Showing posts with label Paint. Show all posts
Showing posts with label Paint. Show all posts
Friday, July 29, 2011
Saturday, March 19, 2011
ಬಣ್ಣಗಳ ಹಬ್ಬ ಹೋಳಿ
ಕೆಂಪು, ನೀಲಿ, ಹಳದಿ,ಗುಲಾಬಿ,ಹಸಿರು, ಕಂದು - ಎಲ್ಲೆಲ್ಲೂ ರಂಗು...ಇದು ಹೋಳಿ ಹಬ್ಬದ ಗುಂಗು!! ಬಣ್ಣಗಳ ಈ ಹಬ್ಬದ ಬಗ್ಗೆ ಪುಟ್ಟಿಗೆ ತಿಳಿಸುತ್ತಾ ಗೂಗಲ್ ನಲ್ಲಿದ್ದ ಒಂದಷ್ಟು ಫೋಟೋಗಳನ್ನು ತೋರಿಸಿದೆ. ಬಣ್ಣಗಳನ್ನು ಮೈಮೇಲೆಲ್ಲಾ ಹಾಕಿಕೊಂಡದನ್ನು ಕಂಡು ಖುಶಿಪಟ್ಟು "ನಾನೂ ಮಾಡ್ತೀನಿ ಅಮ್ಮ, ಇದು ಮುಖಕ್ಕೆ ಪೈಂಟ್ ಹಚ್ಚೋ ತರಹ!!" ಅಂದ್ಲು. ಆಯ್ತು ಕಂದ ಕಲರ್ಸ್ ತರ್ತೀನಿ ಅಂದೆ. ಸರಿ, ಇಲ್ಲಿನ ಭಾರತೀಯ ಅಸೋಸಿಯೇಷನ್ ಅವರು ಆಯೋಜಿಸುವ ಹೋಳಿ ಹಬ್ಬಕ್ಕೆ ಹೋಗೋಣ ಅಂತಂದೆ. ಜೊತೆಗೆ ಹೋಳಿಕಾ ದಹನದ ಕಥೆಯನ್ನೂ ನನಗೆ ತಿಳಿದಂತೆ ತಿಳಿಸಿದೆ. ಇದರ ಕುರಿತು ಯಾವುದಾದರು ವಿಡಿಯೋ ಸಿಕ್ಕರೆ ತಿಳಿಸಿ ಪ್ಲೀಸ್.
ಜೊತೆಗೆ ಎಂದಿನಂತೆ ಪುಟ್ಟಿ ಮನೆಯಲ್ಲಿ ತನ್ನ ಬಣ್ಣಗಳ ಜೊತೆ ಆಟವಾಡಿದಳು. ಇದು ಅವಳು ಮಾಡಿದ ಹಬ್ಬದ ಶುಭಾಶಯ ಪತ್ರ.
ಯಾವುದೋ ಸಾಮಾನಿನ ಪ್ಯಾಕೇಜಿಂಗ್ ನಲ್ಲಿ ಬಂದಿದ್ದ ಪೇಪರ್ ಜೊತೆಗೆ ಬಣ್ಣಗಳನ್ನು ಪುಟ್ಟಿಗೆ ಕೊಟ್ಟೆ. ಬಹಳ ಖುಶಿಯಿಂದಲೇ ಪೈಂಟ್ ಮಾಡಿದಳು. ಎಲ್ಲೂ ಗ್ಯಾಪ್ ಬಿಡದೇ ಪೈಂಟ್ ಮಾಡೋದು ಈಗವಳಿಗೆ ಬಲು ಇಷ್ಟ.
ಪೈಂಟ್ ಒಣಗಿದ ಮೇಲೆ ಬೇರೆ ಹಾಳೆಯ ಮೇಲೆ ಶುಭಾಶಯ ಬರೆದು, ಕಟ್ ಮಾಡಿ ಅಂಟಿಸಿದೆವು. ಇಂಗ್ಳೀಷ್ ನಲ್ಲಿ ಬರೆದು ಕಟ್ ಮಾಡಿದ್ದು ಪುಟ್ಟಿ. ನಂಗೆ ಕನ್ನಡ ಬರಲ್ಲ ನೀನು ಬರೀ ಅಮ್ಮ ಅಂತಂದ್ಲು :)
ನಿಮಗೆಲ್ಲರಿಗೂ ಬಣ್ಣಗಳ ಹಬ್ಬದ ಶುಭಾಶಯಗಳು !!!!
ಹೋಳಿ ಹೋಳಿ ಹೋಳಿ ಹೋಳಿ
ಏಳೇಳು ಬಣ್ಣದ ಬೆಳ್ಳಿ ಹೋಳಿ
ರಾಗ ರಂಗಿನ ರಂಗು ರಂಗೋಲಿ
ಕಾಮನ ಬಿಲ್ಲಿಂದ ಬಣ್ಣಗಳ ಕದಿಯೋಣ
ಮೋಡದ ಕಡಲಿಂದ ಪನ್ನೀರ ಕಡೆಯೋಣ
ಬಿಳಿ ಹೆತ್ತ ಬಣ್ಣಗಳ ಬಿಳಿ ಬಿಳಿ ಬಟ್ಟೆಗೆ ಚೆಲ್ಲೋಣ
ಓಹೋ ಓಕುಳಿ ಆಡೋಣ
Thursday, January 20, 2011
ಪೇಪರ್ ಟ್ಯೂಬ್ ಕಬ್ಬು
ಸಂಕ್ರಾಂತಿ ಹಬ್ಬಕ್ಕೆಂದು ಮಾಡಿದ ಮತ್ತೊಂದು ಕ್ರಾಫ್ಟ್ ಇದು. ಮೊದಲಿಗೆ ಖಾಲಿಯಾದ ಗಿಫ್ಟ್ ವ್ರಾಪ್ ಪೇಪರ್ ನ ಒಳಗಿನ ಪೇಪರ್ ಟ್ಯೂಬ್ ಗೆ ಬಣ್ಣ ಹಚ್ಚಲು ಪುಟ್ಟಿಗೆ ಕೊಟ್ಟೆ. ಅಡುಗೆಮನೆಯ ಪೇಪರ್ ಟವೆಲ್ ಅಥವಾ ಅಲುಮಿನಿಯಂ ಫಾಯಿಲ್ ಒಳಗಿನ ಟ್ಯೂಬ್ ಆದರೂ ಆಗುತ್ತೆ. ಕೆಂಪು ಬಣ್ಣಕ್ಕೆ ಸ್ವಲ್ಪೇ ಸ್ವಲ್ಪ ಕಪ್ಪು ಬೆರಸಿದ್ದೆ. ಅದು ಒಣಗಿದ ನಂತರ ಅದರ ಮೇಲೆ ಅಲ್ಲಲ್ಲಿ ಕಪ್ಪು ಮತ್ತು ಬಿಳಿಯ ಬಣ್ಣದ ಗೆರೆಗಳನ್ನು ಬರೆದೆ. ನಂತರ ಒಂದಷ್ಟು ಲಿಲ್ಲಿ ಹೂವಿನ ಎಲೆಗಳನ್ನು ತಂದು ಒಂದು ತುದಿಗೆ ಅಂಟಿಸಿದೆ!
Thursday, January 13, 2011
ಮಕರ ಸಂಕ್ರಾಂತಿ ಶುಭಾಶಯಗಳು
ಭಾರತದಲ್ಲಿ ಬೆಳೆವ ಮಕ್ಕಳಿಗೆ ನಮ್ಮ ಹಬ್ಬ ಹರಿದಿನಗಳ ಬಗ್ಗೆ ಹೇಳಿಕೊಡಲು ಯಾವುದೇ ಪಠ್ಯಪುಸ್ತಕ ಬೇಕಿಲ್ಲ. ಅಲ್ಲಿ ಸುತ್ತಲಿನ ಹಬ್ಬದ ವಾತಾವರಣವೇ ಕಲಿಸುತ್ತದೆ. ಯಾವ ಹಬ್ಬಕ್ಕೆ ಏನು ವಿಶೇಷ ಅನ್ನುವುದು ಆ ಹಬ್ಬದ ದಿನ ಮನೆಯ ಹತ್ತಿರದ ಅಂಗಡಿ/ ಮಾರುಕಟ್ಟೆಗೆ ಒಂದು ಸುತ್ತು ಹೋಗಿ ಬಂದರೆ ಸಾಕು:)
ಆದರೆ ಇದೆಲ್ಲದರಿಂದ ದೂರವಿರುವ ನನ್ನ ಪುಟ್ಟಿಗೆ ಇವುಗಳನ್ನ ನಾವೇ ಮನೆಯಲ್ಲಿ ಹೇಳಿಕೊಡಬೇಕು. ಇಲ್ಲಿನ ಹಬ್ಬಗಳು/ ಆಚರಣೆಗಳು ಬಂತೆಂದರೆ ಶಾಲೆಗಳಲ್ಲಿ ಆ ವಾರ/ ತಿಂಗಳೆಲ್ಲಾ ಬರೀ ಅದೇ ಹಬ್ಬದ ಪುಸ್ತಕ ಓದೋದು, ಅದೇ ಹಾಡುಗಳು, ಅದೇ ಥೀಮಿನ ಕಲೆ ಮಾಡಿಸುವುದು, ಹಬ್ಬದ ತಿಂಡಿ ಇತ್ಯಾದಿ. ನಾನೂ ಕೂಡ ಇನ್ನು ಮೇಲೆ ಇದೇ ಮಾರ್ಗದಲ್ಲಿ ಪುಟ್ಟಿಗೆ ನಮ್ಮ ಹಬ್ಬಗಳ ಬಗ್ಗೆ ತಿಳಿಸಿಕೊಡಬೇಕೆಂದು ಅಂದುಕೊಂಡಿದ್ದೆ.
ಸಂಕ್ರಾಂತಿಗೆ ಒಂದು ಪವರ್ ಪಾಯಿಂಟ್ ಸ್ಲೈಡ್ ಶೋ ಮಾಡೋಣವೆಂದಿದ್ದೆ, ಆದ್ರೆ ಮನೆಯಲ್ಲಿ ೧-೨ ತಿಂಗಳಿನಿಂದ ಎಲ್ಲರಿಗೂ ಬಿಡದೇ ನೆಗಡಿ/ಕೆಮ್ಮು ಸತಾಯಿಸುತ್ತಿದೆ, ಇವುಗಳ ಮದ್ಯೆ ಏನೂ ಮಾಡಲಾಗಲಿಲ್ಲ. ಗೂಗಲ್ ನಲ್ಲಿರುವ ಕೆಲವು ಹಬ್ಬದ ಚಿತ್ರಗಳನ್ನು ತೋರಿಸುತ್ತಾ ಪುಟ್ಟಿಗೆ ಸಂಕ್ರಾಂತಿ ಬಗ್ಗೆ ನಂಗೆ ತಿಳಿದಷ್ಟು ಹೇಳ್ತಾ ಬಂದಿರುವೆ.
ಜೊತೆಗೆ ಹಬ್ಬದ ಶುಭಾಶಯಗಳ ಬ್ಯಾನರ್ ಕೂಡ ಅವಳೇ ಪೈಂಟ್ ಮಾಡಿದ್ದಾಳೆ ನೋಡಿ ಹೇಗಿದೆ.
