್ನೋ ಸಲಹೆ ಗೆಳತಿ ಶುಭಾ (ಶಕ್ತಿ ಅಮ್ಮ) ಕೊಟ್ಟ್ರು.
ಅಂತರ್ಜಾಲದಲ್ಲಿ ಅಕ್ಷರಗಳ ಕಲರಿಂಗ್ ಪೇಜ್ಸ್ ಹುಡುಕುತ್ತಾ “Letter of the week” ಅನ್ನೋ ಈ ತಾಣದ ಪರಿಚಯವಾಯ್ತು. ಅಲ್ಲಿನ ಆಟ ಜೊತೆಗೆ ಪಾಠ ತುಂಬಾ ಇಷ್ಟವಾಯ್ತು. ಅದರಲ್ಲಿದ್ದ ಹಾಗೆ ಎಲ್ಲಾ ಅಲ್ಲದಿದ್ದರೂ ಅಲ್ಪ ಸ್ವಲ್ಪ ಮಾಡಲು ಶುರು ಮಾಡಿದೆ. ಜೊತೆಗೆ starfall.com ನಲ್ಲಿರುವ ಅಕ್ಷರ ನೋಡ್ತಾ ಹೋದ್ವಿ, ಆದ್ರೆ ಪುಟ್ಟಿ ಬರಿ A ನೋಡಿ ಸುಮ್ಮನಾಗುತ್ತಿರಲಿಲ್ಲ ದಿನಕ್ಕೆ ನಾಲ್ಕೈದು ಅಕ್ಷರ ನೋಡುತ್ತಿದ್ದಳು. ಅವಳು ಪೈಂಟ್ ಮಾಡಿದ/ ತಿದ್ದಿದ ಕೆಲವು A ಗಳು.

ಹೀಗೆ ಒಂದು ವಾರವಿಡೀ A ಜಪ ನೋಡಿ, ಕೇಳಿ ಪುಟ್ಟಿಗೆ ಬೋರ್ ಆಯ್ತೋ ಏನೋ. ಎರಡನೆ ವಾರ ಅವಳಾಗಿಯೇ ತನ್ನ alphabet floor mat ನಲ್ಲಿರೋ ಅಕ್ಷರಗಳನ್ನು ಗುರುತಿಸುತ್ತಾ ಹೋದ್ಲು, ಅಲ್ಲದೆ ಎಲ್ಲದರ phonic sound ಕೂಡ ಹೇಳೋಕೆ ಶುರು ಮಾಡಿದ್ಲು. ಈಗವಳು Capital ಮತ್ತು Lowercase letters ಎರಡನ್ನೂ ಗುರುತಿಸಿತ್ತಾಳೆ. ಆದ್ರೆ b, d, p ಮತ್ತು q ಇವುಗಳು ಕೆಲವೊಮ್ಮೆ ತಪ್ಪಾಗುತ್ತವೆ. ಅಲ್ಲಿಗೆ ನಮ್ಮ ವಾರಕ್ಕೊಂದು ಅಕ್ಷರ ಕಾರ್ಯಕ್ರಮ ಮುಗಿದೇ ಹೋಯ್ತು. ಜೊತೆಗೆ ಅಜ್ಜಿ ತಾತ ಇಲ್ಲಿದ್ದರಿಂದ ಪುಟ್ಟಿ ಅವರೊಡನೆ ಅಲ್ಲಿ ಇಲ್ಲಿ ಊರು ಸುತ್ತುವುದು ಹೆಚ್ಚಾಯ್ತು. ಆದ್ರೆ ಎಲ್ಲಿ ಹೋದ್ರು ಅಲ್ಲಿ ಅಕ್ಷರಗಳನ್ನ ಗುರುತಿಸೋದು ಹೊಸ ಆಟವಾಯ್ತು. ಅಂಗಡಿಯಲ್ಲೂ ಅದೇ ಆಟ, ತನ್ನ ಪುಸ್ತಕಗಳಲ್ಲೂ ಅದೇ ಹುಡುಕಾಟ. ಇವುಗಳೆಲ್ಲದರ ಜೊತೆಗೆ ಬರಿಯೊದು ಕೂಡ ಜಾಸ್ತಿ ಆಯ್ತು. ದಿನೆ ದಿನೆ ಅವಳ ಬರವಣಿಗೆ ಹೆಚ್ಚುತ್ತಿದೆ. ತನ್ನ ನೆಚ್ಚಿನ chalkboard ಮೇಲೆ ಅಕ್ಷರಗಳನ್ನ ಬರಿಯುತ್ತಿರುವ ಪುಟ್ಟಿ.