Thursday, March 31, 2011

ನಾವೆಲ್ಲ ಹಕ್ಕಿಗಳು...

ಚಿಕ್ಕಂದಿನಲ್ಲಿ ನಾವು ಹಾಡುತ್ತಿದ್ದ ಪಕ್ಷಿಗಳ ಪರಿಚಯ ಮಾಡಿಸುವ ಈ ಪದ್ಯ ನೆನಪು ಮಾಡಿಕೊಳ್ಳಲು ಬಹಳ ದಿನಗಳಿಂದ ಪ್ರಯತ್ನಿಸುತ್ತಿದ್ದೆ. ಅಂತೂ ಇಂತೂ ಗೆಳಯರ ಸಹಾಯದಿಂದ ಇದು ಪೂರ್ತಿ ನೆನಪಾಯ್ತು. ನಾವೆಲ್ಲ ಹಕ್ಕಿಗಳು ರೆಕ್ಕೆ ಬಡಿದು ಹಾರುವೆವು ಸಂತಸವ ಬೀರುವೆವು ನಾನು ಗುಬ್ಬಚ್ಚಿ ಬಹಳ ಚಿಕ್ಕದು ನನ್ನಂತ ಚಿಕ್ಕದು ಬೇರೆಲ್ಲೂ ಸಿಗದು //ನಾವೆಲ್ಲ// ನಾನು ಗಿಡುಗ ಬಹಳ ದೊಡ್ಡದು ನನ್ನಂತ ದೊಡ್ಡದು ಬೇರೆಲ್ಲೂ ಸಿಗದು//ನಾವೆಲ್ಲ// ನಾನು...

Tuesday, March 29, 2011

ಗೌರ್ನ್ ಮೆಂಟ್ ಬಸ್ಸಲ್ಲಿ...

Buzzers ನವರ ಶಿಶುಗೀತೆಗಳ ವಿಡಿಯೋ ಸಿಡಿ ’ಚಿನ್ನಾರಿ ಮುತ್ತಿನ ಹಾಡುಗಳು". ಇದರ ಎಲ್ಲಾ ಹಾಡುಗಳು ಈಗ ಬಹಳಷ್ಟು ಜನಪ್ರಿಯ ಜೊತೆಗೆ ಇವು ಯೂಟ್ಯೂಬಿನಲ್ಲಿ ಕೂಡ ಲಬ್ಯವಿದೆ. ಇವರದೇ ಎರಡನೆ ವಿಡಿಯೋ ಸಿಡಿ 'ಚಿಣ್ಣರ ಚಿಲಿಪಿಲಿ’ ಯಲ್ಲಿನ ಬಹಳಷ್ಟು ಕನ್ನಡ ಪದ್ಯ( ರೈಮ್ಸ್) ಪುಟ್ಟಿ ಈಗ ಕಲ್ತಿದ್ದಾಳೆ. ಅದರ ಒಂದು ರೈಮ್ ಪುಟ್ಟಿ ಹಾಡೋದು ಹೀಗೆ : ಗೌರ್ನ್ ಮೆಂಟ್ ಬಸ್ಸಲ್ಲಿ ಮೂರ್ನೆ ಸೀಟಲ್ಲಿ ಡುಮ್ಮ ಡುಮ್ಮಿ ಕೂತಿದ್ರು ಡುಮ್ಮನ ಹೊಟ್ಟೆ ಹೊಡೆದು ಹೋಯ್ತು ಡುಮ್ಮಿ ಅಳ್ತಾ ಕೂತಿದ್ಲು ಇದೇ ತರಹ ನಾವು ಚಿಕ್ಕಂದಿನಲ್ಲಿ ಹಾಡ್ತಾಯಿದ್ದ ಇನ್ನೊಂದು ಹಾಡು ಸ್ವಲ್ಪ ನೆನಪಾಯ್ತು. ಡುಮ್ಮ ಡುಮ್ಮಿ ಡುಪ್ಲಿಕೇಟ್ Door  ನಂಬರ್ 88 ....... ಮುಂದಕ್ಕೆ...

