Thursday, July 30, 2009

ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು!!

ನಾಳೆ ವರಮಹಾಲಕ್ಷ್ಮಿ ಹಬ್ಬ. ಎಂದಿನಂತೆ ಅಮ್ಮನ ಮನೆಯಲ್ಲಿದ್ದಾಗ ಹಬ್ಬಗಳ ನೆನಪಾಗುತ್ತಿದೆ. ಬೆಂಗಳೂರಿನಲ್ಲಿ ಹಬ್ಬಗಳು ಬಂದರೆ ಎಲ್ಲೆಲ್ಲಿದ ಸಂಭ್ರಮ. ಮಾರುಕಟ್ಟೆಯ ತುಂಬಾ ಹಬ್ಬಕ್ಕೆ ಬೇಕಾಗುವ ಹೂವು ಪತ್ರೆಗಳು, ಹಣ್ಣುಗಳು, ಮಾವಿನ ಸೊಪ್ಪು-ಬಾಳೆ ಕಂದು, ಅಲಂಕಾರಕ್ಕೆ ಬಣ್ಣಬಣ್ಣದ ಕಾಗದಗಳು. ಹಬ್ಬದ ವಾರವೆಲ್ಲ ರೇಡಿಯೋ/ದೂರದರ್ಶನ ಎಲ್ಲರೂ ಭಾಗ್ಯಾದ ಲಕ್ಷ್ಮಿ ಬಾರಮ್ಮ ಅಂತ ಕರೆಯುವವರೇ :))

ಹಬ್ಬದ ದಿನ ಮುಂಜಾನೆ ಚುಮುಚುಮು ಬೆಳಕಿರುವಾಗಲೇ ಎದ್ದು ಮನೆ ಮುಂದೆ ದೊಡ್ಡ ರಂಗೋಲಿ ಹಾಕಿ, ಬಣ್ಣ ತುಂಬೋದು. ಆಮೇಲೆ ಬಾಗಿಲಲ್ಲಿ ಸದಾಯಿರುವ ಪ್ಲಾಸ್ಟಿಕಿನ ಹಾರ ತೆಗೆದು ಮಾರ್ಕೆಟ್ಟಿಂದ ತಂದ ಮಾವಿನ ಎಲೆಯ ತೋರಣ, ಹೂವಿನ ಹಾರ ಹಾಕಿದ್ರೆ ಮನೆಗೆ ಹಬ್ಬದ ಕಳೆ ಬಂದಿರುತ್ತೆ. ಹಿಂದಿನ ದಿನವೇ ದೇವಿಯನ್ನು ಕೂರಿಸಲು ಮನೆಯಲ್ಲಿರುವ ಟೇಬಲ್, ಸ್ಟೂಲ್ ಗಳಲ್ಲಾ ಸ್ಟೆಪ್ ಗಳಾಗಿ ಮಾರ್ಪಟ್ಟಾಗಿರುತ್ತಿದ್ದವು. ಸ್ನಾನ ಮುಗಿಸಿ ಅಮ್ಮ ಅಡಿಗೆ ಕೆಲಸ ಮಾಡುತ್ತಾ ನಮಗೆ ಹೇಳಿದಂತೆ ನಾವು ಪೂಜೆಗೆ ರೆಡಿ ಮಾಡೋದು. ನನಗೇ ನೆಟ್ಟಗೆ ಸೀರೆ ಉಡಲು ಬರದಿದ್ದರೂ ಹಬ್ಬಕ್ಕೆಂದು ಅಮ್ಮ ತಗೊಂಡ ಹೊಸ ಸೀರೆಯನ್ನು ಕಳಶಕ್ಕೆ ಉಡಿಸಿ, ಲಾಕರ್ ನಲ್ಲಿದ್ದ ಒಡವೆಗಳನ್ನೆಲ್ಲ ತಂದು ಕಲಶದ ಮೇಲೆ ಕುಳಿತಿರುವ ಲಕ್ಷ್ಮಿಯನ್ನ ಅಲಂಕರಿಸೋದು. ಸೀರಿಯಲ್‌ ಸೆಟ್‌ ಬೆಳಕು ಒಡವೆಗಳಿಗೆ ಇನ್ನೂ ಹೊಳಪು ತರಿಸ್ತಾಯಿತ್ತು. ಅಮ್ಮನ ಮನೆಯಲ್ಲಿ ಹಬ್ಬ 2005

ನಂತರ ಎಲ್ಲರೂ ಸೇರಿ ಗಣಪತಿ ಶಾಸ್ತ್ರಿಗಳು ಕ್ಯಾಸೆಟ್ಟಿನಲ್ಲಿ ಹೇಳಿಕೊಟ್ಟಂತೆ ಪೂಜೆ ಮಾಡೋದು. ನಾನು ಟೇಪ್‌ ರೆಕಾರ್ಡರ್‌ ಪಕ್ಕದಲ್ಲೇ ಕೂತಿರಬೇಕು. ನೈವೇದ್ಯ, ಮಂಗಳಾರತಿ ಮುಂತಾದವುಗಳಿಗೆ ಅಣಿ ಮಾಡಿಕೊಳ್ಳುವ ಸಮಯದಲ್ಲಿ ಕ್ಯಾಸೆಟ್ಟನ್ನು ಬಂದ್‌ ಮಾಡುವುದು. ಸಿದ್ಧವಾದ ನಂತರ ಮತ್ತೆ ಹಚ್ಚುವುದು ನನ್ನ ಕೆಲಸ. ಗಣಪತಿ ಶಾಸ್ತ್ರಿಗಳು ಬರದಿದ್ದರೂ ಅವರ ಮಂತ್ರ ಮನೆ ತುಂಬುತಿತ್ತು.

