Monday, August 31, 2009

ಓಡಿ ಬಾ ಓಡೋಡಿ ಬಾ - ಚಕ್ರತೀರ್ಥ

ಈ ಇಬ್ಬರು ಬಾಲನಟರು ಯಾರು ಗೊತ್ತಾ?

ಚಕ್ರತೀರ್ಥ (1967) -

ಸಾಹಿತ್ಯ: ಆರ್.ಎನ್.ಜಯಗೋಪಾಲ್
ಸಂಗೀತ: ಟಿ.ಜಿ.ಲಿಂಗಪ್ಪ
ಗಾಯನ: ಬಿ.ಕೆ.ಸುಮಿತ್ರ ಮತ್ತು ಬೆಂಗಳೂರು ಲತಾ.

ಝೂಟ್.......
ಹಾಹಾಹಾಹಹ ಹಾಹಾ...ಲಲಲಲಲಲಾಲಾ

ಓಡಿ ಬಾ ಓಡೋಡಿ ಬಾ ಚಿನ್ನ ನನ್ನ ಬೆನ್ನ ಹಿಂದೆ ಓಡಿ ಬಾ
ಓಡುವೇ ನಾ ಓಡುವೇ ಜಿಂಕೆ ಹಾಗೆ ಓಡೀ ನಿನ್ನಾ ಕೂಡುವೇ
ಓಡಿ ಬಾ..ಝೂಟ್...

ಮಣ್ಣಿನಿಂದ ಕಪ್ಪೆಗೂಡು ಕಟ್ಟಬಲ್ಲೆಯಾ
ಅಲ್ಲಿ ನೀನು ಕಪ್ಪೆಯೊಂದ ಸಾಕಬಲ್ಲೆಯಾ
ಕಣ್ಣು ಮುಚ್ಚಿ ನನ್ನಾ ಹಿಡಿಯಬಲ್ಲೆಯಾ
ನಾ ಹಾರೆದಂತೆ ದೂರ ನೀನು ಹಾರಬಲ್ಲೆಯಾ...ಝೂಟ್...

ನನ್ನಾ ರೀತಿ ರೆಂಬೆ ಹತ್ತಿ ನೀನು ನೋಡುವಾ
ನನ್ನಾ ಸಾಟಿ ಕುಂಟೊಬಿಲ್ಲೇ ಆಡು ನೋಡುವಾ
ಸುತ್ತಿ ಸುತ್ತಿ ಲಾಗಾ ಹಾಕು ಅಮ್ಮಯ್ಯಾ
ಈ ಕೋತಿಯಾಟ ದೊಂಬರಾಟ ಬೇಡ ದಮ್ಮಯ್ಯಾ...ಝೂಟ್...

ಕಾಗದದ ದೋಣೀಯೊಂದ ನಾವು ಮಾಡುವಾ
ನೀರಿನಲ್ಲೀ ದೋಣಿಯನ್ನು ತೇಲಿ ಬಿಡುವಾ
ಅಂಚಿನಲ್ಲಿ ನಿಂತೂ ನಾವು ನೋಡುವಾ
ಹಾಯಾಗೀ ಒಂದಾಗೀ ಇನ್ನೆಂದೂ ಬಾಳುವಾ...ಝೂಟ್...

ಓಡಿಬಾ ....ನಾ ಓಡುವೇ...ಓಡಿಬಾ...ಝೂಟ್....

Sunday, August 30, 2009

ಗಣಪನ ಹಬ್ಬ!!!

