Monday, March 15, 2010

ಯುಗಾದಿ ಹಬ್ಬ !!!





ವರುಷದ ಮೊದಲು
ಬಂದಿತು ಹಬ್ಬ
ಯುಗಾದಿ ಅದರ ಹೆಸರಣ್ಣ


ಬೇವು ಬೆಲ್ಲವ ತಿಂದು
ಕಷ್ಟ ಸುಖ ಸಮನಾಗಿ
ನೋಡೋಣ ಬಾರಣ್ಣ

ಎಣ್ಣೆಯ ಹಚ್ಚಿ
ಸ್ನಾನ ಮಾಡಿ
ಹೊಸ ಬಟ್ಟೆಯನು ಧರಿಸೋಣ

ಮಾವಿನ ಬೇವಿನ
ತೋರಣ ಮಾಡಿ
ಬಾಗಿಲಿಗೆ ಕಟ್ಟೋಣ

ಪೂಜೆಯ ಮಾಡಿ
ಭಟ್ಟರು ಓದುವ
ಪಂಚಾಂಗವ ಕೇಳೋಣ


ಅಮ್ಮನು ಮಾಡುವ
ಬಿಸಿಬಿಸಿ ಹೋಳಿಗೆ
ಸವಿಯನು ಸವಿಯೋಣ


ಸಾಲಲಿ ಕೂತು
ಬಾಳೆಯ ಎಲೆಯಲ್ಲಿ
ಹಬ್ಬದೂಟವ ಮಾಡೋಣ

ತಿಂದು ತೇಗಿ
ಆಟವ ಆಡಿ
ಎಲ್ಲರಿಗೂ ಶುಭವ ಕೋರೋಣ
--ರೂpaश्री

ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು!! ಬೆಂಗ್ಳೂರಿಂದ ಅಜ್ಜಿ-ತಾತಾ ಬಂದಿರೋದ್ರಿಂದ ಪುಟ್ಟಿ ಈಗ ಬಹಳ ಬಿಜಿ. ಜೊತೆಗೆ ನನ್ನ ಕೆಲಸ ಹೆಚ್ಚಾಗಿ/ ಸೋಮಾರಿತನ ಜಾಸ್ತಿಯಾಗಿ ಪುಟ್ಟಿ ಬ್ಲಾಗ್ ಇದುವರೆಗೆ ಒಂದು ಸಣ್ಣ ಬ್ರೇಕ್ ತಗೊಂಡಿತ್ತು. ಪ್ರೀತಿಯಿಂದ ವಿಚಾರಿಸಿದ ಎಲ್ಲರಿಗೂ ವಂದನೆಗಳು:)
ಮತ್ತೆ ಸಿಗೋಣ!

4 comments:

ಪುಟ್ಟಿ ನಿನಗೂ ನಿನ್ನ ಮನೆಯವರಿಗೆಲ್ಲ ಯುಗಾದಿಯ ಶುಭಾಶಯಗಳು ಮತ್ತು ಹೊಸ ವರ್ಷದ ಶುಭಾಶಯಗಳು.

Your blog is a nice reading. Belated Ugadi wishes to Putti and all of you.

If you have Bekke bekke (kannada version of Pussy cat pussy cat) please do share on your blog.

Thanks
Swarna

ಸೀತಾರಾಮ್ ಸರ್,
ಹಬ್ಬದ ಶುಭಾಶಯಗಳಿಗೆ ವಂದನೆಗಳು!! ನಿಮ್ಮ ಹಬ್ಬ ಚೆನ್ನಾಗಿ ಆಗಿರಬೇಕು:)

Swarna,
Welcome to puttiprapancha:) Thanks a lot for ur appreciative words!!
Here is the rhyme u asked for, will post it in the blog some other time(when i have a photo to go along)

ಬೆಕ್ಕೆ ಬೆಕ್ಕೆ ಮುದ್ದಿನ ಸೊಕ್ಕೆ ಎಲ್ಲಿಗೆ ಹೋಗಿದ್ದೆ
ಕರೆದರು ಇಲ್ಲ ಹಾಲು ಬೆಲ್ಲ ಕಾಯಿಸಿ ಇಟ್ಟಿದ್ದೆ

ಕೇಳೋ ಕಳ್ಳ ಮುದ್ದಿನ ಮಲ್ಲ ಮೈಸೂರ್‍ ಅರಮನೆಗೆ
ರಾಜನ ಸಂಗಡ ರಾಣಿಯು ಇದ್ದಳು ಅಂತಃಪುರದೊಳಗೆ
ಬೆಕ್ಕೆ ಬೆಕ್ಕೆ ಬೇಗನೆ ಹೇಳೆ ನೋಡಿದ ಆನಂದ
ರಾಣಿಯ ಮಂಚದ ಕೆಳಗೆ ಕಂಡೆ ಚಿಲಿಪಿಲಿ ಇಲಿಯೊಂದ
--ದಿನಕರ ದೇಸಾಯಿ

Post a Comment