Tuesday, January 27, 2009

ನಮ್ಮ ಬಾವುಟ!

ಜನವರಿಯಲ್ಲಿ ಗಣರಾಜ್ಯೋತ್ಸವದ ದಿನದಂದು ತಾತನ ಮನೆಯೆದುರಿನಲ್ಲಿ ಕಾಲೋನಿಯವರು ನಡೆಸಿದ ಧ್ವಜಾರೋಹಣ ಸಮಾರಂಭದಲ್ಲಿ ಪುಟ್ಟಿ ಕೂಡ ಭಾಗವಹಿಸಿದ್ದಳು!

ಏರುತಿಹುದು ಹಾರುತಿಹುದು

ನೋಡು ನಮ್ಮ ಬಾವುಟ

ತೋರುತಿಹುದು ಹೊಡೆದು ಹೊಡೆದು

ಬಾನಿನಗಲ ಪಟಪಟ



ಕೇಸರಿ ಬಿಳಿ ಹಸಿರು ಮೂರು

ಬಣ್ಣ ನಡುವೆ ಚಕ್ರವು

ಸತ್ಯ ಶಾಂತಿ ತ್ಯಾಗ ಮೂರ್ತಿ

ಗಾಂಧಿ ಹಿಡಿದ ಚರಕವು



ಇಂತ ಧ್ವಜವು ನಮ್ಮ ಧ್ವಜವು

ನೋಡು ಹಾರುತಿರುವುದು

ಧ್ವಜದ ಶಕ್ತಿ ನಮ್ಮ ಭಕ್ತಿ

ನಾಡ ಸಿರಿಯ ಮೆರೆವುದು



ಕೆಂಪು ಕಿರಣ ತುಂಬಿ ಗಗನ

ಹೊನ್ನ ಬಣ್ಣವಾಗಿದೆ

ನಮ್ಮ ನಾಡ ಗುಡಿಯ ಬಣ್ಣ

ನೋಡಿರಣ್ಣ ಹೇಗಿದೆ

Tuesday, January 20, 2009

ಗಿರಿಗಿಟ್ಟಿ

ನನ್ನ ಚಿಕ್ಕಪ್ಪನ ಮಗನ ಎಂಗೇಜ್-ಮೇಂಟಿಗೆ ಊರಿಗೆ ಹೋದಾಗ ಅಲ್ಲಿ ಪುಟ್ಟಿ ಇತರ ಮಕ್ಕಳೊಂದಿಗೆ ಕೂಡಿ ಗಿರಿಗಿಟ್ಟಿ ಆಟವಾಡಿದ್ದಳು.
ಗಿರ ಗಿರ ತಿರುಗುವ ಗಿರಿಗಿಟ್ಟಿ
ಸುರಗಿ ಎಲೆಯ ಗಿರಿಗಿಟ್ಟಿ