ನಾವು ಗಣೇಶ ಹಬ್ಬಕೆಂದು ಮಣ್ಣಿನ ವಿಗ್ರಹ ಮಾಡುವಾಗ ಪುಟ್ಟಿ ತಾನೂ ಜೊತೆಯಲ್ಲಿ ಕುಳಿತು ಮಣ್ಣಿನಲ್ಲಿ ’ತಪಾತಿ(ಚಪಾತಿ)’ ಇತ್ಯಾದಿಗಳನ್ನು ಮಾಡಿದ್ಲು. ಕೊನೆಗೆ ಅಮ್ಮ ಮಾಡಿದ ವಿಗ್ರಹ ನೋಡಿ ಮೊದಲು ’ಆನಿ ಆನಿ’ ಅಂದಳಾದರೂ ನಂತರ "ಓಂ" ಅಂತ ಕೈ ಮುಗಿದಳು, ಸದ್ಯ ಅದು ಅವಳ ಕಣ್ಣಿಗೂ ಗಣಪನಂತೆ ಕಾಣಿಸಿತಲ್ಲ ಅಂದುಕೊಂಡ್ವಿ! ನಾವು ಇದಕ್ಕೆ ಮೊದಲು ಮಾಡಿದ ವಿಗ್ರಹಗಳ ಫೋಟೋ ಇಲ್ಲಿವೆ.

ಹಬ್ಬದ ದಿನವಂತೂ ದಿನವಿಡೀ ಸಂಭ್ರಮದಿಂದ ಓಡಾಡುತ್ತಿದ್ದು, ಮದ್ಯಾಹ್ನ ನಿದ್ದೆಯನ್ನೂ ಸರಿಯಾಗಿ ಮಾಡದೆ ಅಮ್ಮನಿಗೆ ಹೆಲ್ಪ್ ಮಾಡುತ್ತಿದ್ದು ಹಬ್ಬ ಮಾಡಿದ್ದು ಹೀಗೆ...

ಮಣ್ಣಿನ ಗಣಪನ
ವಿಗ್ರಹ ಮಾಡಿ
ಸುಂದರ ಪೀಠದಿ ಕುಳ್ಳಿರಿಸಿ
ಗಣಪನ ಕೊರಳಿಗೆ
ಕಡಲೆ ಹಾರವ ಹಾಕಿ
ಸುಂದರ ರಂಗೋಲಿಯ ಬಿಡಿಸಿ

ಕರಿದ ಕಡುಬು
ಮೋದಕ ಹುಸಲಿ
ಎಲ್ಲವ ಗಣಪನ ಮುಂದಿಡಲು

ಹಿರಿಯರು ಕಿರಿಯರು
ಮಕ್ಕಳು ಮುದುಕರು
ಗೆಳೆಯರೆಲ್ಲ ಮನೆಗೆ ಬಂದಿರಲು
ಆರತಿ ಬೆಳಗಿ
ಅಕ್ಷತೆ ಹಾಕಿ
ಪೂಜೆಯ ಮಾಡಿ ಕೈಮುಗಿದು
ಅಪ್ಪನೊಡನೆ ಕೂಡಿ
ಜಯ್ ಜಯ್ ಹಾಡಿ
ಗಣಪನ ವಿಸರ್ಜಿಸಲು ಹಬ್ಬವು ಮುಗಿದಿತ್ತು!

-ರೂpaश्री

ಗಣಪನ ಮುಂದೆ ಶಕ್ತಿ ಮತ್ತು ಶ್ರೀನಾ ಜೊತೆ..
ವಿಘ್ನೇಷ್ವರ ನಿನಗೆ ಇಪ್ಪತ್ತೊಂದು ನಮಸ್ಕಾರಗಳು!
ಅಕ್ಕ-ತಮ್ಮ ಅನಿಶಾ ಅಮೋಘ್ ಮತ್ತು ಶಕ್ತಿ!
ಗೀತಿಕಾ ಅಕ್ಕ!ರಿಂಗಾ ರಿಂಗಾ ರೋಸಸ್ಸ್

Thursday, August 27, 2009

ಅಂದ ಚೆಂದದ ಹೂವೆ

ನಾಲ್ಕು ತಿಂಗಳ ಕಂದ!

