Sunday, January 17, 2010

ಸಂಕ್ರಾಂತಿ ಹಬ್ಬ 2010!

ಎಳ್ಳು ಬೀರಲು ಹೊರಟಿರುವ ಪುಟ್ಟಿ :) ಈ ವರ್ಷ ಹಬ್ಬದ ದಿನ ಹೇಮಂತ್ ಕೆಲಸದ ಮೇಲೆ ದೂರದೂರು ಸ್ಯಾಂಡಿಯಾಗೋದಲ್ಲಿದ್ದರಿಂದ, ಮನೆಯಲ್ಲಿ ನಾವಿಬ್ಬ್ರು ಅಮ್ಮ ಮಗಳದ್ದೇ ಹಬ್ಬದ ಸಂಭ್ರಮ! ಕ್ಯಾಮೆರಾ ಹೇಮಂತ್ ಜೊತೆ ಹೋಗಿದ್ದರಿಂದ ಈ ಬಾರಿ ಪುಟ್ಟಿಯ ಆರತಿ ಫೋಟೊ ಇರುವುದಿಲ್ಲ ಅಂದುಕೊಂಡಿದ್ದೆ. ಆದ್ರೆ ಗೆಳತಿ ಅರ್ಚನಾಳಿಂದಾಗಿ ನಿಮ್ಮೊಂದಿಗೆ ಹಂಚಿಕೊಳ್ಳಲು ಹಬ್ಬದ ಫೋಟೋಗಳಿವೆ:) ತನ್ನ ಮಗ 'ಶಿಶಿರ್'ನ ಮೊದಲ ಸಂಕ್ರಾಂತಿಗೆ ಆರತಿ ಮಾಡಲು ಮನೆಗೆ ಕರೆದಳು. ಜೊತೆ ನಮ್ಮ ಪುತ್ತಿಗೂ...

Wednesday, January 13, 2010

ಸಂಕ್ರಾಂತಿಯ ಸಂತಸ!!!

ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು !! ಕಳೆದ ವರ್ಷ ಬೆಂಗಳೂರಿನಲ್ಲಿ ಅಜ್ಜಿಯ ಮನೆಯಲ್ಲಿ ಎಲ್ಲರ ಜೊತೆಗೂಡಿ ಹಬ್ಬ ಮಾಡಿದ್ಲು ಪುಟ್ಟಿ. ಅವಳು ಮತ್ತು ಅವಳ ಸೋದರ ಮಾವನ ಮಗಳು 'ಖುಶಿ' ಗೆ ಸಂಜೆ ಎಳ್ಳು ಎರೆದು ಆರತಿ ಮಾಡಿದಾಗಿನ ಫೋಟೊಗಳಿವು:)ಮಾವನ ಮಗಳೆ ಖುಶಿ ಬಾರೆ ಎಳ್ಳು ಬೆಲ್ಲ ಬೀರೋಣ ಬಾಜರತಾರಿ ಲಂಗ ಕುಪ್ಪಸ ತೊಟ್ಟು ಬಾರೇಷಿಮೆ ಲಂಗ ತೊಟ್ಟು ನಾ ಬರುವೆಅಜ್ಜಿ ಕೊಟ್ಟ ಎಳ್ಳು ಬೆಲ್ಲವಎಲ್ಲರ ಮನೆಗಳಿಗೆ ಬೀರೋಣ ಬಾ!!(ತವಿಶ್ರೀ ಅವರು ಬರೆದ ಚೆಂದದ ಪದ್ಯವನ್ನು...