ಕಾಫಿ ಫಿಲ್ಟರ್ ಪೇಪರ್ ಅನ್ನು ಸೂರ್ಯನ ಕಿರಣಗಳಂತೆ ಕಾಣುವಂತೆ ಕತ್ತರಿಸಿ ಪೈಂಟ್ ಮಾಡಲು ಪುಟ್ಟಿಗೆ ಬಣ್ಣಗಳನ್ನು ಕೊಟ್ಟೆ. ಈ ಪೇಪರ್ ಮೇಲೆ ಪೈಂಟ್ ಮಾಡುವುದು ಪುಟ್ಟಿಗೆ ಬಲು ಇಷ್ಟ, ಬಣ್ಣಗಳು ಸುಲಭವಾಗಿ ಹರಡಿ, ಬೆರೆತುಕೊಳ್ಳುತ್ತವೆ. ಮುಂಚೆಯೂ ಬಹಳಷ್ಟು ಸರ್ತಿ ಇದರ ಮೇಲೆ ಪೈಂಟ್ ಮಾಡಿದ್ದಾಳೆ. ಸೂರ್ಯ ಮಾಡಬೇಕಿದ್ದರಿಂದ ಹಳದಿ, ಕೆಂಪು ಮತ್ತು ಕಿತ್ತಳೆ ಬಣ್ಣವನ್ನು ಮತ್ರ ಕೊಟ್ಟೆ. ಪೈಂಟ್ ಮಾಡಿದ ಮೇಲೆ ಪ್ರಿಂಟ್ ಮಾಡಿದ ಅಕ್ಷರಗಳನ್ನು ಅವಕ್ಕೆ ಅಂಟಿಸಿ ಗೋಡೆಗೆ ಹಾಕಿರುವೆ!!

ನಿಮಗೆಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು !!
Thursday, November 04, 2010
ಪೇಪರ್ ಲ್ಯಾಂಟರ್ನ್...
ದೀಪಾವಳಿಗೆ ಆಕಾಶಬುಟ್ಟಿ ಮಾಡಿ ಅದರೊಳಗೊಂದು ಸಣ್ಣ ದೀಪವನ್ನು ಹಚ್ಚಿ ಮನೆಯ ಮುಂದೆ ನೇತು ಹಾಕುವುದನ್ನು ಅಮ್ಮ ಹೇಳಿದ್ದನ್ನು ಕೇಳಿದ್ದೆ. ಬೆಂಗಳೂರಿನಲ್ಲಿ ಕೆಲವರು ಮನೆಯ ಮುಂದೆ ಹಾಕಿದ್ದ ಅಂಗಡಿಯಲ್ಲಿ ಸಿಗುವ ’ಬಟ್ಟೆಯ ಆಕಾಶಬುಟ್ಟಿ’ ಯನ್ನು ನೋಡೂ ಇದ್ದೆ. ಅದು ಮತ್ತೆ ಇನ್ನೂ ಕೆಲವು ದೀಪಾವಳಿಯ ಆಚರಣೆ ನಶಿಸುತ್ತಿರುವ ಬಗ್ಗೆ ಒಂದು ಲೇಖನ ಇಲ್ಲಿ.
ಮೊನ್ನೆ ನಡೆದ ’Asian festival' ನಲ್ಲಿ ಥೈಲಾಂಡಿನವರ ಬೂತಿನಲ್ಲಿ ಮಕ್ಕಳಿಗೆ ಮಾಡಿಸುತ್ತಿದ್ದ ಪೇಪರ್ ಲ್ಯಾಂಟರ್ನ್ ಪುಟ್ಟಿ ಕೂಡ ಮಾಡಿದ್ದಳು. ಅದು ಮಾಡಲು ಬಲು ಸುಲಭ.
ಕೆಲವನ್ನು ಪೈಂಟ್ ಮಾಡಿದಳು, ಕೆಲವರಲ್ಲಿ ಮಾರ್ಕರ್/ ಕ್ರಯಾನ್ಸ್ ನಿಂದ ಸಿಂಗರಿಸಿದ್ದಳು. . ಕತ್ತರಿಸುವಾಗ ಪುಟ್ಟಿಗೆ ಸಹಾಯವಾಗಲೆಂದು ಹಾಳೆ ಹಿಡಿದೆ. ಕೆಲವೊಂದು ಸ್ವಲ್ಪ ಹೆಚ್ಚಾಗಿ ಕಟ್ ಕೂಡ ಆಯ್ತು:) ಯಾವುದೂ ಪರ್ಫೆಕ್ಟ್ ಆಗಿಲ್ಲ, ಪರ್ವಾಗಿಲ್ಲ:) ಇವುಗಳು ಈಗ ಅಡುಗೆ ಮನೆಯ ಬಾಗಿಲಲ್ಲಿವೆ!
ನೀವೂ ಕೂಡ ಮಾಡಬೇಕೆ? ಹಾಗಾದ್ರೆ ನೋಡಿ ವಿಡಿಯೋ ಇಲ್ಲಿದೆ. ಒಳಗಿನ ಪೇಪರ್ ಟ್ಯೂಬ್ ಇಲ್ಲದೆಯೂ ಮಾಡಬಹುದು.
ಮೊನ್ನೆ ನಡೆದ ’Asian festival' ನಲ್ಲಿ ಥೈಲಾಂಡಿನವರ ಬೂತಿನಲ್ಲಿ ಮಕ್ಕಳಿಗೆ ಮಾಡಿಸುತ್ತಿದ್ದ ಪೇಪರ್ ಲ್ಯಾಂಟರ್ನ್ ಪುಟ್ಟಿ ಕೂಡ ಮಾಡಿದ್ದಳು. ಅದು ಮಾಡಲು ಬಲು ಸುಲಭ.