ಅಂದ ಚೆಂದದ ಹೂವೆ
ಮಮತೆಯ ಮಗುವೆ
ತಾಯ್ಮಡಿಲ ತುಂಬಿರುವ
ಪ್ರೇಮದ ಫಲವೆ
ಈ ಮನೆಯ ದೀಪವಾಗಿರುವೆ

ಅಂದ ಚೆಂದದ ಚೆಲುವೆ
ಓಲವಿನ ಹೂವೆ
ಹೃದಯ ಮಂದಿರದಲ್ಲಿ
ನೀ ಬೆಳಗುತ್ತಿರುವೆ
ಮನಕೆ ಆನಂದ ತಂದಿರುವೆ

ನಿನ್ನ ಕಣ್ಣ್ ಬೆಳಕಿಂದ
ಮನವು ಬೆಳಗಿಹುದು
ನಿನ್ನ ಕಿರು ನಗುವಿಂದ
ಹರುಷ ಮೂಡಿಹುದು
ನಿನ್ನುದಯದಿಂದ
ಮನೆ ಸ್ವರ್ಗ ತಾನಾಗಿಹುದು
ತಾಯಾದ ಭಾಗ್ಯವು
ನನ್ನದಾಗಿಹುದು

ಅಂದ ಚೆಂದದ ಹೂವೆ
ಮಮತೆಯ ಮಗುವೆ
ತಾಯ್ಮಡಿಲ ತುಂಬಿರುವ
ಪ್ರೇಮದ ಫಲವೆ
ಈ ಮನೆಯ ದೀಪವಾಗಿರುವೆ

ನಿನ್ನ ಕಣ್ಣ್ ಬೆಳಕಿನಲಿ
ನಾ ಮೀಯುತಿರುವೆ
ನಿನ್ನ ಕಿರುನಗುವಿನಲಿ
ನಾ ನಲಿಯುತಿರುವೆ
ನೀ ಬಂದು ಈ ಮನೆಯ
ಸ್ವರ್ಗಗವನೇ ಮಾಡಿರುವೆ
ನನ್ನ ಬಾಳಿನ ಭಾಗ್ಯ
ತಾರೆಯಾಗಿರುವೆ

ಅಂದ ಚೆಂದದ ಚೆಲುವೆ
ಓಲವಿನ ಹೂವೆ
ಹೃದಯ ಮಂದಿರದಲ್ಲಿ
ನೀ ಬೆಳಗುತ್ತಿರುವೆ
ಮನಕೆ ಆನಂದ ತಂದಿರುವೆ

Friday, August 21, 2009

ಗಣಪನಿಂದ ಆಗದಿರಲಿ ಪರಿಸರಕ್ಕೆ ಲೋಪ!!

ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು!!

ಗಣೇಶ ಹಬ್ಬ ಬಂತೆಂದ್ರೆ ಈಮೈಲ್, ಆರ್ಕುಟ್, ಬ್ಲಾಗ್, ಫೇಸ್ಬುಕ್, ಟ್ವಿಟ್ಟರ್, ಎಲ್ಲೆಲ್ಲೂ ಹಬ್ಬದ ಶುಭಾಶಯಗಳ ಸುರಿಮಳೆ.:)

ಹಬ್ಬ ಮುಗಿದಮೇಲೆ ಮುಂಬೈಯಲ್ಲಿ ಅರ್ಧಂಬರ್ಧ ಮುಳುಗಿದ/ ಮುರಿದ ಮೂರ್ತಿಗಳ ಫೋಟೋ ಮತ್ತು ವಿಗ್ರಹಗಳಲ್ಲಿ ಉಪಯೋಗಿಸುವ ಬಣ್ಣಗಳಲ್ಲಿರುವ ಲೆಡ್ ಮತ್ತಿತರೆ ರಾಸಾಯನಿಕಗಳಿಂದ ಆಗುವ ಹಾನಿಗಳ ಕುರಿತು ಹಲವು forward ಮೈಲ್ ಗಳು !!

ಇದು ಪ್ರತಿವರ್ಷ ನಡಿಯುತ್ತಲೇ ಇದೆ. ಆದರೆ ಪರಿಸರಪ್ರೇಮಿ ಗಣಪನ ವಿಗ್ರಹಗಳು ಈಗ ಹೆಚ್ಚು ಜನಪ್ರಿಯವಾಗಿದೆ. ಯಾವುದೇ ಬಣ್ಣವಿಲ್ಲದೇ ಅಥವಾ ತರಕಾರಿ/ಹೂವುಗಳಿಂದ ತಯಾರಿಸಲಾದ ಬಣ್ಣಗಳಿಂದ ಅಲಂಕರಿಸಲ್ಪಟ್ಟ ಮೂರ್ತಿಗಳು ಈಗ ಎಲ್ಲೆಲ್ಲೂ ಸಿಗುತ್ತವೆ. ತಲಹಸಿ ಅಂತಹ ಸಣ್ಣ ಊರಿನಲ್ಲೂ ಈಗ ಇವು ಲಭ್ಯವಿದೆ. ಇವುಗಳ ಬಗ್ಗೆ ಇನ್ನಷ್ಟು ತಿಳಿಯೋಣ...