ಪೂಜೆಯಾದ ನಂತರ ಊಟ ..ಆಹಾ ಒಬ್ಬಟ್ಟು, ಪಾಯಸ, ಕೋಸಂಬರಿ, ಪಲ್ಯಗಳು ಮಾರ್ಕೆಟ್ಟಿಂದ ತಂದ ಬಾಳೆ ಎಲೆ ತುಂಬಾ ಬಡಿಸಿಕೊಂಡು ಎಲ್ಲರೂ ಒಟ್ಟು ಕೂತು ಊಟ ಮಾಡುವುದು.ಅಮ್ಮನ ಮನೆಯಲ್ಲಿ ಹಬ್ಬ 2007

ಸಂಜೆ ಅರಿಶಿನ ಕುಂಕುಮ ತಗೋಳೋಕೆ ಮುತೈದೆಯರೆಲ್ಲಾ ಮನೆಗೆ ಬರೋದು. ಅವರ ಮನೆಗಳಿಗೆ ನಾವು ಹೋಗೋದು, ಇದು ರಾತ್ರಿಯವರೆಗೆ ನಡೆಯುತ್ತಿತ್ತು. ರಾತ್ರಿ ಮತ್ತೊಮ್ಮೆ ದೇವಿಗೆ ಪೂಜೆ ಮಾಡಿ, ಕಲಶ ಕದಲಿಸಿದ ಮೇಲೆ ಊಟ, ನಿದ್ದೆ. ಮಾರನೆಯ ದಿನ ಕ್ಲೀನಿಂಗ್ ಕೆಲಸ!!

ಈಗ ಇಲ್ಲಿ ವಿವಿಧ ಭಾರತಿ / ದೂರದರ್ಶನ ಇಲ್ಲದಿದ್ದರೇನಂತೆ ನಮ್ಮನೆ ಕಂಪ್ಯೂಟರಿಲ್ಲೇ ಕಮಲದಾ ಮೊಗದೋಳೆ, ಕಮಲದಾ ಕಣ್ಣೋಳೆ ಕಮಲವಾ ಕೈಯಲ್ಲಿ ಹಿಡಿದೋಳೆ, ಮಹಾಲಕ್ಷ್ಮಿ ಮನೆಗೆ ಬಾರಮ್ಮ ಕೇಳುತ್ತಾ, ಅದೇ ಗಣಪತಿ ಶಾಸ್ತ್ರಿಗಳಿಂದ ವ್ರತವಿಧಾನವನ್ನು ಕನ್ನಡ ಆಡಿಯೋದಲ್ಲಿ ಕೇಳಿಸಿಕೊಂಡು ಪೂಜೆ ಮಾಡ್ತೀವಿ. ಆಫ್ರಿಕಾ, ಆಸ್ಟ್ರೇಲಿಯಾ ಇತರೆ ದೇಶಗಳನ್ನು ಹೋಲುವ ಆಕಾರದ ಒಬ್ಬಟ್ಟು ಮಾಡಿಕೊಂಡು, ಇಲ್ಲಿ ಸಿಗುವ ತರಕಾರಿಯ ಪಲ್ಯ ತಯಾರಿಸಿ ಪಿಂಗಾಣಿ ತಟ್ಟೆಯಲ್ಲಿ ಗೆಳೆಯರೊಡನೆ ಸೇರಿ ಊಟ ಮಾಡಿ ಹಬ್ಬ ಮಾಡ್ತೀವಿ.ನಮ್ಮನೆ ಹಬ್ಬ 2008

ನನ್ನ ಬ್ಲಾಗ್ ಓದುವ ಗೆಳೆಯರೆಲ್ಲರಿಗೆ ಮತ್ತು ಅವರ ಮನೆಯವರಿಗೆ ಹಾಗು ನೆಂಟರಿಷ್ಟರಿಗೆ ವರಮಹಾಲಕ್ಷ್ಮಿ ವ್ರತದ ಶುಭಾಶಯಗಳು. ಆ ದೇವಿಯು ಎಲ್ಲರ ಸಂಕಷ್ಟಗಳನ್ನು ದೂರಮಾಡಿ, ಬಾಳಿನಲ್ಲಿ ಸುಖ ಶಾಂತಿ ಶಾಶ್ವತವಾಗಿ ನೆಲೆಸುವಂತೆ ಮಾಡಿ, ಸಮೃದ್ಧಿಯನ್ನು ದಯಪಾಲಿಸಲಿ!!!

Friday, July 24, 2009

ತಾತನ್ ಹೆಸ್ರು "ಮಾಮು"....

ಪುಟ್ಟಿ ಈಗ ಬಹಳಷ್ಟು ಹೊಸ ಹೊಸ ಮಾತುಗಳನ್ನ ಕಲ್ತಿದ್ದಾಳೆ. ಅಮ್ಮನ ಹೆಸ್ರು ಪೂಪ, ಅಪ್ಪನ ಹೆಸ್ರು "ಏಮಂತ್", ತಾತನ ಹೆಸ್ರು "ಮಾಮು"(ರಾಮು), ಅಜ್ಜಿತಾತ ಇರೋದು "ಇಂಡಾ"(ಇಂಡಿಯಾ) ಎಲ್ಲಾ ಹೇಳ್ತಾಳೆ. ಅಲ್ಲದೇ ವರ್ಲ್ಡ್ ಮ್ಯಾಪಿನಲ್ಲಿ ಇಂಡಿಯಾ, USA, ಆಸ್ಟ್ರೇಲಿಯಾ ಗುರುತಿಸ್ತಾಳೆ.