ಸರಿ, ನಾವೂ ಕೂಡ ನಮ್ಮ ಹಬ್ಬಕ್ಕೆ ಮಾಡೋಣ ಅಂತ ಶುರು ಮಾಡಿದೆವು. ಮೊದಲು ಮಾಡಿದ್ದು ಸರಿಯಾಗಲಿಲ್ಲ. ತಪ್ಪಾಗಿ ಕಟ್ ಮಾಡಿದೆವು. ಆದ್ರೆ ಅದನ್ನು ಅಂಟಿಸಿದಾಗ, ಅದು ಹೀಗಾಯ್ತು!
ನಂತರ ಕೆಲವನ್ನು ಮಾಡಿಯೇ ಬಿಟ್ಟೆವು...
ಕೆಲವನ್ನು ಪೈಂಟ್ ಮಾಡಿದಳು, ಕೆಲವರಲ್ಲಿ ಮಾರ್ಕರ್/ ಕ್ರಯಾನ್ಸ್ ನಿಂದ ಸಿಂಗರಿಸಿದ್ದಳು. . ಕತ್ತರಿಸುವಾಗ ಪುಟ್ಟಿಗೆ ಸಹಾಯವಾಗಲೆಂದು ಹಾಳೆ ಹಿಡಿದೆ. ಕೆಲವೊಂದು ಸ್ವಲ್ಪ ಹೆಚ್ಚಾಗಿ ಕಟ್ ಕೂಡ ಆಯ್ತು:) ಯಾವುದೂ ಪರ್ಫೆಕ್ಟ್ ಆಗಿಲ್ಲ, ಪರ್ವಾಗಿಲ್ಲ:) ಇವುಗಳು ಈಗ ಅಡುಗೆ ಮನೆಯ ಬಾಗಿಲಲ್ಲಿವೆ!
ನೀವೂ ಕೂಡ ಮಾಡಬೇಕೆ? ಹಾಗಾದ್ರೆ ನೋಡಿ ವಿಡಿಯೋ ಇಲ್ಲಿದೆ. ಒಳಗಿನ ಪೇಪರ್ ಟ್ಯೂಬ್ ಇಲ್ಲದೆಯೂ ಮಾಡಬಹುದು.
Wednesday, November 03, 2010
ಪೇಪರ್ ದೀಪಗಳ ಹಾರ...
ಪುಟ್ಟಿ ಪೈಂಟ್ ಮಾಡಿರೋ ಕೆಲವು ಹಾಳೆಗಳನ್ನು ಅರ್ಧ ಸರ್ಕಲ್ ಆಗಿ ಕತ್ತರಿಸಿದೆ. ಒಂದು ಹಾ;ಎ ಪೂರ್ತಿ ಹಳದಿ ಬಣ್ಣ ಪೈಂಟ್ ಮಾಡಿಸಿ, ಅದನ್ನು 'tear shape'ನಲ್ಲಿ ಕಟ್ ಮಾಡಿ, ಮದ್ಯ ಸ್ವಲ್ಪ ಕೆಂಪು ಹಾಕಿ ದೀಪಗಳನ್ನು ಮಾಡಿದೆವು. ಅವುಗಳನ್ನು ಹಬ್ಬದ ದಿನ ಡೈನಿಂಗ್ ಟೇಬಲ್ ನಲ್ಲಿ ಹೀಗೆ ಜೋಡಿಸಿಡುವ ಇರಾದೆ ನನಗಿತ್ತು. 
ಅಥವಾ ಬಾಗಿಲಿಗೆ ತೋರಣದ ತರಹ ಈ ದೀಪಗಳ ಹಾರ ಹಾಕಬಹುದಿತ್ತು!
Sunday, October 03, 2010
ತೆಂಗಿನಕಾಯಿ ಚಿಪ್ಪು ಪೈಂಟಿಂಗ್
ಗಣಪನ ಹಬ್ಬಕ್ಕೆ ತಂದಿದ್ದ ತೆಂಗಿನಕಾಯಿ, ಗಣಪತಿಗೆ ಅರ್ಪಿಸಿ ಹಬ್ಬ ಮಾಡಿದಾಯ್ತು. ಅದರ ಚಿಪ್ಪನ್ನು ಎಸೆಯುವ ಬದಲು ಪುಟ್ಟಿ ಕೈಯಲ್ಲಿ ಏನಾದ್ರೂ ಮಾಡಿಸೋಣ ಅಂತ ಇಟ್ಟಿದ್ದೆ. ಪುಟ್ಟಿಗೆ ಪೈಂಟ್ ಮಾಡೋಣವಾ ಅಂದಿದ್ದೆ ತಡ ಹೂಂ ಅಂತ ಕುಣಿದಾಡಿದ್ಲು. ಮೊದಲು ಚಿಪ್ಪಿಗೆ ಅವಳು ಕೇಳಿದ ಹಳದಿ ಬಣ್ಣ ಹಚ್ಚಿದಳು. ಎಷ್ಟೇ ನಾರು ತೆಗೆದರೂ ಅದರ ಮೇಲೆ ಬಣ್ಣ ಹಚ್ಚುವುದು ಪುಟ್ಟಿಗೆ ಸ್ವಲ್ಪ ಕಷ್ಟವೇ ಆಯ್ತು, ಅಮ್ಮ ಇದು ಕಟ್ಟಿ ಅನ್ನುತ್ತಲೇ ಮಾಡಿದ್ಲು. ಕೊನೆಗೆ ಅಲ್ಲಲ್ಲಿ ಉಳಿದ ಗ್ಯಾಪ್ ಅನ್ನು ನಾನು ತುಂಬಿದೆ.