Monday, March 21, 2011

ಚೆಲ್ಲಿದರೋಕುಳಿಯಾ

 ಮೊದಲೇ ಅಂದಿಕೊಂಡಂತೆ ನಮ್ಮೂರಿನ ಭಾರತೀಯ ಅಸೋಷಿಯೇಶನ್ ಅವರು ಆಯೋಜಿಸಿದ್ದ ಹೋಳಿ ಹಬ್ಬದ ಆಚರಣೆಗೆ ನನ್ನ ನೆಗಡಿ ಹೆಚ್ಚಾಗಿದ್ದರಿಂದ ಹೋಗಲಾಗಲಿಲ್ಲ. ಪುಟ್ಟಿಗೆ ಇದು ಬಹಳ ಬೇಸರ ಮಾಡಿಸಿತ್ತು, ಅದಕ್ಕೆ ಮನೆಯಲ್ಲಿ ನಾವು ಮೂವರೇ ಸಣ್ಣದಾಗಿ ಒಬ್ಬರಿಗೊಬ್ಬರು ಬಣ್ಣಗಳನ್ನು ಹಚ್ಚಿಕೊಳ್ಳುತ್ತಾ ಆಟವಾಡಿದೆವು. ಪುಟ್ಟಿ ತನಗೆ ತಾನೇ ಬಣ್ಣ ಹಚ್ಚಿಕೊಳ್ಳುವುದು ಹೆಚ್ಚು ಮೋಜೆನಿಸಿತು. ತಟ್ಟೆಯಲ್ಲಿದ್ದ ಬಣ್ಣಗಳನ್ನೆಲ್ಲಾ ಕೈಗೆ ಹಚ್ಚಿಕೊಂಡಳು. ಬಣ್ಣಗಳಿಂದ ತುಂಬಿದ್ದ...

Saturday, March 19, 2011

ಬಣ್ಣಗಳ ಹಬ್ಬ ಹೋಳಿ

ಕೆಂಪು, ನೀಲಿ, ಹಳದಿ,ಗುಲಾಬಿ,ಹಸಿರು, ಕಂದು - ಎಲ್ಲೆಲ್ಲೂ ರಂಗು...ಇದು ಹೋಳಿ ಹಬ್ಬದ ಗುಂಗು!! ಬಣ್ಣಗಳ ಈ ಹಬ್ಬದ ಬಗ್ಗೆ ಪುಟ್ಟಿಗೆ ತಿಳಿಸುತ್ತಾ ಗೂಗಲ್ ನಲ್ಲಿದ್ದ ಒಂದಷ್ಟು ಫೋಟೋಗಳನ್ನು ತೋರಿಸಿದೆ. ಬಣ್ಣಗಳನ್ನು ಮೈಮೇಲೆಲ್ಲಾ ಹಾಕಿಕೊಂಡದನ್ನು ಕಂಡು ಖುಶಿಪಟ್ಟು "ನಾನೂ ಮಾಡ್ತೀನಿ ಅಮ್ಮ, ಇದು ಮುಖಕ್ಕೆ ಪೈಂಟ್ ಹಚ್ಚೋ ತರಹ!!" ಅಂದ್ಲು. ಆಯ್ತು ಕಂದ ಕಲರ್ಸ್ ತರ್ತೀನಿ ಅಂದೆ. ಸರಿ, ಇಲ್ಲಿನ ಭಾರತೀಯ ಅಸೋಸಿಯೇಷನ್ ಅವರು ಆಯೋಜಿಸುವ ಹೋಳಿ ಹಬ್ಬಕ್ಕೆ ಹೋಗೋಣ...

Friday, March 18, 2011

ನಾವು ಮತ್ತೆ ಹಾಜರ್

ಪುಟ್ಟಿಪ್ರಪಂಚ ಎರಡು ತಿಂಗಳಿಂದ ಬಾಗಿಲು ಮುಚ್ಚಿತ್ತು. ಕಾರಣಾಂತರದಿಂದ ಇಲ್ಲಿ ಬರೆಯಲಾಗಿರಲಿಲ್ಲ. ಹೇಳದೇ ಕೇಳದೇ ಬ್ಲಾಗ್ ನಿಂದ ರಜೆ ಪಡೆದಿದ್ದಕ್ಕೆ ಪುಟ್ಟಿಯ ಹಲವು ಮಿತ್ರರಿಗೆ ಬೇಜಾರಾಗಿದೆ. ನಮ್ಮ ಮೇಲಿನ ಕಾಳಜಿಯಿಂದ ಫೋನ್ ಮಾಡಿ, ಈ ಮೈಲ್ ಮಾಡಿ, ಮುಖಪುಸ್ತಕದಲ್ಲಿ ಪ್ರೀತಿಯಿಂದ ವಿಚಾರಿಸಿಕೊಂಡ/ ಕಂಪ್ಲೈನ್ ಮಾಡಿದ ಎಲ್ಲ ಮಿತ್ರರಿಗೂ ವಂದನೆಗಳು:) ವ್ಯಾಲೆಂಟೈನ್ಸ್ ಡೇ ಗೆ ಪುಟ್ಟಿ ತನ್ನ ಶಾಲೆಯ ಮಿತ್ರರಿಗೆಲ್ಲಾ ಪುಟ್ಟ ಪುಟ್ಟ ಕಾರ್ಡ್ಸ್ ಮತ್ತು ಸಿಹಿ ಕೊಟ್ಟಳು....