ಅವಳ ಬುಕ್ ನಲ್ಲಿರೋ ಬಹುತೇಕ ಎಲ್ಲಾ ಪ್ರಾಣಿಗಳನ್ನ ಗುರ್ತು ಹಿಡಿತಾಳೆ. ಅಲ್ಲದೇ ಅವನ್ನು ಅವರಪ್ಪನ ಸ್ಟ್ಯಾಂಪ್ಸ್ ನಲ್ಲಿ ಕೂಡ ಕಂಡುಹಿಡಿದು ತೋರಿಸ್ತಾಳೆ. ಆನಿ, ಆರ್ಚ್(horse), ಡಾಗಿ , ತೌ (cow), ಲಾಯ್(lion), ಫಿಶ್, ಶೀಪ್, ಚಿಚೆನ್ (chicken), ಬಾ (bird), ಬಟ್ (butterfly), ಮನ್ (monkey), ಡಕ್....

ಅವಳಿಗೆ ಬುಕ್ಸ್ ಅಂದ್ರೆ ತುಂಬಾ ಇಷ್ಟ. ಅವಳ ಇತರ ಎಲ್ಲಾ ಆಟದ ಸಾಮಾನುಗಳು ಈಗ ಮೂಲೆ ಸೇರಿವೆ. ಅವಳ ಬಳಿ ಇರೋ ಬುಕ್ಸ್ ಅಲ್ಲದೇ ಆಗಾಗ್ಗೆ ಲೈಬ್ರರಿಯಿಂದಲೂ ಬಹಳಷ್ಟು ಬುಕ್ಸ್ ತರ್ತೀನಿ ಪುಟ್ಟಿಗೆ. ಇಲ್ಲಿಯವರೆಗೆ ಅವಳು ಹೆಚ್ಚು ಇಷ್ಟಪಟ್ಟ ಬುಕ್ಸ್ ಇವು:
Moo, moo who are you? : a fold-out surprise book
Peek-a-baby [Board book]
Peek-a-boo! : a lift-the flap book
Baby loves peekaboo! : touch-and-feel and lift-the-flap
What does baby do? : a first lift-the-flap book [Board book]
Bob's busy saw [Board Book]
What does baby say? [Board book]
Baby animals [Board book]
My big animal book
Pooh's 123
Fruity Cutie Colors
Baby Bop's Counting Book
Barney's Color ಸರ್ಪ್ರೈಸ್

ಪ್ರತಿಯೊಂದು ಬುಕ್ಕನ್ನು ದಿನಕ್ಕೊಂದು ಐದಾರು ಸರ್ತಿ ತಿರುವು ಹಾಕುತ್ತಾ, ಅದರಲ್ಲಿರೋ ಪ್ರತಿಯೊಂದನ್ನು ಗುರುತಿಸಿ ಹೇಳೋದು ಅವಳಿಗೆ ಬಹಳ ಖುಶಿ. ಅವಳು ಹೀಗೆ ಹೇಳೋವಾಗ ಅಮ್ಮಗುಡ್ ಗರ್ಲ್ಹೇಳೋದು ಮರೆತ್ರೆ, ತನಗೆ ತಾನೆ "ದುದ್ದು, ಗುಗ್ಗು" ಹೇಳ್ಕೋತಾಳೆ :-) ಅವಳು ಹೀಗೆ ಬುಕ್ ಓದೊವಾಗ ನನ್ಗೆ ಅಥವಾ ಅವರಪ್ಪನಿಗೆ ಅದು, ಅದು ಅಂತ ಬೆರಳು ಮಾಡಿ ಕೇಳ್ತಾಳೆ. ಅದೇ ನಾವು ಕೇಳಿದ್ರೆ - ಸರಿ ಹೇಳಿ ನಂತರ ಏನೆ ಕೇಳಿದ್ರೂ "ಡಾಡಿಡುಡಾ, ಪಂಪಂ" ಅಂತೆಲ್ಲಾ ಏನೋ ಹೇಳ್ತಾಳೆ. ಅವಳಿಗೆ ಓದಲು ಬಿಡಬೇಕು, ನಾವು ಪ್ರಶ್ನೆ ಮಾಡಬಾರದು!!
ಅದೆ ನಾವು ಸರಿಯುತ್ತರ ಕೊಡದೇ "ಡಾಡಿಡುಡಾ, ಪಂಪಂ" ಅಂತೆಲ್ಲಾ ಅಂದ್ರೆ ಸಿಟ್ಟು ಮಾಡಿಕೊಂಡು "ಬಾಬಿ’(ಬ್ಯಾಡ್ ಬಾಯ್) ಅಂತಾಳೆ:(


