
ಬಂದ ನೋಡಿ ಮಳ್ಳಾ
ಹೇಳೋದಿಲ್ಲ ಸುಳ್ಳಾ
ಇವನಲ್ಲ ಕುಳ್ಳಾ!
ಕೈಯಲ್ಲಿ ಚೂರಿ
ಕುಯ್ಯಲು ಪೂರಿ
ನಗು ಮುಖ ತೋರಿ
ಇಲ್ಲಿಂದ ಪರಾರಿ!!
ಕದಿವನು ಮನವ
ಲುಂಗಿಯ ಸುತ್ತಿದವ
ಊ ಹಾ ಹ್ಹಾ ಎನ್ನುವ
ಚೂರಿ ಚಿಕ್ಕಣ್ಣನಿವ!!!
-ರೂpaश्री

ಇದು ಸ್ವಲ್ಪ ಸುಮಾರಾಗಿ ಮೂಡಿದ್ದರಿಂದ ’ಮರ’ ಬರೆಯೋಣವೆನಿಸಿ ನಾನೇ ಪದಗಳ ಪೋಣಿಸಲು ಕೂತು, ಸೋತು ಕೊನೆಗೆ ಪು.ತಿ.ನ ಅವರ ಕವನವನ್ನು ಅರುಣ್ ಪ್ರಕಟಿಸಿದ್ದನ್ನು ಓದಿ ಅದಕ್ಕೆ ಈ ಅವತಾರ ಮಾಡಿಟ್ಟೆ.
ಮುಂದೆ ಯಾರ ಕವನಕ್ಕೆ ಗ್ರಹಚಾರ ಕಾದಿದೆಯೋ ಕಾದು ನೋಡಿ !
ನಾಳೆ ವರಮಹಾಲಕ್ಷ್ಮಿ ಹಬ್ಬ. ಎಂದಿನಂತೆ ಅಮ್ಮನ ಮನೆಯಲ್ಲಿದ್ದಾಗ ಹಬ್ಬಗಳ ನೆನಪಾಗುತ್ತಿದೆ. ಬೆಂಗಳೂರಿನಲ್ಲಿ ಹಬ್ಬಗಳು ಬಂದರೆ ಎಲ್ಲೆಲ್ಲಿದ ಸಂಭ್ರಮ. ಮಾರುಕಟ್ಟೆಯ ತುಂಬಾ ಹಬ್ಬಕ್ಕೆ ಬೇಕಾಗುವ ಹೂವು ಪತ್ರೆಗಳು, ಹಣ್ಣುಗಳು, ಮಾವಿನ ಸೊಪ್ಪು-ಬಾಳೆ ಕಂದು, ಅಲಂಕಾರಕ್ಕೆ ಬಣ್ಣಬಣ್ಣದ ಕಾಗದಗಳು. ಹಬ್ಬದ ವಾರವೆಲ್ಲ ರೇಡಿಯೋ/ದೂರದರ್ಶನ ಎಲ್ಲರೂ ಭಾಗ್ಯಾದ ಲಕ್ಷ್ಮಿ ಬಾರಮ್ಮ ಅಂತ ಕರೆಯುವವರೇ :))
ಹಬ್ಬದ ದಿನ ಮುಂಜಾನೆ ಚುಮುಚುಮು ಬೆಳಕಿರುವಾಗಲೇ ಎದ್ದು ಮನೆ ಮುಂದೆ ದೊಡ್ಡ ರಂಗೋಲಿ ಹಾಕಿ, ಬಣ್ಣ ತುಂಬೋದು. ಆಮೇಲೆ ಬಾಗಿಲಲ್ಲಿ ಸದಾಯಿರುವ ಪ್ಲಾಸ್ಟಿಕಿನ ಹಾರ ತೆಗೆದು ಮಾರ್ಕೆಟ್ಟಿಂದ ತಂದ ಮಾವಿನ ಎಲೆಯ ತೋರಣ, ಹೂವಿನ ಹಾರ ಹಾಕಿದ್ರೆ ಮನೆಗೆ ಹಬ್ಬದ ಕಳೆ ಬಂದಿರುತ್ತೆ. ಹಿಂದಿನ ದಿನವೇ ದೇವಿಯನ್ನು ಕೂರಿಸಲು ಮನೆಯಲ್ಲಿರುವ ಟೇಬಲ್, ಸ್ಟೂಲ್ ಗಳಲ್ಲಾ ಸ್ಟೆಪ್ ಗಳಾಗಿ ಮಾರ್ಪಟ್ಟಾಗಿರುತ್ತಿದ್ದವು. ಸ್ನಾನ ಮುಗಿಸಿ ಅಮ್ಮ ಅಡಿಗೆ ಕೆಲಸ ಮಾಡುತ್ತಾ ನಮಗೆ ಹೇಳಿದಂತೆ ನಾವು ಪೂಜೆಗೆ ರೆಡಿ ಮಾಡೋದು. ನನಗೇ ನೆಟ್ಟಗೆ ಸೀರೆ ಉಡಲು ಬರದಿದ್ದರೂ ಹಬ್ಬಕ್ಕೆಂದು ಅಮ್ಮ ತಗೊಂಡ ಹೊಸ ಸೀರೆಯನ್ನು ಕಳಶಕ್ಕೆ ಉಡಿಸಿ, ಲಾಕರ್ ನಲ್ಲಿದ್ದ ಒಡವೆಗಳನ್ನೆಲ್ಲ ತಂದು ಕಲಶದ ಮೇಲೆ ಕುಳಿತಿರುವ ಲಕ್ಷ್ಮಿಯನ್ನ ಅಲಂಕರಿಸೋದು. ಸೀರಿಯಲ್ ಸೆಟ್ ಬೆಳಕು ಒಡವೆಗಳಿಗೆ ಇನ್ನೂ ಹೊಳಪು ತರಿಸ್ತಾಯಿತ್ತು.
ಅಮ್ಮನ ಮನೆಯಲ್ಲಿ ಹಬ್ಬ 2005
ನಂತರ ಎಲ್ಲರೂ ಸೇರಿ ಗಣಪತಿ ಶಾಸ್ತ್ರಿಗಳು ಕ್ಯಾಸೆಟ್ಟಿನಲ್ಲಿ ಹೇಳಿಕೊಟ್ಟಂತೆ ಪೂಜೆ ಮಾಡೋದು. ನಾನು ಟೇಪ್ ರೆಕಾರ್ಡರ್ ಪಕ್ಕದಲ್ಲೇ ಕೂತಿರಬೇಕು. ನೈವೇದ್ಯ, ಮಂಗಳಾರತಿ ಮುಂತಾದವುಗಳಿಗೆ ಅಣಿ ಮಾಡಿಕೊಳ್ಳುವ ಸಮಯದಲ್ಲಿ ಕ್ಯಾಸೆಟ್ಟನ್ನು ಬಂದ್ ಮಾಡುವುದು. ಸಿದ್ಧವಾದ ನಂತರ ಮತ್ತೆ ಹಚ್ಚುವುದು ನನ್ನ ಕೆಲಸ. ಗಣಪತಿ ಶಾಸ್ತ್ರಿಗಳು ಬರದಿದ್ದರೂ ಅವರ ಮಂತ್ರ ಮನೆ ತುಂಬುತಿತ್ತು.
ಪೂಜೆಯಾದ ನಂತರ ಊಟ ..ಆಹಾ ಒಬ್ಬಟ್ಟು, ಪಾಯಸ, ಕೋಸಂಬರಿ, ಪಲ್ಯಗಳು ಮಾರ್ಕೆಟ್ಟಿಂದ ತಂದ ಬಾಳೆ ಎಲೆ ತುಂಬಾ ಬಡಿಸಿಕೊಂಡು ಎಲ್ಲರೂ ಒಟ್ಟು ಕೂತು ಊಟ ಮಾಡುವುದು.
