Thursday, December 31, 2009

ಬರ್ತ್ ಡೇ ಪಾರ್ಟಿ ಫೋಟೋಸ್...

ಪುಟ್ಟಿದು ಈ ಸಾರ್ತಿ ಫಿಶ್ ಥೀಮ್ ಪಾರ್ಟಿ ಅಂತ ಅವಳ ಆಮಂತ್ರಣ ನೋಡಿದಾಗ್ಲೇ ನಿಮಗೆಲ್ಲಾ ಗೊತ್ತಾಗಿದೆ. ಫಿಶ್ ಅಂತ ತಕ್ಷಣ ಹೆಚ್ಚಾಗಿ ಎಲ್ಲೆಡೆ ’ಫೈಂಡಿಂಗ್ ನೀಮೋ’ ಚಲನಚಿತ್ರ ಆಧಾರಿತ ಪಾರ್ಟಿ ಸಾಮಾನುಗಳೇ ಸಿಗುತ್ತವೆ, ಆದ್ರೆ ನಂಗೆ ಬೇಕಿದ್ದು ಅದಲ್ಲ.. ಹಾಗಾಗಿ ಅಂತರ್ಜಾಲದಲ್ಲಿ ಬಹಳಷ್ಟು ಹುಡುಕಾಡಬೇಕಾಯ್ತು! ಫಿಶ್ ಬಲೂನ್ಸ್, ತಟ್ಟೆ, ಪಾರ್ಟಿ ಟೋಪಿ, ಟೇಬಲ್ ಕವರ್, ಸೆಂಟರ್ ಪೀಸ್, ಕ್ರೇಪ್ ರಿಬ್ಬನ್ ಎಲ್ಲವೂ ಸಿಕ್ಕ್ತು...
The party Deco....
ಫಿಶ್ ಫೋಟೊ ಫ್ರೇಮಿನಲ್ಲಿ ಪುಟ್ಟಿ ಫೋಟೋಗಳು..
ಡೆಕೊರೇಷನ್ ಹೇಗೋ ಹುಡುಕಾಡಿ ತರಿಸಿದ್ದಾತು, ಆದ್ರೆ ಫಿಶ್ ಶೇಪಿನ್ ಕೇಕ್ ಯಾವ ಅಂಗಡಿಯವರೂ ಮಾಡಿಕೊಡಲು ತಯಾರಿರಲಿಲ್ಲ. ಅಲ್ಲಿ ಇಲ್ಲಿ ವಿಚಾರಿಸಿ, ಕೊನೆಗೆ ನಮ್ಮೂರಿನ ಆನ್ಲೈನ್ ಫೋರಂ ನಲ್ಲಿ ಬಹಳಷ್ಟು ಜನ ಹೇಳಿದ ಹೆಸರು ’ಮಿಸ್. ಕ್ಯಾಥಿ ಕೋವನ್’. ಬೇರೆ ದಾರಿಯಿಲ್ಲದೆ ಅವರಿಗೇ ಆರ್ಡರ್ ಕೊಟ್ಟೆ. ಆದ್ರೆ ಮನಸಿನಲ್ಲಿ ಆತಂಕ ತುಂಬಿತ್ತು, ಯಾವತ್ತೂ ಅವರ ಕೇಕ್ ರುಚಿ ನೋಡಿಲ್ಲ, ಹೇಗಿರುತ್ತೋ ಏನೋ ಅಂತ. ಅವರು ಮಾಡಿದ ಕೇಕ್ ನೋಡಿ ಬಹಳ ಖುಶಿ ಆಯ್ತು, ತಿನ್ನಲೂ ಅಷ್ಟೇ ರುಚಿಯಾಗಿತ್ತು:))
ಫಿಶ್ ಕೇಕ್ ಮತ್ತು ಫಿಶ್ ಕ್ಯಾಂಡಲ್ಸ್.. 

