Thursday, November 29, 2012

ಕರ್ನಾಟಕ ಮ್ಯಾಪ್

ಈ ಚಿತ್ರ ಬಿಡಿಸಿ ಬಣ್ಣ ತುಂಬಿದ್ದು ಎಂಟು ವರುಷದ ಪುಟ್ಟ ಬಾಲಕ ಸಮರ್ಥ್ ಮುತ್ಯಾಲಕರುನಾಡಿನಿಂದ ದೂರ ಬಹುದೂರ ಅಮೇರಿಕಾದಲ್ಲಿ ಬೆಳೆಯುತ್ತಿರುವ ಈ ಬಾಲಕ, ತನ್ನ ಅಮ್ಮನ ಸಹಾಯದಿಂದ ಇದನ್ನು ಬರೆದಿರುವನು. ಹೊರದೇಶದಲ್ಲಿ ಬೆಳೆಯುತ್ತಿರುವ ಮಕ್ಕಳು ತಮ್ಮ (ತಮ್ಮ ತಂದೆ ತಾಯಿಯರ) ನಾಡು ನುಡಿ ಬಗ್ಗೆ ಆಸಕ್ತಿಯಿಂದ ಕಲಿತು, ಒಲವು ಬೆಳೆಸಿಕೊಳ್ಳುತ್ತಿರುವುದನ್ನು ನೋಡಿ ಬಹಳ ಖುಷಿ ಆಗುತ್ತದೆ. ಇಂತಹ ಮಕ್ಕಳನ್ನು ಉತ್ತೇಜಿಸುತ್ತಿರುವ ಅವರ ತಂದೆ ತಾಯಿ ಮತ್ತು ಇತರೆ ಪೋಷಕರಿಗೆ ನನ್ನ ನಮನಗಳು. ಹಾಗೆಯೇ ಪುಟ್ಟ ಸಮರ್ಥನಿಗೆ ಶುಭಾಷಯಗಳು !

Thursday, November 01, 2012

ಕನ್ನಡ ಎ೦ದರೆ ಎ೦ತಹುದು ಮಗು


ಕನ್ನಡ ಎ೦ದರೆ ಎ೦ತಹುದು ಮಗು
ಕೇಳುವ ಕಿವಿಗೆ ಕಿಣಿ ಕಿಣಿ ಕಿಣಿ ಗೆಜ್ಜೆ
ಕನ್ನಡವೆ೦ದರೆ ಬಲು ಇ೦ಪು
ಹೇಳುವ ನಾಲಿಗೆಗೆ ಸಿಹಿ ಜೇನೇ ಅದು
ಕನ್ನಡವೆ೦ದರೆ ಬಲು ತ೦ಪು
ನಮ್ಮ ಕನ್ನಡವೆ೦ದರೆ ಇ೦ತಹುದು ಮಗು......

Monday, October 01, 2012

ತಟ್ಟು ತಟ್ಟು ಚಪ್ಪಾಳೆ ಪುಟ್ಟ ಮಗು



ತಟ್ಟು ತಟ್ಟು ಚಪ್ಪಾಳೆ ಪುಟ್ಟ ಮಗು
ತಕೋ ಕೈ ಇಕೋ ಕೈ
ಗಾಂಧಿಗಿಂದು ಜನುಮ ದಿನ

ಗಾಂಧಿಗಿಂದು ಜನುಮ ದಿನ

ತಟ್ಟು ತಟ್ಟು ಚಪ್ಪಾಳೆ ಪುಟ್ಟ ಮಗು

ತಕೋ ಕೈ ಇಕೋ ಕೈ
ಗಾಂಧಿಗಿಂದು ಜನುಮ ದಿನ
ಗಾಂಧಿಗಿಂದು ಜನುಮ ದಿನ

ಎಂಟು ಹತ್ತು ಕೋಟಿ 
ಜನರ ನಾಡಿಯಲ್ಲಿ ನುಡಿಯುತ್ತಿದೆ
ಎಂಟು ಹತ್ತು ಕೋಟಿ 
ಜನರ ನಾಡಿಯಲ್ಲಿ ನುಡಿಯುತ್ತಿದೆ
ಗಾಂಧೀಜಿ ಬಾಪೂಜೀ
ಗಾಂಧೀಜಿ ಬಾಪೂಜೀ


ತಟ್ಟು ತಟ್ಟು ಚಪ್ಪಾಳೆ ಪುಟ್ಟ ಮಗು
ತಕೋ ಕೈ ಇಕೋ ಕೈ
ಗಾಂಧಿಗಿಂದು ಜನುಮ ದಿನ

ಗಾಂಧಿಗಿಂದು ಜನುಮ ದಿನ

ನಿಂದು ಖಡ್ಗ...
ಗಾಂಧಿಗೊಂದು ಹೂವು ಇಡು
ನಿಂದು...
ಗಾಂಧಿಗೊಂದು ಹೂವು ಇಡು
ತಕೋ ಕೈ ಇಕೋ ಕೈ
ತಕೋ ಕೈ ಇಕೋ ಕೈ

