Thursday, November 29, 2012

ಕರ್ನಾಟಕ ಮ್ಯಾಪ್

ಈ ಚಿತ್ರ ಬಿಡಿಸಿ ಬಣ್ಣ ತುಂಬಿದ್ದು ಎಂಟು ವರುಷದ ಪುಟ್ಟ ಬಾಲಕ ಸಮರ್ಥ್ ಮುತ್ಯಾಲಕರುನಾಡಿನಿಂದ ದೂರ ಬಹುದೂರ ಅಮೇರಿಕಾದಲ್ಲಿ ಬೆಳೆಯುತ್ತಿರುವ ಈ ಬಾಲಕ, ತನ್ನ ಅಮ್ಮನ ಸಹಾಯದಿಂದ ಇದನ್ನು ಬರೆದಿರುವನು. ಹೊರದೇಶದಲ್ಲಿ ಬೆಳೆಯುತ್ತಿರುವ ಮಕ್ಕಳು ತಮ್ಮ (ತಮ್ಮ ತಂದೆ ತಾಯಿಯರ) ನಾಡು ನುಡಿ ಬಗ್ಗೆ ಆಸಕ್ತಿಯಿಂದ ಕಲಿತು, ಒಲವು ಬೆಳೆಸಿಕೊಳ್ಳುತ್ತಿರುವುದನ್ನು ನೋಡಿ ಬಹಳ ಖುಷಿ ಆಗುತ್ತದೆ. ಇಂತಹ ಮಕ್ಕಳನ್ನು ಉತ್ತೇಜಿಸುತ್ತಿರುವ ಅವರ ತಂದೆ ತಾಯಿ ಮತ್ತು ಇತರೆ ಪೋಷಕರಿಗೆ ನನ್ನ ನಮನಗಳು. ಹಾಗೆಯೇ ಪುಟ್ಟ ಸಮರ್ಥನಿಗೆ ಶುಭಾಷಯಗಳು !

Thursday, November 01, 2012

ಕನ್ನಡ ಎ೦ದರೆ ಎ೦ತಹುದು ಮಗು


ಕನ್ನಡ ಎ೦ದರೆ ಎ೦ತಹುದು ಮಗು
ಕೇಳುವ ಕಿವಿಗೆ ಕಿಣಿ ಕಿಣಿ ಕಿಣಿ ಗೆಜ್ಜೆ
ಕನ್ನಡವೆ೦ದರೆ ಬಲು ಇ೦ಪು
ಹೇಳುವ ನಾಲಿಗೆಗೆ ಸಿಹಿ ಜೇನೇ ಅದು
ಕನ್ನಡವೆ೦ದರೆ ಬಲು ತ೦ಪು
ನಮ್ಮ ಕನ್ನಡವೆ೦ದರೆ ಇ೦ತಹುದು ಮಗು......

Monday, October 01, 2012

ತಟ್ಟು ತಟ್ಟು ಚಪ್ಪಾಳೆ ಪುಟ್ಟ ಮಗು



ತಟ್ಟು ತಟ್ಟು ಚಪ್ಪಾಳೆ ಪುಟ್ಟ ಮಗು
ತಕೋ ಕೈ ಇಕೋ ಕೈ
ಗಾಂಧಿಗಿಂದು ಜನುಮ ದಿನ

ಗಾಂಧಿಗಿಂದು ಜನುಮ ದಿನ

ತಟ್ಟು ತಟ್ಟು ಚಪ್ಪಾಳೆ ಪುಟ್ಟ ಮಗು

ತಕೋ ಕೈ ಇಕೋ ಕೈ
ಗಾಂಧಿಗಿಂದು ಜನುಮ ದಿನ
ಗಾಂಧಿಗಿಂದು ಜನುಮ ದಿನ

ಎಂಟು ಹತ್ತು ಕೋಟಿ 
ಜನರ ನಾಡಿಯಲ್ಲಿ ನುಡಿಯುತ್ತಿದೆ
ಎಂಟು ಹತ್ತು ಕೋಟಿ 
ಜನರ ನಾಡಿಯಲ್ಲಿ ನುಡಿಯುತ್ತಿದೆ
ಗಾಂಧೀಜಿ ಬಾಪೂಜೀ
ಗಾಂಧೀಜಿ ಬಾಪೂಜೀ


ತಟ್ಟು ತಟ್ಟು ಚಪ್ಪಾಳೆ ಪುಟ್ಟ ಮಗು
ತಕೋ ಕೈ ಇಕೋ ಕೈ
ಗಾಂಧಿಗಿಂದು ಜನುಮ ದಿನ

ಗಾಂಧಿಗಿಂದು ಜನುಮ ದಿನ

ನಿಂದು ಖಡ್ಗ...
ಗಾಂಧಿಗೊಂದು ಹೂವು ಇಡು
ನಿಂದು...
ಗಾಂಧಿಗೊಂದು ಹೂವು ಇಡು
ತಕೋ ಕೈ ಇಕೋ ಕೈ
ತಕೋ ಕೈ ಇಕೋ ಕೈ

