Wednesday, December 29, 2010

ಪುಟ್ಟಿಗೆ ಇವತ್ತಿಗೆ ಮೂರು ವರ್ಷ!!


ಮಯ ಎಷ್ಟು ಬೇಗ ಕಳೆದು ಹೋಗುತ್ತದಲ್ಲ? ಮೂರು ವರ್ಷ ನೋಡುತ್ತ ನೋಡುತ್ತ ಕಳೆದು ಹೋಗಿದೆ. ಪುಟ್ಟಿಗೆ ಇವತ್ತಿಗೆ ಮೂರು ವರ್ಷ!!! ನನ್ನನ್ನು ಬ್ಲಾಗ್ ಬರೆಯುವಂತೆ ಮಾಡಿ, ದಿನಕ್ಕೊಂದು ಹೊಸ ಆಟ ಕಲಿತು ಬ್ಲಾಗಿನಲ್ಲಿ ಬರೆಯಲು ಹೊಸ ವಿಚಾರ ಕೊಡುತ್ತಿರುವವಳು ಇವಳು.  ಅವಳೆಷ್ಟೇ ದೊಡ್ಡವಳಾದರೂ ಇಂದಿನ ಮುಗ್ಧತೆ ಹೀಗೆ ಇರಲಿ ಮತ್ತು ಸದಾ ಸಂತಸದಿ ಬಾಳಲಿ ಎಂಬುದೇ ಜನುಮದಿನದಂದು ನನ್ನ ಹಾರೈಕೆ.
ಅಂದ ಹಾಗೆ, ‘ಪ್ರೇಮದ ಕಾಣಿಕೆ’ ಚಿತ್ರದಲ್ಲಿರುವ ಈ ಹುಟ್ಟುಹಬ್ಬದ ಹಾಡು ನೆನಪಿದೆಯಾ? ಇಲ್ಲ ಅಂದ್ರೆ ಒಮ್ಮೆ ನೋಡಿ ಮೆಲುಕು ಹಾಕಿಬಿಡಿ. 


ಚಿತ್ರ : ಪ್ರೇಮದ ಕಾಣಿಕೆ [1976]
ಗಾಯಕರು : ಪಿ . ಬಿ . ಶ್ರೀನಿವಾಸ್

ಚಿನ್ನ ಎಂದು ನಗುತಿರು ನನ್ನ ಸಂಗ ಬಿಡದಿರು
ಚಿನ್ನ ಎಂದು ನಗುತಿರು ನನ್ನ ಸಂಗ ಬಿಡದಿರು
ಸರದ ಸಮಯದಿ ಸದಾ ವಿರಸವೇನು ?

Happy birthday to you...
Happy birthday to you...
Happy birthday to you...Putti 

ಸ್ನೇಹವ ತೋರು ಎಲ್ಲರ ಸೇರು
ಸ್ನೇಹವ ತೋರು ಎಲ್ಲರ ಸೇರು
ದಿನವು ಸಂತೋಷದಿ ನಲಿ ನಲಿದಾಡು
ದಿನವು ಸಂತೋಷದಿ ನಲಿ ನಲಿದಾಡು
ನೂರಾರು ವರುಷ ಕಂಡ ಸುಖದಿ ಬಾಳು

ಚಿನ್ನ ಎಂದು ನಗುತಿರು ನನ್ನ ಸಂಗ ಬಿಡದಿರು
ನನ್ನ ಚಿನ್ನ ಎಂದು ನಗುತಿರು ನನ್ನ ಸಂಗ ಬಿಡದಿರು

ಯಾರೋಲೋ ಕೋಪ ಯಾರಿಗೋ ಶಾಪ
ಯಾರೋಲೋ ಕೋಪ ಯಾರಿಗೋ ಶಾಪ
ದಿನವು ಇದೇನಿದು ಪರಿತಾಪ
ದಿನವು ಇದೇನಿದು ಪರಿತಾಪ
ನೀ ತಾಯಿಯಂತೆ ಬಿಡು ಇನ್ನು ಚಿಂತೆ

ಚಿನ್ನ ಎಂದು ನಗುತಿರು ನನ್ನ ಸಂಗ ಬಿಡದಿರು
ಚಿನ್ನ ಎಂದು ನಗುತಿರು ನನ್ನ ಸಂಗ ಬಿಡದಿರು
ಸರದ ಸಮಯದಿ ಸದಾ ವಿರಸವೇನು ?