ನಮ್ಮ್ ಪುಟ್ಟಿಗೆ ಟಿವಿ ಅಂದ್ರೆ ಅಷ್ಟಕ್ಕೆ ಅಷ್ಟೆ. ಆದ್ರೆ ಕನ್ನಡ ಅಥವಾ ಇಂಗ್ಲೀಶ್ ರೈಮ್ಸ್ ಹಾಕಿದ್ರೆ ನೋಡ್ತಾಳೆ ಅದೂ ಎಲ್ಲಾ ಹಾಡಿಗೂ ತನ್ನದೇ ಶೈಲಿಯಲ್ಲಿ ಆಕ್ಶನ್ ಮಾಡುತ್ತಾ! ಅದ್ ಬಿಟ್ಟ್ರೆ ಅನಿಮಲ್ ಪ್ಲಾನೆಟ್ ಅದ್ರಲ್ಲೂ ಆನೆ, ಪ್ರಾಣಿಗಳಿರೋ "ರಾಮಲಕ್ಷ್ಮಣ", "ಹಾಥಿ ಮೆರೆ ಸಾಥಿ" ಚಿತ್ರಗಳನ್ನ ಸ್ವಲ್ಪ ನೋಡ್ತಾಳೆ.
ರೈಮ್ಸ್ ಅವ್ಳಿಗೆ ಈಗ ನಾವು ಕಾರಿನಲ್ಲಿ ಹೋಗೋವಾಗ ಕೂಡ ಅಮ್ಮ ಹಾಡಿ ಹೇಳ್ಬೇಕು. ತನಗೆ ಯಾವ ರೈಮ್ ಬೇಕು ಅನ್ನೋದನ್ನ ಮಾತಿನಲ್ಲಿ ಅಥವಾ ಆಕ್ಷನ್ ಮಾಡಿ ತೋರಿಸ್ತಾಳೆ. ಇದ್ರಲ್ಲಿ ಅವ್ಳಿಗೆ "ಆನೆ ಬಂತು ಆನೆ", "ಅವಳ ಹೆಸ್ರು ಪದ್ದು", "ಘಂಟೆಯ ನೆಂಟನೆ", "ಚಂದಮಾಮ ಓಡಿ ಬಾ", "Baa baa black sheep", "Hickory Dickory dock", "Row row row your boat", "Twinkle Twinkle little star", "Humpty Dumpty sat on a wall", "Two little dicky birds sat on a wall" ಇವು ತುಂಬಾ ಇಷ್ಟ.

ಅಮ್ಮನಿಗೆ ಅಡಿಗೆ ಮನೆಯಲ್ಲಿ ಸಹಾಯ ಮಾಡೋದು ಅಂದ್ರೆ ಎಲ್ಲೆಲ್ಲಿದ ಖುಶಿ!! ಈರುಳ್ಳಿ ಸಿಪ್ಪೆ ಬಿಡಿಸೋದೇನು, ತಪಾತಿ(ಚಪಾತಿ) ಹಿಟ್ಟನ್ನ ನಾದೋದು, ಲಟ್ಟಿಸೊದು... ಮನೆಯಲ್ಲಿ ಸಣ್ಣದೊಂದು ಪೇಪರ್ ಚೂರು, ಕಸ ಬಿದ್ದಿದ್ರೂ "ಟಾಆ"(ಟ್ರಾಶ್/ಕಸ) ಅಂತ ಕಸದಬುಟ್ಟಿಗೆ ಹಾಕೋದು!! ಹೀಗೆ ದಿನವಿಡೀ ಏನೋ ಮಾಡುತ್ತಾ ಅಮ್ಮನಿಗೆ ಕೆಲ್ಸ ಕೊಡ್ತಾಳೆ:)