ತಟ್ಟು ತಟ್ಟು ಚಪ್ಪಾಳೆ ಪುಟ್ಟ ಮಗು
ತಕೋ ಕೈ ಇಕೋ ಕೈ
ಗಾಂಧಿಗಿಂದು ಜನುಮ ದಿನ
ಗಾಂಧಿಗಿಂದು ಜನುಮ ದಿನ

ಆಡು ಹಾಲು, ಹೆಸರು ಕ್ಷೀರಾ
ಬೇವು ಚಟ್ನಿ, ಗೋಧಿ ರೊಟ್ಟಿ
ಆಡು ಹಾಲು, ಹೆಸರು ಕ್ಷೀರಾ
ಬೇವು ಚಟ್ನಿ, ಗೋಧಿ ರೊಟ್ಟಿ
ಅಷ್ಟು ನೀರು ಅವನಿಗಿಡು
ಅಷ್ಟು ನೀರು ಅವನಿಗಿಡು

ತಟ್ಟು ತಟ್ಟು ಚಪ್ಪಾಳೆ ಪುಟ್ಟ ಮಗು
ತಕೋ ಕೈ ಇಕೋ ಕೈ
ಗಾಂಧಿಗಿಂದು ಜನುಮ ದಿನ
ಗಾಂಧಿಗಿಂದು ಜನುಮ ದಿನ

ಇಂಡಿಯದ ಮಗುವು ಗಾಂಧಿ
ಇಂಡಿಯದ ದೀಪ ಗಾಂಧಿ
ಇಂಡಿಯದ ಮಗುವು ಗಾಂಧಿ
ಇಂಡಿಯದ ದೀಪ ಗಾಂಧಿ
ಕಂಡು ಅವನ ಕುಣಿವ ಬಾರೋ
ಕಂಡು ಅವನ ಕುಣಿವ ಬಾರೋ

ತಟ್ಟು ತಟ್ಟು ಚಪ್ಪಾಳೆ ಪುಟ್ಟ ಮಗು
ತಕೋ ಕೈ ಇಕೋ ಕೈ
ಗಾಂಧಿಗಿಂದು ಜನುಮ ದಿನ
ಗಾಂಧಿಗಿಂದು ಜನುಮ ದಿನ

ತಟ್ಟು ತಟ್ಟು ಚಪ್ಪಾಳೆ ಪುಟ್ಟ ಮಗು
ತಕೋ ಕೈ ಇಕೋ ಕೈ
ಗಾಂಧಿಗಿಂದು ಜನುಮ ದಿನ
ಗಾಂಧಿಗಿಂದು ಜನುಮ ದಿನ

Thursday, August 09, 2012

ಪುಟ್ಟ ಮುದ್ದು ಕೃಷ್ಣ

ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಬಂದನು ಮುದ್ದು ಕೃಷ್ಣ
ಬೆಣ್ಣೆ ಮುದ್ದೆ ಕದ್ದು
ತಿನ್ನೋ ಕಳ್ಳ ಕೃಷ್ಣ ! 

ನವಿಲ ಗರಿಯ ಸೊಗಸಿಗೆ
ಮನಸೋತ ಕೃಷ್ಣ
ತೆಗೆದು ತಲೆಯೊಳಿರಿಸಿ
ಮೆರೆವ ಪುಟಾಣಿ ಕೃಷ್ಣ

ಬಾರೋ ಬಾರೋ ನನ್ನ ಬಳಿ
ಬೇಗನೆ ಕೃಷ್ಣ
ಹಾಲು ಮೊಸರು ಬೆಣ್ಣೆ ಕೊಡುವೆ
ತಿನ್ನೋ ಕೃಷ್ಣ

***
ಕವಿ :ಸುಬ್ರಹ್ಮಣ್ಯ ಭಟ್

Saturday, July 28, 2012

ವರಮಹಾಲಕ್ಷ್ಮಿ ಹಬ್ಬ 2012

ಇಂದು ವರಮಹಾಲಕ್ಷ್ಮಿ ಹಬ್ಬ! ಬಹಳ ಸಂಭ್ರಮದಿಂದಲೇ  ಪುಟ್ಟಿ ಪೂಜೆ ಮಾಡಿದಳು. ಹೆಚ್ಚಿನ ಫೋಟೋಗಳು  ಇಲ್ಲಿವೆ.  
ವರಮಹಾಲಕ್ಷ್ಮಿ 

