Tuesday, October 20, 2009

ಬೆಳಕನು ಚೆಲ್ಲಿ ಬಂದೇ ಬಂತು ದೀಪಾವಳಿ..

ಎರಡು ದಿನ ಅಪ್ಪನಿಗೆ ರಜೆಯಿದ್ದರಿಂದ ಪುಟ್ಟಿ ವರ್ಷ ದೀಪಾವಳಿಯನ್ನ ತುಂಬಾನೇ ಖುಶಿಯಾಗಿ ಆಚರಿಸಿದ್ಲು. ಅಮ್ಮಬಣ್ಣ ಬಣ್ಣದ ದೀಪಗಳನ್ನ ಮಾಡೊವಾಗ ಜೊತೆಯಲ್ಲಿ ಕುಳಿತು ತಾನೂತಪಾಚಿ(ಚಪಾತಿ)’ ’ಬಾಲ್ಇತ್ಯಾದಿ ಮಾಡುತ್ತಾ, ಮಾಡಿದ ಮಣ್ಣಿನುಂಡೆಯನ್ನ ಬಾಯಿಗೆ ಹಾಕಲು ಹೋಗಿ ಅಮ್ಮನಿಂದ ಬೈಯಿಸಿಕೊಂಡಿದ್ದು ಎಲ್ಲಾ ಆಯ್ತು.
ಹಬ್ಬದ ದಿನ ದೀಪಗಳನ್ನ ಹಚ್ಚಿದ್ದು ಹೀಗೆ..

ಸುರು ಸುರು ಸುರ್ ಸುರ್ಬತ್ತಿ ಹಚ್ಚಿದ್ದು ಹೀಗೆ !
ಕಳೆದ
ವರ್ಷದ ಹಬ್ಬದ ಫೋಟೋ...

Thursday, October 15, 2009

ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು!

ಮನೆ ಮನವ ಬೆಳಗಲು ಮತ್ತೆ ಬಂದಿದೆ ದೀಪಾವಳಿ. ಜ್ಞಾನದ ಅಂಧಕಾರ ಅಳಿಸಿ, ಅರಿವನು ಅರಳಿಸುವ ಹಣತೆಗಳು ಎಲ್ಲೆಲ್ಲೂ ಬೆಳಗಲಿ:)

ವಾರಾಂತ್ಯದಲ್ಲಿ ಬಂದಿರುವುದರಿಂದ ಗೆಳೆಯರ ಜೊತೆಗೂಡಿ ಹಬ್ಬ ಆಚರಿಸಬಹುದು. ಕಳೆದ ವರ್ಷ ನನ್ನ ಕೆಲವು ಸ್ನೇಹಿತೆಯರು ಮಾಡಿದ್ದ ಬಣ್ಣಬಣ್ಣದ ದೀಪಗಳ ಫೋಟೋ ಮತ್ತೆ ಕೆಲವು ದೀಪಾವಳಿ ಹಾಡುಗಳನ್ನು ಇಲ್ಲಿ ಹಂಚಿಕೊಂಡಿದ್ದೆ. ಈ ವರ್ಷ ನಾನೂ ಕೂಡ ಮಕ್ಕಳಾಟದ ಮಣ್ಣಿನಿಂದ(Play Dough) ಕೆಲವು ದೀಪಗಳನ್ನು ಮಾಡಿರುವೆ ನೋಡಿ!
ಹಾಗೆಯೆ, ನಿಂತು ಹೋಗಿರುವ ಹೇಮಂತರ ಬ್ಲಾಗನ್ನು ಸದ್ಯಕ್ಕೆ ನಾನೆ ಮುಂದುವರೆಸುವೆ. ಹಬ್ಬಕ್ಕೆಂದು ಅಲ್ಲೊಂದು ಲೇಖನ ಬರೆದಿರುವೆ ಓದಿ/ ನೋಡಿ ಬನ್ನಿ. Deepavali wishes on stamps

ಕೆ.ಎಸ್.ನರಸಿ೦ಹಸ್ವಾಮ ಈ ಕವನ ನಿಮ್ಮೊ೦ದಿಗೆ ಹ೦ಚಿ ಕೊಳ್ಳುವ ಆಸೆಯಾಯ್ತು.

ದೀಪಾವಳಿ


ಹೂವು ಬಳ್ಳಿಗೆ ದೀಪ
ಹಸಿರು ಬಯಲಿಗೆ ದೀಪ
ಹುಲಿಯ ಕಣ್ಣಿನ ದೀಪ ಕಾಡಿನಲ್ಲಿ !