ಕಡ್ಡಿಗೆ ಪೋಣಿಸಿ
ಕೈಯಲಿ ಹಿಡಿದು

ಗಾಳಿಗೆ ತಿರುಗುವ ಗಿರಿಗಿಟ್ಟಿ
ಗಿರ ಗಿರ ತಿರುಗುವ ಗಿರಿಗಿಟ್ಟಿ
--
ಸುಬ್ರಹ್ಮಣ್ಯ ಭಟ್


ಕರಡಿ ಕುಣಿತ

ಪುಟ್ಟಿಗೆ ಪ್ರಾಣಿಗಳು ಅಂದ್ರೆ ತುಂಬಾ ಇಷ್ಟ. ಮೊದಲ ಸಾರಿ ಬೆಂಗಳೂರಿಗೆ ಹೋದಾಗ ಬಹಳಷ್ಟು ಪ್ರಾಣಿಗಳನ್ನ ನೋಡಿ ಖುಶಿ ಪಟ್ಟಳು., ಅವಳು ನೋಡಿದ ಲಿಸ್ಟ್ ನಲ್ಲಿ ಕರಡಿ ಕೂಡ ಇದೆ. ನನ್ನ ಚಿಕ್ಕಪ್ಪನ ಮಗನ ನಿಶ್ಚಿತಾರ್ಥಕ್ಕೆಂದು ಊರಿಗೆ ಹೋದಾಗ ದಾರಿಯಲ್ಲಿ ಸಿಕ್ಕಿತು ನಮಗೀ ಕರಡಿ. ಮನೆಯಲ್ಲಿ ಬಹಳಷ್ಟು bearಗಳಿವೆ, ಅವನ್ನ ಪುಟ್ಟಿ ಕರಿಯೋದು "ಬೇ, ಬೇ.." ಅಂತ. ಈಗ ಜೀವಂತ ಕರಡಿಯನ್ನ ತೋರಿಸಿ "ಬೇ ಬೇ" ಅಂತ ಹೇಳಿದಾಗ ಅದೇನು ಅರ್ಥ ಆಯಿತೋ ಗೊತ್ತಿಲ್ಲ, ಅಂತ ಖುಶಿಯಿಂದ ಚಪ್ಪಾಲೆ ತಟ್ಟಿದ್ಲು. ಜೊತೆಯಲ್ಲಿ ಮಾವನ ಮಗಳು ’ಖುಶಿ’ ಇದ್ದಿದರಿಂದ ಇನ್ನು ಹೆಚ್ಚಿನ ಸಂತಸ ಅವಳಿಗೆ.


ಕರಡಿ ಫೋಟೊ ಜೊತೆಗೆ ಇಲ್ಲಿದೆ ನೋಡಿ ಕರಡಿ ಹಾಡು...




ಯಾವ ಕಾಡಡವಿಯಲಿ ಜೇನುಂಡು ಬೆಳೆದಿದ್ದ
ಜಾಂಬುವಂತನ ಹಿಡಿದು ತಂದಾನೊ;
ಧಣಿಯರ ಮನೆ ಮುಂದೆ ಕಾವಲು ಮಾಡಣ್ಣ,
ಧಣಿ ದಾನ ಕೊಡುವನು’ ಎಂದಾನೊ.”

ಬೇಂದ್ರೆ

Thursday, January 15, 2009

ಒಂಟೆ ಸವಾರಿ !!!

ಈಗ ಬೆಂಗಳೂರಿನ ಬಡಾವಣೆಗಳಲ್ಲಿ ರಾಜಾಸ್ತಾನ ಮರುಭೂಮಿಯಿಂದ ಬಂದಿರೋ ಒಂಟೆಗಳ ತಂಡಗಳು ಪ್ರತಿನಿತ್ಯ ಕಾಣಸಿಗುತ್ತೆ. ಮಕ್ಕಳಿಗೆಲ್ಲಾ ಒಂಟೆ ಸವಾರಿಯ ಮಜಾ ಬೇಸಿಗೆ ರಜೆಯ ಮಜವನ್ನು ಹೆಚ್ಚಿಸಿದೆ. ಒಂದು ರೌಂಡ್ ಹಾಕಿ ಬರಲು ಮಗುವೊಂದಕ್ಕೆ ರೂ.೧೦ ಪಡೆಯುತ್ತಾರೆ. ಎಲ್ಲಾ ಮಕ್ಕಳೊಡನೆ ಕೂಡಿ ಪುಟ್ಟಿಯೂ ಅಪ್ಪನೊಡನೆ ಒಂಟೆ ಸವಾರಿ ಮಾಡಿ ಮಜಾ ಮಾಡಿದ್ಲು.

ಒಂಟೆ ಬಂತು ಒಂಟೆ
ರಾಜಾಸ್ತಾನದ್ ಒಂಟೆ
ಕತ್ತಲ್ ಘಲ್ ಘಲ್ ಘಂಟೆ.

ಮೈ ಕಂದು ಬಣ್ಣ
ನೋಡು ಬಾರಾಣ್ಣ
ಕಿವಿ ಬಲು ಸಣ್ಣ.