Tuesday, July 21, 2009

ಮನೆ ಮನೆ ಮುದ್ದು ಮನೆ



ಮನೆ ಮನೆ ಮುದ್ದು ಮನೆ

ಮನೆ ಮನೆ ನನ್ನ ಮನೆ

ತಾಯಿ ಮುತ್ತು ಕೊಟ್ಟ ಮನೆ

ತಂದೆ ಪೆಟ್ಟು ಕೊಟ್ಟ ಮನೆ

ಮನೆಗೆ ಬಂದ ನೆಂಟರೆಲ್ಲ ಕೂಗಿ ಕರೆದು ಕೊಬರಿ ಬೆಲ್ಲಗಳನು ಕೊಟ್ಟು

ಸವಿಯ ಸೊಲ್ಲ ನಾದುತಿದ್ದ ನಮ್ಮ ಮನೆ




ಮನೆ ಮನೆ ಮುದ್ದು ಮನೆ




ನಾನು ನುಡಿಯ ಕಲಿತ ಮನೆ

ನಾನು ನಡಿಗೆ ಅರಿತ ಮನೆ

ಹಕ್ಕಿ ಬಳಗ ಸುತ್ತ ಕೂಡಿ

ಬಯ್ಳು ಬೆಳಗು ಹಾಡಿ ಹಾಡಿ

ಮಲೆಯನಾದ ಸದ್ದು ಮಾಡಿ ನಲಿಸುತಿದ್ದ ನಮ್ಮ ಮನೆ




ಮನೆ ಮನೆ ಮುದ್ದು ಮನೆ




ಮೊದಲ ಮಿಂಚು ಹೊಳೆದ ಮನೆ

ಮೊದಲ ಗುಡುಗು ಕೇಳ್ದ ಮನೆ

ಮೊದಲ ಮಳೆಯು ಕರೆದು ಕರೆದು

ಹೆಂಚ ಮೇಲೆ ಸದ್ದು ಹರಿದು ಮಾದಿಯಿಂದ ನೀರ ಸೂರಿದು ಬೆರಗ ನಿತ್ತ ನಮ್ಮ ಮನೆ




ಮನೆ ಮನೆ ಮುದ್ದು ಮನೆ




ಹೆತ್ತ ತಾಯಿ ಸತ್ತ ಮನೆ

ಮತ್ತೆ ತಂದೆ ಹೋದ ಮನೆ

ಗಿರಿಜನರಲಿ ಬಿಟ್ಟ ಮನೆ ಕಿಟ್ಟಿ ಬೆಂದು ಸಂದ ಮನೆ

ಬಾಲ್ಯ ಬಾಡಿ ಬಿದ್ದ ಮನೆ ಆದರೆನಗೆ ... ನನ್ನ ಮನೆ



ಮನೆ ಮನೆ ಮುದ್ದು ಮನೆ



ಕಬ್ಬಗಳನು ಕಂಡ ಮನೆ

ಹಬ್ಬ ದೂಟ ಉಂಡ ಮನೆ

ಅಜ್ಜಿ ಅಜ್ಜರೆಲ್ಲರಿದ್ದು ಗೆಳತಿ ಗೆಳೆಯರೆಲ್ಲರಿದ್ದು

ಬಾಳಿ ಬದುಕಿ ನರಳಿ ಬಿದ್ದು ಮಾಯವಾದ ನಮ್ಮ ಮನೆ



ಮನೆ ಮನೆ ಮುದ್ದು ಮನೆ



ತಾಯಿ ಮಿನ್ದ ಕೆರೆಯ ಮನೆ

ಬಟ್ಟೆ ಹೊಗೆದ ತೊರೆಯ ಮನೆ

ತಾಯಿ ಅಡಿಯ ದೂಳಿಯಿಂದ ತಂದೆ ಯುತ್ತ ಮಣ್ಣಿನಿಂದ

ಗಿರಿಜೆ ಬಿದ್ದ ಮಟ್ಟಿಯಿಂದ ಮಂಗಳದ ನಮ್ಮ ಮನೆ



ಮನೆ ಮನೆ ಮುದ್ದು ಮನೆ



ನಾನು ಬದುಕೊಳುಳಿವ ಮನೆ

ನಾನು ಬಾಳಿ ಅಳಿವ ಮನೆ

ನನ್ನದಲ್ಲ ಇಳಿಯೊಳಿನ್ದು ಹೆಮ್ಮೆಯಿಂದ ನನ್ನದೆಂದು

ಬೆಂದು ಬಳಲಿದಾಗ ಬಂದು ನೀರು ಕುಡಿವ ನನ್ನ ಮನೆ



ಮನೆ ಮನೆ ಮುದ್ದು ಮನೆ



--ಕುವೆಂಪು





Monday, July 20, 2009

ಅಪ್ಪಿ ಯೂ ಯೂ ಚಚ್ಚಿ!!!

ಶಕ್ತಿ ಅಕ್ಕನ ಪಾರ್ಟೀಲಿ ನಮ್ಮ್ ಪುಟ್ಟಿ ತುಂಬಾ ಮಜ ಮಾಡಿದ್ಲು. ಶಕ್ತಿಯ ಅಮ್ಮ ಬಹಳ ಕ್ರಿಯೇಟೀವ್, ಶಕ್ತಿ ಬರ್ತ್ಡೇಗೆ ಮಿಕ್ಕಿ ಥೀಮ್ ಆರೇಂಜ್ ಮಾಡಿದ್ರು. ಪಾರ್ಟಿ ಹಾಲಿನ ಪೂರ್ತಿ ಮಿಕ್ಕಿ ಮಿನ್ನಿಗಳೆ ಇದ್ದ್ವು. ಮಕ್ಕಳಿಗೆ ಅಂತ ತಿನ್ನೊಕೆ ಬಹಳಷ್ಟು ಕುರುಕುಲು ತಿಂಡಿಗಳಿತ್ತು. ಪುಟ್ಟಿಗೆ ಮನೆಯಲ್ಲಿ ಇದ್ಯಾವುದೂ ಸಿಕ್ಕೊಲ್ಲ, ಹಾಗಾಗಿ ಇಲ್ಲಿ ಎಲ್ಲಾವೂ ಹೊಸತಾಗಿತ್ತು. ಅಮ್ಮ ಬೇಡ ಅನ್ನೊ ಹಾಗಿಲ್ಲ ಅಂತ ತಿಳಿದದ್ದೇ ತಡ ಚಿಪ್ಸ್ ತಿಂದಿದ್ದೇ ತಿಂದಿದ್ದು:))

ಪಾರ್ಟಿಗೆ ಮುಂಚೆ !!
ಇದೇನು ಹೊಸ ತಿಂಡಿ?
ಮಿಕ್ಕಿ, ಮಿನ್ನಿ
ಎಲ್ಲಾ ಕಡೆ ಮಿಕ್ಕಿ
ಶಕ್ತಿ ಅಕ್ಕನ ಜೊತೆ
ನನಗೆ ಬೇಕು ಚಾಕ್ಲೇಟ್ ಡಬ್ಬ..ಹ್ಹ ಹ್ಹ
ಹೇಗಿದೆ ನನ್ನ್ ಮಾಸ್ಕ್?ನನ್ಗೆ ಬಲೂನ್ಸ್ ತುಂಬಾ ಇಷ್ಟ:)
ಇತರೆ ಫ್ರೆಂಡ್ಸ್ ಜೊತೆ

Friday, July 17, 2009

ಡಿಸೈನರ್ ಕವಿತೆಗಳು !!!

ಡಿಸೈನರ್ ಬಟ್ಟೆ , ಡಿಸೈನರ್ ವಾಚ್, ಡಿಸೈನರ್ ಟೋಪಿ ಎಲ್ಲಾ ಗೊತ್ತು ಇದ್ಯಾವುದ್ರಿ ರೂಪ ಡಿಸೈನರ್ ಕವಿತೆ ಅಂತೀರಾ? ಬನ್ನಿ ನೋಡೋಣ ಡಿಸೈನ್ ಡಿಸೈನ್ ಕವಿತೆಗಳನ್ನ....




