Wednesday, July 21, 2010

ಹ್ಯಾಪಿ ಬರ್ತ್ ಡೇ ರತ್ನ ಅಜ್ಜಿ!!!

ಇವತ್ತು ನನ್ನ ಅಮ್ಮ ಅಂದ್ರೆ ಪುಟ್ಟಿಯ ಅಜ್ಜಿಯ ಹುಟ್ಟುಹಬ್ಬ. ಅಜ್ಜಿಗೆ ಪುಟ್ಟಿ ಹ್ಯಾಪಿ ಬರ್ತ್ ಡೇ ಹೇಳಿದ್ದು ಹೀಗೆ....


ಬರ್ತ್ ಡೇ ಅಂದ ಕೂಡಲೆ ತಲೆಗೆ ಪಾರ್ಟಿ ಟೋಪಿ ಹಾಕಿಕೊಳ್ತಾಳೆ:)


Tuesday, July 13, 2010

ಬರೆಯೋ ಹಾದಿಯಲ್ಲಿ ಪುಟ್ಟಿಯ ಮೊದಲ ಕೆಲವು ಹೆಜ್ಜೆ!

ಪುಟ್ಟಿ ABC ಹಾಡು ಹೇಳೋಕೆ ಶುರು ಮಾಡಿ ಬಹಳ ದಿನಗಳೇ ಆಗಿದೆ. ಆದ್ರೆ ಎಲ್ಲಾ ಅಕ್ಷರಗಳನ್ನ ಗುರುತಿಸೋದು ಬರುತ್ತಿರಲಿಲ್ಲ, ಆದ್ರೆ ಆಗ್ಲೇ A,B,D ಬರಿಯೋಕೆ ಶುರು ಮಾಡಿದ್ಲು. ವಾರಕ್ಕೊಂದು ಅಕ್ಷರ ಹೇಳಿ ಕೊಡಿ, ಜೊತೆಗೆ ಆ ವಾರವಿಡೀ ಒಂದೇ ಅಕ್ಷರದ ಕಲರಿಂಗ್ ಮಾಡಿಸಿ ಅನ್ನೋ ಸಲಹೆ ಗೆಳತಿ ಶುಭಾ (ಶಕ್ತಿ ಅಮ್ಮ) ಕೊಟ್ಟ್ರು.
ಅಂತರ್ಜಾಲದಲ್ಲಿ ಅಕ್ಷರಗಳ ಕಲರಿಂಗ್ ಪೇಜ್ಸ್ ಹುಡುಕುತ್ತಾ “Letter of the weekಅನ್ನೋ ಈ ತಾಣದ ಪರಿಚಯವಾಯ್ತು. ಅಲ್ಲಿನ ಆಟ ಜೊತೆಗೆ ಪಾಠ ತುಂಬಾ ಇಷ್ಟವಾಯ್ತು. ಅದರಲ್ಲಿದ್ದ ಹಾಗೆ ಎಲ್ಲಾ ಅಲ್ಲದಿದ್ದರೂ ಅಲ್ಪ ಸ್ವಲ್ಪ ಮಾಡಲು ಶುರು ಮಾಡಿದೆ. ಜೊತೆಗೆ starfall.com ನಲ್ಲಿರುವ ಅಕ್ಷರ ನೋಡ್ತಾ ಹೋದ್ವಿ, ಆದ್ರೆ ಪುಟ್ಟಿ ಬರಿ A ನೋಡಿ ಸುಮ್ಮನಾಗುತ್ತಿರಲಿಲ್ಲ ದಿನಕ್ಕೆ ನಾಲ್ಕೈದು ಅಕ್ಷರ ನೋಡುತ್ತಿದ್ದಳು. ಅವಳು ಪೈಂಟ್ ಮಾಡಿದ/ ತಿದ್ದಿದ ಕೆಲವು A ಗಳು.

ಹೀಗೆ ಒಂದು ವಾರವಿಡೀ A ಜಪ ನೋಡಿ, ಕೇಳಿ ಪುಟ್ಟಿಗೆ ಬೋರ್ ಆಯ್ತೋ ಏನೋ. ಎರಡನೆ ವಾರ ಅವಳಾಗಿಯೇ ತನ್ನ alphabet floor mat ನಲ್ಲಿರೋ ಅಕ್ಷರಗಳನ್ನು ಗುರುತಿಸುತ್ತಾ ಹೋದ್ಲು, ಅಲ್ಲದೆ ಎಲ್ಲದರ phonic sound ಕೂಡ ಹೇಳೋಕೆ ಶುರು ಮಾಡಿದ್ಲು. ಈಗವಳು Capital ಮತ್ತು Lowercase letters ಎರಡನ್ನೂ ಗುರುತಿಸಿತ್ತಾಳೆ. ಆದ್ರೆ b, d, p ಮತ್ತು q ಇವುಗಳು ಕೆಲವೊಮ್ಮೆ ತಪ್ಪಾಗುತ್ತವೆ. ಅಲ್ಲಿಗೆ ನಮ್ಮ ವಾರಕ್ಕೊಂದು ಅಕ್ಷರ ಕಾರ್ಯಕ್ರಮ ಮುಗಿದೇ ಹೋಯ್ತು. ಜೊತೆಗೆ ಅಜ್ಜಿ ತಾತ ಇಲ್ಲಿದ್ದರಿಂದ ಪುಟ್ಟಿ ಅವರೊಡನೆ ಅಲ್ಲಿ ಇಲ್ಲಿ ಊರು ಸುತ್ತುವುದು ಹೆಚ್ಚಾಯ್ತು. ಆದ್ರೆ ಎಲ್ಲಿ ಹೋದ್ರು ಅಲ್ಲಿ ಅಕ್ಷರಗಳನ್ನ ಗುರುತಿಸೋದು ಹೊಸ ಆಟವಾಯ್ತು. ಅಂಗಡಿಯಲ್ಲೂ ಅದೇ ಆಟ, ತನ್ನ ಪುಸ್ತಕಗಳಲ್ಲೂ ಅದೇ ಹುಡುಕಾಟ. ಇವುಗಳೆಲ್ಲದರ ಜೊತೆಗೆ ಬರಿಯೊದು ಕೂಡ ಜಾಸ್ತಿ ಆಯ್ತು. ದಿನೆ ದಿನೆ ಅವಳ ಬರವಣಿಗೆ ಹೆಚ್ಚುತ್ತಿದೆ. ತನ್ನ ನೆಚ್ಚಿನ chalkboard ಮೇಲೆ ಅಕ್ಷರಗಳನ್ನ ಬರಿಯುತ್ತಿರುವ ಪುಟ್ಟಿ.