ಅಮ್ಮನ ಮನೆಯಲ್ಲಿ ಹಬ್ಬ 2007
ಸಂಜೆ ಅರಿಶಿನ ಕುಂಕುಮ ತಗೋಳೋಕೆ ಮುತೈದೆಯರೆಲ್ಲಾ ಮನೆಗೆ ಬರೋದು. ಅವರ ಮನೆಗಳಿಗೆ ನಾವು ಹೋಗೋದು, ಇದು ರಾತ್ರಿಯವರೆಗೆ ನಡೆಯುತ್ತಿತ್ತು. ರಾತ್ರಿ ಮತ್ತೊಮ್ಮೆ ದೇವಿಗೆ ಪೂಜೆ ಮಾಡಿ, ಕಲಶ ಕದಲಿಸಿದ ಮೇಲೆ ಊಟ, ನಿದ್ದೆ. ಮಾರನೆಯ ದಿನ ಕ್ಲೀನಿಂಗ್ ಕೆಲಸ!!
ಈಗ ಇಲ್ಲಿ ವಿವಿಧ ಭಾರತಿ / ದೂರದರ್ಶನ ಇಲ್ಲದಿದ್ದರೇನಂತೆ ನಮ್ಮನೆ ಕಂಪ್ಯೂಟರಿಲ್ಲೇ ಕಮಲದಾ ಮೊಗದೋಳೆ, ಕಮಲದಾ ಕಣ್ಣೋಳೆ ಕಮಲವಾ ಕೈಯಲ್ಲಿ ಹಿಡಿದೋಳೆ, ಮಹಾಲಕ್ಷ್ಮಿ ಮನೆಗೆ ಬಾರಮ್ಮ ಕೇಳುತ್ತಾ, ಅದೇ ಗಣಪತಿ ಶಾಸ್ತ್ರಿಗಳಿಂದ ವ್ರತವಿಧಾನವನ್ನು ಕನ್ನಡ ಆಡಿಯೋದಲ್ಲಿ ಕೇಳಿಸಿಕೊಂಡು ಪೂಜೆ ಮಾಡ್ತೀವಿ. ಆಫ್ರಿಕಾ, ಆಸ್ಟ್ರೇಲಿಯಾ ಇತರೆ ದೇಶಗಳನ್ನು ಹೋಲುವ ಆಕಾರದ ಒಬ್ಬಟ್ಟು ಮಾಡಿಕೊಂಡು, ಇಲ್ಲಿ ಸಿಗುವ ತರಕಾರಿಯ ಪಲ್ಯ ತಯಾರಿಸಿ ಪಿಂಗಾಣಿ ತಟ್ಟೆಯಲ್ಲಿ ಗೆಳೆಯರೊಡನೆ ಸೇರಿ ಊಟ ಮಾಡಿ ಹಬ್ಬ ಮಾಡ್ತೀವಿ.