ಚಿನ್ನ ಎಂದು ನಗುತಿರು ನನ್ನ ಸಂಗ ಬಿಡದಿರು
ಚಿನ್ನ ಎಂದು ನಗುತಿರು ನನ್ನ ಸಂಗ ಬಿಡದಿರು

Happy birthday to you...
Happy birthday to you...
Happy birthday to you...Putti 

Sunday, December 26, 2010

ಪುಟ್ಟಿ ಬನ್ನಿ ಅಂತಾಳೆ..

ಪುಟ್ಟಿ ತನ್ನ ಮೂರನೆ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸಿದ್ಧವಾಗಿದ್ದಾಳೆ. ಮೊದಲ ವರ್ಷ ಅಜ್ಜಿ, ತಾತ ಮತ್ತು ನಮ್ಮೆಲ್ಲರ ಸಂತಸಕ್ಕಾಗಿ ಹಬ್ಬ ಮಾಡಿದ್ದೆವು. ಎರಡನೆ ವರ್ಷ ಅವಳಿಗೆ ಹುಟ್ಟುಹಬ್ಬ ಖುಶಿ ಕೊಟ್ಟಿತಾದರೂ ಹೆಚ್ಚೇನೂ ಗೊತ್ತಿಲ್ಲ. ಆದ್ರೆ ಈ ವರ್ಷ ಶಾಲೆಯಲ್ಲಿ ತನ್ನ ತರಗತಿಯ ಇತರೆ ಕೆಲವು ಸ್ನೇಹಿತರ ಹುಟ್ಟುಹಬ್ಬಕ್ಕೆ ಹೋಗಿ ಬಂದಾಗಿನಿಂದ ನನಗೂ ’ತ್ರೀ ಹ್ಯಾಪಿ ಬರ್ತ್ ಡೇ’ ಮಾಡು ಅಮ್ಮ  ಅಂತ ಕೇಳುವಷ್ಟು ದೊಡ್ಡವಳಾಗಿದ್ದಾಳೆ.
ಸರಿ, ಏನು ಮಾಡಬೇಕು ಪುಟ್ಟಿ ನಿನ್ನ ಹುಟ್ಟುಹಬ್ಬಕ್ಕೆ ಅಂತ ಕೇಳಿದ್ರೆ "ಕೇಕ್ ಬೇಕು, ಎಷ್ಟೊಂದು ಬಲೂನ್ಸ್ ಬೇಕು ಮತ್ತೆ ಫ್ರೆಂಡ್ಸ್ ಎಲ್ಲಾ ಬರಬೇಕು" ಇಷ್ಟೇ ಅವಳು ಕೇಳಿದ್ದು:)
ಇತ್ತೀಚೆಗೆ ಹೇಗೂ ಬಣ್ಣಗಳೊಂದಿಗೆ ಆಟವಾಡುದನ್ನು ಇಷ್ತಪಡುತ್ತಿದ್ದಾಳಲ್ಲ ಅಂತ ಈ ಸರ್ತಿ ’ಬಣ್ಣಗಳ ಪಾರ್ಟಿ’ ಯನ್ನೇ ಮಾಡೋಣವೆನಿಸಿದೆ. ತನ್ನೆಲ್ಲಾ ಬ್ಲಾಗ್ ಸ್ನೇಹಿತರಿಗೂ, ಹಿರಿಯರಿಗೂ, ಹಿತೈಷಿಗಳಿಗೂ ಬನ್ನಿ ಅಂತ ಹೇಳ್ತಾಳೆ

ಮರಿಬೇಡಿ, ಬರ್ತೀರಾ ಅಲ್ವ ?


Wednesday, December 22, 2010

ಬ್ಯಾ ಬ್ಯಾ ಕುರಿ ಮರಿ..

ಇದು ಪುಟ್ಟಿ ಮಾಡಿರೋ ಕುರಿಮರಿ. ಇದನ್ನ ನೋಡ್ತಾ ಪುಟ್ಟಿ ’baa baa white sheep' ಅಂತ ಹಾಡನ್ನ ಮಾರ್ಪಡಿಸಿ ಹಾಡ್ತಾಳೆ!! ಈ ಆಂಗ್ಳ ಶಿಶುಗೀತೆಯ ಕನ್ನಡ ಅನುವಾದ ಹೀಗಿದೆ..
ಬ್ಯಾ ಬ್ಯಾ ಕುರಿ ಮರಿ
ನಿನ್ ತವ ವುಲ್ ಐತ?

