ಈ ಚಿತ್ರ ಬಿಡಿಸಿ ಬಣ್ಣ ತುಂಬಿದ್ದು ಎಂಟು ವರುಷದ ಪುಟ್ಟ ಬಾಲಕ ಸಮರ್ಥ್ ಮುತ್ಯಾಲ. ಕರುನಾಡಿನಿಂದ ದೂರ ಬಹುದೂರ ಅಮೇರಿಕಾದಲ್ಲಿ ಬೆಳೆಯುತ್ತಿರುವ ಈ ಬಾಲಕ, ತನ್ನ ಅಮ್ಮನ ಸಹಾಯದಿಂದ ಇದನ್ನು ಬರೆದಿರುವನು. ಹೊರದೇಶದಲ್ಲಿ ಬೆಳೆಯುತ್ತಿರುವ ಮಕ್ಕಳು ತಮ್ಮ (ತಮ್ಮ ತಂದೆ ತಾಯಿಯರ) ನಾಡು ನುಡಿ ಬಗ್ಗೆ ಆಸಕ್ತಿಯಿಂದ ಕಲಿತು, ಒಲವು ಬೆಳೆಸಿಕೊಳ್ಳುತ್ತಿರುವುದನ್ನು ನೋಡಿ ಬಹಳ ಖುಷಿ ಆಗುತ್ತದೆ. ಇಂತಹ ಮಕ್ಕಳನ್ನು ಉತ್ತೇಜಿಸುತ್ತಿರುವ ಅವರ ತಂದೆ ತಾಯಿ ಮತ್ತು ಇತರೆ ಪೋಷಕರಿಗೆ ನನ್ನ ನಮನಗಳು. ಹಾಗೆಯೇ ಪುಟ್ಟ ಸಮರ್ಥನಿಗೆ ಶುಭಾಷಯಗಳು !
0 comments:
Post a Comment