ಪುಟ್ಟಿಯ ಹನ್ನೊಂದನೆ ತಿಂಗಳ ಹುಟ್ಟು ಹಬ್ಬ ಬಂದೇ ಬಿಡ್ತು. ಭಾರತಕ್ಕೆ ಅಜ್ಜಿ- ತಾತನ ಮನೆಗೆ ಹೋಗಿದ್ದ ಅವಳ ಫ್ರೆಂಡ್ಸ್ ಶಕ್ತಿ, ಸುಮುಖ್ ಮತ್ತು ಸಿದ್ದಾರ್ಥ್ ಅಣ್ಣ ಇವೆರೆಲ್ಲ ವಾಪಸ್ ಬಂದಿದ್ರು. ಪುಟ್ಟಿ ಜೊತೆ ಆಡಲು ಹೊಸ ಹೊಸ ಆಟ ಕಲಿತು ಬಂದಿದ್ದ್ರು. ಸದ್ಯದಲ್ಲೇ ತಾನೂ ಅಪ್ಪ-ಅಮ್ಮನ ಜೊತೆ ಇಂಡಿಯಾದಲ್ಲಿರುವ ಅಜ್ಜ-ಅಜ್ಜಿ ಮನೆಗೆ ಹೋಗೋದಕ್ಕೆ ರೆಡಿಯಾಗ್ತಾ ಇರುವ ಪುಟ್ಟಿ ಅವರಿಂದ ಹಲವು ಟಿಪ್ಸ್ ತಗೊಂಡ್ಲು. ಎಲ್ಲರೂ ಕೇಕ್ ತಿಂದು ಸಂತಸ ಪಟ್ಟರು...