ತಟ್ಟು ತಟ್ಟು ಚಪ್ಪಾಳೆ ಪುಟ್ಟ ಮಗು
ತಕೋ ಕೈ ಇಕೋ ಕೈ
ಗಾಂಧಿಗಿಂದು ಜನುಮ ದಿನ
ಗಾಂಧಿಗಿಂದು ಜನುಮ ದಿನ

ಆಡು ಹಾಲು, ಹೆಸರು ಕ್ಷೀರಾ
ಬೇವು ಚಟ್ನಿ, ಗೋಧಿ ರೊಟ್ಟಿ
ಆಡು ಹಾಲು, ಹೆಸರು ಕ್ಷೀರಾ
ಬೇವು ಚಟ್ನಿ, ಗೋಧಿ ರೊಟ್ಟಿ
ಅಷ್ಟು ನೀರು ಅವನಿಗಿಡು
ಅಷ್ಟು ನೀರು ಅವನಿಗಿಡು

ತಟ್ಟು ತಟ್ಟು ಚಪ್ಪಾಳೆ ಪುಟ್ಟ ಮಗು
ತಕೋ ಕೈ ಇಕೋ ಕೈ
ಗಾಂಧಿಗಿಂದು ಜನುಮ ದಿನ
ಗಾಂಧಿಗಿಂದು ಜನುಮ ದಿನ

ಇಂಡಿಯದ ಮಗುವು ಗಾಂಧಿ
ಇಂಡಿಯದ ದೀಪ ಗಾಂಧಿ
ಇಂಡಿಯದ ಮಗುವು ಗಾಂಧಿ
ಇಂಡಿಯದ ದೀಪ ಗಾಂಧಿ
ಕಂಡು ಅವನ ಕುಣಿವ ಬಾರೋ
ಕಂಡು ಅವನ ಕುಣಿವ ಬಾರೋ

ತಟ್ಟು ತಟ್ಟು ಚಪ್ಪಾಳೆ ಪುಟ್ಟ ಮಗು
ತಕೋ ಕೈ ಇಕೋ ಕೈ
ಗಾಂಧಿಗಿಂದು ಜನುಮ ದಿನ
ಗಾಂಧಿಗಿಂದು ಜನುಮ ದಿನ

ತಟ್ಟು ತಟ್ಟು ಚಪ್ಪಾಳೆ ಪುಟ್ಟ ಮಗು
ತಕೋ ಕೈ ಇಕೋ ಕೈ
ಗಾಂಧಿಗಿಂದು ಜನುಮ ದಿನ
ಗಾಂಧಿಗಿಂದು ಜನುಮ ದಿನ

Thursday, August 09, 2012

ಪುಟ್ಟ ಮುದ್ದು ಕೃಷ್ಣ

ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಬಂದನು ಮುದ್ದು ಕೃಷ್ಣ
ಬೆಣ್ಣೆ ಮುದ್ದೆ ಕದ್ದು
ತಿನ್ನೋ ಕಳ್ಳ ಕೃಷ್ಣ ! 

ನವಿಲ ಗರಿಯ ಸೊಗಸಿಗೆ
ಮನಸೋತ ಕೃಷ್ಣ
ತೆಗೆದು ತಲೆಯೊಳಿರಿಸಿ
ಮೆರೆವ ಪುಟಾಣಿ ಕೃಷ್ಣ

ಬಾರೋ ಬಾರೋ ನನ್ನ ಬಳಿ
ಬೇಗನೆ ಕೃಷ್ಣ
ಹಾಲು ಮೊಸರು ಬೆಣ್ಣೆ ಕೊಡುವೆ
ತಿನ್ನೋ ಕೃಷ್ಣ

***
ಕವಿ :ಸುಬ್ರಹ್ಮಣ್ಯ ಭಟ್

Saturday, July 28, 2012

ವರಮಹಾಲಕ್ಷ್ಮಿ ಹಬ್ಬ 2012

ಇಂದು ವರಮಹಾಲಕ್ಷ್ಮಿ ಹಬ್ಬ! ಬಹಳ ಸಂಭ್ರಮದಿಂದಲೇ  ಪುಟ್ಟಿ ಪೂಜೆ ಮಾಡಿದಳು. ಹೆಚ್ಚಿನ ಫೋಟೋಗಳು  ಇಲ್ಲಿವೆ.  
ವರಮಹಾಲಕ್ಷ್ಮಿ 

Thursday, July 26, 2012

ಬಾಗಿಲ ತೆರೆದಿರುವೆ ತಾಯೆ ಪೂಜೆಗೆ ಕಾದಿರುವೆ


ಬಾಗಿಲ ತೆರೆದಿರುವೆ ತಾಯೆ ಪೂಜೆಗೆ ಕಾದಿರುವೆ
ಬಾಗಿಲ ತೆರೆದಿರುವೆ ತಾಯೆ ಪೂಜೆಗೆ ಕಾದಿರುವೆ
ಸೇವೆಯ  ಸ್ವೀಕರಿಸು ಬಾ ಭಾಗ್ಯಲಕ್ಷ್ಮಿಯೆ
ಸೇವೆಯ  ಸ್ವೀಕರಿಸು ಬಾ ಭಾಗ್ಯಲಕ್ಷ್ಮಿಯೆ
ಬಾಗಿಲ ತೆರೆದಿರುವೆ ತಾಯೆ ಪೂಜೆಗೆ ಕಾದಿರುವೆ

