Monday, September 27, 2010

ಕಣ್ಣಾ ಮುಚ್ಚೆ ಕಾಡೆ ಗೂಡೆ...

ಕಣ್ಣಾ ಮುಚ್ಚೆ ಕಾಡೆ ಗೂಡೆ
ಉದ್ದಿನ ಮೂಟೆ ಉರುಳಿ ಹೋಯ್ತು
ನಿಮ್ಮಯ ಹಕ್ಕಿ ಬಚ್ಚಿಟ್ಟ್ ಕೊಳ್ಳಿ
ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೇ!ಈ ಹಾಡಿನ ಬಗ್ಗೆ ಹಿಂದೆ ನನ್ನ ಬ್ಲಾಗಿನಲ್ಲಿ ಬರೆದಿದ್ದೆ...

Saturday, September 18, 2010

ABC ಆಟ!!A for Apple, B for Ball ಕಲಿಯಲು ಪುಟ್ಟಿ ಜೊತೆ ಮನೆಯಲ್ಲಿ ನಾವು ಆಡೋ ಕೆಲವು ಆಟಗಳಿವು......

ಆಟ ಒಂದು:
ಅಕ್ಷರಗಳ ಕಾರ್ಡ್ಸ್ ಪುಟ್ಟಿಗೆ ಕೊಡೋದು... ಪುಟ್ಟಿಯ ಆಟದ ವಸ್ತುಗಳು ಜೊತೆಗೆ ಮನೆಯಲ್ಲಿರುವ ಯಾವುದೇ ಪುಟ್ಟ ದೊಡ್ಡ ಸಾಮಾನುಗಳನ್ನು ಒಂದೆಡೆ ಕಲೆ ಹಾಕೋದು. ಆಮೇಲೆ ಒಂದೊಂದಾಗಿ ಅವುಗಳ ಹೆಸರನ್ನು ಹೇಳೋದು. ಪುಟ್ಟಿ ball ಅಂದ್ರೆ ನಾವು ಕರೆಕ್ಟ್ ಪುಟ್ಟಿ bbbbbball ಅನ್ನೋದು ಜೊತೆಗೆ ಅದು ಶುರುವಾಗುವ ಅಕ್ಷರವನ್ನ ಗುರುತಿಸೊಕೆ ಪ್ರಯತ್ನಿಸೋದು. ಪುಟ್ಟಿಗೆ ಈಗಾಗಲೇ ಎಲ್ಲಾ ಅಕ್ಷರಗಳ ಸೌಂಡ್ ಗೊತ್ತಿರುವುದರಿಂದ ಇದು ಸ್ವಲ್ಪ ಸುಲಭ. ಮೊದಲ ಕೆಲವು ಸರ್ತಿ ಅವಳಿಗೆ ಇನ್ನೂ ಆಟ ಆರ್ಥವಾಗದೇ ಇದ್ದಾಗ ನಾವೇ ಅವಳಿಗೆ "ball , bbb ಸೌಂಡ್ ಮಾಡೋದು ಏನು"? ಅಂತ ಹಿಂಟ್ ಕೊಟ್ಟು ಸಹಾಯ ಮಾಡ್ತಾಯಿದ್ವಿ. ಅವಳು "b" ಅಂತ ಗುರುತಿಸದ ಮೇಲೆ ball ಅನ್ನು ’b' ಕಾರ್ಡ್ ಮೇಲಿಡುವುದು. ಹೀಗೆ ಎಲ್ಲಾ ವಸ್ತುಗಳನ್ನೂ ಮಾಡಿ ಮುಗಿಸೋದು.

ಆಟ ಎರಡು:
Alphabet matching treasure hunt
ಒಂದು ಅಕ್ಷರದ ಕಾರ್ಡ್ ಹಿಡಿದು ಆ ಅಕ್ಷರದಿಂದ ಶುರುವಾಗುವ ಎಲ್ಲಾ ವಸ್ತುಗಳನ್ನು ಗುರುತಿಸುತ್ತಾ ಮನೆಯಲ್ಲೆಲ್ಲಾ ಓಡಾಡೋದು. ಹೀಗೆ ಮಾಡುತ್ತಾ ಮೊದಲಿನ ಆಟದಲ್ಲಿ ಉಪಯೋಗಿಸಲಾಗದ ದೊಡ್ಡ ವಸ್ತುಗಳನ್ನೂ ಇಲ್ಲಿ ಕಲಿಯಬಹುದು. (ಉದಾ- Television, Bed, Table....)

