Monday, January 09, 2012
Sunday, January 08, 2012
”ಈ ಸಂಭಾಷಣೆ’ ಪುಟ್ಟಿ ಧ್ವನಿಯಲ್ಲಿ
ಮುಂದಿನ ಪಾರ್ಟಿಯಲ್ಲಿ ಒಂದೆರೆಡು ಹಾಡುಗಳನ್ನು ಹಾಡಲೇಬೇಕೆಂದು ’ಹೇಮಂತ್’ಗೆ ಗೆಳೆಯರು ಒತ್ತಾಯ ಮಾಡಿದ್ದರು. ಕಾಲೇಜು ದಿನಗಳ ನಂತರ ಆಗಾಗ್ಗೆ ಗುನುಗುವುದು ಬಿಟ್ಟರೆ ಹಾಡೋದು ಪೂರ್ತಿಯಾಗಿ ನಿಲ್ಲಿಸಿದ್ದ ಇವರು, ಈ ಪಾರ್ಟಿಯ ಸಲುವಾಗಿ ಕೆಲವೊಂದು ಹಾಡುಗಳನ್ನು ದಿನವೂ ಹಾಡಿ ಪ್ರ್ಯಾಕ್ಟೀಸ್ ಮಾಡಲು ಶುರು ಮಾಡಿದ್ರು. ಅಪ್ಪನ ಹಾಡು ಕೇಳಿ, ಕೇಳಿ, ಪುಟ್ಟಿಯೂ ಅವುಗಳನ್ನು ಕಲಿತುಬಿಟ್ಟಳು.
"ಅಪ್ಪ ನಿನ್ನ ಹಾಡು ನಾನೂ ಹಾಡ್ತೀನಿ ಕೇಳು" ಅಂತ ಮೈಕ್ ಹಿಡಿದು ಹಾಡಿಯೇಬಿಟ್ಟಳು. ಯಾವಾಗ ಅಪ್ಪ ಹಾಡಬೇಕು, ಯಾವಾಗ ಅಮ್ಮ(ಹೆಣ್ಣು ಧ್ವನಿ) ಎಲ್ಲವೂ ಚಾಚೂ ತಪ್ಪದೆ ಹೇಳಿ ನಮ್ಮನ್ನು ಬೆರಗುಗೊಳಿಸಿದಳು:)) ಹಿನ್ನಲೆ ಸಂಗೀತದ ಜೊತೆ ಹಾಡುವುದು ಅವಳಿಗೆ ಹೊಸ ಆಟವಾಗಿದೆ. ಕಾರಣಾಂತರಗಳಿಂದಾಗಿ ಹೇಮಂತ್ ಪಾರ್ಟಿಯಲ್ಲಿ ಹಾಡಲಾಗಲಿಲ್ಲ. ಆದ್ರೆ ನನಗಂತೂ ಖುಷಿಯೋ ಖುಷಿ!! ನಾನು ಹೇಳಿ ಕೊಡದೇ ಪುಟ್ಟಿ ಅವಳಾಗಿಯೇ ಕನ್ನಡ ಹಾಡು ಕಲಿತಿದ್ದಾಳೆ, ಅದಕ್ಕಿಂತ ಹೆಮ್ಮೆಯುಂಟೆ :))
ಪುಟ್ಟಿಗೆ ಮಕ್ಕಳ ಪದ್ಯ/ ಹಾಡುಗಳನ್ನು ಹೇಳಿಕೊಡುವಾಗ ಅವಳ ಜೊತೆ ಹಾಡುವುದು ಬಿಟ್ಟರೆ ನಾನು ಹಾಡೊಲ್ಲ. ಹಾಡಲು ಬಾರದಿದ್ದರೂ ಇನ್ನ್ಮೇಲೆ ಅವಳಿಗಾಗಿ ಹಾಡಬೇಕು ಅಂತ ನಿರ್ಧರಿಸಿರುವೆ ;)
ಅವಳ ಹಾಡು ಕೇಳಿ....

