
ಪುಟ್ಟಿ ABC ಹಾಡು ಹೇಳೋಕೆ ಶುರು ಮಾಡಿ ಬಹಳ ದಿನಗಳೇ ಆಗಿದೆ. ಆದ್ರೆ ಎಲ್ಲಾ ಅಕ್ಷರಗಳನ್ನ ಗುರುತಿಸೋದು ಬರುತ್ತಿರಲಿಲ್ಲ, ಆದ್ರೆ ಆಗ್ಲೇ A,B,D ಬರಿಯೋಕೆ ಶುರು ಮಾಡಿದ್ಲು. ವಾರಕ್ಕೊಂದು ಅಕ್ಷರ ಹೇಳಿ ಕೊಡಿ, ಜೊತೆಗೆ ಆ ವಾರವಿಡೀ ಒಂದೇ ಅಕ್ಷರದ ಕಲರಿಂಗ್ ಮಾಡಿಸಿ ಅನ್ನೋ ಸಲಹೆ ಗೆಳತಿ ಶುಭಾ (ಶಕ್ತಿ ಅಮ್ಮ) ಕೊಟ್ಟ್ರು.ಅಂತರ್ಜಾಲದಲ್ಲಿ ಅಕ್ಷರಗಳ ಕಲರಿಂಗ್ ಪೇಜ್ಸ್ ಹುಡುಕುತ್ತಾ “Letter of the week” ಅನ್ನೋ ಈ ತಾಣದ ಪರಿಚಯವಾಯ್ತು. ಅಲ್ಲಿನ ಆಟ ಜೊತೆಗೆ ಪಾಠ...