Sunday, December 30, 2007

ಮೊದಲ ಹೆಜ್ಜೆ !!



ಬಹಳ ತಿಂಗಳುಗಳಿಂದ ಒಂದು ಬ್ಲಾಗ್ ಶುರು ಮಾಡೋಣ ಅಂತ ಮನಸ್ಸಿನಲ್ಲೇ ಅಂದು ಕೊಳ್ಳೋದು, ಆದ್ರೆ ಏನು ಬರೆಯೋದು ಅಂತ ಗೊತ್ತಾಗದೆ ಹಾಗೆ ಸುಮ್ಮನಾಗೋದು ಹೀಗೆ ನಡೀತಾಯಿತ್ತು. ನಾನು ಶಾಲೆಯಲ್ಲಿ ಕನ್ನಡ ಓದಿದ್ದು ಮೂರನೆ ಭಾಷೆಯಾಗಿ. ಅಮ್ಮ ಮನೆಯಲ್ಲಿ ಹೇಳಿಕೊಟ್ಟ ಮಕ್ಕಳ ಪದ್ಯಗಳಲ್ಲಿ ಕೆಲವು ಮಾತ್ರ ನೆನಪುಂಟು. ಈಗ ಪರದೇಶದಲ್ಲಿ ಬೆಳೆಯುತ್ತಿರುವ ನನ್ನ ಪುಟ್ಟ ಕಂದಮ್ಮಗೆ ಹೇಳುಕೊಡುವ ಸಲುವಾಗಿ ನಾನು ಈಗ ಮಕ್ಕಳ ಪದ್ಯಗಳು, ಹಾಡು, ಚಿತ್ರಗೀತೆ ಇವೆಲ್ಲವನ್ನು ಬಾಯಿಪಾಠ ಮಾಡುತ್ತಿದ್ದೇನೆ. ಈ ಬ್ಲಾಗಿನಲ್ಲಿ ನಾನು ಕಲಿತಿದ್ದೆಲ್ಲವನ್ನು ಬರೆಯೋಣ ಅಂತ ಕೊನೆಗೂ ನನ್ನ ಬ್ಲಾಗ್ ಪ್ರಾರಂಭ ಮಾಡಿದ್ದೇನೆ. ನನ್ನ ಮಗಳ ಆಟೋಟ, ಫೋಟೋ ಎಲ್ಲವನ್ನು ಇಲ್ಲಿ ಹಂಚಿಕೊಳ್ಳುತೀನಿ. ಕೆಲವು ಆಂಗ್ಲ ಪದ್ಯಗಳೂ ಇತರೆ ವಿಚಾರಗಳೂ ಇಲ್ಲಿ ಬರೆಯುತ್ತೇನೆ.
ಸರಿ ಬ್ಲಾಗಿಗೆ ಹೆಸರೇನು ಇಡೋಣ ಅಂತ ಯೋಚಿಸುತ್ತಿದ್ದಾಗ ಹೊಳೆದದ್ದು "ಸವರನ್". ಇದು ನನ್ನ ತಾತ ನನಗೆ ಇಟ್ಟ ಮುದ್ದಿನ ಹೆಸರು, ನನ್ನ ಮಗಳಿಗೆ ಅವರ ಅಜ್ಜ ಕರೆವ ಹೆಸರು. ಜೊತೆಗೆ ನಾಣ್ಯ ಸಂಗ್ರಹಿಸುವೆ ನನ್ನ ಪತಿರಾಯರ ಅದಮ್ಯ ಕನಸು ಬ್ರಿಟೀಶ್ ಕಾಲದ ಒಂದು ಸವರನ್ ನಾಣ್ಯದ ಒಡೆಯನಾಗಬೇಕೆಂಬುದು. ಮನೆಯಲ್ಲಿ ನಾವಿಬ್ಬರು ಜೀವಂತ "ಸವರನ್"ಗಳಿರಬೇಕಾದರೆ ನಿಮ್ಗ್ಯಾಕೆ ಆ ನಾಣ್ಯದ ಚಪಲ ಅಂತ ಅವರನ್ನು ಚುಡಾಯಿಸ್ತೀನಿ. ಅಮ್ಮ, ಅಪ್ಪ, ಮಗಳು ಎಲ್ಲರೂ "ಸವರನ್"ಗೆ ಸೈ ಅಂದಮೇಲೆ ತಡಮಾಡದೇ ಅದನ್ನು ನೊಂದಾಯಿಸಿ, ನನ್ನ ಮೊದಲ ಪೋಸ್ಟ್ ಬರೆದೇಬಿಟ್ಟೆ. ಚಿತ್ರದಲ್ಲಿರುವ ಮುದ್ದಾದ ಹೆಜ್ಜೆ ಗುರುತುಗಳು ನನ್ನ ಮಗಳು ಹುಟ್ಟಿದಾಗಿನವು.. ನಿಮ್ಮ ಅನಿಸಿಕೆಗಳನ್ನು ದಯವಿಟ್ಟು ತಿಳಿಸಿ ಅದೇ ನನಗೆ ಪ್ರೋತ್ಸಾಹ. ಆಗಾಗ್ಗೆ ಇಲ್ಲಿ ಮತ್ತೆ ಭೇಟಿಯಾಗೋಣ..

6 comments:

ಬ್ಲಾಗ್ ಪ್ರಪಂಚಕ್ಕೆ ಸ್ವಾಗತ.ಸಾಹಿತ್ಯ ಪುಟ್ಟಿಯ ಆಟೋಟ , ತುಂಟಾಟಗಳ ವಿವರ ಓದಲು,ನೋಡಲು ಬಹಳ ಖುಷಿ ಆಗ್ತಾ ಇದೆ. ಮೊದಲ ಹೆಜ್ಜೆ ಹಾಕುವುದು,ತೊದಲು ಮಾತಾಡುವುದರ ಬಗ್ಗೆ ನೀವು ಬರೆಯಲು ಕಾಯುತ್ತಿದ್ದೀನಿ. ಪುಟ್ಟಿಗೆ ನನ್ನ ಶುಭ ಹಾರೈಕೆಗಳು :)

ನಿಮ್ಮ ಹಾರೈಕೆಗಳಿಗೆ ವಂದನೆಗಳು ವಿದ್ಯಾ. ನಮ್ಮ್ ಪುಟ್ಟಿ ತುಂಬಾ ಫಾಸ್ಟ್, ನಾನೇ ಬರೆಯುವುದರಲ್ಲಿ ಹಿಂದೆ ಬಿದ್ದಿದ್ದೀನಿ.
ಆಗಾಗ್ಗೆ ಬರ್ತಾಯಿರಿ.

Roopiii!! welcome to the blog world. Thumba channage bardhideeya.. namma sahitya putti is very lucky to have such a smart mother who is not only down to earth but also very talented. Hats off to u!!

Thanks a lot shubhii for visiting putti's blog!!! well putti is smarter dear, as u said she beats us all:))

hello roopa
nimma blog nodi thumba kushi aagide, i really appreciate ur patience and ur support in bringing up ur daughter. as shubha said hats of to u!!!!!!,

thanks divya,
for all ur kind words and appreciation:) each one of us do our best in up bringing our kids.. its only that i brag abt my kid more :D
cheers

Post a Comment