Thursday, July 26, 2012

ಬಾಗಿಲ ತೆರೆದಿರುವೆ ತಾಯೆ ಪೂಜೆಗೆ ಕಾದಿರುವೆ


ಬಾಗಿಲ ತೆರೆದಿರುವೆ ತಾಯೆ ಪೂಜೆಗೆ ಕಾದಿರುವೆ
ಬಾಗಿಲ ತೆರೆದಿರುವೆ ತಾಯೆ ಪೂಜೆಗೆ ಕಾದಿರುವೆ
ಸೇವೆಯ  ಸ್ವೀಕರಿಸು ಬಾ ಭಾಗ್ಯಲಕ್ಷ್ಮಿಯೆ
ಸೇವೆಯ  ಸ್ವೀಕರಿಸು ಬಾ ಭಾಗ್ಯಲಕ್ಷ್ಮಿಯೆ
ಬಾಗಿಲ ತೆರೆದಿರುವೆ ತಾಯೆ ಪೂಜೆಗೆ ಕಾದಿರುವೆ

ಹೊಸಲಿನ ಪೂಜೆ ಮಾಡಿದೆಯಮ್ಮ
ಹಸಿರು ತೋರಣ ಕಟ್ಟಿದೆಯಮ್ಮ
ತುಪ್ಪದ ದೀಪ ಬೆಳಗಿದೆಯಮ್ಮ
ಮಲ್ಲಿಗೆ ಮಾಲೆ ಕಾದಿದೆಯಮ್ಮ
ಕಮಲಾಕ್ಷಿ ಕಮಲಮುಖಿ ಕಮಲೋದ್ಭವೆ ಬಾರೆ

ಬಾಗಿಲ ತೆರೆದಿರುವೆ ತಾಯೆ ಪೂಜೆಗೆ ಕಾದಿರುವೆ

ನೀನು ಬರುವಾಗ ಹೊನ್ನ ಕಾಲ್ಗೆಜ್ಜೆ ನಾದ ನಾ ಕೇಳುವಂತೆ
ನಿನ್ನ ನಗೆಯಿಂದ ನನ್ನ ಭಾಯವೆಲ್ಲಾ ಓಡಿ ಮರೆಯಾಗುವಂತೆ
ಮನೆಯು ಬೆಳಕಾಗಿ ಮನವು ಬೆಳಕಾಗಿ ಬಾಳು ಬೆಳಕಾಗುವಂತೆ
ದಯಮಾಡಿಸು ನಾರಾಯಣನ ಹೃದಯೇಶ್ವರಿಯೇ

ಬಾಗಿಲ ತೆರೆದಿರುವೆ ತಾಯೆ ಪೂಜೆಗೆ ಕಾದಿರುವೆ

ನಿನ್ನ ಮನೆಯೆಂದು ನಿನ್ನ ಗುಡಿಯೇಮ್ದು ಬಂದು ಸ್ಥಿರವಾಗಿ ನೆಲೆಸು
ಬಂದ ಕ್ಷಣದಿಂದ ತಂದ ಸುಖ-ಶಾಂತಿ ನಮ್ಮ ಬದುಕಲ್ಲಿ ಬೆರೆಸು
ನಿತ್ಯ ಹರಿ ಪೂಜೆ ನಿತ್ಯ ಗುರು ಸೇವೆಯಲ್ಲಿ ನಡೆಯಂತೆ ಹರಸು
ದಯೆ ತೋರಿಸು ಶರಣೆನ್ನುವೆ ಸೌಭಾಗ್ಯದ ನಿಧಿಯೆ

ಬಾಗಿಲ ತೆರೆದಿರುವೆ ತಾಯೆ ಪೂಜೆಗೆ ಕಾದಿರುವೆ
ಸೇವೆಯ  ಸ್ವೀಕರಿಸು ಬಾ ಭಾಗ್ಯಲಕ್ಷ್ಮಿಯೆ
ಸೇವೆಯ  ಸ್ವೀಕರಿಸು ಬಾ ಭಾಗ್ಯಲಕ್ಷ್ಮಿಯೆ
ಬಾಗಿಲ ತೆರೆದಿರುವೆ ತಾಯೆ ಪೂಜೆಗೆ ಕಾದಿರುವೆ




ಚಿತ್ರ : ಪೇಮಾನುಬಂಧ
ಸಂಗೀತ : ರಾಜನ್ ನಾಗೇಂದ್ರ
ಸಾಹಿತ್ಯ : ಸಿ. ಉದಯ್ ಶಂಕರ್ 
ಗಾಯಕಿ : ಎಸ್ . ಜಾನಕಿ 

ನಿಮಗೆಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು!