ಆಟ ಮೂರು:
ನಾನು ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಅಥವಾ ಇನ್ನೇನೋ ಮಾಡುವಾಗ ಪುಟ್ಟಿಗೆ ಈ ಆಟ ಆಡಬೇಕು ಅನಿಸಿದರೆ ಆಗ ಆಡೋದು ಹೀಗೆ. "ಪುಟ್ಟಿ ಈಗ ನಿನ್ನ ಆಟ ಸಾಮಾನಿಂದ B ನಿಂದ ಶುರುವಾಗುವ ಆಟಿಕೆ ತಗೊಂಡುಬಾ" ಅಂದ್ರೆ ಅವಳು ಹೋಗಿ ’Ball' ಅಥ್ವಾ ’Bunny' ತರಬೇಕು.ಆಟ ನಾಲ್ಕು:
ಪುಟ್ಟಿಗೆ "I Spy" ಬುಕ್ಸ್ ತುಂಬಾ ಇಷ್ಟ , ಅದನ್ನು ನಾವು abc ಕಲಿಯಲು ಹೀಗೆ ಮಾಡ್ತೀವಿ. ಮೊದಲ ಆಟದಂತೆ ಹಲವು ಸಾಮಾನು ಒಂದೆಡೆ ಹಾಕಿಕೊಂಡು "I spy something that begins with the "b" sound" ಅನ್ನೋದು. ಪುಟ್ಟಿ ಆಗ ball ತೋರಿಸೋದು:)

೧. ನಾನಿಲ್ಲಿ ಅಂಗಡಿಯಲ್ಲಿ ಸ್ಯಾಂಪಲ್ ಗೆಂದು ಇಟ್ಟಿರುವ paint chips ಕಾರ್ಡ್ ಮೇಲೆ ABC - capital and lower case ಬರೆದಿರುವೆ. ಇದರ ಬದಲು ನೀವು ಪ್ರಿಂಟ್ ಕೂಡ ಮಾಡ ಬಹುದು.

೨. ಕೆಲವೊಮ್ಮೆ, ಪುಟ್ಟಿಯ ರೂಮಿನ alphabet matನ ಅಕ್ಷರಗಳನ್ನು ಕೂಡ ಬಳಸುತ್ತೇವೆ.
೩. Magnetic alphabets ಕೂಡ ಬಳಸ ಬಹುದು
೪. ಅಂಗಡಿಯಲ್ಲಿ ಸಿಗುವ alphabet flash cards ಕೂಡ ಉಪಯೋಗಿಸಬಹುದು.Friday, September 17, 2010

ಕೈ-ಕಾಲು ಪೈಂಟ್ಇವತ್ತು ಏನ್ ಪೈಂಟ್ ಮಾಡೋಣ ಪುಟ್ಟಿ? ಅಂತ ಕೇಳಿದ್ರೆ "ಕೈ ಮಾಡೋಣ ಅಮ್ಮ" ಅಂದ್ಲು. ಹಾಗಂದ್ರೇನು ಅಂತ ಗೊತ್ತಾಗದೆ ಅದು ಹೆಂಗೆ ಮಾಡೋದು ಅಂದೆ? "ಅಕ್ಕ ಕೈ ಮಾಡಿ ಸ್ಪೈಡರ್ ಮಾಡ್ತಾರಲ್ಲ ಹಾಗೆ" ಅಂದ್ಲು ಅವಳು ನೋಡುವ ಬಾರ್ನಿ ಕಾರ್ಟೂನ್ ನೆನದು. ಆಗ ಅರ್ಥವಾಯ್ತು ಅವಳು ಹೇಳಿದ್ದು ಕೈ ಟ್ರೇಸ್ ಮಾಡೋಣ ಅಂತ. ಸರಿ, ಅವಳ ಎರಡೂ ಕೈಗಳನ್ನ ಪೇಪರ್ ಮೇಲಿಟ್ಟು ಸುತ್ತ ಪೆನಿನಲ್ಲಿ ಬರೆದೆ, ಪೆನ್ ಕೈಗೆ ತಾಗಿದಾಗಲೆಲ್ಲ ಕಚಗುಳಿ ಕೊಟ್ಟಂತಾಗಿ ನಗುತ್ತಿದ್ದಳು. ಬಳೆಗಳನ್ನೂ ಮಾಡುವಂತೆ ಹೇಳಿದ್ಲು, ಬರೆದೆ.
ಮುಂದೇನು? ಅಂತ ಯೋಚಿಸ್ತಾಯಿದ್ರೆ ಪುಟ್ಟಿ “ಅಮ್ಮ ನೇಲ್ಸ್ ಬರ್ದಿಲ್ಲ ನೀನು ಹ್ಹಹ್ಹ ಅಮ್ಮ ಮರ್ತೋಯ್ತು ಹ್ಹಹ್ಹ” ಅಂತ ನಗುತ್ತ ನೆನಪಿಸಿದ್ಲು. ಸರಿ, ಉಗುರು ಬರೆದಿದ್ದು ಆಯ್ತು, ಅದಕ್ಕೆ ಬಣ್ಣ ಹಾಕೋಣವಾ ಅಂದೆ, ಹೂಂ ಆಂಟಿ ಹಾಕ್ತಾರೆ ಹಂಗೆ ಮಾಡೋಣ ಅಂದ್ಲು. ಎಲ್ಲಿ ಯಾವ ಆಂಟಿ ಕೈ ನೋಡಿದ್ಲೋ ಗೊತ್ತಿಲ್ಲ. ಅಂತು ನೋಡಿದ್ದೆಲ್ಲಾ ಆ ಪುಟ್ಟ ತಲೆಯಲ್ಲಿ ನೆನಪಿರುತ್ತೆ ಅಂತ ತಿಳೀತು.