Thursday, December 29, 2011
ಪುಟ್ಟಿಗೆ ನಾಲ್ಕು ವರ್ಷ
ಪುಟ್ಟಿಗೆ ಇವತ್ತಿಗೆ ನಾಲ್ಕು ವರ್ಷ ಅಂದ್ರೆ ನಂಬೋಕೆ ಆಗ್ತಾಯಿಲ್ಲ! ಆಸ್ಪತ್ರೆಯಲ್ಲಿ ಇವಳು ಜನಿಸಿದ ತಕ್ಷ್ಣಣ ಡಾಕ್ಟರ್ "ಓಹ್! ಮುದ್ದಾದ ಮಗು" ಎಂದು ಉದ್ಗರಿಸಿದ್ದು ಈಗಷ್ಟೇ ಕೇಳಿದಂತೆ ಅನಿಸುತ್ತಿದೆ. ಈ ಪುಟ್ಟಿ ನನ್ನ ಮಡಿಲು ತುಂಬಿ ನಾಲ್ಕು ವರ್ಷಗಳಾಗಿವೆ. ಅಂದಿನ ಮುದ್ದು ಮುಖದಲ್ಲೀಗ ತುಂಟತನ ತುಂಬಿದೆ:)
ಅಪ್ಪ ಅಮ್ಮನ ಮುದ್ದಿನ ಪುಟ್ಟಿಗೆ ಹುಟ್ಟುಹಬ್ಬದ ಶುಭಾಶಯಗಳು!
Monday, November 14, 2011
ಮರಳಿ ಬ್ಲಾಗಿಗೆ ಹಾಜರ್ !
ಮೂರು ತಿಂಗಳ ಕಾಲ ಭಾರತದಲ್ಲಿದ್ದು ಈಗಷ್ಟೇ ಅಮೆರಿಕಾದ ನಮ್ಮ ಮನೆಗೆ ಬಂದಿರುವೆವು. ಅಲ್ಲಿನ ಕೆಲವು ಫೋಟೋಗಳು. ಗಣಪತಿ ಹಬ್ಬ..
ಅತ್ತೆ ಮಗಳು ಖುಷಿ ಜೊತೆ..
Saturday, August 20, 2011
ತೂಗುವೆ ರಂಗನ ತೂಗುವೆ ಕೃಷ್ಣನ!!!
ತೂಗುವೆ ರಂಗನ ತೂಗುವೆ ಕೃಷ್ಣನ
ತೂಗಿ ಜೋ ಜೋ ಹಾಡುವೆ
ಮೇಲುಕೋಟೆಯ ಸ್ವಾಮಿ ಚೆಲುವರಾಯನ
ಬೇಲೂರ ಶ್ರೀಚೆನ್ನಕೇಶವನ
ಉಡುಪಿಯಲಿ ವಾಸಿಸುವ ಶ್ರೀ ಕೃಷ್ಣನ
ಶ್ರೀರಂಗಪಟ್ಟಣದಿ ಮಲಗಿದವನ
ತೂಗುವೆ ರಂಗನ ತೂಗುವೆ ಕೃಷ್ಣನ
ತೂಗಿ ಜೋ ಜೋ ಹಾಡುವೆ
ತೂಗಿ ಜೋ ಜೋ ಹಾಡುವೆ
ಕಣ್ಣಲ್ಲಿ ಹುಣ್ಣಿಮೆ ತಂದವನ
ನಗುವಲ್ಲೇ ಮಲ್ಲಿಗೆ ಚೆಲ್ಲುವನಾ
ಚಲುವಲ್ಲೆ ತಾವರೆಯ ನಾಚಿಸುನವ
ಈ ಮನೆಯ ಬೆಳಕಾಗಿ ಬಂದವನ
ತೂಗುವೆ ರಂಗನ ತೂಗುವೆ ಕೃಷ್ಣನ
ತೂಗಿ ಜೋ ಜೋ ಹಾಡುವೆ
ಆಲದೆಲೆಯ ಮೇಲೆ ಮಲಗಿದವನ
ಹತ್ತವತಾರದ ಪರಮಾಥ್ಮನ
ಮತ್ತೆ ನಮಗಾಗಿಳೆಗೆ ಬಂದವನ
ಜಗವನ್ನೆ ತೂಗುವ ಜಗದೀಶನ
ತೂಗುವೆ ರಂಗನ ತೂಗುವೆ ಕೃಷ್ಣನ
ತೂಗಿ ಜೋ ಜೋ ಹಾಡುವೆ
Sunday, August 14, 2011
ಬೆಂಗಳೂರಿನಲ್ಲಿ ಪುಟ್ಟಿ !!!
ಪುಟ್ಟಿ ಮತ್ತು ನಾನು ಈಗ ನಮ್ಮೂರು ಬೆಂಗಳೂರಿನಲ್ಲಿ ಅಮ್ಮ ಅಪ್ಪ ನ ಜೊತೆಯಿದ್ದೀವಿ. ನಮ್ಮ ವಿಮಾನ ಪ್ರಯಾಣ ಪುತ್ತಿಗೆ ಬಲು ಇಷ್ಟವಾಯ್ತು. ಸಹ ಪ್ರಯಾಣಿಕರ ಜೊತೆ ಹರಟುತ್ತಾ ಕಾಲ ಕಳೆದಳು ಪುಟ್ಟಿ.