ಮುತ್ತು ಕಡಲಿಗೆ ದೀಪ
ಹಕ್ಕಿ ಗಾಳಿಗೆ ದೀಪ
ಗ್ರಹತಾರೆಗಳ ದೀಪ ಬಾನಿನಲ್ಲಿ.

ಬಲ್ಮೆ ತೋಳಿಗೆ ದೀಪ
ದುಡಿಮೆ ಬೆವರಿನ ದೀಪ
ಸಹನೆ ಅನುಭವ ದೀಪ ಬದುಕಿನಲ್ಲಿ !

ಮುನಿಸು ಒಲವಿಗೆ ದೀಪ
ಉಣಿಸು ಒಡಲಿಗೆ ದೀಪ
ಕರುಣೆ ನ೦ದಾ ದೀಪ ಲೋಕದಲ್ಲಿ

ತೋರಣನ ತಳಿರಲ್ಲಿ
ಹೊಸಿಲ ಹಣತೆಗಳಲ್ಲಿ
ಬಾಣಬಿರು ಸುಗಳಲ್ಲಿ ನಲಿವು ಮೂಡಿ !


ಕತ್ತಲೆಯ ಪುಟಗಳಲಿ
ಬೆಳಕಿನಕ್ಷತ್ರಗಳಲಿ
ದೀಪಗಳ ಸ೦ದೇಶ ಥಳಿಥಳಿಸಲಿ.

ಬೆಳಕಿನಸ್ತಿತ್ವವನೆ
ಅಣಕಿಸುವ ಕತ್ತಲೆಗೆ
ತಕ್ಕ ಉತ್ತರವಲ್ಲಿ ಕೇಳಿಬರಲಿ !


ದೀಪಾವಳಿಯ ಜ್ಯೋತಿ
ಅಭಯ ಹಸ್ತವನೆತ್ತಿ
ಎಲ್ಲರಿಗೆ ಎಲ್ಲಕ್ಕೆ ಶುಭಕೋರಲಿ.

Wednesday, October 14, 2009

ಮಣಿ ಮಣಿ ಮಣಿ ಮಣಿ ಮಣಿಗೊಂದು ದಾರ


ಮಣಿ ಮಣಿ ಮಣಿ ಮಣಿ ಮಣಿಗೊಂದು ದಾರ
ದಾರದ ಜೊತೆ ಮಣಿ ಸೇರಿ ಚೆಂದದೊಂದು ಹಾರ
ತಾನಿ ತಂದಾನ ತಂದನ ತಂದಾನ ತಂದನ ತಂದಾನ ನ... ಒಂದು ಒಗಟಿನಂತೆ, ಸವಾಲ್-ಜವಾಬ್ ಎಂಬಂತಿರುವ "ಜನುಮದ ಜೋಡಿ" ಚಿತ್ರದ ಈ ಹಾಡು ನನಗಿಷ್ಟ:)
ಇಲ್ಲಿ ಈಗ ನಿಧಾನಕ್ಕೆ ಛಳಿ ಶುರುವಾಗ್ತಾಯಿದೆ. ಇನ್ನ್ಮೇಲೆ ಪುಟ್ಟಿನ ಹೊರಗೆ ಕರ್ಕೊಂಡು ಹೋಗೋದು ಕಷ್ಟ. ಮನೆಯಲ್ಲೇ ಹೊಸ ಹೊಸ ಆಟ ಆಡಿಸ್ಬೇಕು. ಜೊತೆಗೆ ಅವಳ ಕೈ ಬೆರೆಳುಗಳಿಗೆ ಒಳ್ಳೆ ಎಕ್ಸರ್ಸೈಸ್ ಕೂಡ ಆಗಬೇಕು ಅಂತ ಮೊನ್ನೆ ಅವಳಿಗೆ ಒಂದು ಶೂ ಲೇಸ್ ಕೊಟ್ಟು, ಕೆಲವು ಮಣಿಗಳನ್ನ ಬಟ್ಟಲಿನಲ್ಲಿ ಹಾಕಿಕೊಟ್ಟೆ. ಒಂದೇ ಒಂದು ಸರ್ತಿ ನಾನು ಪೋಣಿಸಿ ತೋರಿಸಿದೆ ಅಷ್ಟೆ. ಈಗ ಇದು ದಿನ ನಿತ್ಯದ ಆಟ. ದಿನಕ್ಕೆ ಒಂದೆರಡು ಸರ್ತಿಯಾದ್ರೂ ಮಣಿಗಳನ್ನ ಪೋಣಿಸಿ ’ಸರ’ ’ಸರ’ ಅಂತ ತನ್ನ ಕೊರಳಿಗೆ ಸುತ್ತಿಕೊಳ್ತಾಳೆ.:)
Its getting colder here day by day. And our outdoor activities are coming to an end. Looking for more indoor activities for putti. Last week, I gave her a shoe lace(new) and some beads to thread. Showed her how to do it once and soon she got it. It has become a favorite activity now. Loves to wear it as a necklace:)