Tuesday, July 24, 2012

ಗುಬ್ಬಿ ಮರಿ ಎಲ್ಲಮ್ಮ?



ಗುಬ್ಬಿ ಮರಿ ಎಲ್ಲಮ್ಮ?
ಕಣ್ಣಿಗೇಕೋ ಕಾಣದಮ್ಮ
ನನ್ನ ಸಂಗ ಬೇಡವೆಂದು
ತೊರೆದು ಹೋಯಿತೇನಮ್ಮ?

ಕಾಗೆಗೆ ಗೆಳೆಯನಿಲ್ಲಮ್ಮ
ಕಾಳನು ತಿನ್ನುವರಿಲ್ಲಮ್ಮ
ಏಕೆ ಹೀಗಾಯಿತೆಂದು
ಒಮ್ಮೆ ನನಗೆ ಹೇಳಮ್ಮ

ಆಟಿಕೆ ಗುಬ್ಬಿ ಬೇಡಮ್ಮ
ಹಾರುವ ಗುಬ್ಬಿ ತೋರಿಸಮ್ಮ
ಮರದ ಪುಟ್ಟ ಗೂಡಿನಲ್ಲಿ
ಕೂರುವ ಗುಬ್ಬಿ ಬೇಕಮ್ಮ

Saturday, June 30, 2012

ಪೇಪರ್ ಎಲೆಗಳ ಮರ!

ಪುಟ್ಟಿ ಪೈಂಟ್ ಮಾಡಲು ಕುಳಿತಾದ ಕೆಲವೊಮ್ಮೆ ’ಏನು ಮಾಡೋಣ ಅಮ್ಮ?’ ಅಂತ ಕೇಳ್ತಾಳೆ. ನಿನ್ನಿಷ್ಟ ಪುಟ್ಟಿ ಏನಾದ್ರೂ ಮಾಡು ಅನ್ನೋ ಮಾತು ಕೆಲವೊಮ್ಮೆ ಅವಳಿಗೆ ಅಸ್ರಿ ಅನಿಸೊಲ್ಲ. ಆಗೆಲ್ಲಾ ನಾನು ಅಂತರ್ಜಾಲದಲ್ಲಿ ಹುಡುಕಿ ಉಳಿಸಿಕೊಂಡಿದ್ದ ಮಕ್ಕಳ ಆರ್ಟ್ ಫೋಟೋಗಳನ್ನು ತೋರಿಸಿ ಅದರಲ್ಲಿ ಯಾವುದು ಮಾಡಲು ಅವಳು ಇಷ್ಟಪಡ್ತಾಳೋ ಅದನ್ನ ಮಾಡೊದು ಅಂದ್ರೆ ಮಾಡಲು ಪ್ರಯತ್ನಿಸೋದು!
ನಿನ್ನೆ ಕೂಡ ಹಾಗೆ ಆಯ್ತು. ಅವಳ ಅಂದಿನ ಆಯ್ಕೆ ಈ ಪೇಪರ್ ಮರ. ಸರಿ, ಅಂದು ವಾಕ್ ಹೋದಾಗ ಎಂದಿನಂತೆ ಎಲೆಗಳನ್ನ ಕಿತ್ತು ಮನೆಗೆ ತಂದು ಅವುಗಳನ್ನು ಪೇಪರ್ ನ ಕೆಳಗೆ ಇಟ್ಟು, ಮೇಲೆ ಕ್ರಯಾನ್ಸ್ ನಿಂದ ಉಜ್ಜಿದೆವು. ಇದು ಪುಟ್ಟಿಗೆ ಬಲು ಇಷ್ಟ. ಮೊದಲೂ ಇದನ್ನ ಬಹಳ ಸರ್ತಿ ಮಾಡಿದ್ದಾಳೆ!
ಆಮೇಲೆ ಅವುಗಳನ್ನು ಕತ್ತರಿಸಿದ್ದು. ಪುಟ್ಟಿಗೆ ಇನ್ನೂ ಬೇಕಾದ ಆಕಾರಕ್ಕೆ ತಕ್ಕಂತೆ ಕತ್ತರಿಸಲು ಬರೋಲ್ಲ, ಹಾಗಾಗಿ ಆ ಕೆಲಸ ನನ್ನದಾಯ್ತು. ಆಮೇಲೆ ಅವುಗಳನ್ನು ಪೇಪರ್ ಟವೆಲ್ ನ ಖಾಲಿ ಟ್ಯೂಬಿಗೆ ಅಂಟ್ಸಿದೆವು :)

