Wednesday, April 30, 2008

ಅನ್ನಪ್ರಾಶನ

ನಮ್ಮ ಪುಟ್ಟಿಗೆ ಈಗ ನಾಲ್ಕು ತಿಂಗಳು ತುಂಬಿತು. ಈ ಸರ್ತಿಯ ಹುಟ್ಟುಹಬ್ಬದ ವಿಶೇಷ ಅಂದ್ರೆ ಅವಳಿಗೆ ಮೊದಲ ಬಾರಿಗೆ "Rice Cereal" ಅನ್ನು ಹಾಲಿನಲ್ಲಿ ಬೆರೆಸಿ ಅವರಜ್ಜಿ ಅವಳಿಗಾಗಿ ತಂದಿದ್ದ ಬೆಳ್ಳಿ ಒಳಲೆಯಲ್ಲಿ ಕುಡಿಸಿದೆವು. ತಾಯಿಯ ಹಾಲನ್ನು ಬಿಟ್ಟು ಗಟ್ಟಿ ಆಹಾರವನ್ನು ಮೊದಲ ಬಾರಿಗೆ ಉಣಿಸುವ ಈ ವಿಧಿಗೆ "ಅನ್ನಪ್ರಾಶಾನ" ಅಂತಾರೆ.
ಅನ್ನಪೂರ್ಣೆ ಸದಾಪೂರ್ಣೆ ಶಂಕರ ಪ್ರಾನವಲ್ಲಭೆಜ್ನಾನ ವೈರಾಗ್ಯ ಸಿದ್ಯರ್ಥಂ, ಭಿಕ್ಷಾಂದೇಹೀಚ ಪಾರ್ವತಿ
ಮಾತಾಚ ಪಾರ್ವತೀ ದೇವಿ ಪಿತ ದೇವೊ ಮಹೇಶ್ವರಃಭಾಂದವಾ ಶಿವಭಕ್ತಾಶ್ಚ ಸ್ವದೇಶೋ ಭುವನತ್ರಯಂ

Thursday, April 10, 2008

ಯುಗಾದಿಯ ದಿನ ನಮ್ಮ್ ಪುಟ್ಟಮ್ಮ!!

ಯುಗಾದಿ ಹಬ್ಬದ ದಿನ ಪುಟ್ಟಿ, ಅವರಜ್ಜಿ ಅವಳಿಗಾಗಿ ತಂದಿದ್ದ ಹಸಿರು ರೇಷ್ಮೆ ಲಂಗ ತೊಟ್ಟು ಹೊಸವರ್ಷವನ್ನು ಸ್ವಾಗತಿಸಿದಳು. ಅವಳಿಗೆಂದು ತವಿಶ್ರೀ ಅವರು ಆಶೀರ್ವದಿಸಿ ಅಕ್ಕರೆಯಿಂದ ಬರೆದ ಹಾಡು ಇದು. ಧನ್ಯವಾದಗಳು ಸಾರ್:)

ಪುಟ್ಟಮ್ಮ

ಬಾರೆ ಬಾರೆ ನನ್ನ ಪುಟ್ಟಮ್ಮ
ನಾಲ್ಕು ಹಲ್ಲು ತೋರು ನೀ ನನ್ನಮ್ಮ
ಮುದ್ದಿನ ರಾಣಿ ಗಿಡ್ಡು ಪುಟಾಣಿ
ಕೊಡುವೆನು ಬಾರೆ ಗುಂಡು ಬಟಾಣಿ


ಅಗಲದ ಹಣೆಗೆ ದುಂಡನೆ ಕುಂಕುಮ
ಗುಂಗುರು ಕೂದಲ ತೀಡುವೆ ಬಾರಮ್ಮ
ಕಿವಿಯಲಿ ಝುಮಕಿ ಹಾಕುವೆನು
ಕಣ್ಣಿಗೆ ಕಾಡಿಗೆ ಹಚ್ಚುವೆನು


ಪುಟಾಣಿ ಕಾಲ್ಗಳಲಿ ಘಲಘಲ ಗೆಜ್ಜೆ
ಮನೆಯೊಳಗೆಲ್ಲ ನಿನ್ನದೆ ಹೆಜ್ಜೆ
ಪುಟಾಣಿ ಕೈಗಳಿಗೆ ಬೆಳ್ಳಿಯ ಕಡಗ
ತೊಡಿಸುವೆ ಬಣ್ಣದ ಉದ್ದನೆ ಲಂಗ

ಉಣಿಸುವೆ ಉಪ್ಪು ತುಪ್ಪದ ಅನ್ನ
ಎಂದಿಗೂ ನೀ ತಣಿಸು ನನ್ನ ಮನವನ್ನ
ನಿನ್ನೊಡನೆ ಆಡಲು ಕರೆಯುವೆ ಚಂದಮಾಮ
ತಟ್ಟಿ ಮಲಗಿಸಲಿಹಳು ನಿನ್ನಮ್ಮ

ಸಿಹಿ ಹಾಲನ್ನೀವೆ ಬಟ್ಟಲಿನಲಿ
ನಾನೂ ಸೇರುವೆ ನಿನ್ನಳಿನಲಿ
ಆಲಂಗಿಸು ನಿನ್ನ ಪುಟ್ಟ ಕೈಗಳಲಿ
ಆಡಿ ಪಾಡಿ ಸೋತು ಮಲಗು ನೀ ಬಳಲಿ  
-ತ. ವಿ. ಶ್ರೀ