ಇಲ್ಲಿಗೆ ಬಂದಾಗಿನಿಂದಲೂ ಮನೆಯ ಯಾವ ಕೆಲಸ ಇಲ್ಲದಿದ್ದರೂ ಕಂಪ್ಯೂಟರ್ ಮುಂದೆ ಕೂರಲು ಪುರುಸೊತ್ತೇ ಇಲ್ಲ. ಪುಟ್ಟಿಗಂತೂ ಬೀದಿ ತುಂಬಾ ಹೊಸ ಸ್ನೇಹಿತರು. ಅವರ ಜೊತೆ ಆಟವಾಡುತ್ತಾ ಅವಳಿಗೆ ಮಜವಾಗಿದೆ.
ಇಲ್ಲಿಗೆ ಬಂದಾಗಿನಿಂದಲೂ ಮನೆಯ ಯಾವ ಕೆಲಸ ಇಲ್ಲದಿದ್ದರೂ ಕಂಪ್ಯೂಟರ್ ಮುಂದೆ ಕೂರಲು ಪುರುಸೊತ್ತೇ ಇಲ್ಲ. ಪುಟ್ಟಿಗಂತೂ ಬೀದಿ ತುಂಬಾ ಹೊಸ ಸ್ನೇಹಿತರು. ಅವರ ಜೊತೆ ಆಟವಾಡುತ್ತಾ ಅವಳಿಗೆ ಮಜವಾಗಿದೆ.
Tuesday, August 02, 2011
ಬ್ಲಾಗ್-ಗೆ ಬಿಡುವು !!
ಇವತ್ತು ನಾನು ಮತ್ತು ಪುಟ್ಟಿ ಬಹಳ ಉತ್ಸುಕರಾಗಿ ಭಾರತಕ್ಕೆ ಹೊರಟಿದ್ದೇವೆ. ಪುಟ್ಟಿಯ ಅಪ್ಪ ಅಕ್ಟೋಬರ್ ನಲ್ಲಿ ಬರುವರು. ಎರಡು ಸ್ತಾಪ್ ಗಳು ಸೇರಿ, ೨೬ ಘಂಟೆಗಳ ವಿಮಾನ ಅದೂ ತಂಟೆಮಾಡುವ ಪುಟ್ಟಿ ಜೊತೆ ಅನ್ನೋ ವಿಷಯ ಸ್ವಲ್ಪ ಶ್ರಮದಾಯಕವೇ ಆದ್ರೂ ಮರಳಿ ಮನೆಗೆ ಹೋಗುವ ಖುಶಿ ಅದನ್ನು ಮರಎಮಾಡಿದೆ!!
೨ ವರ್ಷಗಳ ನಂತರ ಒರ್ರಿಗೆ ಹೋಗ್ತಾಯಿದ್ದು, ಈ ಸರ್ತಿ ೩ ತಿಂಗಳು ಅಲ್ಲಿ ಇರುವ ಇರಾದೆ ಇದೆ. Llanelli, UK ನಲ್ಲಿರುವ ನನ್ನ ಅಣ್ಣನ ಕುಟುಂಬ ಮತ್ತು Melbourne, Australia ದಲ್ಲಿರುವ ತಮ್ಮ ಕೂಡ ಬರುವುದು ನಮ್ಮ ಉತ್ಸಾಹವನ್ನು ಇನ್ನೂ ಹೆಚ್ಚು ಮಾಡಿದೆ. ಅಲ್ಲದೆ ಶ್ರಾವಣ ಮಾಸಕ್ಕೆ ಸರಿಯಾಗಿ ಅಲ್ಲಿ ಹೋಗುತ್ತಿರುವುದರಿಂದ ಈ ಸರ್ತಿ ಎಲ್ಲಾ ಹಬ್ಬಗಳೂ ಮನೆಯಲ್ಲಿ ಅಮ್ಮ-ಅಪ್ಪ-ಅಣ್ಣ-ತಮ್ಮ ಜೊತೆ!
ಅಲ್ಲದೆ ನನ್ನ ಮೈದುನನ ಮಗಳು 'ಸುಹಾನಿ' ಆಗಲೇ ಒಂದೂವರೆ ವರ್ಷದವಲಾದರೂ ಅವಳನ್ನು ನಾವು ನೋಡುವುದು ಇದೆ ಮೊದಲ ಸಲ.ಪುಟ್ಟಿಯಂತೂ ಅಲ್ಲಿ ಎಲ್ಲರ ಜೊತೆಗೂಡಿ ಆದಿ ನಲಿಯಲು ಕಾಯ್ತಾಯಿದ್ದಾಳೆ.

ಇನ್ನು ನಮ್ಮ ನಿಮ್ಮ ಭೇಟಿ ಇಂಡಿಯಾ ದಿಂದಲೇ !!!