ಆಮೇಲೆ ಕಾಲು ಮಾಡೋಣ ಅಂತ ಅದನ್ನೂ ಮಾಡಿಸಿಕೊಂಡಳು. ಅದಕ್ಕೆ ಉಗುರುಬಣ್ಣ ಹಾಕಿ ಮೆಹಂದಿಯನ್ನೂ ಹಾಕಿದ್ವಿ (ಯಾವಾಗಲೋ ಸೇವ್ ಮಾಡಿಟ್ಟುಕೊಂಡಿದ್ದ ಕೆಲವು ಮೆಹಂದಿ ಡಿಸೈನ್ ಗಳನ್ನ ಮೊನ್ನೆ ಪುಟ್ಟಿಗೆ ತೋರಿಸಿದ್ದೆ, ಅದರ ಪರಿಣಾಮವಿರ ಬಹುದು).
ಅದೇ ಮೆಹಂದಿ ಡಿಸೈನ್ ಕೈಗೂ ಮಾಡೋಣ ಅಂತ ಮತ್ತೊಮ್ಮೆ ಮಾಡಿದ್ವಿ.


ನನ್ನ ಕೈ ಕಾಲುಗಳನ್ನ ಪುಟ್ಟಿ ಟ್ರೇಸ್ ಮಾಡಿದ್ದು ಹೀಗೆ.


Wednesday, September 15, 2010

Hand Ankle..


ಪುಟ್ಟಿ ಸ್ಕೂಲಿಗೆ ಹೋಗೊಕೆ ಶುರು ಮಾಡಿದಾಗಿನಿಂದ ಮನೆಯಲ್ಲೂ ಆಗಾಗ್ಗೆ ಸ್ವಲ್ಪ ಇಂಗ್ಲೀಷ್ ಮಾತಾಡೋಕೆ ಶುರು ಮಾಡಿದ್ದಾಳೆ, ಆಗೆಲ್ಲಾ ನಾವು"ಹಾಗಂದ್ರೇನು?" ಅಥವಾ "ಕನ್ನಡದಲ್ಲಿ ಅದನ್ನ ಹೇಗೆ ಹೇಳೋದು" ಅಂತ ಅವಳನ್ನು ಮತ್ತೆ ನಮ್ಮ್ ಕನ್ನಡ ಮಾತಾಡೋಕೆ ನೆನಪಿಸುತ್ತೀವಿ. ಇತ್ತೀಚೆಗೆ ಅವಳಿಗೆ ಸಣ್ಣದೊಂದು ಏನೆ ತಗುಲಿದರೂ ಬಂದು "ಉಫ್" ಮಾಡಿಸಿಕೊಳ್ಳೊ ಆಟ ಶುರುವಾಗಿದೆ.

ಇವತ್ತು ಆಟವಾಡುತ್ತಿದ್ದವಳು ಅಡುಗೆ ಮನೆಗೆ ನನ್ನ್ ಹತ್ರ ಓಡಿ ಬಂದು "ಅಮ್ಮ, My Hand Ankle hurt ಆಯ್ತು, ಉಫ್ ಮಾಡು" ಅಂದ್ಲು. "Hand Ankle" ಹಾಗಂದ್ರೇನು ಪುಟ್ಟಿ ನಂಗೆ ಅರ್ಥ ಆಗ್ಲಿಲ್ಲಾ ಅಂದೆ. ಅದಕ್ಕವಳು ತನ್ನ ಬಲಗೈ ಮಣಿಗಂಟನ್ನ ತೋರ್ಸಿ ಇಲ್ಲಿ ಉಫ್ ಮಾಡು ಅಂದ್ಲು. ನಾನು " ಪುಟ್ಟಿ ಇದು ’wrist' .. ankle ಅಂದ್ರೆ ಕಾಲಲ್ಲಿ ಇರೋದು ಅಂದೆ. ಅದಕ್ಕವಳು "ಹೂಂ, (ಕಾಲನ್ನು ತೋರಿಸುತ್ತಾ) ಅದು leg ankle, ಇದು (ಕೈ ತೋರಿಸುತ್ತಾ_ hand ankle ಅಂದ್ಲು!!!

