Thursday, March 31, 2011

ನಾವೆಲ್ಲ ಹಕ್ಕಿಗಳು...

ಚಿಕ್ಕಂದಿನಲ್ಲಿ ನಾವು ಹಾಡುತ್ತಿದ್ದ ಪಕ್ಷಿಗಳ ಪರಿಚಯ ಮಾಡಿಸುವ ಈ ಪದ್ಯ ನೆನಪು ಮಾಡಿಕೊಳ್ಳಲು ಬಹಳ ದಿನಗಳಿಂದ ಪ್ರಯತ್ನಿಸುತ್ತಿದ್ದೆ. ಅಂತೂ ಇಂತೂ ಗೆಳಯರ ಸಹಾಯದಿಂದ ಇದು ಪೂರ್ತಿ ನೆನಪಾಯ್ತು.

ನಾವೆಲ್ಲ ಹಕ್ಕಿಗಳು
ರೆಕ್ಕೆ ಬಡಿದು ಹಾರುವೆವು
ಸಂತಸವ ಬೀರುವೆವು
ನಾನು ಗುಬ್ಬಚ್ಚಿ
ಬಹಳ ಚಿಕ್ಕದು
ನನ್ನಂತ ಚಿಕ್ಕದು
ಬೇರೆಲ್ಲೂ ಸಿಗದು //ನಾವೆಲ್ಲ//
ನಾನು ಗಿಡುಗ
ಬಹಳ ದೊಡ್ಡದು
ನನ್ನಂತ ದೊಡ್ಡದು
ಬೇರೆಲ್ಲೂ ಸಿಗದು//ನಾವೆಲ್ಲ//

ನಾನು ಕಾಗೆ
ಬಹಳ ಕಪ್ಪು
ನನ್ನಂತ ಕಪ್ಪು
ಬೇರೆಲ್ಲೂ ಸಿಗದು//ನಾವೆಲ್ಲ//
ನಾನು ನವಿಲು
ಬಹಳ ಚೆಂದ
ನನ್ನಂತ ಚೆಂದ 
ಬೇರೆಲ್ಲೂ ಸಿಗದು //ನಾವೆಲ್ಲ//

ನಾಲ್ಕು ಮಕ್ಕಳು ಸೇರಿ ಇದನ್ನು ಹಾಡುತ್ತಾ, ಹೆಜ್ಜೆ ಹಾಕುತ್ತಾ ಡ್ಯಾನ್ಸ್ ಮಾಡಿದ್ರೆ ಚೆನ್ನಾಗಿರುತ್ತೆ ಅಲ್ವಾ? :)
ಚಿತ್ರಕೃಪೆ : ಅಂತರ್ಜಾಲ 

4 comments:

ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಅಭಿನಂದನೆಗಳು.
ತಿರು ಶ್ರೀಧರ
ಕನ್ನಡ ಸಂಪದ
http://www.facebook.com/pages/%E0%B2%95%E0%B2%A8%E0%B3%8D%E0%B2%A8%E0%B2%A1-%E0%B2%B8%E0%B2%82%E0%B2%AA%E0%B2%A6-Kannada-Sampada/101548536574144

Wonderful Roopa, I'm imagining the kids dancing for yhis song in bird's costume :)

ಶ್ರೀಧರ್ ಅವರೆ,
ಬ್ಲಾಗ್ ಗೆ ಭೇಟಿ ನೀಡಿ, ಕಮೆಂಟಿಸಿದಕ್ಕೆ ವಂದನೆಗಳು... ಇದರಲ್ಲಿ ನನ್ನ ಸ್ವಾರ್ಥನೂ ಇದೆ, ಪುಟ್ಟಿಗೆ ಹೇಳಿಕೊಡಲು ಇವನ್ನೆಲ್ಲಾ ಇಲ್ಲಿ ಕಲೆಹಾಕುತ್ತಿರುವೆ:)

Vidya,
yes that would look fabulous... lets see:)

btw, coming here after a long time, hope all is well!

Post a Comment