ಇದಕ್ಕೆ ಎರಡು ಸರ್ತಿ ಬಣ್ಣ ಹಚ್ಚಿದಾಯ್ತು. ಅಂತೂ ಒಂದು ಇಡೀ ದಿನ ಇದೇ ಆಯ್ತು :) ಆ ಹಳದಿ ಚಿಪ್ಪು ನೋಡಿ ಅದನ್ನು "bee" ಮಾಡಬಹುದು ಅನ್ನಿಸಿ, ಅದಕ್ಕೆ ಕಪ್ಪು ಬಣ್ಣದ ಗೆರೆಗಳನ್ನು ಹಾಕಿಕೊಟ್ಟೆ ಪುಟ್ಟಿ ಅದರ ಮೇಲೆ ಪೈಂಟ್ ಮಾಡಿದ್ಲು. ಕೊನೆಗೆ ಅದಕ್ಕೆ ’googly eye
' ಅಂಟಿಸಿದೆವು.
ನಮ್ಮ ’bee' ಪುಟ್ಟಿಗೆ ಇಷ್ಟವಾದದ್ದನ್ನು ನೋಡಿ ಮತ್ತೊಂದು ಚಿಪ್ಪನ್ನೂ ಪೈಂಟ್ ಮಾಡಲು ಮನಸಾಯ್ತು. ಅದಕ್ಕೆ ಕೆಂಪು ಬಣ್ಣ ಹಾಕಿ, ದುಂಡನೆ ಸ್ಪಾಂಜ್ ಬ್ರಷ್ ನಿಂದ ಕಪ್ಪು ಚುಕ್ಕಿ ಇಟ್ಟು ’Lady bug' ಮಾಡಿದ್ವಿ!!
ಇದೇ ಸಮಯಕ್ಕೆ ಆ ವಾರ ಲೈಬ್ರರಿಯಿಂದ ನಾವು ತಂದು ಓದಿದ ಪುಸ್ತಕಗಳಿವು... The Grouchy Ladybug
, Honeybee's Busy Day

Friday, September 17, 2010
ಕೈ-ಕಾಲು ಪೈಂಟ್
ಇವತ್ತು ಏನ್ ಪೈಂಟ್ ಮಾಡೋಣ ಪುಟ್ಟಿ? ಅಂತ ಕೇಳಿದ್ರೆ "ಕೈ ಮಾಡೋಣ ಅಮ್ಮ" ಅಂದ್ಲು. ಹಾಗಂದ್ರೇನು ಅಂತ ಗೊತ್ತಾಗದೆ ಅದು ಹೆಂಗೆ ಮಾಡೋದು ಅಂದೆ? "ಅಕ್ಕ ಕೈ ಮಾಡಿ ಸ್ಪೈಡರ್ ಮಾಡ್ತಾರಲ್ಲ ಹಾಗೆ" ಅಂದ್ಲು ಅವಳು ನೋಡುವ ಬಾರ್ನಿ ಕಾರ್ಟೂನ್ ನೆನದು. ಆಗ ಅರ್ಥವಾಯ್ತು ಅವಳು ಹೇಳಿದ್ದು ಕೈ ಟ್ರೇಸ್ ಮಾಡೋಣ ಅಂತ. ಸರಿ, ಅವಳ ಎರಡೂ ಕೈಗಳನ್ನ ಪೇಪರ್ ಮೇಲಿಟ್ಟು ಸುತ್ತ ಪೆನಿನಲ್ಲಿ ಬರೆದೆ, ಪೆನ್ ಕೈಗೆ ತಾಗಿದಾಗಲೆಲ್ಲ ಕಚಗುಳಿ ಕೊಟ್ಟಂತಾಗಿ ನಗುತ್ತಿದ್ದಳು. ಬಳೆಗಳನ್ನೂ ಮಾಡುವಂತೆ ಹೇಳಿದ್ಲು, ಬರೆದೆ.
ಮುಂದೇನು? ಅಂತ ಯೋಚಿಸ್ತಾಯಿದ್ರೆ ಪುಟ್ಟಿ “ಅಮ್ಮ ನೇಲ್ಸ್ ಬರ್ದಿಲ್ಲ ನೀನು ಹ್ಹಹ್ಹ ಅಮ್ಮ ಮರ್ತೋಯ್ತು ಹ್ಹಹ್ಹ” ಅಂತ ನಗುತ್ತ ನೆನಪಿಸಿದ್ಲು. ಸರಿ, ಉಗುರು ಬರೆದಿದ್ದು ಆಯ್ತು, ಅದಕ್ಕೆ ಬಣ್ಣ ಹಾಕೋಣವಾ ಅಂದೆ, ಹೂಂ ಆಂಟಿ ಹಾಕ್ತಾರೆ ಹಂಗೆ ಮಾಡೋಣ ಅಂದ್ಲು. ಎಲ್ಲಿ ಯಾವ ಆಂಟಿ ಕೈ ನೋಡಿದ್ಲೋ ಗೊತ್ತಿಲ್ಲ. ಅಂತು ನೋಡಿದ್ದೆಲ್ಲಾ ಆ ಪುಟ್ಟ ತಲೆಯಲ್ಲಿ ನೆನಪಿರುತ್ತೆ ಅಂತ ತಿಳೀತು.
ಆಮೇಲೆ ಕಾಲು ಮಾಡೋಣ ಅಂತ ಅದನ್ನೂ ಮಾಡಿಸಿಕೊಂಡಳು. ಅದಕ್ಕೆ ಉಗುರುಬಣ್ಣ ಹಾಕಿ ಮೆಹಂದಿಯನ್ನೂ ಹಾಕಿದ್ವಿ (ಯಾವಾಗಲೋ ಸೇವ್ ಮಾಡಿಟ್ಟುಕೊಂಡಿದ್ದ ಕೆಲವು ಮೆಹಂದಿ ಡಿಸೈನ್ ಗಳನ್ನ ಮೊನ್ನೆ ಪುಟ್ಟಿಗೆ ತೋರಿಸಿದ್ದೆ, ಅದರ ಪರಿಣಾಮವಿರ ಬಹುದು).
