ಇಂಗ್ಲಿಷ್ ಶಿಶು ಗೀತೆಗಳನ್ನ ಕನ್ನಡಕ್ಕೆ ಅನುವಾದ ಮಾಡಿರುವುದನ್ನು ಹಿಂದೊಮ್ಮೆ ಇಲ್ಲಿ ಬರೆದಿದ್ದೆ. ಮಕ್ಕಳಿಗೆ ಕಲಿಸಲು ಕನ್ನಡದಲ್ಲೇ ಬೇಕಾದಷ್ಟು ಚೆಂದದ ಶಿಶುಗೀತೆಗಳಿವೆ. ಅವುಗಳ ಜೊತೆಗೆ ಈ ಕನ್ನಡೀಕರಿಸಿದ ಆಂಗ್ಳ ಪದ್ಯಗಳನ್ನೂ ಮಕ್ಕಳಿಗೆ ಪರಿಚಯ ಮಾಡಿಕೊಡಬಹುದು.
Humpty Dumpty sat on a wall
Humpty Dumpty had a great fall
All the king's horses and all the king's men
Couldn't put Humpty Dumpty together again
ಈ ಹಾಡನ್ನ ನಿಶುಮನೆಯಲ್ಲಿ ಅವರಮ್ಮ ಚಿತ್ರಗಳ ಜೊತೆಗೆ ಬರ್ದಿದ್ದು ಹೀಗೆ.... ಅಲ್ಲಿ ಪುಟ್ಟ ನಿಶು ಈ ಹಾಡನ್ನ ಮುದ್ದಾಗಿ ಹಾಡಿರೋ ವಿಡಿಯೋ ಕೂಡ ಇದೆ ನೋಡಿ ಖುಶಿ ಪಡಿ!!
ಮೊಟ್ಟೆರಾಯ ಕೂತ್ಕೊಂಡಿದ್ದ ಮೋಟು ಗೋಡೆ ಮೇಲೆ
ಬಿದ್ದೇ ಹೋದನಂತೆ ಎತ್ತೋರ್ಯಾರ್ರೀ ಮೇಲೆ ?
ಕುದ್ರೆ ಹತ್ತಿ ಬಂದರಂತೆ ದಂಡಿನೋರು ನೂರು...
ಯಾರು ಬಂದ್ರೆ ತಾನೆ ಮೊಟ್ಟೆ ಚೂರು ಚೂರು
ಈಗ ’ಅಪ್ಪು ಸೀರೀಸ್’ ನವರು ಈ ಇಂಗ್ಳೀಶ್ ಪದ್ಯವನ್ನು ಕನ್ನಡಕ್ಕೆ ಅನುವಾದಿಸಿ ಕಾರ್ಟೂನ್ ಮಾಡಿ ಹಾಕಿದ್ದಾರೆ ನೋಡಿ. ಇಂಗ್ಳೀಶಿನವರು ಒಟ್ಟುಗೂಡಿಸಲಾಗದ ’ಹಂಪ್ಟಿ ಡಂಪ್ಟ” ಯನ್ನ ಇವರು ಸರಿ ಮಾಡಿದ್ದಾರೆ ;)
ಚಿಣ್ಣರ ನಾಯಕ ಡುಮ್ಮಣ್ಣ
ಗೋಡೆ ಮೇಲಿಂದ ಜಾರಿದ್ದ
ಸೇನೆ ಜೊತೆಯಲಿ ರಾಜನು
ಡುಮ್ಮನ ಸರಿ ಮಾಡ್ದಿದ್ದ
0 comments:
Post a Comment