Tuesday, January 27, 2009

ನಮ್ಮ ಬಾವುಟ!

ಜನವರಿಯಲ್ಲಿ ಗಣರಾಜ್ಯೋತ್ಸವದ ದಿನದಂದು ತಾತನ ಮನೆಯೆದುರಿನಲ್ಲಿ ಕಾಲೋನಿಯವರು ನಡೆಸಿದ ಧ್ವಜಾರೋಹಣ ಸಮಾರಂಭದಲ್ಲಿ ಪುಟ್ಟಿ ಕೂಡ ಭಾಗವಹಿಸಿದ್ದಳು!

ಏರುತಿಹುದು ಹಾರುತಿಹುದು

ನೋಡು ನಮ್ಮ ಬಾವುಟ

ತೋರುತಿಹುದು ಹೊಡೆದು ಹೊಡೆದು

ಬಾನಿನಗಲ ಪಟಪಟ



ಕೇಸರಿ ಬಿಳಿ ಹಸಿರು ಮೂರು

ಬಣ್ಣ ನಡುವೆ ಚಕ್ರವು

ಸತ್ಯ ಶಾಂತಿ ತ್ಯಾಗ ಮೂರ್ತಿ

ಗಾಂಧಿ ಹಿಡಿದ ಚರಕವು



ಇಂತ ಧ್ವಜವು ನಮ್ಮ ಧ್ವಜವು

ನೋಡು ಹಾರುತಿರುವುದು

ಧ್ವಜದ ಶಕ್ತಿ ನಮ್ಮ ಭಕ್ತಿ

ನಾಡ ಸಿರಿಯ ಮೆರೆವುದು



ಕೆಂಪು ಕಿರಣ ತುಂಬಿ ಗಗನ

ಹೊನ್ನ ಬಣ್ಣವಾಗಿದೆ

ನಮ್ಮ ನಾಡ ಗುಡಿಯ ಬಣ್ಣ

ನೋಡಿರಣ್ಣ ಹೇಗಿದೆ

Tuesday, January 20, 2009

ಗಿರಿಗಿಟ್ಟಿ

ನನ್ನ ಚಿಕ್ಕಪ್ಪನ ಮಗನ ಎಂಗೇಜ್-ಮೇಂಟಿಗೆ ಊರಿಗೆ ಹೋದಾಗ ಅಲ್ಲಿ ಪುಟ್ಟಿ ಇತರ ಮಕ್ಕಳೊಂದಿಗೆ ಕೂಡಿ ಗಿರಿಗಿಟ್ಟಿ ಆಟವಾಡಿದ್ದಳು.
ಗಿರ ಗಿರ ತಿರುಗುವ ಗಿರಿಗಿಟ್ಟಿ
ಸುರಗಿ ಎಲೆಯ ಗಿರಿಗಿಟ್ಟಿ