Thursday, September 02, 2010
ಪುಟ್ಟಿ ಆರ್ಟ್ ಗೋಡೆ ಮೇಲೆ
ಇತ್ತೀಚೆಗೆ ನಾನು ನೋಡಿದ ಹಲವಾರು kids art ಬ್ಲಾಗ್ ಗಳಲ್ಲಿ "ದ ಆರ್ಟ್ ಫುಲ್ ಪೇರಂಟ್" ಬಹಳ ಇಷ್ಟವಾಯ್ತು. ಅವರು ತಮ್ಮ ಮಗಳ ಬಹುತೇಕ ಎಲ್ಲಾ ಪೇಂಟಿಂಗ್ಸ್ ಗಳನ್ನು ಉಳಿಸಿಕೊಂಡಿದ್ದಾರೆ. ಅಲ್ಲದೆ ಕೆಲವನ್ನು ಫ್ರೇಮ್ ಕೂಡ ಮಾಡಿರಿವುದನ್ನು ಕಂಡು ಆಶ್ಚರ್ಯ ಸಂತಸ ಎರಡೂ ಆಯ್ತು. ಫ್ರೇಮ್ ಹಾಕಿಸಿದ ಪೇಂಟ್ಸ್ ಯಾವುದೋ ಫೇಮ್ಸ್ ಕಲೆಗಾರನ ಮಾಡ್ರನ್ ಆರ್ಟ್ ನಂತಿತ್ತು!!
ಪುಟ್ಟಿ ಮಾಡಿದ ಪೈಂಟಿಂಗ್ಸ್ ನಲ್ಲಿ ಚೆಂದ (ನನ್ನ ಕಣ್ಣಿಗೆ ಚೆಂದ) ಅನಿಸಿದ ಕೆಲವನ್ನು ಮಾತ್ರ ಎತ್ತಿಟ್ಟು ಮಿಕ್ಕ ಹಲವಾರನ್ನು ಬಿಸಾಡಿದ್ದೇನೆ, ಬೇಸರವಾಯ್ತು. Atleast ಅವುಗಳ ಫೋಟೋನಾದ್ರು ಕ್ಲಿಕ್ಕಿಸಿಟ್ಟುಕೊಳ್ಳಬಾರದಿತ್ತೇ ಅನಿಸಿತು. ಜೊತೆಗೆ ಅವುಗಳನ್ನು ಮನೆಯ ಫ್ರಿಡ್ಜ್ ಗೆ ನೇತು ಹಾಕೋದು ಬಿಟ್ಟು ಹೆಚ್ಚೇನೂ ಮಾಡಿಲ್ಲಾ :(
ಪುಟ್ಟಿಗೆ ಬಹಳ ಖುಶಿ ಆಯಿತಾದ್ರೂ, ನಂಗೆ ಅದು ಅಷ್ಟು ಚೆಂದ ಕಾಣಿಸಲಿಲ್ಲ. ಸರಿ, ಒಂದು ಅಗಲವಾದ ಬಟ್ಟೆಗೆ ಹಲವು sheet protectorಗಳನ್ನು ಹೊಲೆದು ಅದನ್ನು ಗೋಡೆಗೆ ಪಿನ್ ಮಾಡಿದೆ.
ಇದಕ್ಕೊಂದು ಚೆಂದದ ಬಾರ್ಡರ್(ಪುಟ್ಟಿಯ ಆಯ್ಕೆಯ) ತಂದು ಅಂಟಿಸಿದೆವು.
.JPG)

.JPG)
.JPG)
ಪುಟ್ಟಿ ಮಾಡಿದ ಪೈಂಟಿಂಗ್ಸ್ ನಲ್ಲಿ ಚೆಂದ (ನನ್ನ ಕಣ್ಣಿಗೆ ಚೆಂದ) ಅನಿಸಿದ ಕೆಲವನ್ನು ಮಾತ್ರ ಎತ್ತಿಟ್ಟು ಮಿಕ್ಕ ಹಲವಾರನ್ನು ಬಿಸಾಡಿದ್ದೇನೆ, ಬೇಸರವಾಯ್ತು. Atleast ಅವುಗಳ ಫೋಟೋನಾದ್ರು ಕ್ಲಿಕ್ಕಿಸಿಟ್ಟುಕೊಳ್ಳಬಾರದಿತ್ತೇ ಅನಿಸಿತು. ಜೊತೆಗೆ ಅವುಗಳನ್ನು ಮನೆಯ ಫ್ರಿಡ್ಜ್ ಗೆ ನೇತು ಹಾಕೋದು ಬಿಟ್ಟು ಹೆಚ್ಚೇನೂ ಮಾಡಿಲ್ಲಾ :(
ಜೇನ್ ಅವರೇ ತಮ್ಮ ಬ್ಲಾಗಿನಲ್ಲಿ ಮಕ್ಕಳ ಆರ್ಟ್ ಅನ್ನು ಚೆಂದವಾಗಿ ಪ್ರದರ್ಶಿಸುವ ಹಲವಾರು ರೀತಿಗಳನ್ನು ತೋರಿಸಿದ್ದರು. ಅಲ್ಲದೆ ನಾನು ಅಂತರ್ಜಾಲದಲ್ಲಿ ಹುಡುಕಿದಾಗ ಇನ್ನೂ ಹಲವಾರು ಉಪಾಯಗಳು ಹೊಳೆದವು. ಆದ್ರೆ ಬಾಡಿಗೆಯ ಆಪಾರ್ಟ್-ಮೆಂಟಿನಲ್ಲಿ ಮೊಳೆ ಹೊಡೆಯೋದು ಹೇಮಂತ್ ಗೆ ಇಷ್ಟವಿಲ್ಲ, ಆದ್ರೂ ಅವಳ ರೂಮಿನ ಒಂದು ಗೊಡೆಯನ್ನು ಅವಳ ಪೈಂಟಿಂಗ್ಸ್ ಗಾಗಿ ಮೀಸಲಿಡಲು ನಿರ್ಧರಿಸಿದೆ. ಮಕ್ಕಳ ಕಲೆಯನ್ನು ಪ್ರದ್ರಶಿಸುವುದರಿಂದ ಅವರಲ್ಲಿ ಆತ್ಮವಿಶ್ವಾಸ ಹೆಚ್ಚುವುದು.