ಮೊನ್ನೆ ಲೈಬ್ರರಿಗೆ ಹೋಗಿದ್ದಾಗ ಅಲ್ಲಿ ಮಕ್ಕಳಿಗೆ ರೀಡಿಂಗ್ ಟೈಂ ನಡಿತಾಯಿತ್ತು. ನೋಟಿಸ್ ಬೋರ್ಡಿನಲ್ಲಿ ಅಂದಿನ ವಿಷಯ "ಶೇಪ್ಡ್ ಪೋಯಟ್ರಿ" ಅಂತಿತ್ತು. ಕುತೂಹಲ ಹೆಚ್ಚಾಗಿ ಅತ್ತ ಹೋದೆ. ಅಲ್ಲಿ ನಾನು ಕಂಡದ್ದು ಇವು:



shape-poem-01.gif


ಈ ರೀತಿಯ ಪದ್ಯವನ್ನು ಕಾಂಕ್ರೀಟ್ ಪೊಯೆಟ್ರಿ ಅಂತಲೂ ಕರಿತಾರೆ. ಕವಿತೆಯಲ್ಲಿ ರುವ ವಸ್ತುವಿನ ರೂಪದಲ್ಲೇ ಪದ್ಯವನ್ನು ಬರೆಯುವುದೇ ಇದರ ವಿಶೇಷ. ಮರ, ಕಾಮನಬಿಲ್ಲು, ದೋಣಿ, ಬಗ್ಗೆ ಬರೆದ ಪದ್ಯಗಳೆಲ್ಲಾ ಅದೇ ಆಕಾರದಲ್ಲಿ ಇರುತ್ತವೆ. ಉದಾಹರಣೆಗೆ ಕೆಳಗಿನ ಚಿತ್ರಕವಿತೆಗಳನ್ನು ನೋಡಿ..

This
Christmas
end a quarrel.
Seek out a forgotten
friend. Dismiss suspicion,
and replace it with trust.
Write a love letter. Share some
treasure. Give a soft answer. Keep
a promise. Find the time. Forgo a grudge.
Forgive an enemy. Listen. Apologize if you
were wrong. Try to understand. Examine your
demands on others. Think first of someone else. Be
Be kind; be gentle. Appreciate. Laugh a little. Laugh a
little more. Express your gratitude. Gladden the heart of a
child. Welcome a stranger. Take pleasure in the beauty and the
wonder of Earth.
Speak your love.
Speak it again.
Speak it yet
Once again.

boat.jpg


ಅಲ್ಲಿ ಬಂದಿದ್ದ ಮಕ್ಕಳಿಗೆ ಇಂತಹ ಶೇಪ್ ಪೋಯಮ್ಸ್ ಬರೆಯಲು ಅವರು ಉತ್ತೇಜಿಸುತ್ತಿದ್ದರು. ಒಂದು ಚಿತ್ರವನ್ನು ಕೊಟ್ಟು ಅದರ ಕುರಿತು ಪದ್ತ ಬಎರಯಬೇಕು, ಅದೂ ಆ ಚಿತ್ರ್ದ ಒಳಗೆ ಪದಗಳು ಮೂಡುವಂತೆ. ಚೆನ್ನಾಗಿತ್ತು ಆ ಆಟ. ಮಕ್ಕಳು ಆಟವಾಡುತ್ತಲೇ ಪದ್ಯಗಳನ್ನು ಬರೆಯುತ್ತಿದ್ದರು. ಮನೆಯಲ್ಲಿ ಪುಟ್ಟಿಗೆ ಊಟದ ಸಮಯವಾಗಿತ್ತಾದ್ದರಿಂದ ಅಲ್ಲಿಂದ ಮನಸಿಲ್ಲದೇ ಬೇಗ ಹೊರಟೆ.

ನನಗೆ ಲೈಬ್ರರಿಯಲ್ಲಿ ಒಂದು ಪುಸ್ತಕವೂ ಸಿಕ್ಕಿತು. A Poke in the I: Paul Janeczko ಅವರು ಬರೆದಿರುವ ಈ ಪುಸ್ತದಲ್ಲಿ ಬಹಳಷ್ಟು ಇಂತಹ ಪದ್ಯಗಳಿವೆ. ಎಸ್ಕಿಮೊ ಪೈ ಮತ್ತು ಪೊಪ್ಸಿಕಲ್ ಇವೆರಡು ಐಸ್ ಕ್ರೀಮ್ ನ ಆಕಾರದಲ್ಲಿ ಮೂದಿವೆ. ಬಾತುಕೋಳಿ ಮತ್ತದರ ನೆರಳು ನನಗೆ ತುಂಬಾ ಇಷ್ಟವಾಗಿದ್ದು.

ಹೈಸ್ಕೂಲಿನಲ್ಲಿದ್ದಾಗ ಸಂಸ್ಕೃತದ ಮೇಷ್ಟ್ರು ಸ್ಕೂಲ್ ಎಕ್ಸಿಬಿಶನ್ ಸಮಯದಲ್ಲಿ ನಮ್ಮಿಂದ ಮಾಡಿಸುತ್ತಿದ್ದ ಚಾರ್ಟ್ ಗಳಲ್ಲಿ ಇಂತಹ ಹಲವು ಡಿಸೈನಿನ ಕವಿತೆಗಳು ಇದ್ದವು. ಆದರೆ ಸದ್ಯಕ್ಕೆ ಅವ್ಯಾವು ನೆನಪಿಗೆ ಬರ್ತಾಯಿಲ್ಲ:(

ಗೂಗಲ್ ದೇವರ ಹತ್ರ ಸಿಕ್ಕದ್ದು ಏನಿದೆ ಹೇಳಿ, ಹೆಚ್ಚಿನ ವಿವರ ಹುಡುಕುತ್ತಾ ಕುಳಿತೆ.

