Monday, March 31, 2008

ಮೂರು ಮೂವತ್ತು !!!

ಪುಟ್ಟಿ ತನ್ನ ಮೂರು ತಿಂಗಳ ಬರ್ತ್ ಡೇಯನ್ನ ಅವರಮ್ಮನ ಮೂವತ್ತರ ಹುಟ್ಟುಹಬ್ಬದೊಂದಿಗೆ ಆಚರಿಸಿಕೊಂಡಳು. ಪ್ರತಿ ಸರ್ತಿ ಒಬ್ಬಳೇ ಕೇಕ್ ಕಟ್ ಮಾಡಿ ಬೋರ್ ಆಗಿದ್ದ ಪುಟ್ಟಿಗೆ ಅಮ್ಮನ ಜೊತೆ ಕೇಕ್ ಮಾಡೋಕೆ ಬಲು ಖುಶಿ.


ಈ ದಿನ ಜನುಮದಿನ ಶುಭಾಶಯ ನನ್ನ ಶುಭಾಶಯ
ಈ ದಿನ ಜನುಮದಿನ ಶುಭಾಶಯ ನನ್ನ ಶುಭಾಶಯ
ಈ ನಗೆ ಈ ನಗೆ ಹೂವು ಸುಂದರವು
ತುಂಬಿದೆ ತುಂಬಿದೆ ಅದರಲಿ ನಿನ್ನೊಲವು
ಕಂಗಳು ಆಡುವ ಮಾತುಗಳು
ತಂದಿದೆ ಹೃದಯಕೆ ಹೊಸ ಗೆಲವು//೨//

ಎಲ್ಲರೂ ಅಮ್ಮನಿಗೆ ಗಿಫ್ಟ್ ಕೊಟ್ಟಿದ್ದು ನೋಡಿಯೋ ಇಲ್ಲ ಕೇಕ್ ತಿಂದು ಹೆಚ್ಚಿನ ಶಕ್ತಿ ಬಂತೇನೋ, ರಾತ್ರಿ ಮಲಗೋದ್ರಲ್ಲಿ ಬೋರಲು ಬಿದ್ದಳು ನಮ್ಮ ಪುಟ್ಟಿ. ಅದು ಅವಳು ಅಮ್ಮನಿಗೆ ಕೊಟ್ಟ ಹುಟ್ಟುಹಬ್ಬದ ಗಿಫ್ಟ್:)

2 comments:

putti frock,boralu biddhiruva photo erdu sooper..abbha putti sadhanegalanna nodthidhre innu solpa dinadalli ammana beralu hididhu nedithale ansuthe..

Thank you spurthi:) aa dinakke naanu kaytaa iddeni, will keep u updated:))

Post a Comment