Monday, June 30, 2008

ಪುಟಿಗೀಗ ಆರು !!!

ಸಮಯ ಎಷ್ಟು ಬೇಗ ಕಳೆಯುತ್ತೆ ಗೊತ್ತೆ ಆಗೊಲ್ಲ. ಆಗ್ಲೇ ನಮ್ಮ್ ಪುಟ್ಟಿಗೆ ಆರು ತಿಂಗಳು. ಅವಳೀಗ ಕುರ್ಚಿ ಅಥವಾ ಅಮ್ಮ/ ಅಪ್ಪನಿಗೆ ಒರಗಿ ಕುಳಿತುಕೊಳ್ಳುತ್ತಾಳೆ. ಇಷ್ಟು ದಿನ ತನ್ನ ಬರ್ತ್-ಡೇಗಳಲ್ಲಿ ಅಮ್ಮನ ತೊಡೆಯೇರಿ ಕುಳಿತು ಕೇಕ್ ಕಟ್ ಮಾಡುತ್ತಿದ್ದವಳು ಈ ಸರ್ತಿ ಅಪ್ಪ ತಂದಿದ್ದ ವಾಕರ್ ನಲ್ಲಿ ಕುಳಿತು ಅಮ್ಮ ಮಾಡಿದ್ದ ಚಾಕಲೇಟ್ ಕೇಕ್ ಸವಿದಳು :) ಪರಷುರಾಮ್ ಚಿತ್ರದಲ್ಲಿ ಡಾ.ರಾಜ್ ಹಾಡಿರುವ ಹಾಡು....ಲ ಲ ಲ ಲ ಲಾ ಲ ಲ ಲ ಲಾ....ನಗುತ ನಗುತಾ ಬಾಳು ನೀನು ನೂರು...