Wednesday, December 22, 2010

ಬ್ಯಾ ಬ್ಯಾ ಕುರಿ ಮರಿ..

ಇದು ಪುಟ್ಟಿ ಮಾಡಿರೋ ಕುರಿಮರಿ. ಇದನ್ನ ನೋಡ್ತಾ ಪುಟ್ಟಿ ’baa baa white sheep' ಅಂತ ಹಾಡನ್ನ ಮಾರ್ಪಡಿಸಿ ಹಾಡ್ತಾಳೆ!! ಈ ಆಂಗ್ಳ ಶಿಶುಗೀತೆಯ ಕನ್ನಡ ಅನುವಾದ ಹೀಗಿದೆ..
ಬ್ಯಾ ಬ್ಯಾ ಕುರಿ ಮರಿ
ನಿನ್ ತವ ವುಲ್ ಐತ?

ಇದೆ ಸಾರ್ ಇದೆ ಸಾರ್

ಮೂರ್ ಚೀಲದ್ ತುಂಬ



ಒಂದ್ ನಮ್ ದಣಿಗೋಳ್ಗೆ
ಒಂದ್ ಅವ್ರ್ ಎಂಡ್ರುಗೆ
ಮತ್ತೊಂದ್ ಈ ರಸ್ತೆ ಮೂಲೇಲಿರೊ
ಚಿಕ್ಕ್ ಮಗೀಗೆ



ಬಾ ಬಾರೋ ಕರಿ ಕುರಿ
ಉಣ್ಣೆ ಇದೆಯಾ ಕುರಿ ಮರಿ
ಇದೆ ಗುರು ಇದೆ ಗುರು
ಮೂರ್ ಮೂಟೆ ತುಂಬಾ ಗುರು

ನಮ್ಮ್ ಮಾಲೀಕಂಗೊಂದು
ಅವನ್ ಹೆಂಡ್ರಿಗಿನ್ನೊಂದು
ಕೊನೆ ಮೂಟೆ ಯಾರಿಗೆಂದು
ನಮ್ಮ್ ಕೊನೆ ಬೀದಿ ಭಾಸ್ಕರಂದು
-ಇದನ್ನ ಬರೆದವರು ಯಾರು ಗೊತ್ತಿಲ್ಲ

3 comments:

ಬಹಳ ಖುಷಿನೇ ಆಯ್ತು ನನ್ನ ಕನ್ನಡಾನುವಾದ ಉಪಯೋಗಿಸಿರೋದಕ್ಕೆ. ಆದರೂ ನಿಮ್ಮ ಅನುವಾದವೇ ಇನ್ನು ಚೆನ್ನಾಗಿದೆ. ಇನ್ನಷ್ಟು ಬರೆಯಲು ಸುಭಾಶಯಗಳು.

ಹಾಗೂ ನನ್ನ ಹೆಸರು ಸುಚಿನ್ ಅಂತ, ಸಚಿನ್ ಅಲ್ಲ

ಸುಚಿನ್ ಅವರೆ,
ನಿಮ್ಮ ಹೆಸರನ್ನು ಸರಿಯಾಗಿ ಈಗ ಬರೆದಿರುವೆ. ಆ ಇನ್ನೊಂದು ಯಾರು ಬರೆದದ್ದು ಗೊತ್ತಿಲ್ಲ, ಯಾವಗಲೋ ಅಂತರ್ಜಾಲದಲ್ಲಿ ಸಿಕ್ಕಿತ್ತು:)
-ರೂಪ

kuri mari padya chennaagide:)

Post a Comment