Thursday, September 02, 2010

ಪುಟ್ಟಿ ಆರ್ಟ್ ಗೋಡೆ ಮೇಲೆ

ಇತ್ತೀಚೆಗೆ ನಾನು ನೋಡಿದ ಹಲವಾರು kids art ಬ್ಲಾಗ್ ಗಳಲ್ಲಿ "ದ ಆರ್ಟ್ ಫುಲ್ ಪೇರಂಟ್" ಬಹಳ ಇಷ್ಟವಾಯ್ತು. ಅವರು ತಮ್ಮ ಮಗಳ ಬಹುತೇಕ ಎಲ್ಲಾ ಪೇಂಟಿಂಗ್ಸ್ ಗಳನ್ನು ಉಳಿಸಿಕೊಂಡಿದ್ದಾರೆ. ಅಲ್ಲದೆ ಕೆಲವನ್ನು ಫ್ರೇಮ್ ಕೂಡ ಮಾಡಿರಿವುದನ್ನು ಕಂಡು ಆಶ್ಚರ್ಯ ಸಂತಸ ಎರಡೂ ಆಯ್ತು. ಫ್ರೇಮ್ ಹಾಕಿಸಿದ ಪೇಂಟ್ಸ್ ಯಾವುದೋ ಫೇಮ್ಸ್ ಕಲೆಗಾರನ ಮಾಡ್ರನ್ ಆರ್ಟ್ ನಂತಿತ್ತು!!
ಪುಟ್ಟಿ ಮಾಡಿದ ಪೈಂಟಿಂಗ್ಸ್ ನಲ್ಲಿ ಚೆಂದ (ನನ್ನ ಕಣ್ಣಿಗೆ ಚೆಂದ) ಅನಿಸಿದ ಕೆಲವನ್ನು ಮಾತ್ರ ಎತ್ತಿಟ್ಟು ಮಿಕ್ಕ ಹಲವಾರನ್ನು ಬಿಸಾಡಿದ್ದೇನೆ, ಬೇಸರವಾಯ್ತು. Atleast ಅವುಗಳ ಫೋಟೋನಾದ್ರು ಕ್ಲಿಕ್ಕಿಸಿಟ್ಟುಕೊಳ್ಳಬಾರದಿತ್ತೇ ಅನಿಸಿತು. ಜೊತೆಗೆ ಅವುಗಳನ್ನು ಮನೆಯ ಫ್ರಿಡ್ಜ್ ಗೆ ನೇತು ಹಾಕೋದು ಬಿಟ್ಟು ಹೆಚ್ಚೇನೂ ಮಾಡಿಲ್ಲಾ :(
ಜೇನ್ ಅವರೇ ತಮ್ಮ ಬ್ಲಾಗಿನಲ್ಲಿ ಮಕ್ಕಳ ಆರ್ಟ್ ಅನ್ನು ಚೆಂದವಾಗಿ ಪ್ರದರ್ಶಿಸುವ ಹಲವಾರು ರೀತಿಗಳನ್ನು ತೋರಿಸಿದ್ದರು. ಅಲ್ಲದೆ ನಾನು ಅಂತರ್ಜಾಲದಲ್ಲಿ ಹುಡುಕಿದಾಗ ಇನ್ನೂ ಹಲವಾರು ಉಪಾಯಗಳು ಹೊಳೆದವು. ಆದ್ರೆ ಬಾಡಿಗೆಯ ಆಪಾರ್ಟ್-ಮೆಂಟಿನಲ್ಲಿ ಮೊಳೆ ಹೊಡೆಯೋದು ಹೇಮಂತ್ ಗೆ ಇಷ್ಟವಿಲ್ಲ, ಆದ್ರೂ ಅವಳ ರೂಮಿನ ಒಂದು ಗೊಡೆಯನ್ನು ಅವಳ ಪೈಂಟಿಂಗ್ಸ್ ಗಾಗಿ ಮೀಸಲಿಡಲು ನಿರ್ಧರಿಸಿದೆ. ಮಕ್ಕಳ ಕಲೆಯನ್ನು ಪ್ರದ್ರಶಿಸುವುದರಿಂದ ಅವರಲ್ಲಿ ಆತ್ಮವಿಶ್ವಾಸ ಹೆಚ್ಚುವುದು.
ಸರಿ, ಮೊದಲಿಗೆ ಪೈಂಟ್ಸ್ sheet protectorsನಲ್ಲಿ ಹಾಕಿ ಗೋಡೆಗೆ ಟೇಪ್ ಮಾಡಿದೆ...
ಪುಟ್ಟಿಗೆ ಬಹಳ ಖುಶಿ ಆಯಿತಾದ್ರೂ, ನಂಗೆ ಅದು ಅಷ್ಟು ಚೆಂದ ಕಾಣಿಸಲಿಲ್ಲ. ಸರಿ, ಒಂದು ಅಗಲವಾದ ಬಟ್ಟೆಗೆ ಹಲವು sheet protectorಗಳನ್ನು ಹೊಲೆದು ಅದನ್ನು ಗೋಡೆಗೆ ಪಿನ್ ಮಾಡಿದೆ. 
ಇದಕ್ಕೊಂದು ಚೆಂದದ ಬಾರ್ಡರ್(ಪುಟ್ಟಿಯ ಆಯ್ಕೆಯ) ತಂದು ಅಂಟಿಸಿದೆವು. 

ಆಮೇಲೆ ಅದಕ್ಕೊಂದು ಬೋರ್ಡ್ ಹಾಕಬೇಕೆನಿಸಿತು. ಸರಿ, ಮನೆಯಲ್ಲಿದ್ದ ಖಾಲಿ cerealsನ ಡಬ್ಬಕ್ಕೆ ಪುಟ್ಟಿಗೆ ಪೈಂಟ್ ಮಾಡಲು ಹೇಳಿದೆ (ಗೆರೆಗಳನ್ನು ಬರೆಯಲು ಹೇಳಿದೆ). 