ಇದೆ ಸಾರ್ ಇದೆ ಸಾರ್

ಮೂರ್ ಚೀಲದ್ ತುಂಬಒಂದ್ ನಮ್ ದಣಿಗೋಳ್ಗೆ
ಒಂದ್ ಅವ್ರ್ ಎಂಡ್ರುಗೆ
ಮತ್ತೊಂದ್ ಈ ರಸ್ತೆ ಮೂಲೇಲಿರೊ
ಚಿಕ್ಕ್ ಮಗೀಗೆಬಾ ಬಾರೋ ಕರಿ ಕುರಿ
ಉಣ್ಣೆ ಇದೆಯಾ ಕುರಿ ಮರಿ
ಇದೆ ಗುರು ಇದೆ ಗುರು
ಮೂರ್ ಮೂಟೆ ತುಂಬಾ ಗುರು

ನಮ್ಮ್ ಮಾಲೀಕಂಗೊಂದು
ಅವನ್ ಹೆಂಡ್ರಿಗಿನ್ನೊಂದು
ಕೊನೆ ಮೂಟೆ ಯಾರಿಗೆಂದು
ನಮ್ಮ್ ಕೊನೆ ಬೀದಿ ಭಾಸ್ಕರಂದು
-ಇದನ್ನ ಬರೆದವರು ಯಾರು ಗೊತ್ತಿಲ್ಲ

Sunday, December 19, 2010

ಅಮ್ಮ ಮುದ್ದು ಅಮ್ಮಅಮ್ಮ ಮುದ್ದು ಅಮ್ಮ
ಅಮ್ಮ ಮುದ್ದು ಅಮ್ಮ
ಎಂತ ಸಿಹಿ ನಿನ್ನ ಮುತ್ತು ಅಮ್ಮ
ನನ್ನ ಜೊತೆ ಆಡು ಬಾರೆ ಅಮ್ಮ

ಪಾಪ ಮುದ್ದು ಪಾಪ
ಪಾಪ ಮುದ್ದು ಪಾಪ
ದಂತದ ಗೊಂಬೆ ನೀನು ಪಾಪ
ದೈವ ತಂದ ಕೊಡುಗೆ ನೀನು ಪಾಪ

ಅಮ್ಮ ಎತ್ತಿಕೋ ಒಮ್ಮೆ ಅಪ್ಪಿಕೋ
ಅಮ್ಮ ಎತ್ತಿಕೋ ಒಮ್ಮೆ ಅಪ್ಪಿಕೋ
ತೂಗಿಸು ತೂಗಿ ನಲಿಯಿಸು
ನಗುವಲಿ ಮೈಮನ ಮರೆಯಿಸು
ನಿನ್ನ ಪ್ರೀತಿ ಅಲೆಯಲಿ ಎನ್ನ ತೇಲಿಸು

ಹೊತ್ತವಳಲ್ಲ ಹೆತ್ತವಳಲ್ಲ
ತಾಯಿತನವ ನಾ ಕಂಡವಳಲ್ಲ
ಬಂದೇ ನೀನು ಬಂದೆ
ತಾಯಿಯ ... ತಂದೆ
ಬಾಳಲಿಂದು ಬೆಳಕು ಚೆಲ್ಲಿ ನಿಂದೆ


ಪಾಪ ಮುದ್ದು ಪಾಪ
ಪಾಪ ಮುದ್ದು ಪಾಪ
ದಂತದ ಗೊಂಬೆ ನೀನು ಪಾಪ
ದೈವ ತಂದ ಕೊಡುಗೆ ನೀನು ಪಾಪ

ತಬ್ಬಲಿ ಅಲ್ಲ ನಾ
ತಾಯಿಯಾ ಪಡೆದೆ ನಾ
ತಬ್ಬಲಿ ಅಲ್ಲ ನಾ
ತಾಯಿಯಾ ಪಡೆದೆ ನಾ
ಮರೆಯೆನಾ ಈ ದಿನ ಮರೆಯೆನಾ
ಪ್ರೇಮದ ಮಳೆಯಲಿ ನೆನೆದೆ ನಾ
ತಾಯಿ ಹೆಸರ ಬೆಳಗುವಂತೆ ಬೆಳೆವೆ ನಾ

ಪತಿಯ ಒಲವಿದೆ
..ರೆಯ ಸುಖವಿದೆ
ಮನದ ಕೊರತೆಯಾ 
ಮಗುವೇ ನೀಗಿದೆ
ಮನೆಯನೂ ಗೋಕುಲ ಮಾಡಲು
ಹೊಸಲಿನ ರಂಗೋಲಿ ಅಳಿಸಲು
ಬಂದೆ ನೀನು ಎನ್ನ ಮಡಿಲ ತುಂಬಲು

ಅಮ್ಮ ಮುದ್ದು ಅಮ್ಮ
ಅಮ್ಮ ಮುದ್ದು ಅಮ್ಮ
ಎಂತ ಸಿಹಿ ನಿನ್ನ ಮುತ್ತು ಅಮ್ಮ
ನನ್ನ ಜೊತೆ ಆಡು ಬಾರೆ ಅಮ್ಮ

ಪಾಪ ಮುದ್ದು ಪಾಪ
ಪಾಪ ಮುದ್ದು ಪಾಪ
ದಂತದ ಗೊಂಬೆ ನೀನು ಪಾಪ
ದೈವ ತಂದ ಕೊಡುಗೆ ನೀನು ಪಾಪ

Tuesday, December 14, 2010

ಮುದ್ದೆ ಮಾಡೋದು ಹೀಗೆ ...