ಪರಿಸರ ಗಣಪತಿ :
ಈ ತಾಣದಲ್ಲಿ ಗಣೇಶ ವಿಗ್ರಹವನ್ನು ಸ್ವಂತ ನಾವೆ ಹೇಗೆ ತಯಾರಿಸಬಹುದು ಎಂಬುದರ ಬಗ್ಗೆ ವಿವರವಾಗಿ ವಿಡಿಯೋ ಮೂಲಕ ತಿಳಿಸಲಾಗಿದೆ. ಅಲ್ಲದೇ ಅವು ಮಾರಾಟಕ್ಕೆ ಎಲ್ಲಿ ಲಭ್ಯವಿದೆ ಮತ್ತಿತರ ಮಾಹಿತಿಯಿದೆ.

Hindu Blog :
ಈ ಬ್ಲಾಗಿನಲ್ಲಿ ಮಣ್ಣಿನಿಂದ ಅಥವಾ ಕಾಗದದಿಂದ ಗಣೇಶನನ್ನು ಮಾಡುವುದು ಹೇಗೆ ಅಂತ ಸುಲಭವಾಗಿ ತಿಳಿಸಲಾಗಿದೆ.
ಕಾಗದ ಗಣೇಶನನ್ನು ಮಾಡುವುದು ಹೀಗೆ.

ಮುಂಬೈನಲ್ಲಿರುವ ರಮೇಶ್ ಅವರು ತೆಂಗಿನಕಾಯಿ ಚಿಪ್ಪಿನಲ್ಲಿ ಗಣಪನನ್ನು ಮಾಡುತ್ತಾರೆ. ಅವರ ಗಣಪನ ವಿಷೇಶ ಏನಂದ್ರೆ ಹೊಟ್ಟೆಯ ಜಾಗದಲ್ಲಿ ಒಂದು ಇಡಿಯಾದ ತೆಂಗಿನಕಾಯಿಯನ್ನೇ ಉಪಯೊಗಿಸಿದ್ದಾರೆ. ಈ ಭಾಗಕ್ಕೆ ಪ್ರತಿವರ್ಷ ಹೊಸ ತೆಂಗಿನಕಾಯಿ ಇಟ್ಟರೆ ಆಯಿತು. ಪೂಜೆಯ ನಂತರ ಸಾಂಕೇತಿಕವಾಗಿ ಗಣಪನನ್ನು ನೀರಿನಲ್ಲಿ ಮುಳುಗಿಸಿದ ಮೇಲೆ ಈ ಕಾಯಿಯನ್ನು ಒಡೆದು ’ಪ್ರಸಾದ’ದ ರೂಪದದಲ್ಲಿ ಬಳಸಬಹುದು ಅಥವಾ ನೀರಿನಲ್ಲಿ ಮೊಳಕೆ ಬರುವವರೆಗೆ ಹಾಗೆಯೇ ಬಿಟ್ಟು ನಂತರ ಅದನ್ನು ಬೆರೆಡೆ ನೆಡಬಹುದು!! ಆವರ ಕೆಲವು ಗಣಪತಿಗಳನ್ನು ಇಲ್ಲಿ ಕಾಣಬಹುದು.