ವಾರದ ದಿನವಾದ್ದರಿಂದ ಸಿಂಪಲ್ಲಾಗಿ ಪಿಜ್ಜಾ ಪಾರ್ಟಿ ಮಾಡೋಣ ಅಂತ ತೀರ್ಮಾನಿಸಿ, ಜೊತೆಗೆ ನಾನೇ ಮಾಡಿದ ಫಿಶ್ ಶೇಪಿನ ಸಿಹಿ ಮತ್ತು ಖಾರ ಬಿಸ್ಕತ್ತುಗಳು, ನೂಡಲ್ಸ್(ಮೇಲೆ ಕೆಚಪ್ ನಲ್ಲಿ ಮೀನಿನಾಕಾರ ಬರೆದೆ), ಸ್ಪ್ರಿಂಗ್ ರೋಲ್, ಚಿಪ್ಸ್ ಇತ್ಯಾದಿ..
ಬರ್ತ್ ಡೇ ಗರ್ಲ್ ಪುಟ್ಟಿ ..
ಕೇಕ್ ಕಟ್ ಮಾಡುತ್ತಾ ..ಎಲ್ಲಾ ಮಕ್ಕಳ ಜೊತೆಯಲ್ಲಿ ..
ಅಂಕಲ್ ಗಳ ಜೊತೆಯಲ್ಲಿ  ..


ತನ್ನ ರೂಮಿನಲ್ಲಿ ಫ್ರೆಂಡ್ಸ್ ಜೊತೆ ..
ತನ್ನ ಗಿಫ್ಟ್ ಗಳೊಂದಿಗೆ ಎಲ್ಲರಿಗೂ ಮತ್ತೊಮ್ಮೆ ಥ್ಯಾಂಕ್ಸ್ ಹೇಳುತ್ತಾ, ಜೊತೆಗೆ ನಿಮಗೆಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು!!

ಪುಟ್ಟಿ Thank you ಅಂತಾಳೆ :))

ತನ್ನ ಹುಟ್ಟುಹಬ್ಬದ ದಿನ ಫೋನ್ ಮಾಡಿ ವಿಶ್ ಮಾಡಿದ, ಬ್ಲಾಗಿನಲ್ಲಿ ಮತ್ತು ಈ ಮೇಲ್ ನಲ್ಲಿ ಹರಸಿದ, ಮನೆಗೆ ಬಂದು ಹಾರೈಸಿದ ಎಲ್ಲರಿಗೂ ತಾಂತು (ಥ್ಯಾಂಕ್ಸ್) ಹೀಗೆ ಹೇಳಿದ್ದಾಳೆ:))


This isn't just a Fish,
as anyone can see.
I made it with my hand,
which is part of me.
It comes with lots of love,
especially to say,
Thanks for joining me
On my 2nd Birthday !!
-Sahitya

ಈ ತರಹ ತನ್ನ ಪುಟ್ಟ ಕೈಗಳಿಗೆ ಬಣ್ಣ ಹಚ್ಚಿಕೊಂಡು ಬಂದ ಗೆಳೆಯರಿಗೆಲ್ಲಾ ಮಾಡಿಕೊಡುವ ಆಸೆ ಪುಟ್ಟಿಗಿತ್ತು, ಆದ್ರೆ ನನ್ನ ಸೋಮಾರಿತನ !! ಅವಳು ಮಾಡಿದ ಈ ಫಿಶ್ ಅನ್ನು ಸ್ಕ್ಯಾನ್ ಮಾಡಿ, ಫೋಟೋ ಪ್ರಿಂಟ್ ಹಾಕಿಸಿ ಎಲ್ಲಾ ಮಕ್ಕಳಿಗೆ ಥ್ಯಾಂಕ್ ಯೂ ಕಾರ್ಡ್ ಮಾಡಿ ಕೊಟ್ಟು ಬಿಟ್ಟೆ :)
ಬಂದ ಮಕ್ಕಳಿಗೆ ಅವರದೇ ಹೆಸರಿನ ಬಿಸ್ಕತ್ತುಗಳು.. 

ಬಣ್ಣದ ಫಿಶ್ ಕವರಿನಲ್ಲಿ..

ಅಲ್ಲದೆ ವಯಸ್ಸಿಗನುಗುಣವಾಗಿ ಫಿಶ್ ಬುಕ್ಸ್ ...

ಕೆಲವು ಫಿಶ್ ಸ್ಟ್ಯಾಂಪ್ ಗಳು...