ನಾಲ್ಕು ಕಾಲು ಇರುವುದು
ಉದ್ದ ಕತ್ತು ಇರುವುದು
ದಿನವು ಇಲ್ಲಿ ಬರುವುದು.

ನಾ ಸವಾರಿ ಮಾಡುವೆ
ಚಪ್ಪಾಳೆ ತಟ್ಟುವೆ
ಮತ್ತೆ ಬಾ ಎನ್ನುವೆ.

--ರೂpaश्री






Tuesday, December 30, 2008

ನಾರೀಸಖಿ ಮೆಚ್ಚಿನ ಮಗು !!

ಎಲ್ಲಾ ಮಕ್ಕಳೂ ನೋಡಲು ಮುದ್ದಾಗಿಯೇ ಇರುತ್ತವೆ. "ಹೆತ್ತವಳಿಗೆ ಹೆಗ್ಗಣ ಮುದ್ದು" ಅನ್ನೋ ಮಾತಿನಂತೆ ಪುಟ್ಟಿ ಬೇರೆ ಮಕ್ಕಳಿಗಿಂತ ಹೆಚ್ಚು ಮುದ್ದಾಗಿ ಅವರಮ್ಮನ ಕಣ್ಣಿಗೆ ಕಾಣಿಸ್ತಾಳೆ. ಆದ್ದರಿಂದಲೇ ನಾರೀಸಖಿ ತಂಡದವರು ತಿಂಗಳ ಮುದ್ದುಮಗು ಸ್ಪರ್ಧೆಗೆ ನಿಮ್ಮ ಮಗುವಿನ ಫೋಟೋ ಕಳುಹಿಸಿ ಎಂದಾಗ ತಟ್ಟನೆ ಪುಟ್ಟಿಯ ಫೋಟೋ ಕಳುಹಿಸಿದ್ದು.
ಅಂತೂ ಪುಟ್ಟಿ ಡಿಸೆಂಬರ್ ತಿಂಗಳ ಸ್ಪರ್ಧೆಯಲ್ಲಿ ಗೆದ್ದೇ ಬಿಟ್ಟಳು. ಅವಳಿಗೆ ಓಟ್ ಮಾಡಿದ ಎಲ್ಲಾ ಆಂಟಿ ಅಂಕಲ್ ಗಳಿಗೆ ಅವಳ ಥ್ಯಾಂಕ್ಯೂ !!! ಅವಳ ಹುಟ್ಟುಹಬ್ಬಕ್ಕೆ ಸರಿಯಾಗಿ ಈ ಸುಂದರ ಸರ್ಟಿಫಿಕೇಟ್ ಮತ್ತೊಂದು ಕೈಚೀಲ ಬಹುಮಾನವಾಗಿ ಬಂತು.

ಬರ್ತ್ ಡೇ ಪಾರ್ಟಿ!!

ಪುಟ್ಟಿಗೆ ಇವತ್ತು ಖುಶಿಯೋ ಖುಶಿ. ಅವಳ ಹುಟ್ಟುಹಬ್ಬಕ್ಕೆ ಇಂಗ್ಲ್ಯಾಂಡಿನಿಂದ ಅವಳ ದೊಡ್ಡ ಸೋದರ ಮಾವ, ಅತ್ತೆ ಮತ್ತವರ ಮುದ್ದಿನ ಮಗಳು ಖುಶಿ, ಆಸ್ಟ್ರೇಲಿಯಾದಿಂದ ಚಿಕ್ಕ ಸೋದರಮಾವ, ಹೈದರಾಬಾದಿನಿಂದ ಅತ್ತೆ ಕುಟುಂಬ ಮತ್ತೆ ಇನ್ನು ಅನೇಕ ಸ್ನೇಹಿತರೂ ಹಿತೈಷಿಗಳೂ ಬಂದಿದ್ದರು. ಪಾರ್ಟಿಯಲ್ಲಿ ಅವಳ ಜೊತೆ ಆಡಲು ಮಿಕ್ಕಿ ಮೌಸ್ ಮತ್ತು ಡೋನಾಲ್ಡ್ ಅಂಕಲ್ ಕೂಡ ಬಂದಿದ್ರು. ಅಜ್ಜಿತಾತನ ಬಳಗ ದೊಡ್ಡದು, ಬಂದಿದ್ದ ೪೦೦ ಜನಗಳ ಜೊತೆ ಮಾತಾಡಿ ಫೋಟೋ ತೆಗೆಸ್ಕೊಂಡು ಸುಸ್ತಾದ್ಲು ಪುಟ್ಟಿ!! ಆದ್ರೂ ಮಜವಾಗಿತ್ತು ಅಂತ ಪಾರ್ತೀ ಅರೇಂಜ್ ಮಾಡಿದ್ದ ಅಜ್ಜಿತಾತರಿಗೆ ಥ್ಯಾಂಕ್ಸ್ ಹೇಳಿದ್ಲು:)