ಎಲೆಗಳ ಹಿಂದೆ ಅಕ್ಷರಗಳ ಪ್ರಿಂಟ್ ಕಾಣಿಸಿತಾ? ಪುಟ್ಟಿಗೆ ನಾನು ಬಹುತೇಕ ಯಾವಾಗಲೂ ಕೊಡುವುದು, ಒಂದು ಕಡೆ ಪ್ರಿಂಟ್ ಆಗಿರುವ ಪೇಪರನ್ನೇ, ಅದು ಅವರಪ್ಪನ ಆಫೀಸಿನಲ್ಲಿ ಬಹಳ ಸಿಗುತ್ತೆ. ಕಸದ ಬುಟ್ಟಿ ಸೇರುವ ಬದಲು ಅದು ಪುಟ್ಟಿ ಕೈಸೇರುತ್ತೆ, ಸೇರಿ ಕಲೆಯಾಗಿ ಮಾರ್ಪಡುತ್ತೆ :)

Friday, May 11, 2012

ಗಡಿಯಾರದ ಸಡಗರ

ಗಡಿಯಾರದ ಸಡಗರ gadiyarada sadagara

ಕೋಳಿ ಕೂಗಿತೇಳು ಕಂದ!
ಸೂರ್ಯ ಪೂರ್ವದಲಿ ಬಂದ

ಹೆಚ್ಚು ಮಲಗಲೇನು ಚಂದ?
ಬಾ! ಕಂದ ಬಾ!
ಟಿಕ್! ಟಾಕ್! ಟಿಕ್! ಟಾಕ್!
ಟಿಕ್! ಟಿಕ್! ಟಿಕ್!

ಹಲ್ಲನುಜ್ಜಿ ತಿಂಡಿ ತಿಂದು
ಪಾಠವೋದಿ ಬಳಿಕ ಮಿಂದು
ಊಟಮಾಡಿ ಶಾಲೆಗೆಂದು
ಬಾ! ಕಂದ ಬಾ!
ಟಿಕ್! ಟಾಕ್! ಟಿಕ್! ಟಾಕ್!
ಟಿಕ್! ಟಿಕ್! ಟಿಕ್!

ಶಾಲೆ ಮುಗಿದ ಬಳಿಕ ಓಟ
ಸಂಜೆವರೆಗೆ ಆಟ ಪಾಟ
ಮನೆಗೆ ಬಂದು ಸ್ತೋತ್ರಪಾಠ
ಬಾ! ಕಂದ ಬಾ!
ಟಿಕ್! ಟಾಕ್! ಟಿಕ್! ಟಾಕ್!
ಟಿಕ್! ಟಿಕ್! ಟಿಕ್!

ರಾತ್ರೆ ದೇವಗಡ್ಡ ಬಿದ್ದು
ಊಟಮಾಡಿ ನಿದ್ರಿಸಿದ್ದು
ನಾಳೆ ತಿರುಗಿ ಬೇಗನೆದ್ದು
ಬಾ! ಕಂದ ಬಾ!
ಟಿಕ್! ಟಾಕ್! ಟಿಕ್! ಟಾಕ್!
ಟಿಕ್! ಟಿಕ್! ಟಿಕ್!




-ಜಿ. ಪಿ. ರಾಜರತ್ನಂ

Tuesday, March 27, 2012

ಮಂಗಗಳ ಉಪವಾಸ


kannada rhyme mangagala upavasa
Photo via Sweet Clip Art
 ಬಾಳೆಯ ತೋಟದ ಪಕ್ಕದ ಕಾಡೊಳು
ವಾಸಿಸುತಿದ್ದವು ಮಂಗಗಳು
ಮಂಗಗಳೆಲ್ಲವು ಒಟ್ಟಿಗೆ ಸೇರುತ
ಒಂದುಪವಾಸವ ಮಾಡಿದವು .

ಏನೂ ತಿನ್ನದೆ ಮಟ ಮಟ ನೋಡುತ
ಇದ್ದವು ಮರದಲಿ ಕುಳಿತಲ್ಲೇ
"ನಾಳೆಗೆ ತಿಂಡಿಯ ಈಗಲೇ ಹುಡುಕುವ
ಬನ್ನಿರಿ " ಎಂದಿತು ಕಪಿಯೊಂದು

"ಹೌದೌದಣ್ಣಾ" ಎಂದೆನ್ನುತ ಎಲ್ಲವು
ಬಾಳೆಯ ತೋಟಕೆ ಹಾರಿದವು
ತೋಟದಿ ಬಾಳೆಯ ಹಣ್ಣನು ನೋಡಲು
ಆಶೆಯು ಹೆಚ್ಚಿತು ನೀರೂರಿ

"ಸುಲಿದೇ ಇಡುವ ಆಗದೆ " ಎಂದಿತು
ಆಶೆಯ ಮರಿಕಪಿಯೊಂದಾಗ
"ಹೌದೌದೆನ್ನುತ" ಹಣ್ಣನು ಸುಲಿದವು
ಕೈಯೊಳೆ ಹಿಡಿದು ಕುಳಿತಿರಲು