ಮತ್ತು ಸಿಡಿಗಳು, ಕ್ರಯಾನ್ಸ್, ಇತ್ಯಾದಿ...

Tuesday, December 29, 2009

ಹ್ಯಾಪಿ ಬರ್ತ್ ಡೇ ಪುಟ್ಟಿ!!

ಇಷ್ಟು ಬೇಗ ಪುಟ್ಟಿಗೆ ಎರಡು ವರ್ಷ ಆಗಿಬಿಡ್ತಾ ಅಂತ ಅನ್ನಿಸ್ತಾಯಿದೆ. ಒಮ್ಮೆ ಹಿಂತಿರುಗಿ ನೋಡಿದರೆ ಈ ಕಾಲ ಸರಿಯಾದ ಗತಿಯಲ್ಲೇ ಸಾಗುತ್ತಿದ್ದರೂ ನನಗೇಕೋ ಅದು ಓಡುತ್ತಿದೆ ಅನಿಸುತ್ತೆ. ನಿನಗ್ಯಾಕೆ ಪುಟ್ಟಿ ದೊಡ್ದವಳಾಗೊಕೆ ಇಷ್ಟು ಅವಸರ, ಸ್ವಲ್ಪ ನಿಧಾನಿಸು ಅನ್ನೋಣ ಅನಿಸುತ್ತೆ.
ಡಿಸಿಂಬರ್ ೨೦೦೭ರಿಂದ(ಅದಕ್ಕೂ ೯ ತಿಂಗಳ ಮುಂಚಿನಿಂದ) ಇಲ್ಲಿಯವರೆಗಿನ ನನ್ನ, ಪುಟ್ಟಿಯ ಒಡನಾಟ ನನ್ನಲ್ಲಿ ಪ್ರತಿದಿನ ಹೊಸ ಅಚ್ಚರಿ, ಉಲ್ಲಾಸಗಳನ್ನ ತುಂಬಿ, ನಾಳೆ ಬರಬಹುದಾದ ಹೊಸ ವಿಸ್ಮಯಗಳಿಗಾಗಿ ಕಾಯೋ ಹಾಗೆ ಮಾಡಿದೆ. ಅಮ್ಮನಾಗಿದ್ದಕ್ಕೆ ಬಂದಿರೋ ಎಲ್ಲಾ ಹೊಸ ಜವಾಬ್ದಾರಿಗಳು ನನ್ನಲ್ಲಿ ಸಹನೆ, ಸ್ಪೂರ್ತಿ ಹೆಚ್ಚೋ ಹಾಗೇ ಮಾಡ್ತಿರೋದಕ್ಕೆ ಪುಟ್ಟಿಗೆ ಥ್ಯಾಂಕ್ಸ್ ಹೇಳಿಕೊಳ್ಳುತ್ತಾ... 

Sunday, December 27, 2009

ನನ್ನ ಎರಡನೇ ಹುಟ್ಟು ಹಬ್ಬಕ್ಕೆ ಬನ್ನಿ ಅಂತಾಳೆ


ಪುಟ್ಟಿ ತನ್ನ ಎರಡನೆ ಹುಟ್ಟುಹಬ್ಬಕ್ಕೆ ಸ್ನೇಹಿತರನ್ನ ಆಹ್ವಾನಿಸಿದ್ದು ಹೀಗೆ..

ತನ್ನೆಲ್ಲಾ ಬ್ಲಾಗ್ ಸ್ನೇಹಿತರಿಗೂ, ಹಿರಿಯರಿಗೂ, ಹಿತೈಷಿಗಳಿಗೂ ಬನ್ನಿ ಅಂತ ಹೇಳ್ತಾಳೆ...

ಮರಿಬೇಡಿ, ಬರ್ತೀರಾ ಅಲ್ವ ?

Thursday, December 24, 2009

ಕ್ರಿಸ್ ಮಸ್ ಪಾರ್ಟಿ !!!

