Saturday, March 14, 2009

ಪುಟ್ಟಿ ಕಣ್ಣೆಲ್ಲಿ?

ಪುಟ್ಟಿಗೆ ಎಣ್ಣೆ ಹಚ್ಚೋವಾಗ "ಕೈ ಉದ್ದ, ಕಾಲ್ ಉದ್ದ" ಅಂತ ಹೇಳ್ತಾ ಮಸಾಜ್ ಮಾಡೋದು ರೂಢಿ. ಅಲ್ಲದೆ ಅಜ್ಜಿ ಹೇಳೊ ಹಾಡು ತುಂಬಾ ಇಷ್ಟ.ದೇವರು ನಮಗೆ ತಂದೆಯುಎರಡು ವರವ ಕೊಟ್ಟಿದ್ದಾನೆಎರಡು ವರವು ಏನೆಂದ್ರೆ ಪುಟ್ಟ ಕಣ್ಣುಗಳುದೇವರಿಗೋಸ್ಕರ ಕಣ್ಣಗಳುಇರಬೇಕು ಎಲ್ಲರಿಗೂಯಾವ ಕೆಟ್ಟ ನೋಟವನ್ನು ನೋಡಬಾರದು ದೇವರು ನಮಗೆ ತಂದೆಯುಎರಡು ವರವ ಕೊಟ್ಟಿದ್ದಾನೆಎರಡು ವರವು ಏನೆಂದ್ರೆ ಪುಟ್ಟ ಕೈಗಳುದೇವರಿಗೋಸ್ಕರ ಕೈಗಳುಇರಬೇಕು ಎಲ್ಲರಿಗೂಯಾವ ಕೆಟ್ಟ ಕೆಲಸವನ್ನು ಮಾಡಬಾರದು ದೇವರು ನಮಗೆ ತಂದೆಯುಎರಡು ವರವ ಕೊಟ್ಟಿದ್ದಾನೆಎರಡು ವರವು ಏನೆಂದ್ರೆ ಪುಟ್ಟ ಕಾಲ್ ಗಳುದೇವರಿಗೋಸ್ಕರ ಕಾಲ್ ಗಳುಇರಬೇಕು ಎಲ್ಲರಿಗೂಯಾವ ಕೆಟ್ಟ ಜಾಗಕೂ ಹೋಗಬಾರದು ದೇವರು ನಮಗೆ ತಂದೆಯುಎರಡು ವರವ ಕೊಟ್ಟಿದ್ದಾನೆಎರಡು ವರವು...

Thursday, March 12, 2009

ತಾಯಿತ ಯಾರು ಗೊತ್ತಾ??

ಅಪ್ಪ, ಅಮ್ಮ, ಪಾಪ, ತಾತಾ, ಮಾಮ ಇವಿಷ್ಟೆ ಮಾತಾಡುತ್ತಿದ್ದ ಪುಟ್ಟಿಗೆ ಈಗ ನಾವು ಮಾತಾಡೋದೆಲ್ಲ ಚೆನ್ನಾಗಿ ಅರ್ಥ ಆಗುತ್ತೆ. ತನಗೆ ಹಸಿವಾದ್ರೆ ಅಡಿಗೆ ಮನೆಗೆ ಕರೆದೊಯ್ದು ಬಟ್ಟಲು, ಸ್ಪೂನ್ ತೋರ್ಸಿತಾಳೆ. ನಿದ್ದೆ ಬಂದಾಗ ಹಾಸಿಗೆ ತೋರಿಸ್ತಾಳೆ. ಅಷ್ಟೆ ಅಲ್ಲ ತಾನೂ ಎಲ್ಲಾ ಮಾತಾಡಲು ಪ್ರಯತ್ನಿಸುತ್ತಾಳೆ.ನಿನ್ನ್ ಹೆಸ್ರು ಏನು ಅಂದ್ರೆ "ತಾಯಿತ" ಅಂತ ಮುದ್ದಾಗಿ ಹೇಳ್ತಾಳೆ. ಸಾಹಿತ್ಯ ಯಾರು ಅಂತ ಪ್ರಶ್ನಿಸಿದ್ರೆ "ನಾಆಅನ್..ನಾಆಆನ್" ಅಂತ ತನ್ನ ಪುಟ್ಟ ಕೈಗಳಿಂದ ಎದೆ ತಟ್ಟುತ್ತಾಳೆ. ಅಮ್ಮ ಹೆಸ್ರೇನು ಅಂದ್ರೆ "ಊಪ, ಪೂಪ" ಅಂತ ನಗ್ತಾಳೆ. ನಾಯಿ ನೋಡಿದ್ರೆ "ದಾಗೀಈ.." ಅಂತ ತೋರಿಸ್ತಾಳೆ. ಡಾಗಿ ಏನ್ ಅನ್ನುತ್ತೆ ಅಂದ್ರೆ "ಬಾಬು..ಬೌಬು" ಅಂತಾಳೆ. ದೋಸೆ, ಚಪಾತಿ ಇವೆಲ್ಲ ಅವಳ ಬಾಯಲ್ಲಿ...

