ಪುಟ್ಟಿಗೆ ಮೊದಲಿಂದ ಬಣ್ಣ ಬಣ್ಣದ ಚಿತ್ರಗಳಿರೋ ಬುಕ್ ಅಂದ್ರೆ ಬಲು ಇಷ್ಟ. ನಾನು ಅವಳಿಗೆ ಓದಿ ಹೇಳಲು ಹೋದ್ರೆ ಕಿತ್ಕೊಂಡು ತಾನೆ ಓದೊ ಹಾಗೆ ನಟಿಸೋಳು. ಮಾತಾಡೋದು ಕಲಿತ ಮೇಲೆ ಅವಳು ಬುಕ್ ಹಿಡಿದಾಗ ಅಥವಾ ಪೆನ್/ಪೆನ್ಸಿಲ್ ಹಿಡಿದು ಗೀಚುವಾಗ ಏನು ಓದ್ತಾಯಿದ್ದೀಯಾ/ಬರಿತಾಯಿದ್ದೀಯಾ? ಅಂತ ಕೇಳಿದ್ರೆ. ಥಟ್ ಅಂತ " ಆ ಈ..." ಅನ್ನೋಳು, ಅದನ್ಯಾರು ಅವ್ಳಿಗೆ ಹೇಳ್ ಕೊಟ್ಟ್ರೊ ಗೊತ್ತಿಲ್ಲ. ಯೂ ಟ್ಯೂಬಿನಲ್ಲಿ ನಾನ್ ತೋರಿಸ್ತಾಯಿದ್ದ ಕರುಳಿನ ಕರೆ ಚಿತ್ರದ ಅಕ್ಷರಮಾಲೆ ಹಾಡಿನ ಪ್ರಭಾವವಿರಬೇಕು !! ಈಗಂತೂ ಅಮ್ಮನ ಸಹಾಯದಿಂದ ಅ ಇಂದ ಅಃ ವರೆಗೆ ಹೇಳ್ತಾ...