ನೀವು ನಂಬಿದ್ರೆ ನಂಬಿ ಇದು ಅವಳಿಗೆ ನಾನು ಮಣಿ ಕೊಟ್ಟ ಮೊದಲ ದಿನ ತೆಗೆದ ವಿಡಿಯೋ! And believe me this video was taken on the day one of her beads exploration, she looks like a pro!!ಅಂದ ಹಾಗೆ ಮಕ್ಕಳು ಮಣಿಯನ್ನ ಬಾಯಿಗೆ ಹಾಕೋತಾರೆ ಅನ್ನುವ ಭಯವಿದ್ದರೆ ಮಕ್ಕಳು ತಿನ್ನುವ ’ಫ್ರೂಟ್ ಲೂಪ್ಸ್’ ಪೋಣಿಸಲು ಕೊಡಿ!!

Sunday, October 11, 2009

ಕ್ಯೂಟ್ ಶೋಜೊ !!

ನಮ್ಮೂರಲ್ಲಿ ಪ್ರತಿ ವರ್ಷ ನಡೆಯೋ ’ಏಷಿಯನ್ ಫೆಸ್ಟಿವಲ್” ನೋಡಲು ಹೋದ ವರ್ಷದಂತೆ ಪುಟ್ಟಿ ರೆಡಿಯಾಗಿ ಅಪ್ಪ ಅಮ್ಮನ ಜೊತೆ ಹೋಗಿದ್ಲು. ಅಲ್ಲಿ ವಿವಿ ದೇಶದ ಜನರು, ಅವರ ವೇಷ, ಹಾಡು, ಕುಣಿತ ಎಲ್ಲಾ ನೋಡುತ್ತಾ ಮಜ ಮಾಡಿದ್ಲು. ವರ್ಲ್ಡ್ ಮ್ಯಾಪಿನಲ್ಲಿ ತನಗೆ ಅತಿ ಇಷ್ಟವಾದ ಪುಟ್ಟ ಜಪಾನ್ ದೇಶದ ಡ್ರೆಸ್ ಕೂಡ ಹಾಕಿಸಿಕೊಂಡು ಖುಶಿಪಟ್ಟ್ಲು. ಇವಳನ್ನ ನೋಡಿ ಜಪಾನೀಯರು ’ವೆರಿ ಕ್ಯೂಟ್ ಶೋಜೊ(ಚಿಕ್ಕ್ ಹುಡುಗಿ)’ ಅಂತದ್ರು :)ಅಲ್ಲದೆ ಅವಳ್ ಹೆಸರನ್ನು ಜಪಾನಿ, ಚೀನಿ ಮತ್ತು ಕೊರಿಯಾ ಭಾಷೆಯಲ್ಲಿ ಬರೆಸಿಕೊಂಡು ಬಂದ್ಲು.
ಮತ್ತೆ ಮುಂದಿನ ಲೇಖನದಲ್ಲಿ ಸಿಗುವಾ... ಅಲ್ಲಿಯವರೆಗೆ ’ಸಾಯೊನಾರ’ !!

Monday, October 05, 2009

ಪುಟ್ಟಿಯ ಅಕ್ಷರಾಭ್ಯಾಸ !!ಪುಟ್ಟಿಗೆ ಅಕ್ಷರಾಭ್ಯಾಸ ಮಾಡಿಸಲು ಅಟ್ಲಾಂಟ ದೇವಸ್ಥಾನಕ್ಕೆ ಹೋಗೋಣ ಅಂತ ಎಲ್ಲಾ ಸಿದ್ದತೆ ಮಾಡಿಕೊಂಡಿದ್ವಿ. ಆದ್ರೆ ಅದೇ ಸಮಯಕ್ಕೆ ಮೂರೂ ಜನ ಫ್ಲೂ ಬಂದು ಮಲಗಿ, ಎದ್ದಿದ್ದರಿಂದ ವಿಜಯದಶಮಿಯ ದಿನ ಸಿಂಪಲ್ಲಾಗಿ ಮನೆಯಲ್ಲೇ ಸರಸ್ವತಿಯ ಪೂಜೆ ಮಾಡಿ ಅವಳ ಕೈಯಲ್ಲಿ ಅಕ್ಕಿಯ ಮೇಲೆ "ಓಂ" ಬರೆಸಿದ್ರು ಹೇಮಂತ್:)

