Tuesday, April 28, 2009

ಮರಳಿನಲ್ಲಿ ಅರಳಿದ ಕಲೆ!!!

ನಾವು ಚಿಕ್ಕಂದಿನಲ್ಲಿ ನದಿದಡ ಅಥವಾ ಸಮುದ್ರತೀರಕ್ಕೆ ಹೋದಾಗ ಮರಳಿನಲ್ಲಿ ಮನೆ ಮಾಡಿ ಆನಂದಿಸ್ತಾಯಿದ್ವಿ. ಈಗೆಲ್ಲಾ ಮಕ್ಕಳಿಗೆ ಮಣ್ಣಿನಲ್ಲಿ ಆಡ್ಲಿಕ್ಕೆ ಮತ್ತು ತರಹ ತರಹ ಡಿಸೈನ್ಸ್ ಮಾಡ್ಲಿಕ್ಕೆ ಮೌಲ್ಡ್ ಗಳು ಸಿಗುತ್ತೆ, ಅದಕ್ಕೆ ಮಣ್ಣು ತುಂಬಿ ನಿಧಾನಕ್ಕೆ ತೆಗೆದರಾಯ್ತು, ನಮಗೆ ಬೇಕಾದ ಪ್ರಾಣಿಗಳ ಡಿಸೈನ್ ರೆಡಿ. ಫ್ಲೋರಿಡಾಗೆ ಬಂದ ಮೇಲೆ ತಿಂಗಳಿಗೊಮ್ಮೆ ಬೀಚಿಗೆ ಹೋಗೋದು ರೂಢಿ ಆಯ್ತು, ಇಲ್ಲಿ ಬೀಚಿನಲ್ಲಿ ಕೆಲವರು ಮಣ್ಣಿನಲ್ಲಿ ಮೊಸಳೆ, ಏಡಿ ಇತರೆ ಆಕಾರಗಳನ್ನು ಸುಲಭದಲ್ಲಿ...

Friday, April 17, 2009

ಎಲ್ಲಾ ಹಣ್ಣುಗಳು ಇಷ್ಟ !!!

ಪುಟ್ಟಿಗೆ ಘನ ಆಹಾರ ಕೊಡಲು ಶುರು ಮಾಡಿದಾಗಿನಿಂದಲೂ ಎಲ್ಲಾ ಹಣ್ಣು ಮತ್ತು ತರಕಾರಿಗಳು ಬಲು ಇಷ್ಟ. ಈಗಂತೂ ಅನ್ನ/ ಚಪಾತಿ/ರೊಟ್ಟಿ ಜೊತೆಗೆ ಪಲ್ಯ ಕೊಟ್ಟರೆ, ಪಲ್ಯ ಮಾತ್ರ ಖಾಲಿ ಆಗುತ್ತೆ, ಅನ್ನ ಅಲ್ಲೇ ಇರುತ್ತೆ. ಹಣ್ಣು ಕಂಡರಂತೂ ಶುರು ಅವಳ "ಕುಂಯ್, ಕುಂಯ್" ಅಂದ್ರೆ ಕುಯ್ದು ಕೊಡು ಅನ್ನೊ ಮಾತು. ಅದರಲ್ಲೂ ಬಾಳೆಹಣ್ಣು ತುಂಬಾನೆ ಇಷ್ಟ, ಅಮ್ಮ ಈಗ ಅದನ್ನ ಬಚ್ಚಿಡಿರೋ ಪರಿಸ್ಥಿತಿ ಬಂದಿದೆ. ಅವಳು ಆರು ತಿಂಗಳ ಮಗುವಿದ್ದಾಗಿಂದ ತೆಗೆದ ಹಲವು ಫೋಟೋಗಳು ಮತ್ತು ಇತ್ತೀಚೆಗೆ...

Wednesday, April 15, 2009

ಕಣ್ಣಾ ಮುಚ್ಚೆ ಕಾಡೆ ಗೂಡೆ...

ಕಣ್ಣಾ ಮುಚ್ಚೆ ಕಾಡೆ ಗೂಡೆಉದ್ದಿನ ಮೂಟೆ ಉರುಳೇ ಹೋಯ್ತುನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೇನಿಮ್ಮಯ ಹಕ್ಕಿ ಹಿಡಿದುಕೊಳ್ಳಿಈ ಹಾಡು ನಮ್ಮಲ್ಲಿ ಅನೇಕರು ಚಿಕ್ಕಂದಿನಲ್ಲಿ ಹಾಡಿದ್ದೀವಿ, ಹಾಡ್ತಾ ಆಟವಾಡಿದ್ದೀವಿ. ಆದ್ರೆ ಇದರ ಹಿಂದೆ ಇರೋ ಅರ್ಥ ನನಗೆ ತಿಳಿದದ್ದು ಇತ್ತೀಚೆಗಷ್ಟೆ. ಇದರ ಸಾರಾಂಶ ಹೀಗಿದೆ:ಉದ್ದಿನ ಮೂಟೆಯನ್ನು ಇಲ್ಲಿ ವಯಸ್ಸಾದ ಜನರಿಗೆ ಹೋಲಿಸುತ್ತಾರೆ. ವಯಸ್ಸಾದ ಜನರನ್ನು ಅವರ ಮಕ್ಕಳು ಸರಿಯಾಗಿ ನೋಡಿಕೊಳ್ಳದೆ ಅವರು ಕಾಲಾಂತರವಾದ ನಂತರ ಪರಿತಪಿಸುವುದನ್ನು ಹೇಳುತ್ತಿದ್ದಾರೆ. ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೇ ಅಂದರೆ, ನಮ್ಮ ಅಪ್ಪ ಅಮ್ಮಂದಿರನ್ನು ಅವರ ಮುಪ್ಪಿನ ಸಮಯದಲ್ಲಿ ಸರಿಯಾಗಿ ನೋಡಿಕೊಂಡಿಲ್ಲ ಎಂದು. ಹಾಗೆಯೆ ನಿಮ್ಮಯ ಹಕ್ಕಿ ಹಿಡಿದುಕೊಳ್ಳಿ ಎಂದರೆ, ನಾನಂತು ಸರಿಯಾಗಿ ನೋಡಿಕೊಳ್ಳಲಿಲ್ಲ...

Saturday, April 04, 2009

ಏಣಿ ಏರೋದು ಹೀಗೆ...

ಪುಟ್ಟಿ ಈಗ ಎಲ್ಲಿ ಮೆಟ್ಟಲು ಕಂಡ್ರೂ ಸರಿ ಹತ್ತಬೇಕು. ಮೊದಲೆಲ್ಲ ಅಮ್ಮನ ಕರೀತಾ ಇದ್ದ್ಲು ಜೊತೆಗೆ ಬಾ ಅಂತ. ಇತ್ತೀಚೆಗೆ ಧೈರ್ಯ ಹೆಚ್ಚಾಗಿ ತಾನೆ ಹತ್ತುತ್ತಾಳೆ. ಮೊನ್ನೆ ಅವರ ಅಜ್ಜ ಏಣಿ ಹತ್ತಿ ಕೆಲಸ ಮಾಡೋದನ್ನ ನೋಡಿದಳು. ಥಟ್ಟನೆ ತಾನೂ ಹತ್ತಬೇಕು ಅಂತ ಹಠಮಾಡಿ ತಾನೂ ಹತ್ತಿ ಎಲ್ಲರಿಂದ ಸೈ ಅನಿಸಿಕೊಂಡಳು....