ಹೊಸಲಿನ ಪೂಜೆ ಮಾಡಿದೆಯಮ್ಮ
ಹಸಿರು ತೋರಣ ಕಟ್ಟಿದೆಯಮ್ಮ
ತುಪ್ಪದ ದೀಪ ಬೆಳಗಿದೆಯಮ್ಮ
ಮಲ್ಲಿಗೆ ಮಾಲೆ ಕಾದಿದೆಯಮ್ಮ
ಕಮಲಾಕ್ಷಿ ಕಮಲಮುಖಿ ಕಮಲೋದ್ಭವೆ ಬಾರೆ

ಬಾಗಿಲ ತೆರೆದಿರುವೆ ತಾಯೆ ಪೂಜೆಗೆ ಕಾದಿರುವೆ

ನೀನು ಬರುವಾಗ ಹೊನ್ನ ಕಾಲ್ಗೆಜ್ಜೆ ನಾದ ನಾ ಕೇಳುವಂತೆ
ನಿನ್ನ ನಗೆಯಿಂದ ನನ್ನ ಭಾಯವೆಲ್ಲಾ ಓಡಿ ಮರೆಯಾಗುವಂತೆ
ಮನೆಯು ಬೆಳಕಾಗಿ ಮನವು ಬೆಳಕಾಗಿ ಬಾಳು ಬೆಳಕಾಗುವಂತೆ
ದಯಮಾಡಿಸು ನಾರಾಯಣನ ಹೃದಯೇಶ್ವರಿಯೇ

ಬಾಗಿಲ ತೆರೆದಿರುವೆ ತಾಯೆ ಪೂಜೆಗೆ ಕಾದಿರುವೆ

ನಿನ್ನ ಮನೆಯೆಂದು ನಿನ್ನ ಗುಡಿಯೇಮ್ದು ಬಂದು ಸ್ಥಿರವಾಗಿ ನೆಲೆಸು
ಬಂದ ಕ್ಷಣದಿಂದ ತಂದ ಸುಖ-ಶಾಂತಿ ನಮ್ಮ ಬದುಕಲ್ಲಿ ಬೆರೆಸು
ನಿತ್ಯ ಹರಿ ಪೂಜೆ ನಿತ್ಯ ಗುರು ಸೇವೆಯಲ್ಲಿ ನಡೆಯಂತೆ ಹರಸು
ದಯೆ ತೋರಿಸು ಶರಣೆನ್ನುವೆ ಸೌಭಾಗ್ಯದ ನಿಧಿಯೆ

ಬಾಗಿಲ ತೆರೆದಿರುವೆ ತಾಯೆ ಪೂಜೆಗೆ ಕಾದಿರುವೆ
ಸೇವೆಯ  ಸ್ವೀಕರಿಸು ಬಾ ಭಾಗ್ಯಲಕ್ಷ್ಮಿಯೆ
ಸೇವೆಯ  ಸ್ವೀಕರಿಸು ಬಾ ಭಾಗ್ಯಲಕ್ಷ್ಮಿಯೆ
ಬಾಗಿಲ ತೆರೆದಿರುವೆ ತಾಯೆ ಪೂಜೆಗೆ ಕಾದಿರುವೆ




ಚಿತ್ರ : ಪೇಮಾನುಬಂಧ
ಸಂಗೀತ : ರಾಜನ್ ನಾಗೇಂದ್ರ
ಸಾಹಿತ್ಯ : ಸಿ. ಉದಯ್ ಶಂಕರ್ 
ಗಾಯಕಿ : ಎಸ್ . ಜಾನಕಿ 

ನಿಮಗೆಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು!

Tuesday, July 24, 2012

ಗುಬ್ಬಿ ಮರಿ ಎಲ್ಲಮ್ಮ?



ಗುಬ್ಬಿ ಮರಿ ಎಲ್ಲಮ್ಮ?
ಕಣ್ಣಿಗೇಕೋ ಕಾಣದಮ್ಮ
ನನ್ನ ಸಂಗ ಬೇಡವೆಂದು
ತೊರೆದು ಹೋಯಿತೇನಮ್ಮ?

ಕಾಗೆಗೆ ಗೆಳೆಯನಿಲ್ಲಮ್ಮ
ಕಾಳನು ತಿನ್ನುವರಿಲ್ಲಮ್ಮ
ಏಕೆ ಹೀಗಾಯಿತೆಂದು
ಒಮ್ಮೆ ನನಗೆ ಹೇಳಮ್ಮ

ಆಟಿಕೆ ಗುಬ್ಬಿ ಬೇಡಮ್ಮ
ಹಾರುವ ಗುಬ್ಬಿ ತೋರಿಸಮ್ಮ
ಮರದ ಪುಟ್ಟ ಗೂಡಿನಲ್ಲಿ
ಕೂರುವ ಗುಬ್ಬಿ ಬೇಕಮ್ಮ