Saturday, August 30, 2008

ಎಂಟನೇ ತಿಂಗಳ ಹುಟ್ಟು ಹಬ್ಬ !!

ಪುಟ್ಟಿ ಬೀಗ ಬೇಗ ದೊಡ್ಡವಳು ಆಗ್ತಾಯಿದ್ದಾಳೆ ಅನ್ನಿಸ್ತಾಯಿದೆ. ಆಗ್ಲೆ ಎಂಟನೇ ತಿಂಗಳ ಹುಟ್ಟು ಹಬ್ಬ ಬಂತು. ಈ ಸರ್ತಿ ಅವಳ ಜೊತೆ ಆಡಿ ನಲಿಯಲು ಬಂದವರು ಅವಳಿ ಅಕ್ಕ ತಂಗಿ, ಸಹನಾ - ಸುರಭಿ :) ತನ್ನ ಊಟದ ಚೇರ್ -ಹೈಚೇರ್ ನಲ್ಲಿ ಕುಳಿತು ಕೊಕೊನಟ್ ಕೇಕ್ ಕಟ್ ಮಾಡಿದ್ಲು. ಅವರಪ್ಪ ತಂದಿದ್ದ ಹೊಸ ಕುದುರೆಯೇರಿ ಆಟವಾಡಿದ್ಲು. ಮೂರೂ ಜನ ನಕ್ಕು ನಲಿದ್ರು. ಅವರ ಸಂತಸದಲ್ಲಿ ದೊಡ್ಡವರೂ ಜೊತೆಗೂಡಿದೆವು.ಅಪ್ಪ ನನಗೆ ತಂದಕುದುರೆ ಹಾಲಿನಂತ ಮೈಯ್ಯ ಬಿಳಿ ಕುದುರೆನೀಲಯ ಬಾಲದ ಪುಟ್ಟು...