ಹೇಗಿದೆ ಪ್ರಿಂನ್ಸೆಸ್ಸ್ ಡೆಕೊರೇಶನ್!

ಆಹಾ! ನನ್ನ್ ಹೊಸ ಡ್ರೆಸ್ಸು
ಇದು ನನ್ನ್ ಕೇಕು:)
ಸೋದರಮಾವ ಕೊಡಿಸಿದ ಡ್ರೆಸ್ಸ್ ನಲ್ಲಿ ಮಿಂಚಿಂಗು !!

ಸತ್ಯನಾರಾಯಣ ಪೂಜೆ!!

ಸಾಹಿತ್ಯ ಮತ್ತವಳ ಸೋದರಮಾವನ ಮಗಳು ಖುಶಿಗೆ ಸಾಂಪ್ರದಾಯಿಕವಾಗಿ ನಾಮಕರಣ ಮಾಡೋಕೆ ಅಂತ ಅಜ್ಜಿತಾತ ಮನೇಲಿ ಎಲ್ಲಾ ಏರ್ಪಾಡು ಮಾಡಿದ್ದರು. ಆವತ್ತು ಪುಟ್ಟಿಯ ಜನ್ಮದಿನವೂ ಆದ್ದರಿಂದ ಸತ್ಯನಾರಾಯಣ ಪೂಜೆಯನ್ನೊ ಮಾಡಿಸಿದ್ರು. ಸಂಜೆ ಪಾರ್ಟಿ ಇರೋದ್ರಿಂದ ಪೂಜೆಗೆ ಕೇವಲ ಹತ್ತಿರದ ನೆಂಟರು ಅಂದ್ರೆ ೫೦ ಜನ ಮಾತ್ರ ಬಂದಿದ್ರು! ಪುಟ್ಟಿಯ ಅಮ್ಮನಿಗೆ ನಾಮಕರಣ, ಮದುವೆ ಮಾಡಿಸಿದ್ದ ಶ್ರೀ.ಸುಬ್ಬಾನಂಜುಂಡಶಾಸ್ತ್ರಿಗಳೆ ಇವತ್ತು ಪುಟ್ಟಿಗೆ ನಾಮಕರಣ ಮಾಡಿಸಲು ಬಂದಿದ್ದರು. 

ಪೂಜೆ

ಅಪ್ಪ ಮಗಳು

ರಸಾಯನ ಮಾಡುತ್ತಿರುವ ಆಂಟಿ, ಅಜ್ಜಿಯಂದಿರು

ಅಪ್ಪ ತನ್ನ ಹೆಸರನ್ನ ಸರಿಯಾಗಿ ಬರಿತಾರಾ ಅಂತ ನೋಡ್ತಾಯಿರೋ ಪುಟ್ಟಿ

ಪೂಜೆಯಾದ ಮೇಲೆ ದೇವರ ಮುಂದೆ ಒಂದು ಪೋಸು

ಮಾವನ ಮಗಳು ಖುಶಿಯೊಂದಿಗೆ