ಮುಂದಿನ ಪಾರ್ಟಿಯಲ್ಲಿ ಒಂದೆರೆಡು ಹಾಡುಗಳನ್ನು ಹಾಡಲೇಬೇಕೆಂದು ’ಹೇಮಂತ್’ಗೆ ಗೆಳೆಯರು ಒತ್ತಾಯ ಮಾಡಿದ್ದರು. ಕಾಲೇಜು ದಿನಗಳ ನಂತರ ಆಗಾಗ್ಗೆ ಗುನುಗುವುದು ಬಿಟ್ಟರೆ ಹಾಡೋದು ಪೂರ್ತಿಯಾಗಿ ನಿಲ್ಲಿಸಿದ್ದ ಇವರು, ಈ ಪಾರ್ಟಿಯ ಸಲುವಾಗಿ ಕೆಲವೊಂದು ಹಾಡುಗಳನ್ನು ದಿನವೂ ಹಾಡಿ ಪ್ರ್ಯಾಕ್ಟೀಸ್ ಮಾಡಲು ಶುರು ಮಾಡಿದ್ರು. ಅಪ್ಪನ ಹಾಡು ಕೇಳಿ, ಕೇಳಿ, ಪುಟ್ಟಿಯೂ ಅವುಗಳನ್ನು ಕಲಿತುಬಿಟ್ಟಳು.
"ಅಪ್ಪ ನಿನ್ನ ಹಾಡು ನಾನೂ ಹಾಡ್ತೀನಿ ಕೇಳು" ಅಂತ ಮೈಕ್ ಹಿಡಿದು ಹಾಡಿಯೇಬಿಟ್ಟಳು. ಯಾವಾಗ ಅಪ್ಪ ಹಾಡಬೇಕು, ಯಾವಾಗ ಅಮ್ಮ(ಹೆಣ್ಣು ಧ್ವನಿ) ಎಲ್ಲವೂ ಚಾಚೂ ತಪ್ಪದೆ ಹೇಳಿ ನಮ್ಮನ್ನು ಬೆರಗುಗೊಳಿಸಿದಳು:)) ಹಿನ್ನಲೆ ಸಂಗೀತದ ಜೊತೆ ಹಾಡುವುದು ಅವಳಿಗೆ ಹೊಸ ಆಟವಾಗಿದೆ. ಕಾರಣಾಂತರಗಳಿಂದಾಗಿ...