ಹಲವು ಸಂಸ್ಥೆಗಳು ಈಗ ಇವುಗಳ ಬಗ್ಗೆ ವಿಡಿಯೋ ತಯಾರಿಸಿ ಜನರಗೆ ಮುಟ್ಟುವಂತೆ ಮಾಡಿದ್ದಾರೆ

ಇಲ್ಲಿ ಮಣ್ಣಿನ ಗಣಪ ಸಿಗುವುದಿಲ್ಲ ಅನ್ನೋ ಕಾರಣಕ್ಕೆ ನಾನು ಮತ್ತು ನನ್ನ ಅನೆಕ ಗೆಳತಿಯರು ಮಣ್ಣಿನಿಂದ, ಅರಿಶಿನದಿಂದ, ಗೋಧಿಹಿಟ್ಟಿನಿಂದ ಗಣೇಶನನ್ನು ಮಾಡಿ ಪೂಜಿಸಿದ್ದೆವು. ಅವುಗಳ ಫೋಟೋಗಳು ಇಲ್ಲಿ ಮತ್ತು ಇಲ್ಲಿವೆ.

ಸಿಡ್ನಿಯಲ್ಲಿರುವ ತೆಲುಗು ಅಸೊಸಿಯೇಷನ್ ಅವರು ಮಕ್ಕಳಿಗಾಗಿ ’ಗಣಪ ಮಾಡಿ ನೋಡು’ ಶಿಬಿರ ಏರ್ಪಡಿಸಿದ್ದರು. ಅದರ ವಿಡಿಯೋ ಇಲ್ಲಿ ಮತ್ತು ಇಲ್ಲಿ.

ಅಲ್ಲದೇ ಅಮೇರಿಕದ ನ್ಯೂಯಾರ್ಕಿನಲ್ಲಿರುವ ಜೆನ್ನಿಫರ್ ಅವರು ತಮ್ಮ ಪತಿ ಕುಮಾರ್ ಅವರನ್ನು ಮದುವೆಯಾದಮೇಲೆ ತಮ್ಮ ಮನೆಯಲ್ಲಿ ಪ್ರತಿವರ್ಷವೂ ತಾವೇ ಸ್ವತಃ ಗೋಧಿಹಿಟ್ಟಿನಿಂದ ಗಣಪನನ್ನು ಮಾಡಿ ಪೂಜಿಸುತ್ತಿದ್ದಾರೆ ನೋಡಿ.
ನೀವು ಕೂಡ ಈ ವರ್ಷ ಪರಿಸರ ಗಣಪನನ್ನು ಪೂಜಿಸಿರಿ ಮತ್ತು ಈ ವಿಚಾರವನ್ನು ನಿಮ್ಮ ಗೆಳೆಯರಲ್ಲೂ ಹಂಚಿಕೊಳ್ಳಿ.
ಈಗ ಮತ್ತೆ ಬಂದಿರುವ ಗಣಪ!
ಅವನಿಂದ ಆಗದಿರಲಿ ಪರಿಸರಕ್ಕೆ ಲೋಪ!!

ಅಂದ ಹಾಗೆ ಹೇಳೋದು ಮರೆತಿದ್ದೆ, ಕಳೆದ ವರ್ಷ ಗಣೇಶ ಹಬ್ಬದ ಒಂದು ದಿನಕ್ಕೆ ಮುಂಚೆ ನನ್ನೀ ಬ್ಲಾಗ್ ಶುರು ಮಾಡಿದ್ದೆ!

Tuesday, August 18, 2009

ಎಲ್ಲರ ಮನೆಯ ಬಾಲ ಮುಕುಂದರು...

ಬೆಣ್ಣೆ ಕದ್ದ ನಮ್ಮ ಪುಟ್ಟಿ ಕೃಷ್ಣ.. ಪಿಳ್ಳಂಗೋವಿಯ ಚೆಲುವ ಕೃಷ್ಣ

ಪುಟ್ಟಿಯ ಸೋದರ ಮಾವನ ಮಗಳು ’ಖುಶಿ’ ...ಜೋ ಜೋ ಶ್ರೀಕೃಷ್ಣ ಪರಮಾನಂದ

ತೂಗುವೆ ರಂಗನ ತೂಗುವೆ ಕೃಷ್ಣನ...”ಶಕ್ತಿ


ನನ್ನಕಂದಬ್ಲಾಗಿನ... ಕಂದಾ ನನ್ನ ಕಂದ ಕೃಷ್ಣಾ ಮುಕುಂದ...
ಎರಡು ತಿಂಗಳ ಮಗುಅಮೇಯಈತನೀಗ ವಾಸುದೇವನು...
'ದಿಶಾ’ಗುಮ್ಮನ ಕರೆಯದಿರೆ ಅಮ್ಮ