ನನಗೆ ಮುದ್ದೆ ಮಾಡೋಕೆ ಬರೋಲ್ಲ. ಅದು ಅಷ್ಟಾಗಿ ಇಷ್ಟನೂ ಇಲ್ಲ. ರಾಗಿ ರೊಟ್ಟಿ ಇಷ್ಟ ಅದನ್ನ ತಪ್ಪದೇ ವಾರಕ್ಕೆ ಒಂದೆರೆಡು ಸರ್ತಿ ಮಾಡ್ತೀನಿ. ಪುಟ್ಟಿಗೂ ಬಲು ಇಷ್ಟ. ಪುಟ್ಟಿ ಅಜ್ಜ್ಜಿಇಲ್ಲಿ ಇದ್ದಾಗ ಅವರು ಆಗಾಗ್ಗೆ ಮುದ್ದೆ ಮಾಡುತ್ತಿದ್ದರು. ಆಗೆಲ್ಲಾ ಪುಟ್ಟಿ ಅವರ ಪಕ್ಕದಲ್ಲೇ ಕುಳಿತಿದ್ದು, ಅವರು ಮುದ್ದೆ ತಿರುವುದನ್ನೇ ನೋಡುತ್ತಾ ಕೊನೆಯಲ್ಲಿ ತಾನೂ ಒಂದೆರೆಡು ತುತ್ತು ಬಿಸಿ ಬಿಸಿ ಮುದ್ದೆ ತುಪ್ಪದಲ್ಲಿ ಹಾಕಿ ಗುಳುಮ್ ಮಾಡುತ್ತಿದ್ದಳು. 
ಈಗ ಮುದ್ದೆ ಮಾಡುವ ಕೋಲಿಗೆ ಕೆಲಸವಿಲ್ಲ. ಆಗಾಗ್ಗೆ ಕಣ್ಣಿಗೆ ಕಾಣಿಸಿದಾಗ ಅದನ್ನ ಹಿಡಿದು ಪುಟ್ಟಿ ಮುದ್ದೆ ಮಾಡೋದು ಹೀಗೆ... 


Thursday, December 09, 2010

ಪುಟ್ಟ ಪುಟ್ಟ ಕಣ್ಣುಗಳನು
ಬೊಚ್ಚು ಬಾಯಿಯನ್ನು ಬಿಟ್ಟು
ಬೆರಳ ಚೀಪಿ ಮನವ ತಣಿಸುವವನು ಯಾರು?
ಚುಳ್ ಎಂದು ಉಚ್ಚೆ ಹುಯ್ದು
ಹಾಸಿಗೆಯನು ಒದ್ದೆ ಮಾಡಿ
ಆ ಇ ಊ ಎಂದರಚುವ
ನಿವನು ಯಾರು?
ಉರುಟು ಮುಖವ ದೊಡ್ಡ ಕಿವಿಯ
ಉದ್ದುದ್ದದ ಬೆರಳ ಹೊಂದಿ
ದಟ್ಟ ಕೂದಲುಗಳನು ಹೊಂದಿದವನು ಯಾರು?
ಇರಲಿ ನೀ ಚಿರಾಯುವಾಗು
ನೆಮ್ಮದಿ ಆನಂದ ಹೊಂದಿ
ನಿನಗೆ ಇರಲಿ ಲಕ್ಷ್ಮಿ ದಯೆಯು
ಈಶಪುತ್ರನೇ ಗಿರೀಶಪುತ್ರನೇ!ಮಂಜುಪುತ್ರನೇ!
ಸಾಫ಼್ಟ್ ವೇರ್ ಅಪ್ಪ ತಾನು
ಅಮ್ಮನೊ ತಾ ವೈದ್ಯೆಯಾಗಿ
ಪಡೆದನೀನು ಧನ್ಯನೇ ಅನಾಮಧೇಯನೇ!
(ಕೌಶಿಕ ಮರಾಠೆ ಯನಾಮಕರಣದದಿನಕ್ಕೆ
ರಚಿಸಿದ ಕಂದ ಪದ್ಯ.)