
"ಪುಟಾಣಿ ಏಜೆಂಟ್ ೧ ೨ ೩" ಚಲನಚಿತ್ರದ ಈ ಹಾಡು ಪುಟ್ಟಿಗೆ ಬಲು ಇಷ್ಟ. ಬಹುತೇಕ ಪೂರ್ತಿ ಹಾಡು ಅವಳಿಗೆ ಕಂಠಪಾಠವೂ ಆಗಿದೆ. ಈ ಹಾಡನ್ನು ಆಗಾಗ್ಗೆ ಕೇಳಿ ಸಿಡಿ ಹಾಕಿಸಿಕೊಂಡು ನೋಡುತ್ತಾಳೆ. ಈ ಚಿತ್ರ ಟಿವಿಯಲ್ಲಿ ಬರುತ್ತಿರುವಾಗ ಅವಳು ನಮ್ಮ ಕ್ಯಾಮೆರಾದಲ್ಲಿ ತೆಗೆದಿರುವ ಕೆಲವು ಚಿತ್ರಗಳಿವು: ಸಹ್ಯಾದ್ರಿ ಸಾಲಿನಲಿ ಮಲೆನಾಡ ಕಾಡಿನಲಿ ಬೆಳೆದಿತ್ತು ಭಾರಿ ಆಲದಮರವು ಮೊರದಿತ್ತು ನೂರಾರು ಹಕ್ಕಿಗಳ ಸ್ವರವು ಕಿ ಕಿ ಕಿ ಕಿ ಎನ್ನುತ ಹಾಡೋಣತೂಗಿ ಸಾಗಿ ಎಲ್ಲರು ಹಾರೋಣಸಿಹಿಯಾದ...