ನವರಾತ್ರಿಯ ಮರು ದಿನ ಅಂದರೆ ವಿಜಯ ದಶಮಿಯಂದು ಮಗುವಿಗೆ ’ಅಕ್ಷರಾಭ್ಯಾಸಮಾಡಿಸುವ ರೂಢಿಯಿದೆ. ಮಗು ಶಿಶು ರೂಪದಲ್ಲಿ ಈ ಜಗತ್ತಿಗೆ ಪ್ರವೇಶಿಸಿದೊಡನೆಯೇ ಯಾರೂ ಕಲಿಸದೆ ಅಮ್ಮಾಅನ್ನುತ್ತದೆ. ಅಳುವಿನ ಮೂಲಕ ಅನ್ನದ ರೂಪದಲ್ಲಿರುವ ಶಕ್ತಿಯನ್ನು ಸಾಕ್ಷಾತ್ಕರಿಸಿಕೊಳ್ಳುತ್ತದೆ. ಇದು ಮಗುವಿನ ದೇಹ ಬೆಳೆಸುತ್ತದೆ. ಆದರೆ ಆತ್ಮಸಾಕ್ಷಾತ್ಕಾರಕ್ಕೆ ಜ್ಞಾನ ಬೇಕು. ಅದು ಅಕ್ಷರ ರೂಪದಲ್ಲಿ ಲಭಿಸುತ್ತದೆ. ವಿಜಯದಶಮಿಯಂದು ವಿದ್ಯಾದೇವಿ ಶಾರದೆಯ ಮುಂದೆ ಜ್ಞಾನದ ಲೋಕಕ್ಕೆ ಹಾದಿ ಸುಗಮವಾಗುವುದು ಎಂದು ಅನಾದಿಕಾಲದಿಂದ ನಮ್ಮಲ್ಲಿರುವ ನಂಬಿಕೆ. ವಿದ್ಯಾರಂಭ ಎಂದರೆ ಅಜ್ಞಾನದ ಕತ್ತಲಿನಿಂದ ಸುಜ್ಞಾನದ ಬೆಳಕಿನೆಡೆಗೆ ಒಯ್ಯುವ ಅಕ್ಷರಾಭ್ಯಾಸ ಎಂದಷ್ಟೇ ಅರ್ಥ. ಇಂದಿನ ಕಂಪ್ಯೂಟರ್ ರೋಬೋಟ್ ಯುಗದಲ್ಲೂ ಅಕ್ಷರಾಭ್ಯಾಸ ಅಷ್ಟೇ ನಿಷ್ಠೆ, ಭಕ್ತಿಯಿಂದ ನಡೆಯುತ್ತಿದೆ. ಮಾತಾಪಿತೃಗಳ ಮೂಲಕ ಲೌಕಿಕ ಬದುಕಿಗೆ ಅಡಿಯಿಡುವ ಮಗು, ವಿದ್ಯಾರಂಭದಂದು ದೇವರ ಇನ್ನೊಂದು ರೂಪವಾದ ಗುರುದರ್ಶನವನ್ನು ಪಡೆಯುತ್ತದೆ. ಗುರು ಸಾಧನೆಯ ಹಾದಿಯಲ್ಲಿ ಮಾರ್ಗದರ್ಶನ ಮಾಡುತ್ತಾನೆ.

ಕಾಗದ, ಸ್ಲೇಟು-ಬಳಪಗಳಿಲ್ಲದೆ ಪುರಾತನ ಶೈಲಿಯಂತೆ ನೆಲದಲ್ಲಿ ಮರಳು ಹರಡಿ ಮಗುವಿನ ಬಲಗೈಯ ತೋರು ಬೆರಳಿನಲ್ಲಿಓಂ’, ಶ್ರೀ’, ‘ಓಂ ಗಣಪತಯೇ ನಮಃಎಂದು ಬರೆಸಿ, ಬಳಿಕ ಆಯಾ ಭಾಷೆಯ ಅಕ್ಷರ ಮಾಲೆಯನ್ನು ಬರೆಸುತ್ತಾರೆ. ಆದರೆ ಮಗುವಿನ ಎಳಸು ಕೈಗಳಿಗೆ ನೋವಾಗದಿರಲೆಂದು ಹೊಸ ಹರಿವಾಣದಲ್ಲಿ ಇರಿಸಿದ ಹೊಸ ಅಕ್ಕಿಯ ಮೇಲೆ ಬೆರಳಿಂದ ಬರೆಯಿಸಿಯೂ ವಿದ್ಯಾರಂಭ ಮಾಡಿಸುವ ಈಗ ಬಳಕೆಯಲ್ಲಿದೆ.

-ಪ್ರಜಾವಾಣಿಯಲ್ಲಿ ಪ್ರಕಟಕೊಂಡಿದ್ದ ಲೇಖನ