
ನಮ್ಮ್ ಪುಟ್ಟಿಗೆ ಇವತ್ತಿಗೆ ಏಳು ತಿಂಗಳು ತುಂಬಿತು. ಸ್ವಲ್ಪ ಸಪೊರ್ಟ್ ಕೊಟ್ಟರೆ ಆರಾಮಾಗಿ ಕೂರುತ್ತಿದ್ದವಳು, ಈಗ ಸಲೀಸಾಗಿ ತಾನೆ ಆವುದೆ ಅಧಾರವಿಲ್ಲದೇ ಕೂರುತ್ತಾಳೆ. ಅವಳ ಬಿರ್ತ್’ಡೇಗೆ ಅವಳಪ್ಪ ದಿಸ್ನಿ ಪ್ರಿಂಸೆಸ್ಸ್ ಚೇರ್ ತಂದರು ಅದರಲ್ಲಿ ಕೂರೋದು ಪುಟ್ಟಿಗೆ ಬಲು ಇಷ್ಟ. ಬರ್ತ್’ಡೇ ಬಂದಿದ್ದ ’ಅಭಿ ಅಕ್ಕ’ ಕೇಕ್ ಕಟ್ ಮಾಡಿದ ಮೇಲೆ ಪುಟ್ಟಿಗೆ ಒಂದು ಚೂರು ಕೆಕ್ ತಿನ್ನಿಸಿದಳು. ಅದು ನಮ್ಮ್ ಪುಟ್ಟಿಗೆ ಸಾಕಾಗ್ಲಿಲ್ಲ ಅನ್ನ್ ಸುತ್ತೆ, ಎಲ್ಲರೂ ಆಚೀಚೆ ನೋಡುತ್ತಿದ್ದಾಗ...