ಆರೂವರೆ ತಿಂಗಳ ಮುದ್ದುಶಿಶಿರ್ ಅಮ್ಮ ಹಾಡಿದ್ದುಉಂಡಾಡಬಹುದು ಓಡಿ ಬಾ ಎನ್ನಪ್ಪ..
ಕೃಷ್ಣ ನೀ ಬೇಗನೆ ಬಾರೋ.. ಸಮೀಕ್ಷಾ
ಎಂಟು ತಿಂಗಳಆದಿತ್ಯಕಾನ್ಹಾ

ಬೋಲೋ ಶ್ರೀ ಕೃಷ್ಣ ಪರಮಾತ್ಮ್ ಕೀ ಜೈ

ಪೋಗಾದಿರೆಲೋ ರಂಗ ಎನ್ನುತ್ತಾರೆ ಪದ್ಮ ತಮ್ಮ ಮನೆಯ ಕೃಷ್ಣ ಆಕಾಂಕ್-ಶ್ ಗೆ
ಮುರಳಿ ಲೋಲ ಹೇ ಗೋಪಾಲ.. ಜಗವೆಲ್ಲಾ ನಿನ್ನದೇ ಲೀಲ
ಅನಿಕಾ
ಒಂದೂವರೆ ವರ್ಷದ ವಿಹಾನ್
ಸ್ಟೇಜ್ ತನ್ನ ಇತರೆ ಬಾಲಮುಕುಂದರೊಡನೆ ವಿಹಾನ್
ಕೃಷ್ಣ ಎಂದರೆ ಭಯವಿಲ್ಲ ಶ್ರೀಕೃಷ್ಣ ಎನದೇ ಸುಖವಿಲ್ಲ
ಹತ್ತೊಂಬತ್ತು ತಿಂಗಳ ’ರಿಷಬ್’

ಕೃಷ್ಣ ಎನಬಾರದೆ ಶ್ರೀ ಕೃಷ್ಣ ಎನಬಾರದೆ...

ನಾರಿಯ ಸೀರೆ ಕದ್ದ ರಾಧೆಯ ಮನವಾ ಗೆದ್ದ
ರಾಧಾಮೋಹನನೇ ಬಾರೋ ಮಾಧವನೇ

ಕಳ್ಳರ ಕಳ್ಳ ಕೃಷ್ಣನೂ ಬ೦ದ ಮೋಹದ ಮೋಡಿ ಹಾಕಿದ
ಯಮುನಾ ತೀರ ವಿಹಾರೀ ಗೋಪೀ ಮಾನಸಹಾರೀ


ಹೋದ ವರ್ಷ ನಂದಗೋಕುಲದ ಅಮಾರ್ತ್ಯನ ಕೃಷ್ಣಾವತಾರ ಹೀಗಿತ್ತು.

ಪ್ರೇಮ್ ಅವರು ತಮ್ಮ ಮಕ್ಕಳಿಗೆ ಹೀಗೆ ಡ್ರೆಸ್ಸ್ ಮಾಡಿದ್ರು.

ಕೃಷ್ಣನ ಹಾಡುಗಳ ಸಂಗ್ರಹ ಶ್ರೀ ಅವರ ಬ್ಲಾಗಿನಲ್ಲಿ.


ವಿ.ಸೂ : ಪುಟಾಣಿಗಳ ಫೋಟೋಗಳನ್ನು ಹಂಚಿಕೊಂಡ ಅಮ್ಮಂದಿರಿಗೆಲ್ಲಾ ಥ್ಯಾಂಕ್ಸ್ !!

Wednesday, August 12, 2009

ಚೂರಿ ಚಿಕ್ಕಣ್ಣ!


ಸಣ್ ಪುಟ್ ಕಳ್ಳಾ
ಬಂದ ನೋಡಿ ಮಳ್ಳಾ
ಹೇಳೋದಿಲ್ಲ ಸುಳ್ಳಾ
ಇವನಲ್ಲ ಕುಳ್ಳಾ!

