Saturday, February 25, 2012

ಬುಗುರಿ


ನನ್ನಯ ಬುಗುರಿ ಬಣ್ಣದ ಬುಗುರಿ’ಗುರು ಗುರು’ ಸದ್ದನು ಮಾಡುವ ಬುಗುರಿಜಾಳಿಗೆ ಸುತ್ತಿ ಕೈಯನು ಎತ್ತಿಬೀಸಲು ಭರದಿಸುತ್ತುವ ಬುಗುರಿ
ಹೊಡೆತಕೆ ಅ೦ಜದೆ ಕೆಚ್ಚೆದೆಯಿ೦ದಲಿ
’ಗಿರಿ ಗಿರಿ’ ತಿರುಗುವಮೆಚ್ಚಿನ ಬುಗುರಿ
ಅ೦ಗೈ ಮೇಲೆ
ಆಡುವ ಬುಗುರಿಕಚಗುಳಿಯಿಕ್ಕುವ ಮೋಜಿನ ಬುಗುರಿ
ಕಾಮನ ಬಿಲ್ಲನು
ಭೂಮಿಗೆ ಇಳಿಸಿ’ಗರ ಗರ’ ಸುತ್ತುವಬಣ್ಣದ ಬುಗುರಿ

2 comments:

ಬುಗುರಿಯ ಈ ಕವನ ಓದಿದ್ದೆ. ನೆನಪಿಸಿದ್ದಕ್ಕೆ ಧನ್ಯವಾದಗಳು. ನನ್ನ ಬ್ಲಾಗ್ ಗೂ ಬನ್ನಿ.

ಹಿಂದೆ ಓದಿದ್ದೆ.....ಸುಂದರ ಶಿಶು ಗೀತೆ....
ನನ್ನ ಬ್ಲಾಗ್ ಗೂ ಬನ್ನಿ ...
http://ashokkodlady.blogspot.com/

Post a Comment