ನಂತರ ಅದನ್ನು ಬೇಕಾದ ಅಳೆತೆಗೆ ಕತ್ತರಿಸಿದೆ. ಬಿಳಿಯ ಹಾಳೆಯ ಮೇಲೆ "Putti's Art"ಯಲ್ಲಿನ ಒಂದೊಂದೇ ಅಕ್ಷರಗಳನ್ನು ಪುಟ್ಟಿಗೆ ಬರೆಯಲು ಹೇಳಿ ಅದನ್ನು ನಾನು ನಂತರ ಸ್ವಲ್ಪ ಗ್ಯಾಪ್ ಬಿಟ್ಟು ಕತ್ತರಿಸಿ(ಬಿಳಿ ಹಾಳೆ ಕಾಣುವಂತೆ ಕತ್ತರಿಸಿ) ಬಣ್ಣದ ಬೋರ್ಡಿಗೆ ಅಂತಿಸಿದೆವು:)


ಪುಟ್ಟಿ, ಈಗ ಮನೆಗೆ ಬಂದವರನೆಲ್ಲಾ ತನ್ನ ರೂಮಿಗೆ ಕರೆದು ಇದನ್ನು ತೋರಿಸಿ ತಾನೇ ಮಾಡಿದ್ದು ಅಂತ ಹೇಳಿ ಕೊಳ್ತಾಳೆ. ಇನ್ನ್ಮೇಲೆ ತಿಂಗಳಿಗೊಮ್ಮೆ ಇದರಲ್ಲಿನ ಪೈಂಟ್ಸ್ ಗಳನ್ನ ಬದಲಾಯಿಸುತ್ತೇವೆ!