ಎಲ್ಲರಂತೆ ನಮ್ಮ್ ಮನೆಯಲ್ಲೂ ಕ್ರಿಸ್ ಮಸ್ ಮರವನಿಟ್ಟು ಹಬ್ಬ ಆಚರಿಸಬೇಕು ಅಂತ ಆಸೆ ಇದ್ದ್ರೂ ನನ್ನ ಸೋಮಾರಿತನದಿಂದ ಅದನಿನ್ನೂ ಶುರು ಮಾಡಿಲ್ಲ.
ಕಳೆದ ವರ್ಷ ಅಪ್ಪನ ಸ್ಟಾಂಪ್ ಕ್ಲಬಿನಲ್ಲಿ ನಡೆದ ಕ್ರಿಸ್ ಮಸ್ ಪಾರ್ಟಿಯಲ್ಲಿ ಪುಟ್ಟಿ ಓಡಾಡಿದ್ದು ಹೀಗೆ...






ಈ ವರ್ಷ ಮಾಲ್ ನಲ್ಲಿ ನಿಲ್ಲಿಸಿದ್ದ ಕ್ರಿಸ್ ಮಸ್ ಮರದೆದುರು..

Sunday, December 13, 2009

ಚಟ್ನಿ ಮಾಡೋದು ಹೀಗೆ

ಪುಟ್ಟಿ ಈಗ ಎಲ್ಲ ಕೆಲಸ ಮಾಡಬೇಕು ಅನ್ನೋ ಆಸೆ. ಅಡುಗೆ ಮಾದಲು ಹೋದ್ರೆ ತರಕಾರಿ ಹೆಚ್ತೀನಿ ಅಂತಾಳೆ. ಚಪಾತಿ ಹಿಟ್ಟನ್ನ ಉಂಡೆ ಮಾಡಿ ತಾನೂ ಲಟ್ಟಿಸಿ ಬೇಯಿಸಲು ಬರ್ತಾಳೆ. ನಾನು ಸ್ಟವ್ ಮುಂದೆ ಕೆಲಸ ಮಾಡೊವಾಗ ಅವಳಿಗೂ ಒಂದು ಪಾತ್ರೆ ಕೊಟ್ಟು ಅದಕ್ಕೆ ಈರುಳ್ಳಿ ಎಣಿಸಿ ತುಂಬು ಅಂತ ಹೇಳಿ ಕೆಳಗೆ ಕೂರಿಸ್ತೀನಿ. ತನಗೂ ಕೆಲ್ಸ ಇದೆ ಅಂತ ಖುಶಿಯಾಗಿ ಅವಳು ಕೆಲ್ಸ ಮಾಡೋಷ್ಟರಲ್ಲಿ ನನ್ನ ಅಡುಗೆ ಮುಗಿಯಬೇಕು:)
ಕೆಲವೊಮ್ಮೆ ಈ ಟ್ರಿಕ್ ನೆಡೆಯೊಲ್ಲ. ಅವಳೂ ಕೌಂಟರ್ ಮೇಲೆ ಕುಳಿತು ಅಮ್ಮ ಮಾಡೊದನ್ನ ನೋಡಬೇಕು ಅಂತಾಳೆ. ಹಾಗೆ ನೋಡಿ ಕಲಿತಿರುವುದರ ಪ್ರಭಾವಯಿದು...

Monday, December 07, 2009

ಡಿಸ್ನಿ ಡೌನ್ ಟೌನಿನಲ್ಲಿ...

ಸ್ಟ್ಯಾಂಪ್ ಎಕ್ಸಿಬಿಷನಿಗೆ ಅಂತ ಆರ್ಲ್ಯಾಂಡೋಗೆ ಹೋಗಿದ್ದ ಪುಟ್ಟಿ ಹಾಗೆ ಅಲ್ಲಿ ಡಿಸ್ನಿವರ್ಲ್ಡಿಗೂ ಹೋಗೋ ಪ್ಲಾನಿತ್ತು, ಆದ್ರೆ ಮಳೆರಾಯನ ಕೃಪೆಯಿಂದಾಗಿ ಎಲ್ಲೂ ಹೋಗ್ಲಿಲ್ಲ. ’ರೈನ್ ರೈನ್ ಗೋ ಅವೇ’ ಅಂತ ಅಮ್ಮನ ಜೊತೆಗೂಡಿ ಎಷ್ಟು ಸರಿ ಹಾಡಿದ್ರು ಪ್ರಯೊಜನವಾಗ್ಲಿಲ್ಲ. ಬರೀ ಡೌನ್ ಟೌನ್ ಮಾತ್ರ ನೋಡಿ ಬಂದದ್ದಾಯ್ತು. ಯಾವುದೇ ಕಾರ್ಟೂನ್ ಕ್ಯಾರೆಕ್ಟರ್ ಗಳ ಪರಿಚಯವಿಲ್ಲದ್ದರಿಂದ ಎಲ್ಲ ಅವಳಿಗೆ ಹೊಸತಾಗಿತ್ತು:)