"ಕೈಯ್ಯಲ್ಲೇತಕೆ ಬಾಯೊಳಗಿಟ್ಟರೆ
ಆಗದೆ ? " ಎಂದಿತು ಇನ್ನೊಂದು
ಹಣ್ಣನು ಬಾಯಲಿ ಇಟ್ಟವು
"ಜಗಿದೇ ಇಡುವೆವು " ಎಂದಿತು ಕಪಿ ಮತ್ತೊಂದು
ಜಗಿದೂ ಜಗಿದೂ ನುಂಗಿದವೆಲ್ಲವು
ಆಗಲೇ ಮುಗಿಯಿತು ಉಪವಾಸ .

(ಕವಿ : ಮಚ್ಚಿಮಲೆ ಶಂಕರನಾರಾಯಣ ರಾವ್ )
ಹಾಡು ಕೇಳಲು ಇಲ್ಲಿ ಕ್ಲಿಕ್ ಮಾಡಿರಿ.

Saturday, March 10, 2012

ನಮ್ಮ ಮನೆಯಲೊಂದು ಪುಟ್ಟ ಪಾಪ

ನಮ್ಮ ಮನೆಯಲೊಂದು ಪುಟ್ಟ ಪಾಪ ಇರುವುದು

ಎತ್ತಿಕೊಳದೆ ಹೋದರದಕೆ ಕೋಪ ಬರುವುದು ।



ಕೋಪಬರಲು ಗಟ್ಟಿಯಾಗಿ ಕಿರಚಿಕೊಳುವುದು

ಕಿರಚಿಕೊಂಡು ತನ್ನ ಮೈಯಪರಚಿಕೊಳುವುದು।



ಮೈಯ ಪರಚಿಕೊಂಡು ಪಾಪ ಅತ್ತುಕರೆವುದು

ಅಳಲು ಕಣ್ಣಿನಿಂದ ಸಣ್ಣ ಮುತ್ತು ಸುರಿವುದು ।



ಪಾಪ ಅಳಲು ಅಮ್ಮ ತಾನು ಅತ್ತುಬಿಡುವಳು

ಅಯ್ಯೊ ಪಾಪ ಎಂದು ಎತ್ತಿಕೊಂಡು ಮುತ್ತು ಕೊಡುವಳು ।



ಪಾಪ ಪಟ್ಟುಹಿಡಿದ ಹಠವು ಸಾರ್ಥವಾಯಿತು

ಕಿರಚಿ ಪರಚಿ ಅಳುವುದೆಲ್ಲ ಅರ್ಥವಾಯಿತು ।।


Friday, March 02, 2012

ತಾರೆಗಳ ತೋಟದಿಂದ ಚಂದಿರ ಬಂದಾ...

ಈ ಹಾಡು ನೆನಪಿದ್ಯಾ ?

ಚಿತ್ರ : ನಮ್ಮ ಮಕ್ಕಳು (೧೯೬೯)
ಸಾಹಿತ್ಯ : ಆರ್.ಎನ್ ಜಯಗೋಪಾಲ್

ಸಂಗೀತ : ವಿಜಯ ಭಾಸ್ಕರ್

ಗಾಯಕಿ : ಎಸ್.ಜಾನಕಿ,ಸಂಗಡಿಗರು


ಚಂ ಚಂ ಚಂ ಚಂ ಚಂ ಚಂ ಚಂ
ಚಂ ಚಂ ಚಂ ಚಂ ಚಂ ಚಂ ಚಂ

ತಾರೆಗಳ ತೋಟದಿಂದ ಚಂದಿರ ಬಂದಾ
ನೈದಿಲೆಯ ಅಂದ ನೋಡಿ ಆಡಲು ಬಂದಾ...ತಾರೆಗಳ..

ಹಾಲಿನ ಕೊಳದಿ ಮಿಂದು ಬಂದು.ಹೊ.ಹೊ.ಹೊ
ಹೂಬಳ್ಳೀ ಉಯ್ಯಾಲೆ ಆಡಿ ನಿಂದು.ಹೊ.ಹೊ.ಹೊ
ಹೇಳಬೇಡವೆಂದು ಸನ್ನೆ ಮಾಡಿ ಮುಂದು
ಮೆಲ್ಲಗೆ ತಾ ಹುವ್ವಿಗಿತ್ತ ಮುತ್ತನೊಂದು..ಮುತ್ತನೊಂದು...ತಾರೆ..