Wednesday, September 01, 2010

ಪುಟ್ಟಿ ಶಾಲೆಗೆ ಹೊರಟಳು

ಪುಟ್ಟಿಯ ಅಜ್ಜಿ ತಾತ ವಾಪಸ್ ಇಂಡಿಯಾಕ್ಕೆ ಹೋದಮೇಲೆ, ಮತ್ತೆ ಪುಟ್ಟಿಯ ಜೊತೆ ಆಟವಾಡುವವರು ಕಮ್ಮಿಯಾದ್ರು. ವಾರಾಂತ್ಯದಲ್ಲಿ ನಡೆಯುವ ಪಾರ್ಟಿಗಳಲ್ಲಿ ೨-೩ ಘಂಟೆಗಳ ಕಾಲ ಬೇರೆ ಮಕ್ಕಳೊಡನೆ ಬೆರೆಯುವುದು ಅಷ್ಟೆ!
ಹಾಗಾಗಿ ಪುಟ್ಟಿಯನ್ನ ’Preschool'ಗೆ (ಅಂದ್ರೆ ನಮ್ಮಲ್ಲಿ ನರ್ಸರಿ ಅಂತಾರಲ್ಲ ಹಾಗೆ) ಸೇರಿಸಿದ್ವಿ. ಅಲ್ಲಿ ABCD ಇಲ್ಲ...ಬರಿ ವ್ಯಕ್ತಿತ್ವ ವಿಕಸನ, ಮಕ್ಕಳನ್ನ ಅವರ ಅಭಿರುಚಿಗೆ ಅನುಗುಣವಾಗಿ ಬೆಳೆಸುತ್ತಾರೆ. ಹೊರೆಯಲ್ಲದ ಶಾಲೆ (ನಮ್ಮ ಜೇಬಿಗೆ ಹೊರೆಯೇ.. ವಾರಕ್ಕೆ ಎರಡು ಅರ್ಧ ದಿನಗಳು ಪುಟ್ಟಿ ಹೋಗೋದು ಅದಕ್ಕೆ ತಿಂಗಳ ಫೀ $240) ಮಕ್ಕಳು ಆಡಿದ್ದೇ ಆಟ,ಕಲಿತಿದ್ದೇ ಪಾಟ.
ಮೊದಲು ಒಂದೆರೆಡು ಕಡೆ ಹೋಗಿ ನೋಡಿಕೊಂಡು ಬಂದೆವು, ಆಗ ಪುಟ್ಟಿನೂ ಜೊತೆಗಿದ್ದಳು. ಅಲ್ಲಿ ಮಕ್ಕಳನ್ನ ನೋಡಿ ಅಲ್ಲಿಂದ ಬರಲು ಸುತಾರಮ್ ಇಷ್ಟವಿಲ್ಲ ಅವಳಿಗೆ. ಪ್ರತಿ ಸರ್ತಿಯೂ ಅಳುತ್ತಲೇ ಮನೆಗೆ ಬಂದಿದ್ದಳು. ಸರಿ, ಅಂತೂ ಅವಳು ಶಾಲೆಗೆ ಹೋಗೋ ದಿನ ಬಂದೇ ಬಿಡ್ತು. ಅವಳೋ ಭಾರಿ ಸಂಭ್ರಮದಿಂದ ರೆಡಿಯಾಗಿ ಹೊರಟಳು. ಅಲ್ಲಿ ಕೂಡ ಕೊಂಚವೂ ಬೆಸರಿಸದೆ "ಬಾಯ್ ಅಮ್ಮ, ಬಾಯ್ ಅಪ್ಪ" ಅಂತ ಇಬ್ಬರಿಗೂ ಟಾಟಾ ಮಾಡಿದಳು. ಮೊದಲ ಬಾರಿ ಸತತ ನಾಲ್ಕು ಘ೦ಟೆ ಪುಟ್ಟಿಯನ್ನು ಬಿಟ್ಟಿರುತ್ತಿದ್ದೇನಲ್ಲಾ ಎನ್ನುವ ತಳಮಳ. ಇಂಗ್ಳೀಷ್ ಬರದ ನನ್ನ ಪುಟ್ಟಿ ಅಲ್ಲಿ ಕಷ್ಟ ಪಡಬಹುದು ಎಂದೆಣಿಸಿದ್ದೆ. ಶಾಲೆಯ ಹೆಡ್ ಮಿಸ್ ಈ ವಯಸ್ಸಿನ ಮಕ್ಕಳ ಜೊತೆ ಮಾತಾಡಲು ’ಆಟ’ದ ಭಾಷೆ ಸಾಕು ನಾಮ್ಗೆ ಚಿಂತಿಸ ಬೇಡಿ ಅಂತ ಧೈರ್ಯ ಕೊಟ್ಟರು, ಆದ್ರೂ ಯಾಕೋ ಸಮಾಧಾನವಿರಲಿಲ್ಲ. ಅವಳ ಕ್ಲಾಸ್ ಟೀಚರಿಗೆ(ಐದು ಮಕ್ಕಳಿಗೆ ಒಬಾಕೆ ಟೀಚರ್) ಇವಳು pee, water, food...ಇವುಗಳಿಗೆ ಹೇಳೋ ಪದಗಳನ್ನು ಬರೆದು ಕೊಟ್ಟು ಬಂದೆ.
ಮೊದಲ ದಿನ ಆ ನಾಲ್ಕು ಘಂಟೆಗಳು ಕಳೆಯುವುದು ನಂಗೆ ಬಹಳ ಕಷ್ಟವಾಯ್ತು. ಸರಿ, ಘಂಟೆ ಒಂದಾಗುತ್ತಲೇ ಶಾಲೆಗೆ ಹೋದ್ರೆ ಪುಟ್ಟಿ ಎಲ್ಲರೊಡನೆ ಖುಶಿಯಾಗಿ ಆಟವಾಡುತ್ತಿದ್ದಳು. ಮನೆಗೆ ಹೋಗೋಣ ಬಾರೆ ಪುಟ್ಟಿ ಅಂದ್ರೆ ಜೋರಾಗಿ ಅಳೋಕೆ ಶುರು ಮಾಡಿದ್ಲು, ಅವಳ ಮಿಕ್ಕ ಫ್ರೆಂಡ್ಸ್ ಅಲ್ಲಿ ಫುಲ್ಲ್ ಡೇ ಇದ್ದರಲ್ಲ ಅದಕ್ಕೆ .. ಜೊತೆಗೆ ಮುಂಚಿನ ಹಾಗೆ ಸ್ಕೂಲ್ ನೋಡಲು ಹೋದ ಹಾಗೆನೇ ಇವತ್ತು ಅಂದುಕೊಂಡಲೋ ಏನೊ ಅಳುತ್ತಲೇ ಬಂದ್ಲು!!
ಶಾಲೆ ಈಗ ನಮ್ಮ ದಿನನಿತ್ಯದ ಜೀವನವಾಗಿದೆ, ಬೆಳಗ್ಗೆ ಸ್ಕೂಲಿದೆ ಅಂದ್ರೆ ಸಾಕು ಯಾವುದೇ ಗಲಾಟೆಯಿಲ್ಲದೆ ರೆಡಿಯಾಗುತ್ತಾಳೆ. ಮದ್ಯಾಹ್ನ ವಾಪಸ್ ಕರೆತರ್ರ್ಲಲು ಹೋದಾಗ ತಾನು ಮತ್ತೆ ಶಾಲೆಗೆ ಬರುತ್ತೇನೆ ಅನ್ನುವ ನಂಬಿಕೆ ಬಂದಿದೆ ಹಾಗಾಗಿ ನಗುತ್ತಲೇ ಮನೆಗೆ ಬರುತ್ತಾಳೆ:) ಶಾಲೆಯಲ್ಲಿ ಊಟ ಒಂದು ಬಿಟ್ಟು ಇನ್ನೇಲ್ಲಾ ಚೆನ್ನಾಗಿಯೇ ಮಾಡುತ್ತಾಳೆ

ಪುಟ್ಟಿ ಪೈಂಟಿಂಗ್ ಪುರಾಣ


ಪುಟ್ಟಿಗೆ ಪೈಂಟ್ ಮಾಡಿಸಲು ಶುರು ಮಾಡಿದ್ದು ಯಾಕೆ ಅಂದ್ರೆ ಮೊದಲನೆಯದಾಗಿ ಟೈಮ್ ಪಾಸಿಗಾಗಿ ಮತ್ತು ಪುಟ್ಟ ಪುಟ್ಟ ಬೆರಳುಗಳಿಗೆ ವ್ಯಾಯಾಮವಾಗಿ (ಇವೆಲ್ಲಾ pre writing skills ಮುಂದೆ ಬರೆಯಲು ಸುಲಭವಾಗುತ್ತೆ ಅಂತ), ಜೊತೆಗೆ ಡೇ ಕೇರಿಗೆ ಹೋಗುವ ಮಕ್ಕಳಿಗೆ ಅಲ್ಲಿ ಈ ರೀತಿಯಾದ ಹಲವು ಚಟುವಟಿಕೆ ಮಾಡಿಸುತ್ತಾರೆ, ಅದು ಮನೆಯಲ್ಲೇ ನನ್ನ ಜೊತೆಯಿರುವ ಇವಳಿಗೆ miss

ಆಗದೆ ಇರಲಿ ಅಂತ.

