Wednesday, January 30, 2008

ಪುಟ್ಟಿಗೆ ಒಂದು ತಿಂಗಳು ತುಂಬಿತು

ಪುಟ್ಟಿಗೆ ಮೊದಲ ವರ್ಷ ಪ್ರತಿ ತಿಂಗಳೂ ಹುಟ್ಟಿದಹಬ್ಬ ಆಚರಿಸಬೇಕು ಅಂತ ಅವರ ಅಪ್ಪನ ಆಸೆ. ಆದರೆ ಮಕ್ಕಳಿಗೆ ೩ ವರ್ಷ ತುಂಬುವವರೆಗೆ ಬರ್ತ್ ಡೆ ಪಾರ್ಟಿ ಮಾಡೋದೆಲ್ಲ ನಮ್ಮ್ ಖುಶಿಗೆ ಅಷ್ಟೆ, ಆ ಕಂದಮ್ಮಗೆ ಏನೂ ಗೊತ್ತಾಗೊಲ್ಲ, ಕೆಲವೊಮ್ಮೆ ಆ ಜನಗಳ ಮಧ್ಯೆ ಹಿಂಸೆಯೂ ಆಗುತ್ತೆ ಬೇಡ ಸುಮ್ನಿರಿ ಅಂತ ನಾನ್ ಅಂದ್ರೆ. "ನಮ್ಮ್ ಪುಟ್ಟಿಗೆ ಎಲ್ಲರ ಪರಿಚಯ ಆಗ್ಬೇಕು ಅಲ್ವ, ಊಟಕ್ಕೆ ಬನ್ನಿ ಅಂತ ಕರಿದಿದ್ದ್ರೆ ಇಲ್ಲಿ ಯಾರೂ ಮನೆಗೆ ಬರೋಲ್ಲ, ಇದು ಒಂದು ನೆಪ ಅಷ್ಟೆ ಸ್ನೇಹಿತರನ್ನ...

Thursday, January 10, 2008

ನಾಮಕರಣ ಮತ್ತು ತೊಟ್ಟಿಲ ಪೂಜೆ

ಹನ್ನೊಂದನೆ ದಿನ ಪುಣ್ಯಾಹ ಮಾಡಿಸಿಕೊಂಡು ಮಗುವನ್ನು ತೊಟ್ಟಿಲಿನಲ್ಲಿ ಮಲಗಿಸುವ ರೂಡಿ ನಮ್ಮಲ್ಲಿದೆ. ಅದರ ಜೊತೆಯಲ್ಲೇ ನಾಮಕರಣವನ್ನೂ ಮಾಡಿಬಿಡಿ ಎಂದು ನಮ್ಮತ್ತೆಯವರು ಹೇಳಿದರು. ನಮ್ಮ ಬಂಗಾರಿಗೆ ವ್ಯವಹಾರ ನಾಮವಾಗಿ "ಸಾಹಿತ್ಯ" ಹೆಸರು ಆಗಲೇ ಅಸ್ಪತ್ರೆಯಲ್ಲಿನ ಎಲ್ಲಾ ದಾಖಲೆಗಳಲ್ಲಿ ಸೇರಿತ್ತು. ಹಸ್ತಾ ನಕ್ಷತ್ರದಲ್ಲಿ ಜನಿಸಿದ ಅವಳಿಗೆ ’ಪು’ ಅಕ್ಷರದಿಂದ ಶುರುವಾಗುವ ಹೆಸರು ಇಡಬೇಕಿದ್ದರಿಂದ ’ಪುಟ್ಟಿ’ ಅಂತ ಇಟ್ಟರೆ ಅದು ನಕ್ಷತ್ರನಾಮವೂ ಆಗುತ್ತೆ ಜೊತೆಗೆ ಅವಳಿಗೆ...

Thursday, January 03, 2008

ಮುದ್ದುಮರಿ ಮನೆಗೆ ಬಂದಳು

ಆಸ್ಪತ್ರೆ ವಾಸ ಸಾಕು ನಡಿರಿ ನಮ್ಮ್ ಮನೆಗೆ ಹೋಗೋಣ ಅಂತ, ತನ್ನ ಚಿಕ್ಕ ಸೋದರ ಮಾವ ಆಸ್ಟ್ರೆಲಿಯಾದಿಂದ ಕಳುಹಿಸಿದ್ದ ಗುಲಾಬಿ ಸ್ಕರ್ಟ್, ಮೇಲಂಗಿ, ಕಾಲ್ಚೀಲ, ಟೊಪ್ಪಿ, ಮೇಲೆ ಕೆಂಪು ಜಾಕೆಟ್ ಧರಿಸಿ ರೆಡಿ ಆಗೇಬಿಟ್ಟ್ಲು. ಸರಿ, ಆಸ್ಪತ್ರೆ ಸಿಬ್ಬಂದಿಗೆಲ್ಲ ಸಿಹಿ ಹಂಚಿ, ಅಪ್ಪನ ಕಾರಿನಲ್ಲಿ ತನ್ನದೇ ಕಾರ್ ಸೀಟಿನಲ್ಲಿ ಕೂತು ಮನೆಗೆ ಬಂದ್ಲು. ಅಜ್ಜಿ ಆರತಿ ರೆಡಿ ಮಾಡಿಟ್ಟು ಕಾಯ್ತಾಯಿದ್ರು. ಹಾಡು ಹೇಳಿ ಮೊಮ್ಮಗಳನ್ನು ಮನೆಗೆ ಬರಮಾಡಿಕೊಂಡರು. ಅಜ್ಜಿ ಅವಳಿಗಾಗಿ...