Sunday, March 08, 2009

ತಾತು ಅಂದ್ರೆ ತಾಯಿನ್!!

ಪುಟ್ಟಿ ಸಣ್ಣ ಮಗುವಾಗಿದ್ದಾಗಿನಿಂದ ಪ್ರತಿ ದಿನ ಎದ್ದ ಕೂಡಲೆ ಅವಳನ್ನ ದೇವರ ಮುಂದೆ ಕರೆತರೋದು ರೂಢಿ. ಒಂದೆರಡು ಶ್ಲೋಕಗಳನ್ನು ಹೇಳಿ, ಅವಳ ಕೈಯಿಂದ ಹುಂಡಿಗೆ ಕಾಸು ಹಾಕಿಸೋದು ಅವರಪ್ಪನ ಕೆಲಸ. ಇತ್ತೀಚೆಗೆ ಎದ್ದ ಕೂಡಲೆ ಪುಟ್ಟಿ ರೂಮ್ ನಲ್ಲಿರೋ ದೇವರಿಗೆ ಕೈ ಮುಗಿದು, "ಓಂ" ಹೇಳ್ತಾಳೆ. ಅವರಪ್ಪನ ಸ್ನಾನವಾದ ನಂತರ, ಅವರೊಂದಿಗೆ ದೇವರ ಮುಂದೆ ಹೋಗಿ ತಾನೂ ಕೈ ಮುಗಿದು, ಅವರಪ್ಪ ಮರೆತರೆ ತಾನೇ "ತಾತು ಅಥವಾ ತಾಯಿನ್" ಅಂತ ಕೇಳಿ ಹುಂಡಿಗೆ ದುಡ್ಡು ಹಾಕ್ತಾಳೆ.ಅಲ್ಲದೇ...

Thursday, March 05, 2009

ಖುಶಿ ಮೊದಲ ಹುಟ್ಟುಹಬ್ಬ !!!

ಇಂದು ಪುಟ್ಟಿಯ ಸೋದರಮಾವನ ಮಗಳು "ಖುಶಿ"ಯ ಹುಟ್ಟುಹಬ್ಬ. ಅಪ್ಪ-ಅಮ್ಮನ ಜೊತೆ ಇಂಗ್ಲ್ಯಾಂಡಿನಲ್ಲಿ ಹಬ್ಬ ಆಚರಿಸಿಕೊಳ್ಳ್ತಾಯಿರೋ ಬಂಗಾರಮ್ಮನಿಗೆ ನಮ್ಮೆಲ್ಲರ ತುಂಬು ಹೃದಯದ ಹಾರೈಕೆಗಳು. ನೀ ಹುಟ್ಟಿದ ಆ ದಿನ ಶಿವರಾತ್ರಿಯ ಸುದಿನಮನೆಯವರೆಲ್ಲ ನಲಿದ ದಿನನೀ ಬೋರಲು ಬೀಳಲು ಮನಕಾನಂದಇಂಡಿಯಾಗೆ ಬಂದಾಗ ನೀ ಅಂಬೆಗಾಲ ಕಂದಹಲ್ಲಿಲ್ಲದ ನಿನ್ನ ಬೊಚ್ಚು ಬಾಯ ನಗುವು ಚಂದಬಲು ಬೇಗ ಸೆಳೆದೆ ನೀ ನಮ್ಮೆಲ್ಲರ ಮನಕೃಷ್ಣನ ಕೊಳಲು ಹಿಡಿದು ಹಾಡಿದೆ ತನನನಮರಳಿ ಹಾರಿ ಸೇರಿದೆ ನೀ ಲಂಡನವರುಷ...