ನಮ್ಮನೆ ಹಬ್ಬ 2008

ಮನೆ ಮನೆ ಮುದ್ದು ಮನೆ
ಮನೆ ಮನೆ ನನ್ನ ಮನೆ
ತಾಯಿ ಮುತ್ತು ಕೊಟ್ಟ ಮನೆ
ತಂದೆ ಪೆಟ್ಟು ಕೊಟ್ಟ ಮನೆ
ಮನೆಗೆ ಬಂದ ನೆಂಟರೆಲ್ಲ ಕೂಗಿ ಕರೆದು ಕೊಬರಿ ಬೆಲ್ಲಗಳನು ಕೊಟ್ಟು
ಸವಿಯ ಸೊಲ್ಲ ನಾದುತಿದ್ದ ನಮ್ಮ ಮನೆ
ಮನೆ ಮನೆ ಮುದ್ದು ಮನೆ
ನಾನು ನುಡಿಯ ಕಲಿತ ಮನೆ
ನಾನು ನಡಿಗೆ ಅರಿತ ಮನೆ
ಹಕ್ಕಿ ಬಳಗ ಸುತ್ತ ಕೂಡಿ
ಬಯ್ಳು ಬೆಳಗು ಹಾಡಿ ಹಾಡಿ
ಮಲೆಯನಾದ ಸದ್ದು ಮಾಡಿ ನಲಿಸುತಿದ್ದ ನಮ್ಮ ಮನೆ
ಮನೆ ಮನೆ ಮುದ್ದು ಮನೆ
ಮೊದಲ ಮಿಂಚು ಹೊಳೆದ ಮನೆ
ಮೊದಲ ಗುಡುಗು ಕೇಳ್ದ ಮನೆ
ಮೊದಲ ಮಳೆಯು ಕರೆದು ಕರೆದು
ಹೆಂಚ ಮೇಲೆ ಸದ್ದು ಹರಿದು ಮಾದಿಯಿಂದ ನೀರ ಸೂರಿದು ಬೆರಗ ನಿತ್ತ ನಮ್ಮ ಮನೆ
ಮನೆ ಮನೆ ಮುದ್ದು ಮನೆ
ಹೆತ್ತ ತಾಯಿ ಸತ್ತ ಮನೆ
ಮತ್ತೆ ತಂದೆ ಹೋದ ಮನೆ
ಗಿರಿಜನರಲಿ ಬಿಟ್ಟ ಮನೆ ಕಿಟ್ಟಿ ಬೆಂದು ಸಂದ ಮನೆ
ಬಾಲ್ಯ ಬಾಡಿ ಬಿದ್ದ ಮನೆ ಆದರೆನಗೆ ... ನನ್ನ ಮನೆ
ಮನೆ ಮನೆ ಮುದ್ದು ಮನೆ
ಕಬ್ಬಗಳನು ಕಂಡ ಮನೆ
ಹಬ್ಬ ದೂಟ ಉಂಡ ಮನೆ
ಅಜ್ಜಿ ಅಜ್ಜರೆಲ್ಲರಿದ್ದು ಗೆಳತಿ ಗೆಳೆಯರೆಲ್ಲರಿದ್ದು
ಬಾಳಿ ಬದುಕಿ ನರಳಿ ಬಿದ್ದು ಮಾಯವಾದ ನಮ್ಮ ಮನೆ
ಮನೆ ಮನೆ ಮುದ್ದು ಮನೆ
ತಾಯಿ ಮಿನ್ದ ಕೆರೆಯ ಮನೆ
ಬಟ್ಟೆ ಹೊಗೆದ ತೊರೆಯ ಮನೆ
ತಾಯಿ ಅಡಿಯ ದೂಳಿಯಿಂದ ತಂದೆ ಯುತ್ತ ಮಣ್ಣಿನಿಂದ
ಗಿರಿಜೆ ಬಿದ್ದ ಮಟ್ಟಿಯಿಂದ ಮಂಗಳದ ನಮ್ಮ ಮನೆ
ಮನೆ ಮನೆ ಮುದ್ದು ಮನೆ
ನಾನು ಬದುಕೊಳುಳಿವ ಮನೆ
ನಾನು ಬಾಳಿ ಅಳಿವ ಮನೆ
ನನ್ನದಲ್ಲ ಇಳಿಯೊಳಿನ್ದು ಹೆಮ್ಮೆಯಿಂದ ನನ್ನದೆಂದು
ಬೆಂದು ಬಳಲಿದಾಗ ಬಂದು ನೀರು ಕುಡಿವ ನನ್ನ ಮನೆ
ಮನೆ ಮನೆ ಮುದ್ದು ಮನೆ
--ಕುವೆಂಪು
ನನ್ಗೆ ಬಲೂನ್ಸ್ ತುಂಬಾ ಇಷ್ಟ:)