ಅಲ್ಲದೇ ಅಲೆಮಾರಿ ಎಂಬುವವರು ಇಂತಹದೇ ಒಂದು ಪ್ರಯತ್ನವನ್ನು ಮಾಡಿ ಜೊತೆಗೆ ಇಂತಹ ಕವಿತೆಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನೂ ಕೊಟ್ಟಿದ್ದಾರೆ. ಓದಿ ಆನಂದಿಸಿರಿ.

ನಾಯಿ ಏನ್ ಅನ್ನುತ್ತೆ?

ಪುಟ್ಟಿ ಈಗ ಪ್ರಾಣಿಗಳು ಬಲು ಇಷ್ಟ ದಿನಾ ಸಂಜೆ ಆಚೆ ವಾಕ್ ಹೋಗ್ತಾಳೆ. ನೆರೆಹೊರೆಯವರ ನಾಯಿ/ ಬೆಕ್ಕುಗಳನ್ನ ನೋಡಿ ನಕ್ಕು ಖುಶಿಪಡ್ತಾಳೆ. ಅವುಗಳ ಧ್ವನಿ ಗುರುತಿಸ್ತಾಳೆ. ಕನ್ನಡದ ಬೌಬೌ ನಾಯಿ ಪದ್ಯ ಸ್ವಲ್ಪ ಸ್ವಲ್ಪ ಹೇಳ್ತಾಳೆ:)



ಪುಟ್ಟಿ ಹೇಳಿದ ಪೂರ್ತಿ ಪದ್ಯ ಇಲ್ಲಿದೆ ನೋಡಿ:

Wednesday, July 15, 2009

ಅಂಗ ರಕ್ಷ ಹಾಡು!!

ಮೂರು ತಿಂಗಳ ಪುಟ್ಟಿ!


ಅಂಗ ರಕ್ಷ ಆ ರಕ್ಷ ಈ ರಕ್ಷ
ಹಣಿಗೆ ಅನಂತನ ರಕ್ಷ
ಕಣ್ಣಿಗೆ ಕಾಮನ ರಕ್ಷ
ಮೂಗಿಗೆ ಮುಕುಂದನ ರಕ್ಷ
ಬಾಯಿಗೆ ಬಲಭದ್ರನ ರಕ್ಷ
ಹಲ್ಲಿಗೆ ಅಚ್ಯುತನ ರಕ್ಷ
ನಾಲಿಗೆಗೆ ನಾರಾಯಣ ರಕ್ಷ
ಕಿವಿಗೆ ಕಿರೀಟಿಯ ರಕ್ಷ
ಮಂಡಿಗೆ ಮಾಧವನ ರಕ್ಷ
ಬೆನ್ನಿಗೆ ಭೀಮನ ರಕ್ಷ
ಭುಜಕ್ಕೆ ಇಂದ್ರನ ರಕ್ಷ
ಮುಂಗೈಯಿಗೆ ಮುರಾರಿ ರಕ್ಷ
ಹೊಟ್ಟೆಗೆ ಹನುಮನ ರಕ್ಷ
ಅಂಗಾಲಿಗೆ ಶ್ರೀರಂಗನ ರಕ್ಷ
ಚಿಕ್ಕ ನನ್ನ ಕಂದಮ್ಮಗೆ ಸರ್ವಾಂಗ ರಕ್ಷ
ಸರ್ವ ಜಗದ್ರಕ್ಷ ಮಹಾಲಕ್ಷ್ಮಿ ನಿನ್ನ ರಕ್ಷ
ರಾಘವೇಂದ್ರ ರಾಯರೇ ನಿಮ್ಮ ರಕ್ಷ

ಹಾಡನ್ನ ನನ್ನ ಗೆಳತಿಯ ತಾಯಿ ಅವರ ಮೊಮ್ಮಗನಿಗೆ ಎಣ್ಣೆ ಹಚ್ಚುತ್ತಾ ಹಾಡುತ್ತಿದ್ದಾಗ ಮೊದಲ ಬಾರಿ ಕೇಳಿಸಿಕೊಂಡಿದ್ದು. ಪುಟ್ಟಿ ಬ್ಲಾಗಿಗಾಗಿ ಹಾಡು ಬರೆದು ಕೊಟ್ಟ ಅವರಿಗೆ ನನ್ನ ವಂದನೆಗಳು. ಅಂತರ್ಜಾಲದಲ್ಲಿ ಈ ಹಾಡನ್ನು ಹುಡುಕಿದಾಗ ಸಿಕ್ಕಿದ್ದು ಅದ್ವೈತನ ಮನೆಯಲ್ಲಿ.


Friday, July 10, 2009

ಮಗು - ನಗು



ಮಗು - ನಗು

*********

ಮಗುವೆ ನೀನು ನಗುತಲಿರಲು

ಗೆಜ್ಜೆ ಘಲಿರು ಉಲಿಯುತಿರಲು

ಗಿಲಕಿ ಗಿಲಿರು ಗೀತವಿರಲು

ಬದುಕು ಬೆಳಕು ಬೆಳದಿಂಗಳು.

ಕಣ್ಣಿನಂದ ನೋಟ ಹೊಳಪು

ಕೆನ್ನೆ ನೋಡಿ ಎಷ್ಟು ನುಣುಪು!