ಕೈಯಲ್ಲಿ ಚೂರಿ
ಕುಯ್ಯಲು ಪೂರಿ
ನಗು ಮುಖ ತೋರಿ
ಇಲ್ಲಿಂದ ಪರಾರಿ!!

ಕದಿವನು ಮನವ
ಲುಂಗಿಯ ಸುತ್ತಿದವ
ಊ ಹಾ ಹ್ಹಾ ಎನ್ನುವ
ಚೂರಿ ಚಿಕ್ಕಣ್ಣನಿವ!!!
-ರೂpaश्री

Tuesday, August 11, 2009

ಕವನಕ್ಕೆ ಶೇಪ್!!

ಕೆಲವು ದಿನಗಳ ಹಿಂದೆ ಡಿಸೈನರ್ ಕವಿತೆಗಳ ಬಗ್ಗೆ ಬರೆದಿದ್ದೆ. ಅದನ್ನೋದಿದ ಸ್ನೇಹಿತರು ಅದೇ ರೀತಿ ಪ್ರಯತ್ನಿಸಲು ಉತ್ತೇಜಿಸಿದರು. ನನ್ಗೆ ಕವನ ಬರಿಯೋಕೇ ಬರೋಲ್ಲ ಅಂಥದ್ರಲ್ಲಿ ಶೇಪ್ಡ್ ಕವಿತೆ ಇನ್ನೆಲ್ಲಿ ಅಂತ ನನ್ನ್ ಪಾಡಿಗೆ ಸುಮ್ನಿರೋದು ಬಿಟ್ಟು, ಅವರಿವರ ಕವನಕ್ಕೆ ಶೇಪ್ ಕೊಡೋಣ ಅಂತ ಕೂತೆ.

ಮೊದಲು ಸುಬ್ರಮಣ್ಯ ಭಟ್ಟರ ಮೀನು ನನ್ನ ಕೈಸೇರಿ ಹೀಗಾಯ್ತು...(ಕವನದ ಮೇಲೆ ಕ್ಲಿಕ್ ಮಾಡಿದ್ರೆ ದೊಡ್ಡದಾಗಿ ತೆರೆದುಕೊಳ್ಳುತ್ತೆ, ಓದಲು ಸುಲಭ)ಇದು ಸ್ವಲ್ಪ ಸುಮಾರಾಗಿ ಮೂಡಿದ್ದರಿಂದ ’ಮರ’ ಬರೆಯೋಣವೆನಿಸಿ ನಾನೇ ಪದಗಳ ಪೋಣಿಸಲು ಕೂತು, ಸೋತು ಕೊನೆಗೆ ಪು.ತಿ.ನ ಅವರ ಕವನವನ್ನು ಅರುಣ್ ಪ್ರಕಟಿಸಿದ್ದನ್ನು ಓದಿ ಅದಕ್ಕೆ ಈ ಅವತಾರ ಮಾಡಿಟ್ಟೆ.ಮುಂದೆ ಯಾರ ಕವನಕ್ಕೆ ಗ್ರಹಚಾರ ಕಾದಿದೆಯೋ ಕಾದು ನೋಡಿ !

ಮೀನುಗಾರಿಕೆಯಲ್ಲಿ ಡಾಕ್ಟರೇಟ್ ಪಡೆದ ಡಾ. ಆಜಾದ್ ಅವರು ರಚಿಸಿದ ಮೀನು ಅವರ "ಭಾವ-ಮಂಥನ" ದಲ್ಲಿ.

ಪುಟ್ಟ್ ಸಿಂಗ್!!

ಪಚಾಸ್ ಪಚಾಸ್ ಕೋಸ್ ದೂರ್ ಗಾವ್ ಮೇ ಜಬ್ ಬಚ್ಚಾ ರೋತಾ ಹೈ ತೋ ಮಾ ಕೆಹ್ತಿ ಹೈ "ಬೇಟಾ ಸೋಜಾ, ವರ್ನ ಪುಟ್ಟ್ ಸಿಂಗ್ ಆ ಜಾಯೇಗಿ"

ಹ್ಹಾಹ್ಹಾ