ಹೂವಿನ ರಾಣಿಯ ಜೊತೆಗೂಡಿ .ಹೊ.ಹೊ.ಹೊ
ನಗುವ ಸಖನ ಪರಿ ನೋಡಿ .ಹೊ.ಹೊ.ಹೊ
ಕೋಪದಿಂದ ಕೂಡಿ ಕಂದು ಮುಖ ಬಾಡಿ
ತಾರೆಗಳು ನೋಡುತ್ತಿತ್ತು ದೂರ ಓಡಿ..ದೂರ ಓಡಿ...ತಾರೆ..

ಮೂಡಿರೆ ಬಾನಲ್ಲಿ ಕೆಂಪು ಬಣ್ಣಾ .ಹೊ.ಹೊ.ಹೊ
ಚಂದಿರ ತೆರೆದ ತನ್ನ ಕಣ್ಣಾ.ಹೊ.ಹೊ.ಹೊ
ಕಾಲ ಮೀರಿತೆಂದು ಬಾನ ಮೇಲೆ ನಿಂದು
ನೈದಿಲೆಗೆ ಕೈಯ್ಯ ಬೀಸಿ ಹೋದ ಮುಂದು..ಹೋದ ಮುಂದು

ಚಂದಿರನ ಆಟ ನೋಡಿ ನಕ್ಕನು ಬಾನೂ
ನೈದಿಲೆಯು ತನ್ನ ಮುಖ ಮುಚ್ಚಿತು ತಾನೂ..

ಲಾ ಲ ಲಲ್ಲ ಲಾ ಲ ಲಲ್ಲ ಲಾ ಲ ಲಲ್ಲ ಲಾ
ಲಾ ಲ ಲಲ್ಲ ಲಾ ಲ ಲಲ್ಲ ಲಾ ಲ ಲಲ್ಲ ಲಾ....

Saturday, February 25, 2012

ಬುಗುರಿ


ನನ್ನಯ ಬುಗುರಿ ಬಣ್ಣದ ಬುಗುರಿ’ಗುರು ಗುರು’ ಸದ್ದನು ಮಾಡುವ ಬುಗುರಿಜಾಳಿಗೆ ಸುತ್ತಿ ಕೈಯನು ಎತ್ತಿಬೀಸಲು ಭರದಿಸುತ್ತುವ ಬುಗುರಿ
ಹೊಡೆತಕೆ ಅ೦ಜದೆ ಕೆಚ್ಚೆದೆಯಿ೦ದಲಿ
’ಗಿರಿ ಗಿರಿ’ ತಿರುಗುವಮೆಚ್ಚಿನ ಬುಗುರಿ
ಅ೦ಗೈ ಮೇಲೆ
ಆಡುವ ಬುಗುರಿಕಚಗುಳಿಯಿಕ್ಕುವ ಮೋಜಿನ ಬುಗುರಿ
ಕಾಮನ ಬಿಲ್ಲನು
ಭೂಮಿಗೆ ಇಳಿಸಿ’ಗರ ಗರ’ ಸುತ್ತುವಬಣ್ಣದ ಬುಗುರಿ