ಸರಿ, ಮೊದಲಿಗೆ ಪೈಂಟ್ಸ್ sheet protectorsನಲ್ಲಿ ಹಾಕಿ ಗೋಡೆಗೆ ಟೇಪ್ ಮಾಡಿದೆ...
ಆಮೇಲೆ ಅದಕ್ಕೊಂದು ಬೋರ್ಡ್ ಹಾಕಬೇಕೆನಿಸಿತು. ಸರಿ, ಮನೆಯಲ್ಲಿದ್ದ ಖಾಲಿ cerealsನ ಡಬ್ಬಕ್ಕೆ ಪುಟ್ಟಿಗೆ ಪೈಂಟ್ ಮಾಡಲು ಹೇಳಿದೆ (ಗೆರೆಗಳನ್ನು ಬರೆಯಲು ಹೇಳಿದೆ).
ನಂತರ ಅದನ್ನು ಬೇಕಾದ ಅಳೆತೆಗೆ ಕತ್ತರಿಸಿದೆ. ಬಿಳಿಯ ಹಾಳೆಯ ಮೇಲೆ "Putti's Art"ಯಲ್ಲಿನ ಒಂದೊಂದೇ ಅಕ್ಷರಗಳನ್ನು ಪುಟ್ಟಿಗೆ ಬರೆಯಲು ಹೇಳಿ ಅದನ್ನು ನಾನು ನಂತರ ಸ್ವಲ್ಪ ಗ್ಯಾಪ್ ಬಿಟ್ಟು ಕತ್ತರಿಸಿ(ಬಿಳಿ ಹಾಳೆ ಕಾಣುವಂತೆ ಕತ್ತರಿಸಿ) ಬಣ್ಣದ ಬೋರ್ಡಿಗೆ ಅಂತಿಸಿದೆವು:)
ಪುಟ್ಟಿ, ಈಗ ಮನೆಗೆ ಬಂದವರನೆಲ್ಲಾ ತನ್ನ ರೂಮಿಗೆ ಕರೆದು ಇದನ್ನು ತೋರಿಸಿ ತಾನೇ ಮಾಡಿದ್ದು ಅಂತ ಹೇಳಿ ಕೊಳ್ತಾಳೆ. ಇನ್ನ್ಮೇಲೆ ತಿಂಗಳಿಗೊಮ್ಮೆ ಇದರಲ್ಲಿನ ಪೈಂಟ್ಸ್ ಗಳನ್ನ ಬದಲಾಯಿಸುತ್ತೇವೆ!
Sunday, August 15, 2010
ನಮ್ಮ ದೇಶ ಭಾರತ !!
ಭಾರತದ ಸ್ವಾತಂತ್ರ ದಿನೋತ್ಸವದ ಅಂಗವಾಗಿ ಪುಟ್ಟಿ ಕೈಯಲ್ಲಿ ಇವನ್ನು ಪೈಂಟ್ ಮಾಡಿಸಿದೆ.
ಕೇಸರಿ (ಇಲ್ಲಿ ಕಂದು ಬಣ್ಣವಾಗಿದೆ) ಮತ್ತು ಹಸಿರು ಬಣ್ಣದ ಪಟ್ಟಿಗಳನ್ನು ಅಗಲ ಬ್ರಷ್ ನಲ್ಲಿ ಪುಟ್ಟಿ ಬರೆದಳು. ನೀಲಿ ಬಣ್ಣದ ಚಕ್ರ Fiori pasta ದಿಂದ ಮಾಡಿದ್ದು. Ruote ಉಪಯೋಗಿಸಿದರೆ ಚಕ್ರದ ಆಕಾರ ಇನ್ನೂ ಚೆನ್ನಾಗಿ ಮೂಡುತ್ತದೆ, ಅದು ಮನೆಯಲ್ಲಿ ಇರಲಿಲ್ಲ:(ಹುಲಿ
ಅಂಗೈಗೆ ಬಣ್ಣ ಹಚ್ಚಿ ತಲೆ ಮಾಡಿದೆವು. ಆಮೇಲೆ ಹೆಬ್ಬೆರಳು ಬಿಟ್ಟು ಉಳಿದೆಲ್ಲಾ ಕಡೆ ಬಣ್ಣ ಬಳಿದು ದೇಹ, ಒಂದು ಬೆರಳಿನಿಂದ ಬಾಲ ಮತ್ತು ಕಾಲುಗಳು, ಬೆರಳ ತುದಿಯಿಂದ ಕಿವಿಗಳು. ಇದು ಒಣಗಿದ ಮೇಲೆ ಕಪ್ಪು ಬಣ್ಣದ ಗೆರೆ ಮತ್ತು ಚುಕ್ಕಿಗಳು!ನವಿಲು

ಕಮಲ
ಕೈ ಗುರುತು ಪುಟ್ಟಿಯದು. ಕಪ್ಪು ಪೆನ್ನಿನಲ್ಲಿ ಬರೆದದ್ದು ನಾನು. ಈ ನವಿಲು ಮತ್ತು ಕಮಲವನ್ನು ಇಲ್ಲಿ ನೋಡಿದ್ದೆ!ಮಾವಿನ ಹಣ್ಣು!

