Thursday, April 10, 2008

ಯುಗಾದಿಯ ದಿನ ನಮ್ಮ್ ಪುಟ್ಟಮ್ಮ!!

ಯುಗಾದಿ ಹಬ್ಬದ ದಿನ ಪುಟ್ಟಿ, ಅವರಜ್ಜಿ ಅವಳಿಗಾಗಿ ತಂದಿದ್ದ ಹಸಿರು ರೇಷ್ಮೆ ಲಂಗ ತೊಟ್ಟು ಹೊಸವರ್ಷವನ್ನು ಸ್ವಾಗತಿಸಿದಳು. ಅವಳಿಗೆಂದು ತವಿಶ್ರೀ ಅವರು ಆಶೀರ್ವದಿಸಿ ಅಕ್ಕರೆಯಿಂದ ಬರೆದ ಹಾಡು ಇದು. ಧನ್ಯವಾದಗಳು ಸಾರ್:)

ಪುಟ್ಟಮ್ಮ

ಬಾರೆ ಬಾರೆ ನನ್ನ ಪುಟ್ಟಮ್ಮ
ನಾಲ್ಕು ಹಲ್ಲು ತೋರು ನೀ ನನ್ನಮ್ಮ
ಮುದ್ದಿನ ರಾಣಿ ಗಿಡ್ಡು ಪುಟಾಣಿ
ಕೊಡುವೆನು ಬಾರೆ ಗುಂಡು ಬಟಾಣಿ


ಅಗಲದ ಹಣೆಗೆ ದುಂಡನೆ ಕುಂಕುಮ
ಗುಂಗುರು ಕೂದಲ ತೀಡುವೆ ಬಾರಮ್ಮ
ಕಿವಿಯಲಿ ಝುಮಕಿ ಹಾಕುವೆನು
ಕಣ್ಣಿಗೆ ಕಾಡಿಗೆ ಹಚ್ಚುವೆನು


ಪುಟಾಣಿ ಕಾಲ್ಗಳಲಿ ಘಲಘಲ ಗೆಜ್ಜೆ
ಮನೆಯೊಳಗೆಲ್ಲ ನಿನ್ನದೆ ಹೆಜ್ಜೆ
ಪುಟಾಣಿ ಕೈಗಳಿಗೆ ಬೆಳ್ಳಿಯ ಕಡಗ
ತೊಡಿಸುವೆ ಬಣ್ಣದ ಉದ್ದನೆ ಲಂಗ

ಉಣಿಸುವೆ ಉಪ್ಪು ತುಪ್ಪದ ಅನ್ನ
ಎಂದಿಗೂ ನೀ ತಣಿಸು ನನ್ನ ಮನವನ್ನ
ನಿನ್ನೊಡನೆ ಆಡಲು ಕರೆಯುವೆ ಚಂದಮಾಮ
ತಟ್ಟಿ ಮಲಗಿಸಲಿಹಳು ನಿನ್ನಮ್ಮ

ಸಿಹಿ ಹಾಲನ್ನೀವೆ ಬಟ್ಟಲಿನಲಿ
ನಾನೂ ಸೇರುವೆ ನಿನ್ನಳಿನಲಿ
ಆಲಂಗಿಸು ನಿನ್ನ ಪುಟ್ಟ ಕೈಗಳಲಿ
ಆಡಿ ಪಾಡಿ ಸೋತು ಮಲಗು ನೀ ಬಳಲಿ  
-ತ. ವಿ. ಶ್ರೀ

11 comments:

thumba chennagidhe putti dhu langa..nanguu bekuuuu...padhya esht chennagidhe..thumba chennagi bardidhare..

Magalu bahala muddagi iddale ri, langa superagi kanistha ide...kavite kuda bahala sundaravagi ide..

ನಾನು ಕಲ್ಪಿಸಿಕೊಂಡ ರೀತಿಯಲ್ಲಿಯೇ ಇದ್ದಾಳೆ - ಸಂಕ್ರಾಂತಿಯ ಎಳ್ಳು ಬೀರೋಕ್ಕೆ ಮಗು ತಯಾರು :)

ಗುರುದೇವ ದಯಾ ಕರೋ ದೀನ ಜನೆ

spurthi,
langa amma tandiddu.. nimm size hELi pa, ee sarti Indiage hodaaga nimmgondu holisi tarteeni :P
houdu, avaru padya bareyOdralli expert:))

lg avare,
thanks ri:) kavite baredaddu TVS saar varu.. btw, nimm suttamutta dalli puTTi na sEriskonDidakke dhanyavaadagaLu!!

ಎಲ್ಲಾ ನಿಮ್ಮಂತ ಹಿರಿಯರ ಆಶೀರ್ವಾದ ಸಾರ್:)

ಪುಟ್ಟಿ ಲಂಗದಲ್ಲಿ ತುಂಬಾ ಮುದ್ದಾಗಿದ್ದಾಳೆ
ಕ್ಲಿಕ್ಕಿಸಿದರೆ ಯಾಕೋ ಫೋಟೋ ದೊಡ್ಡದಾಗಲಿಲ್ಲ

ಥ್ಯಂಕ್ಸ್ ಮಾಲ:)ಇಲ್ಲೆಲ್ಲಾ ಫೋಟೋ ಹಾಕಿದ್ರೆ ಪುಟ್ಟಿಗೆ ದೃಷ್ಟಿ ಆಗುತ್ತೆ ಅಂತ ಅವರಜ್ಜಿ ಅನಿಸಿಕೆ.. ಅದಕ್ಕೆ ಸೈಜ್ ಚಿಕ್ಕದು ಮಾಡಿ ಅಪ್ಲೋಡ್ ಮಾಡಿರುವೆ.

Oh, she is adorable!That langa blouse and her smile, oh my God! Tumba chennagidhe photo, magu, langa yella :)

ಪುಟ್ಟಿ....
ಹೇಗಿದ್ದೀಯಾ ಕಳ್ಳಿ? ನಿನ್ನ ನೋಡಿ ಸಕತ್ ಖುಷಿಯಾಯ್ತು ಕೂಸೆ. ಅಮ್ಮನಿಗೊಂದು ಥ್ಯಾಂಕ್ಸ್ ಹೇಳಿಬಿಡು. ನೋಡು ನಿನ್ನ ಎಷ್ಟು ಪ್ರೀತಿ ಮಾಡ್ತಿದಾರೆ....

Post a Comment