ಮೊದಲು ಮಾಡಿದ್ದು ಅಪ್ಪಂದಿರ ದಿನಕ್ಕೆಂದು ಒಂದು ಕಾರ್ಡ್. ಆಗ ಮನೇಲಿದ್ದ ಅರಿಶಿಣ, ಕುಂಕುಮ, ಫುಡ್ ಕಲರನ್ನೇ ಕೈಗಳಿಗೆ ಬಳಿದು ಕಾರ್ಡ್ ಮಾಡಿದ್ವಿ. ಪುಟ್ಟಿ ಅದನ್ನ

ಮತ್ತೆ ಮತ್ತೆ ಕೇಳಿ ಹಲವು ಸಲ ಮಾಡಿದ್ಲು.

ಸರಿಯಾದ ಪೈಂಟ್ ತರೋಣ ಅಂತ ಅಂಗಡಿ

ಗೆ ಹೋದ್ರೆ ಅಲ್ಲಿ ಹಲವು ಬಗೆ ನೋಡಿ ಕನ್-ಫ್ಯೂಸ್ ಆಯ್ತು. ನನಗೋ ಚಿಕ್ಕಂದಿನಲ್ಲಿ ಮಾಡಿದ ಒಂದೆರಡು ಪೈಂಟಿಂಗ್ ಬಿಟ್ಟ್ರೆ ಏನೂ ಗೊತ್ತಿಲ್ಲ. ಮಕ್ಕಳಿಗೆ ಅಂತ ಇರೋ ಪೈಂಟ್ ನಲ್ಲೇ ಬಹಳಷ್ಟು ತರಹದ್ದು ಇದ್ದ್ವು. ಜೊತೆಗೆ ಏನೋ ತಂದು ನಾನೇನು ಸರಿಯಾಗಿ ಮಾಡಿಸದೇ ಹೋದ್ರೆ ಅಂತ ಏನೂ ತರದೆ ಬಂದೆ

.

ಆಮೇಲೆ ಸ್ವಲ್ಪ ದಿನಗಳ ನಂತರ ಪುಟ್ಟಿಗೆ ದಿನವೂ ಫೇಸ್ ಪೈಂಟಿಂಗ್ ಬೇಕಿತ್ತು. ಸರಿ ಒಂದು ಸೆಟ್ ಕೊಂಡು ಕೊಂಡೆ. ದಿನಾ ಅವಳ ಕೆನ್ನೆಗಳಿಗೆ ಲೇಡಿ ಬಗ್, ರೈನ್ ಬೋ, ಬಟ್ಟರ್ ಫ್ಲೈ ಇತರೆ ಬರೀತಾಯಿದ್ದೆ. ನಂತರ ಅದರಲ್ಲೇ ಹ್ಯಾಲೋವೀನ್ ಚಿತ್ರಗಳು ಮತ್ತು ಕೆಲವು ಟರ್ಕಿ ಮಾಡಿದ್ದು ಹೀಗೆ.

ಆಮೇಲೆ ಬಹಳಷ್ಟು ದಿನ ಬರಿ ಕ್ರಯಾನ್ಸ್ ಮ

ತ್ತು ಪೆನ್ಸಿಲ್ ಬೇಕಿತ್ತು ಪುಟ್ಟಿಗೆ. ಆಮೇಲೆ ಅವಳು ಮತ್ತೆ ಪೈಂಟ್ ಕೇಳಿದಾಗ ಫಿಂಗರ್ ಪೈಂಟ್ ತಂದು ಮಾಡಿದ್ವಿ. ಆದ್ರೆ ಈ ಪೈಂಟ್ ಹೆಸರೇ ಹೇಳುವಂತೆ ಇದು ಬ್ರಷ್ ಅಲ್ಲ ಬೆರಳುಗಳಿಂದ ಮಾಡಲು ಉಪಯೋಗಿಸುವ ಪೈಂಟ್ ಅಂತ ತಿಳಿದದ್ದು ಇತ್ತೀಚೆಗೆ. ಮರ, ಹೂವು, ಸೂರ್ಯ, ಹೀಗೆ ಏನೋ ಒಂದು ಮಾಡ್ತಾಯಿದ್ವಿ. ಇವೆಲ್ಲವನ್ನು ಮಾಡುವಾಗ ಪುಟ್ಟಿಗೆ ಹಲವು ರೀತಿಯ(ಸಣ್ಣ, ಅಗಲ, ಸ್ಪಾಂಜ್, ದುಂಡನೆ ಇತ್ಯಾದಿ) ಬ್ರಷ್ ಗಳನ್ನು ಕೊಟ್ಟು ಪ್ರತಿಯೊಂದರಲ್ಲೂ ಪೈಂಟ್ ಮಾಡುವಂತೆ ಉತ್ತೇಜಿಸುತ್ತಿದ್ದೆ. ಜೊತೆಗೆ ಕೂತು ಇಲ್ಲಿ ಪೈಂಟ್ ಮಾಡು, ಇಲ್ಲಿ ಹಸಿರು ಬಳಿ ಅಂತೆಲ್ಲಾ ಹೇಳುತ್ತಾ ಅವಳ ಕೈಲಿ ಪೈಂಟ್ ಮಾಡಿಸುತ್ತಿದ್ದೆ. ಆದ್ರೆ ಅದು ತಪ್ಪು ಅನ್ನೊ ವಿಚಾರ ಈಗ ಗೊತ್ತಾಗಿದೆ. ಹೀಗೆ

