ಸೆಪ್ಟೆಂಬರ್ ೬ ೨೦೦೮, ಶನಿವಾರ ಸಂಜೆ ಫ್ಲೋರಿಡಾದ ಪಾನ್ಸ್ ಇನ್-ಲೆಟ್ ಎಂಬಲ್ಲಿ ಈಜಲು ಹೋದ ಅಪ್ಪ ಮಗ, ನೀರಿನ ಅಲೆಗಳಿಗೆ ಸಿಕ್ಕಿ ಬಿದ್ದು, ಶಾರ್ಕ್-ಗಳು ತುಂಬಿರುವ ಅಟ್ಲಾಂಟಿಕ್ ಸಮುದ್ರದಲ್ಲಿ ಸತತ ಹದಿನೈದು ಘಂಟೆಗಳ ಕಾಲ ಯಾವುದೇ ಲೈಫ್ ಜಾಕೆಟ್ ಇಲ್ಲದೇ ತೇಲುತ್ತಾಯಿದ್ದು ಬದುಕಿ ಉಳಿದ ನ್ಯೂಸ್ ಓದಿ ಆಶ್ಚರ್ಯ ಆನಂದ ಎರಡೂ ಒಟ್ಟಿಗೆ ಆಯಿತು.೧೨ ವರ್ಷದ ಮೂಕ ಬಾಲಕ ಕ್ರಿಸ್ ಅಲೆಗಳಲ್ಲಿ ಸಿಕ್ಕಿದ್ದನ್ನು ನೋಡಿ, ಅವನನ್ನು ರಕ್ಷಿಸಲು ಹೋದ ಅವನಪ್ಪ ಕೂಡ ಅಲೆಗಲಿಗೆ ಸಿಕ್ಕಿ ಬಿದ್ದ. ಮಗನನ್ನು ಎಚ್ಚರದಿಂದ ಇಡಲು ಅಪ್ಪ, ಮಗನ ಅಚ್ಚುಮೆಚ್ಚಿನ ಡಿಸ್ನಿ ಚಲನಚಿತ್ರ "Toy Story"ಯಲ್ಲಿ Buzz Lightyearನ ‘To infinity ... and beyond’ ಎಂಬ ಡಯಲಾಗನ್ನು ರಾತ್ರಿ ಬಹಳ ಹೊತ್ತು ಮಗನಿಗೆ ಕೇಳುವಂತೆ...