ಮೊದಲು ಒಂದು ಪೇಪರ್ ಪೂರ್ತಿ ಬಣ್ಣ ಬಳಿದು ಅದನ್ನು ಒಣಗಲು ಬಿಟ್ಟೆವು. ನಂತರ ಅದನ್ನು ಚಿಕ್ಕ ಚಿಕ್ಕ ಚೂರುಗಳಾಗಿ ಕತ್ತರಿಸಿ, (ಪುಟ್ಟಿ ಈಗಷ್ತೆ ಕತ್ತರಿಸಲು ಕಲಿಯುತ್ತಿದ್ದಾಳೆ) ಒಂದು ಹೊಸ ಹಾಳೆಯ ಮೇಲೆ ಮಾವಿನ ಚಿತ್ರವನ್ನು ಬರೆದು ಅದರ ಒಳಗೆ ಚೂರುಗಳನ್ನು ಅಂಟಿಸುವುದು. ಕೊನೆಯಲ್ಲಿ ಬರೆದ ಚಿತ್ರವನ್ನು ಅಳಿಸಿಬಿಟ್ಟೆವು :)
Thursday, April 29, 2010
ಕಾಮನ ಬಿಲ್ಲು
ಪುಟ್ಟಿಗೆ ಬಣ್ಣಗಳೊಂದಿಗೆ ಆಟವಾಡೋದು ಬಲು ಇಷ್ಟ. ಯಾವಾಗ ಕೇಳಿದ್ರೂ ’ಪೈಂಟಿಂಗ್/ ಕಲರಿಂಗ್ ಮಾಡೋಣ’ ಅಂತಾಳೆ. ಅದ್ರಲ್ಲೂ ಅವಳ ನೆಚ್ಚಿನದು ’ರೈನ್-ಬೋ’ :)) ಅವಳು ಮಾಡಿರೋ ಹತ್ತಾರು ಚಿತ್ರಗಳಲ್ಲಿ ಕೆಲವು ಇಲ್ಲಿವೆ.

ಅವಳು ತಿನ್ನುವ ’Fruitloops' ನಿಂದ ಕಾಮನಬಿಲ್ಲು ಮಾಡಿರೋದು:) ಜೊತೆಗೆ ಅವಳ ನೆಚ್ಚಿನ ಹಾಡು.

ಅವಳು ತಿನ್ನುವ ’Fruitloops' ನಿಂದ ಕಾಮನಬಿಲ್ಲು ಮಾಡಿರೋದು:) ಜೊತೆಗೆ ಅವಳ ನೆಚ್ಚಿನ ಹಾಡು.

ಕಾಮನ ಬಿಲ್ಲು ಕಮಾನು ಕಟ್ಟಿದೆಮೋಡದ ನಾಡಿನ ಬಾಗಿಲಿಗೆ
ಬಣ್ಣಗಳೇಳನು ತೋರಣ ಮಾಡಿದೆಕ೦ದನ ಕಣ್ಣಿಗೆ ಚಂದವ ಮಾಡಿದೆ
ಹಣ್ಣಿನ ಹೂವಿನ ಹೊನ್ನನು ಕೂಡಿದೆಮಕ್ಕಳಿಗೊಕುಳಿಯಾಟವನಾಡಿದೆ
ತೆಂಗಿನ ತೋಟದ ಬುಡದಲಿ ಮೂಡಿದೆಭೂಮಿಗೆ ಬಾನಿಗೆ ಸೇತುವೆ ಹೂಡಿದೆ
ಕಾಮನ ಬಿಲ್ಲು ಕಮಾನು ಕಟ್ಟಿದೆಮೋಡದ ನಾಡಿನ ಬಾಗಿಲಿಗೆ
(ಕವಿ : ಕುವೆಂಪು)

Thursday, December 31, 2009
ಪುಟ್ಟಿ Thank you ಅಂತಾಳೆ :))
ತನ್ನ ಹುಟ್ಟುಹಬ್ಬದ ದಿನ ಫೋನ್ ಮಾಡಿ ವಿಶ್ ಮಾಡಿದ, ಬ್ಲಾಗಿನಲ್ಲಿ ಮತ್ತು ಈ ಮೇಲ್ ನಲ್ಲಿ ಹರಸಿದ, ಮನೆಗೆ ಬಂದು ಹಾರೈಸಿದ ಎಲ್ಲರಿಗೂ ತಾಂತು (ಥ್ಯಾಂಕ್ಸ್) ಹೀಗೆ ಹೇಳಿದ್ದಾಳೆ:))

This isn't just a Fish,
as anyone can see.
I made it with my hand,
which is part of me.
It comes with lots of love,
especially to say,
Thanks for joining me
On my 2nd Birthday !!
-Sahitya
ಈ ತರಹ ತನ್ನ ಪುಟ್ಟ ಕೈಗಳಿಗೆ ಬಣ್ಣ ಹಚ್ಚಿಕೊಂಡು ಬಂದ ಗೆಳೆಯರಿಗೆಲ್ಲಾ ಮಾಡಿಕೊಡುವ ಆಸೆ ಪುಟ್ಟಿಗಿತ್ತು, ಆದ್ರೆ ನನ್ನ ಸೋಮಾರಿತನ !! ಅವಳು ಮಾಡಿದ ಈ ಫಿಶ್ ಅನ್ನು ಸ್ಕ್ಯಾನ್ ಮಾಡಿ, ಫೋಟೋ ಪ್ರಿಂಟ್ ಹಾಕಿಸಿ ಎಲ್ಲಾ ಮಕ್ಕಳಿಗೆ ಥ್ಯಾಂಕ್ ಯೂ ಕಾರ್ಡ್ ಮಾಡಿ ಕೊಟ್ಟು ಬಿಟ್ಟೆ :)
ಮತ್ತು ಸಿಡಿಗಳು, ಕ್ರಯಾನ್ಸ್, ಇತ್ಯಾದಿ...