ಪುಟ್ಟಿ ಬೀಗ ಬೇಗ ದೊಡ್ಡವಳು ಆಗ್ತಾಯಿದ್ದಾಳೆ ಅನ್ನಿಸ್ತಾಯಿದೆ. ಆಗ್ಲೆ ಎಂಟನೇ ತಿಂಗಳ ಹುಟ್ಟು ಹಬ್ಬ ಬಂತು. ಈ ಸರ್ತಿ ಅವಳ ಜೊತೆ ಆಡಿ ನಲಿಯಲು ಬಂದವರು ಅವಳಿ ಅಕ್ಕ ತಂಗಿ, ಸಹನಾ - ಸುರಭಿ :)
ತನ್ನ ಊಟದ ಚೇರ್ -ಹೈಚೇರ್ ನಲ್ಲಿ ಕುಳಿತು ಕೊಕೊನಟ್ ಕೇಕ್ ಕಟ್ ಮಾಡಿದ್ಲು.
ಅವರಪ್ಪ ತಂದಿದ್ದ ಹೊಸ ಕುದುರೆಯೇರಿ ಆಟವಾಡಿದ್ಲು. ಮೂರೂ ಜನ ನಕ್ಕು ನಲಿದ್ರು. ಅವರ ಸಂತಸದಲ್ಲಿ ದೊಡ್ಡವರೂ ಜೊತೆಗೂಡಿದೆವು.



ಅಪ್ಪ ನನಗೆ ತಂದಕುದುರೆ
ಹಾಲಿನಂತ ಮೈಯ್ಯ ಬಿಳಿ ಕುದುರೆ
ನೀಲಯ ಬಾಲದ ಪುಟ್ಟು ಕುದುರೆ
ಕೆಂಪನೆ ಸೀಟಿನ ಅಂದದ ಕುದುರೆ !!
ಹೆಜ್ಜೆ ಹೆಜ್ಜೆಗೆ ಕುಣಿಯುವ ಕುದುರೆ
ಬ್ಯಾಟರಿಯ ಹಾಕಿದರೆ ನಡೆಯುವ ಕುದುರೆ
ಹಾಡನು ಹೇಳುತಾ ನಲಿಸುವ ಕುದುರೆ
ನನ್ನಯ ಮುದ್ದಿನ ಚೆಂದದ ಕುದುರೆ !!
-ರೂpaश्री .
2 comments:
ಪುಟ್ಟೀ ನನ್ನೂ ಒಂದು ರೌಂಡ್ ಕರ್ಕೊಂಡ್ ಹೋಗ್ತೀಯಾ ಪ್ಲೀಸ್...:D
ಪುಟ್ಟೀ ಹೀಗೆ ನಗುತ್ತಾ ಇರಲಿ.
ಈ ಕುದ್ರೆಲಿ ಪುಟ್ಟ್ ಮಕ್ಕಳು ಮಾತ್ರ ಕೂತ್ಕೋಬೇಕು, ನಿಮ್ಮ್ ತರಹ ದೊಡ್ಡ್ ಮಕ್ಕ್ಳು ಅಲ್ಲ ಆಂಟೀ...
ನಿಮ್ಮ ಹಾರೈಕೆಗೆ ಧನ್ಯವಾದಗಳು ಗಿರಿಜಾ:)
Post a Comment