Sunday, February 05, 2012

ಎಳೆಯುತ ಗಾಡೀ, ಎತ್ತಿನ ಜೋಡಿ



ಎಳೆಯುತ ಗಾಡೀ ! ಎತ್ತಿನ ಜೋಡಿ


ದಡ ಬಡ ಸದ್ದಿನ ನಮ್ಗಾಡಿ

ಕೊರಳಿಗೆ ಗ೦ಟೆ ! ಕ೦ಚಿನ ಗ೦ಟೆ

ಘಣ ! ಘಣ ! ಗ೦ಟೆ

ಝಣ ! ಝಣ ! ಝಣ ! ಗ೦ಟೆ

ಕೊ೦ಬಿನ ಕಳಸಕೆ ಕಟ್ಟಿದ ಗೆಜ್ಜೆ

ಕಡಾಣಿ ಕ೦ಬಿಗೆ ಹಾಕಿದ ಗೆಜ್ಜೆ

ಝಣ ! ಝಣ ! ಝಣ ! ಗೆಜ್ಜೆ

ತಾಳಕೆ ಇಡುತಿಹ ಎತ್ತಿನ ಹೆಜ್ಜೆ

ಘಲು ! ಘಲು ! ಘಲು ! ಗೆಜ್ಜೆ

ಘಲು ! ಘಲು ! ಘಲು ! ಗೆಜ್ಜೆ

ಗಾಲಿಯು ಉರುಳುವ ಕಟಕಟ ಸದ್ದು

ಗಾಡಿಯು ಓಡುವ ದಡ ಬಡ ಸದ್ದು

ದಡ ! ಬಡ ! ದಡ ! ಸದ್ದು

Monday, January 16, 2012

ಸಂಕ್ರಾಂತಿ 2012

ಈ ವರ್ಷ ಸಂಕ್ರಾಂತಿ ಹಬ್ಬದ ಫೋಟೋಗಳು ಇಲ್ಲಿವೆ

Monday, January 09, 2012

ಸಂಕ್ರಾಂತಿ ಚಟುವಟಿಕೆಗಳು

ಸಂಕ್ರಾಂತಿ ಕುರಿತು ಹೆಚ್ಚಿನ ಮಾಹಿತಿ ಮತ್ತು ವಿವರಗಳು ಇಲ್ಲಿ

ಹಬ್ಬಕ್ಕೆ ಸುಂದರ ಬ್ಯಾನರ್ ಮಾಡೊದು ಹೇಗೆ

ಸಂಕ್ರಾಂತಿ ಕಲರಿಂಗ್ ಪುಟಗಳು ಇಲ್ಲಿವೆ

Sunday, January 08, 2012

”ಈ ಸಂಭಾಷಣೆ’ ಪುಟ್ಟಿ ಧ್ವನಿಯಲ್ಲಿ

ಮುಂದಿನ ಪಾರ್ಟಿಯಲ್ಲಿ ಒಂದೆರೆಡು ಹಾಡುಗಳನ್ನು ಹಾಡಲೇಬೇಕೆಂದು ’ಹೇಮಂತ್’ಗೆ  ಗೆಳೆಯರು ಒತ್ತಾಯ ಮಾಡಿದ್ದರು. ಕಾಲೇಜು ದಿನಗಳ ನಂತರ ಆಗಾಗ್ಗೆ ಗುನುಗುವುದು ಬಿಟ್ಟರೆ ಹಾಡೋದು ಪೂರ್ತಿಯಾಗಿ ನಿಲ್ಲಿಸಿದ್ದ ಇವರು, ಈ ಪಾರ್ಟಿಯ ಸಲುವಾಗಿ ಕೆಲವೊಂದು ಹಾಡುಗಳನ್ನು ದಿನವೂ ಹಾಡಿ ಪ್ರ್ಯಾಕ್ಟೀಸ್ ಮಾಡಲು ಶುರು ಮಾಡಿದ್ರು. ಅಪ್ಪನ ಹಾಡು ಕೇಳಿ, ಕೇಳಿ, ಪುಟ್ಟಿಯೂ ಅವುಗಳನ್ನು ಕಲಿತುಬಿಟ್ಟಳು.
"ಅಪ್ಪ ನಿನ್ನ ಹಾಡು ನಾನೂ ಹಾಡ್ತೀನಿ ಕೇಳು" ಅಂತ ಮೈಕ್ ಹಿಡಿದು ಹಾಡಿಯೇಬಿಟ್ಟಳು. ಯಾವಾಗ ಅಪ್ಪ ಹಾಡಬೇಕು, ಯಾವಾಗ ಅಮ್ಮ(ಹೆಣ್ಣು ಧ್ವನಿ) ಎಲ್ಲವೂ ಚಾಚೂ ತಪ್ಪದೆ ಹೇಳಿ ನಮ್ಮನ್ನು ಬೆರಗುಗೊಳಿಸಿದಳು:)) ಹಿನ್ನಲೆ ಸಂಗೀತದ ಜೊತೆ ಹಾಡುವುದು ಅವಳಿಗೆ ಹೊಸ ಆಟವಾಗಿದೆ. ಕಾರಣಾಂತರಗಳಿಂದಾಗಿ ಹೇಮಂತ್ ಪಾರ್ಟಿಯಲ್ಲಿ ಹಾಡಲಾಗಲಿಲ್ಲ. ಆದ್ರೆ ನನಗಂತೂ ಖುಷಿಯೋ ಖುಷಿ!! ನಾನು ಹೇಳಿ ಕೊಡದೇ ಪುಟ್ಟಿ ಅವಳಾಗಿಯೇ ಕನ್ನಡ ಹಾಡು ಕಲಿತಿದ್ದಾಳೆ, ಅದಕ್ಕಿಂತ ಹೆಮ್ಮೆಯುಂಟೆ :))
ಪುಟ್ಟಿಗೆ ಮಕ್ಕಳ ಪದ್ಯ/ ಹಾಡುಗಳನ್ನು ಹೇಳಿಕೊಡುವಾಗ ಅವಳ ಜೊತೆ ಹಾಡುವುದು ಬಿಟ್ಟರೆ ನಾನು ಹಾಡೊಲ್ಲ. ಹಾಡಲು ಬಾರದಿದ್ದರೂ ಇನ್ನ್ಮೇಲೆ ಅವಳಿಗಾಗಿ ಹಾಡಬೇಕು ಅಂತ ನಿರ್ಧರಿಸಿರುವೆ ;)
ಅವಳ ಹಾಡು ಕೇಳಿ....