ಪ್ರಿನ್ಸೆಸ್ಸ್ ಹೀಗೆ ನಿಂತಿರೋದು...ಅಕ್ಕ ಯಶೀತಾ ಅವರಪ್ಪನ ಹೆಗಲೇರಿದ್ರೆ ತಾನೂ ಕಾಪಿ ಮಾಡಿದ್ಲು..
ಮಿಕ್ಕಿ ಮಿನ್ನಿ ಗಳ ಜೊತೆಯಲ್ಲಿ..
ವಿನ್ನಿ ದ ಪೂಹ್ ಅನ್ನೊ ಕರಡಿ ಜೊತೆ
ಟಿಗ್ಗರ್ ಮತ್ತು ಪಿಗ್ ಲೆಟ್ ಜೊತೆ...

Sunday, December 06, 2009

ಸ್ಟಾಂಪ್ ಎಕ್ಸಿಬಿಷನ್ !!

ಮನೆಯಲ್ಲಿ ಅಪ್ಪನ ಹತ್ರ ಎಷ್ಟೆಲ್ಲಾ ಸ್ಟಾಂಪ್ಸ್ ಇದ್ರೂ, ಅಪ್ಪ ಅವಳಿಗೆ ಮುಟ್ಟೋಕೆ(ಆಟವಾಡೋಕೆ) ಕೊಡೋದು ಕೆಲವೇ ಕೆಲವು ಮಾತ್ರ. ಅದನ್ನ ಕೂಡ ಅಪ್ಪನ ಹಾಗೆ ಕೈಗೆ ಗ್ಲವ್ಸ್ ಹಾಕಿಸಿಕೊಂಡು ಮುಟ್ಟುತ್ತಾಳೆ. ಅದರಲ್ಲಿರುವ ಪ್ರಾಣಿ, ಪಕ್ಷಿಗಳ ಚಿತ್ರನೋಡಿ ಖುಶಿ ಪಡ್ತಾಳೆ.
ಸರಿ ಮೊನ್ನೆ ಆರ್ಲ್ಯಾಂಡೋ ದಲ್ಲಿ ನಡೆದ Florex 2009 ಅನ್ನೋ ಸ್ಟ್ಯಾಂಪ್ ಎಕ್ಸಿಬಿಷನ್ ನೋಡಲು ಪುಟ್ಟಿ ಅಪ್ಪಅಮ್ಮನ ಜೊತೆ ಹೋಗಿದ್ಲು. ಅಲ್ಲಿದ್ದ ಸಾವಿರಾರು ಸ್ಟ್ಯಾಂಪ್ಸ್ ನೋಡಿ ಅಪ್ಪನಿಗೆ ಎಷ್ಟು ಖುಶಿ ಆಯ್ತೋ ಅದಕ್ಕಿಂತ ಹೆಚ್ಚಿನ ಖುಶಿ ಅಲ್ಲಿ ಮಕ್ಕಳಿಗಾಗಿ ಹಾಕಿದ್ದ ರಾಶಿ ರಾಶಿ ಸ್ಟ್ಯಾಂಪ್ಸ್ ಗಳ ಜೊತೆ ಆಟವಾಡಿ ಪುಟ್ಟಿಗೆ:))ತನಗೆ ಬೇಕಾದ ಸ್ಟ್ಯಾಂಪ್ಸ್ ಆಯ್ದುಕೊಂಡು ತನ್ನ ಪುಟ್ಟ ಬಕೆಟ್ ತುಂಬಿಸುತ್ತಿರುವ ಪುಟ್ಟಿ...