ನಾಲ್ಕು ತಿಂಗಳ ಪುಟ್ಟಿ ಜೊತೆ ಅಕ್ಕ ಅನೀಸಾ- ತಂಗಿ ಸೇರಾ:)

ಕಳೆದ ವರ್ಷ ಹ್ಯಾಲೋವೀನ್ ದಿನದಂದು!

ಇವತ್ತು ಬರ್ತ್ ಡೇ ಪಾರ್ಟಿಯಲ್ಲಿ...

ನಾನೂ ಸ್ಕೇಟ್ ಮಾಡ್ತೀನಿ...!!







ನವರಾತ್ರಿಯ ಮರು ದಿನ ಅಂದರೆ ವಿಜಯ ದಶಮಿಯಂದು ಮಗುವಿಗೆ ’ಅಕ್ಷರಾಭ್ಯಾಸ’ ಮಾಡಿಸುವ ರೂಢಿಯಿದೆ. ಮಗು ಶಿಶು ರೂಪದಲ್ಲಿ ಈ ಜಗತ್ತಿಗೆ ಪ್ರವೇಶಿಸಿದೊಡನೆಯೇ ಯಾರೂ ಕಲಿಸದೆ ‘ಅಮ್ಮಾ’ ಅನ್ನುತ್ತದೆ. ಅಳುವಿನ ಮೂಲಕ ‘ಅನ್ನ’ದ ರೂಪದಲ್ಲಿರುವ ಶಕ್ತಿಯನ್ನು ಸಾಕ್ಷಾತ್ಕರಿಸಿಕೊಳ್ಳುತ್ತದೆ. ಇದು ಮಗುವಿನ ದೇಹ ಬೆಳೆಸುತ್ತದೆ. ಆದರೆ ಆತ್ಮಸಾಕ್ಷಾತ್ಕಾರಕ್ಕೆ ಜ್ಞಾನ ಬೇಕು. ಅದು ಅಕ್ಷರ ರೂಪದಲ್ಲಿ ಲಭಿಸುತ್ತದೆ. ವಿಜಯದಶಮಿಯಂದು ವಿದ್ಯಾದೇವಿ ಶಾರದೆಯ ಮುಂದೆ ಜ್ಞಾನದ ಲೋಕಕ್ಕೆ ಹಾದಿ ಸುಗಮವಾಗುವುದು ಎಂದು ಅನಾದಿಕಾಲದಿಂದ ನಮ್ಮಲ್ಲಿರುವ ನಂಬಿಕೆ. ವಿದ್ಯಾರಂಭ ಎಂದರೆ ಅಜ್ಞಾನದ ಕತ್ತಲಿನಿಂದ ಸುಜ್ಞಾನದ ಬೆಳಕಿನೆಡೆಗೆ ಒಯ್ಯುವ ಅಕ್ಷರಾಭ್ಯಾಸ ಎಂದಷ್ಟೇ ಅರ್ಥ. ಇಂದಿನ ಕಂಪ್ಯೂಟರ್ ರೋಬೋಟ್ ಯುಗದಲ್ಲೂ ಅಕ್ಷರಾಭ್ಯಾಸ ಅಷ್ಟೇ ನಿಷ್ಠೆ, ಭಕ್ತಿಯಿಂದ ನಡೆಯುತ್ತಿದೆ. ಮಾತಾಪಿತೃಗಳ ಮೂಲಕ ಲೌಕಿಕ ಬದುಕಿಗೆ ಅಡಿಯಿಡುವ ಮಗು, ವಿದ್ಯಾರಂಭದಂದು ದೇವರ ಇನ್ನೊಂದು ರೂಪವಾದ ಗುರುದರ್ಶನವನ್ನು ಪಡೆಯುತ್ತದೆ. ಗುರು ಸಾಧನೆಯ ಹಾದಿಯಲ್ಲಿ ಮಾರ್ಗದರ್ಶನ ಮಾಡುತ್ತಾನೆ.
ಕಾಗದ, ಸ್ಲೇಟು-ಬಳಪಗಳಿಲ್ಲದೆ ಪುರಾತನ ಶೈಲಿಯಂತೆ ನೆಲದಲ್ಲಿ ಮರಳು ಹರಡಿ ಮಗುವಿನ ಬಲಗೈಯ ತೋರು ಬೆರಳಿನಲ್ಲಿ ’ಓಂ’, ‘ಶ್ರೀ’, ‘ಓಂ ಗಣಪತಯೇ ನಮಃ’ ಎಂದು ಬರೆಸಿ, ಬಳಿಕ ಆಯಾ ಭಾಷೆಯ ಅಕ್ಷರ ಮಾಲೆಯನ್ನು ಬರೆಸುತ್ತಾರೆ. ಆದರೆ ಮಗುವಿನ ಎಳಸು ಕೈಗಳಿಗೆ ನೋವಾಗದಿರಲೆಂದು ಹೊಸ ಹರಿವಾಣದಲ್ಲಿ ಇರಿಸಿದ ಹೊಸ ಅಕ್ಕಿಯ ಮೇಲೆ ಬೆರಳಿಂದ ಬರೆಯಿಸಿಯೂ ವಿದ್ಯಾರಂಭ ಮಾಡಿಸುವ ಈಗ ಬಳಕೆಯಲ್ಲಿದೆ.
-ಪ್ರಜಾವಾಣಿಯಲ್ಲಿ ಪ್ರಕಟಕೊಂಡಿದ್ದ ಲೇಖನ