ಮಾಡೋದ್ರಿಂದ ಮಕ್ಕಳ ಕ್ರಿಯೇಟಿವಿಟಿಗೆ ಅವಕಾಶವೇ ಇಲ್ಲದಂತಾಗುತ್ತದೆ ಅಂತ ತಿಳಿಯಿತು.

ಒಂದು ದಿನ ಲೈಬ್ರರಿಯಲ್ಲಿ “Preschool Art” by Mary Ann Kohl ಪುಸ್ತಕ ಕಣ್ಣಿಗೆ ಬಿತ್ತು.

ಅದನ್ನು ಓದಿದ ಮೇಲೆ ಮಕ್ಕಳಿಗೆ ಕಲೆ ಹೇಳಿ ಕೊಡುವುದರ ಉದ್ದೇಶ ಮತ್ತು ಹೇಗೆ ಹೇಳಿ ಕೊಡಬೇಕು ಅನ್ನೋದು ಸ್ವಲ್ಪ ಮಟ್ಟಿಗೆ ತಿಳಿಯಿತು. ಪುಸ್ತಕದ ಮುನ್ನುಡಿ “Its the process not the product” ಅನ್ನೋ ಮಾತು ಬಹಳ ಇಷ್ಟವಾಯ್ತು. ಅದರಲ್ಲಿ ಅವರು ಮಕ್ಕಳಿಗೆ ಹೇಳಿರೋ ಮಾತುಗಳಿವು... Process not product” means that you can explore art materials and enjoy what happens. You don’t have to copy what an adult makes or even try to make something a friend has made. There is no right or wrong way for these art ideas to turn out; there is only YOUR way. YOU are artist. When you try fingerpainting on a cookie sheet, don’t concern with what you should make. Just enjoy the doing. That’s the whole idea of art.


ಮುಂದೆ ಹುಡುಕುತ್ತಾ ಹೋದಂತೆ ಅವರ ಬ್ಲಾಗ್ ಮತ್ತು ಇನ್ನು ಹಲವಾರು kids art ಬ್ಲಾಗ್ ಗಳ ಪರಿಚಯ ಆಯ್ತು. ಈಗ ಪುಟ್ಟಿಗೆ ಪೈಂಟ್ ಮಾಡಿಸಲು ಧೈರ್ಯ ಬಂದಿದೆ, ನಾವು ಮಾಡೋದೆಲ್ಲಾ ಕಣ್ಣಿಗೆ ಚೆಂದ ಕಾಣಿಸಬೇಕಿಲ್ಲ/ ಮಾಸ್ಟರ್ ಪೀಸ್ ಆಗಲೇ ಬೇಕೇನಿಲ್ಲ. ಈಗ ನನ್ನ ಕೆಲಸ ಕೇವಲ ಪುಟ್ಟಿಗೆ ಪೈಂಟ್ ಬೆರೆಸಿ ಕೊಡುವುದು, ಅವಳು ಅದನ್ನು ಚೆಲ್ಲಾಡದಂತೆ ನೋಡಿಕೊಳ್ಳುವುದು(ಮನೆಯಲ್ಲಿ ಕಾರ್ಪೆಟ್ ನೆಲ ನೋಡಿ), ಅಲ್ಲದೆ ಅಂದಿನ ಪೈಂಟಿಂಗ್ ವಿಧಾನವನ್ನ ವಿವರಿಸುವುದು ಅಥವಾ ಮಾಡಿ ತೋರಿಸೋದು ಅಷ್ಟೆ. ಆದ್ರೆ ಬಣ್ಣದ ಚಾಯ್ಸ್ ಎಲ್ಲಾ ಪುಟ್ಟಿಗೇ ಬಿಟ್ಟಿದ್ದು... ಅವಳು ಕಪ್ಪು ಬಣ್ಣದ ಹೂ ಮಾಡ್ತೀನಿ ಅಂದ್ರೂ ಸರಿನೇ :))

ನಮ್ಮ ಮುಂದಿನ ಪೈಂಟಿಂಗ್ಸ್ ಗಳೆಲ್ಲಾ ನಿಮಗೆ ಗೀಚುವಿಕೆ, abstract, ಮಾಡ್ರನ್ ಆರ್ಟ್ ಅನಿಸಬಹುದು.... ನೋಡಿ ಸ್ವಾಮಿ ನಾವ್ ಇನ್ನ್ಮೇಲೆ ಮಾಡೋದೆ ಹೀಗೆ ;-)