ಕಡ್ಡಿಗೆ ಪೋಣಿಸಿ
ಕೈಯಲಿ ಹಿಡಿದು

ಗಾಳಿಗೆ ತಿರುಗುವ ಗಿರಿಗಿಟ್ಟಿ
ಗಿರ ಗಿರ ತಿರುಗುವ ಗಿರಿಗಿಟ್ಟಿ
--
ಸುಬ್ರಹ್ಮಣ್ಯ ಭಟ್


ಕರಡಿ ಕುಣಿತ

ಪುಟ್ಟಿಗೆ ಪ್ರಾಣಿಗಳು ಅಂದ್ರೆ ತುಂಬಾ ಇಷ್ಟ. ಮೊದಲ ಸಾರಿ ಬೆಂಗಳೂರಿಗೆ ಹೋದಾಗ ಬಹಳಷ್ಟು ಪ್ರಾಣಿಗಳನ್ನ ನೋಡಿ ಖುಶಿ ಪಟ್ಟಳು., ಅವಳು ನೋಡಿದ ಲಿಸ್ಟ್ ನಲ್ಲಿ ಕರಡಿ ಕೂಡ ಇದೆ. ನನ್ನ ಚಿಕ್ಕಪ್ಪನ ಮಗ ನಿಶ್ಚಿತಾರ್ಥಕ್ಕೆಂದು ಊರಿಗೆ ಹೋದಾಗ ದಾರಿಯಲ್ಲಿ ಸಿಕ್ಕಿತು ನಮಗೀ ಕರಡಿ. ಮನೆಯಲ್ಲಿ ಬಹಳಷ್ಟು bearಗಳಿವೆ, ಅವನ್ನ ಪುಟ್ಟಿ ಕರಿಯೋದು "ಬೇ, ಬೇ.." ಅಂತ. ಈಗ ಜೀವಂತ ಕರಡಿಯನ್ನ ತೋರಿಸಿ "ಬೇ ಬೇ" ಅಂತ ಹೇಳಿದಾಗ ಅದೇನು ಅರ್ಥ ಆಯಿತೋ ಗೊತ್ತಿಲ್ಲ, ಅಂತ ಖುಶಿಯಿಂದ ಚಪ್ಪಾಲೆ ತಟ್ಟಿದ್ಲು. ಜೊತೆಯಲ್ಲಿ ಮಾವನ ಮಗಳು ’ಖುಶಿ’ ಇದ್ದಿದರಿಂದ ಇನ್ನು ಹೆಚ್ಚಿನ ಸಂತಸ ಅವಳಿಗೆ.


ಕರಡಿ ಫೋಟೊ ಜೊತೆಗೆ ಇಲ್ಲಿದೆ ನೋಡಿ ಕರಡಿ ಹಾಡು...




ಯಾವ ಕಾಡಡವಿಯಲಿ ಜೇನುಂಡು ಬೆಳೆದಿದ್ದ
ಜಾಂಬುವಂತನ ಹಿಡಿದು ತಂದಾನೊ;
ಧಣಿಯರ ಮನೆ ಮುಂದೆ ಕಾವಲು ಮಾಡಣ್ಣ,
ಧಣಿ ದಾನ ಕೊಡುವನು’ ಎಂದಾನೊ.”

ಬೇಂದ್ರೆ

Thursday, January 15, 2009

ಒಂಟೆ ಸವಾರಿ !!!

ಈಗ ಬೆಂಗಳೂರಿನ ಬಡಾವಣೆಗಳಲ್ಲಿ ರಾಜಾಸ್ತಾನ ಮರುಭೂಮಿಯಿಂದ ಬಂದಿರೋ ಒಂಟೆಗಳ ತಂಡಗಳು ಪ್ರತಿನಿತ್ಯ ಕಾಣಸಿಗುತ್ತೆ. ಮಕ್ಕಳಿಗೆಲ್ಲಾ ಒಂಟೆ ಸವಾರಿಯ ಮಜಾ ಬೇಸಿಗೆ ರಜೆಯ ಮಜವನ್ನು ಹೆಚ್ಚಿಸಿದೆ. ಒಂದು ರೌಂಡ್ ಹಾಕಿ ಬರಲು ಮಗುವೊಂದಕ್ಕೆ ರೂ.೧೦ ಪಡೆಯುತ್ತಾರೆ. ಎಲ್ಲಾ ಮಕ್ಕಳೊಡನೆ ಕೂಡಿ ಪುಟ್ಟಿಯೂ ಅಪ್ಪನೊಡನೆ ಒಂಟೆ ಸವಾರಿ ಮಾಡಿ ಮಜಾ ಮಾಡಿದ್ಲು.

ಒಂಟೆ ಬಂತು ಒಂಟೆ
ರಾಜಾಸ್ತಾನದ್ ಒಂಟೆ
ಕತ್ತಲ್ ಘಲ್ ಘಲ್ ಘಂಟೆ.

ಮೈ ಕಂದು ಬಣ್ಣ
ನೋಡು ಬಾರಾಣ್ಣ
ಕಿವಿ ಬಲು ಸಣ್ಣ.

ನಾಲ್ಕು ಕಾಲು ಇರುವುದು
ಉದ್ದ ಕತ್ತು ಇರುವುದು
ದಿನವು ಇಲ್ಲಿ ಬರುವುದು.

ನಾ ಸವಾರಿ ಮಾಡುವೆ
ಚಪ್ಪಾಳೆ ತಟ್ಟುವೆ
ಮತ್ತೆ ಬಾ ಎನ್ನುವೆ.

--ರೂpaश्री