ಕಾಲು ಬಡಿವ ಆಟ ಹುರುಪು

ಮುಗ್ಧ ಮನವು ಹಾಲು ಬಿಳುಪು.

ಅಂಬೆಗಾಲ ನಂದಲಾಲ

ಬೆಣ್ಣೆ ಮೆದ್ದ ತುಂಟಬಾಲ

ಕಣ್ಣಲೇಕೆ ನೀರ ಜಾಲ?

ಕೊಡಲೊಲ್ಲಳೆ ತಾಯಿ ಹಾಲ?

ಬೆಣ್ಣೆಗೆನ್ನೆ ಹಾಲುಗಲ್ಲ

ಜೇನುಹೊಳೆಯು ತುಟಿಯಲೆಲ್ಲ

ಎಂಥ ಸೊಗಸು ಕಾಣಿರೆಲ್ಲ

ಸುಳ್ಳು ಸುಳ್ಳೇ ಅಳುವ ಮಳ್ಳ.

ಬೊಚ್ಚುನಗು ಬಾಯಿತುಂಬ

ಹಚ್ಚಿದಂತೆ ದೀಪಸ್ತಂಭ.

ಚುಕ್ಕಿ ಚೆಲ್ಲಿ ಬಾನತುಂಬ

ಚಂದ್ರಮ ನಿನ್ನ ಪ್ರತಿಬಿಂಬ.

ಪೂರ್ಣಿಮ

Wednesday, July 08, 2009

ಅಮ್ಮ, ನಾನು ಪಿಶ್!!!


ಈಗ ನಮ್ಮೂರಲ್ಲಿ ಬೇಸಿಗೆ ತುಂಬಾ ಜೋರಾಗಿದೆ. ದಿನ ಸೂರ್ಯ ಮುಳುಗೋದು ರಾತ್ರಿ ಒಂಬತ್ತಕ್ಕೆ. ದಿನವಿಡೀ ಸುಡು ಸುಡು ಅಂತಾಯಿರುತ್ತೆ, ಹೊರಗೆ ಹೋಕೆ ಆಗೊಲ್ಲ. ಪೂಲ್ ನಲ್ಲಿ ಆಟ ಮಿಸ್ಸ್ ಹಾಗಾಗಿ ಪುಟ್ಟಿಗೆ ಸ್ವಲ್ಪ ಬೋರ್. ಅದಕ್ಕೆ ದಿನಾ ಅವಳನ್ನ ಮನೇಲಿ ’ಸ್ನಾನ ತೊಟ್ಟಿ/ ಟಬ್’ ನಲ್ಲಿ ಸ್ವಲ್ಪ ಹೊತ್ತು ಆಟವಾಡಲು ಬಿಡೋದು!
ಇವತ್ತು ಹಾಗೆ ಆಡುತ್ತಿದ್ದವಳು "ಅಮ್ಮ, ಪಿಶ್" ಅಂದ್ಲು. ನಾನು "ಎಲ್ಲಿ ಪುಟ್ಟಿ?" ಅಂದೆ. ಅದಕ್ಕವಳು "ಗೀಡು ಗೀಡು (ಅಂದ್ರೆ ನೀರು)" ಅಂತದ್ಲು. ನೀರು ಸರಿ, ಫಿಶ್ ಎಲ್ಲಮ್ಮ ಅಂದಿದಕ್ಕೆ "ನಾನು" ಅನ್ನೋದೇ !!!
ಮೊನ್ನೆ ಅವಳ ಬುಕ್ ನಲ್ಲಿರೋ ಫಿಶ್ ತೊರಿಸುತ್ತಾ ಅದು ನೀರಲ್ಲಿ ಇರುತ್ತೆ ಇತ್ಯಾದಿ ಎಲ್ಲಾ ಹೇಳಿದ್ದೆ. ಈಗ ನೀರಿನಲ್ಲಿರೋ ತಾನೂ ಕೂಡ ಫಿಶ್ ಅನ್ನೋದು ಅವಳ ಅನಿಸಿಕೆ.

Tuesday, July 07, 2009

ಅಮೋಘ್ ಬರ್ತ್ ಡೇ ಪಾರ್ಟೀ!!!

ಅಮೋಘ್ ನ ಮೊದಲ ವರ್ಷದ ಬರ್ತ್ ಡೇ ಪಾರ್ಟಿಗೆ ಪುಟ್ಟಿ ಎಂದಿನಂತೆ ಸಂಭ್ರಮದಿಂದ ತಯ್ಯಾರಾಗಿ ಹೊರಟ್ಲು. ಹೊರಗೆ ಹೋಗೋದು, ಮಕ್ಕಳ ಜೊತೆ ಕುಣಿಯೋದು ಪುಟ್ಟಿಗೆ ಬಲು ಇಷ್ಟ.
ಹೇಗಿದೆ ನನ್ನೀ ಹೊಸ ಡ್ರೆಸ್ಸು?ಅನಿಶಾ ಅಕ್ಕನ ಜೊತೆ ಮಾತು..ಚಿಪ್ಸ್ ತಿನ್ನೋ ಅಮೋಘ್ ...ಎಲ್ಲಾ ಮಕ್ಕಳು ಕೇಕ್ ಮುಂದೆ..ನಾನು, ಶಕ್ತಿ ಅಕ್ಕ ಇಬ್ರೂ ವೈಟ್ ವೈಟ್!!ಅಮೋಘ್ ಬೇಗ ಕಟ್ ಮಾಡು ! ಅಮ್ಮ, ಬೇಗ ಕೊಡು...ಚೂಪರ್ ಕೇಕ್!!