Saturday, May 23, 2009

ಅ ಅ ಇ ಈ...

ಪುಟ್ಟಿಗೆ ಮೊದಲಿಂದ ಬಣ್ಣ ಬಣ್ಣದ ಚಿತ್ರಗಳಿರೋ ಬುಕ್ ಅಂದ್ರೆ ಬಲು ಇಷ್ಟ. ನಾನು ಅವಳಿಗೆ ಓದಿ ಹೇಳಲು ಹೋದ್ರೆ ಕಿತ್ಕೊಂಡು ತಾನೆ ಓದೊ ಹಾಗೆ ನಟಿಸೋಳು. ಮಾತಾಡೋದು ಕಲಿತ ಮೇಲೆ ಅವಳು ಬುಕ್ ಹಿಡಿದಾಗ ಅಥವಾ ಪೆನ್/ಪೆನ್ಸಿಲ್ ಹಿಡಿದು ಗೀಚುವಾಗ ಏನು ಓದ್ತಾಯಿದ್ದೀಯಾ/ಬರಿತಾಯಿದ್ದೀಯಾ? ಅಂತ ಕೇಳಿದ್ರೆ. ಥಟ್ ಅಂತ " ಆ ಈ..." ಅನ್ನೋಳು, ಅದನ್ಯಾರು ಅವ್ಳಿಗೆ ಹೇಳ್ ಕೊಟ್ಟ್ರೊ ಗೊತ್ತಿಲ್ಲ. ಯೂ ಟ್ಯೂಬಿನಲ್ಲಿ ನಾನ್ ತೋರಿಸ್ತಾಯಿದ್ದ ಕರುಳಿನ ಕರೆ ಚಿತ್ರದ ಅಕ್ಷರಮಾಲೆ ಹಾಡಿನ ಪ್ರಭಾವವಿರಬೇಕು !! ಈಗಂತೂ ಅಮ್ಮನ ಸಹಾಯದಿಂದ ಅ ಇಂದ ಅಃ ವರೆಗೆ ಹೇಳ್ತಾಳೆ.

10 comments:

ನಿಮ್ಮ ಪುಟ್ಟಿ ಬ್ಲಾಗ್ ನಿಜವಾಗ್ಲೂ ಸೂಪರ್....ಚಿಕ್ಕ ಮಗುವಗಿದ್ದಗಿನಿಂದ.. ಎಲ್ಲ ಚೆಟುವತಿಕೆಗಳನ್ನು,,, ರೆಕಾರ್ಡ್ ಮಾಡಿ......ಎಷ್ಟು structure ನಿಂದ ಅಪ್ಡೇಟ್ ಮಾಡ್ತಾ ಇದ್ದೀರಾ.... ಇಟ್ಸ್ ರಿಯಲಿ ನೈಸ್.. ಇರುವ ಟೆಕ್ನಾಲಜಿ ನ ಚೆನ್ನಾಗಿ use ಮಾಡ್ತಾ ಇದ್ದೀರಾ...... ಮುಂದುವರಿಯಲಿ ನಿಮ್ಮ ಪುಟ್ಟಿಯ ಪುಟ್ಟ ಪುಟ್ಟ ಹೆಜ್ಜೆಯ ಗುರುತು
ಗುರು

puTTi prapancha iShTavaaguttade..
puTTige "draShTi tegedubiDi....

ನಿಮ್ಮ ಮೆಚ್ಚುಗೆಗೆ ಥ್ಯಾಂಕ್ಸ್ ಗುರು ಅವರೆ! ಖಂಡಿತಾ ಅವಳ ಎಲ್ಲಾ ಹೆಜ್ಜೆಗಳನ್ನು ಇಲ್ಲಿ ದಾಖಲಿಸಲು ಪ್ರಯತ್ನಿಸುವೆ:)

ಪ್ರಕಾಶ್ ಅವರೆ,
ಪುಟ್ಟಿಪ್ರಪಂಚನ ಇಷ್ಟ ಅಂದಿದಕ್ಕೆ ಧನ್ಯವಾದಗಳು!!

ಪುಟ್ಟಿಪ್ರಪಂಚ ಬ್ಲಾಗನ್ನು ಚೆನ್ನಾಗಿ ಡಿಸೈನ್ ಮಾಡಿದ್ದೀರ. ನೀವು ೊಂದೆರಡು ಶಿಶುಪ್ರಾಸಗಳನ್ನು ಕಳುಹಿಸಿದ್ದೀರ. ೀ ಬಗೆಯ ವೈವಿಧ್ಯತೆಗೆ ಭಾಷಾಶಾಸ್ತ್ರದಲ್ಲಿ ಪ್ರಾಂತ್ಯಬೇಧ ಎನ್ನುತ್ತಾರೆ. ವಿಶೇಷವೆಂದರೆ ಕರ್ನಾಟಕದಲ್ಲಿ ಪ್ರತೀ 20 ಕಿಲೋಮೀಟರಿಗೊಮ್ಮೆ ಭಾಷೆಯ ಸ್ವರೂಪ ಬದಲಾಗುತ್ತಾ ಹೋಗುತ್ತದೆ!

ತುಂಬಾ ಮುದ್ದು ಬರತ್ತೆ!! ಎಷ್ಟು ದೊಡ್ಡವಳಾಗಿಬಿಟ್ಟಿದಾಳೆ ಆಗ್ಲೆ! ಮೊನ್ನೆಮೊನ್ನೆ ಹುಟ್ಟಿದಹಾಗೆ ಅನ್ಸ್ತಾ ಇದೆ ಇನ್ನೂ!

ಎಷ್ಟೊಂದು ಹುರುಪಿನಿಂದ ಪುಟ್ಟಿಯನ್ನು ಇಷ್ಟು ಚೆನ್ನಾಗಿ ಬೆಳೆಸುತ್ತಿರುವುದು ನೋಡಿದ್ರೆ ತುಂಬಾ ಸಂತೋಷ ಆಗತ್ತೆ... ನಿನ್ನ ಮತ್ತು ಹೇಮಂತರಂತ ಅಮ್ಮ-ಅಪ್ಪ ಇದ್ರೆ ಮಕ್ಕಳ ಬೆಳವಣಿಗೆಗೆ ಯಾವ ಕೊರತೆಯೂ ಇರಲ್ಲ! :)

ಶಿಕಾಗೋ ಟ್ರಿಪ್ ಹಾಕಿ ಬೇಗ! ಒಂದು ಸಲ ಬಂದು ಏನೂ ನೋಡದೆ ಬರೀ ಮಾತು ಕೇಳ್ಸ್ಕೊಂಡು ಹೋಗಿದಾಳೆ ಪುಟ್ಟಿ. :)

super Putti, aagle akshara helakke barutta. very good. nimma ammanigoo shabhaash ninage idanna helikottiddakke :)

ಸತ್ಯ ಸರ್,
ಪುಟ್ಟಿಯ ಬ್ಲಾಗ್ ಡಿಸೈನ್ ಇಷ್ಟಪಟ್ಟಿದಕ್ಕೆ ಮತ್ತೆ ಶಿಶುಗೀತೆಗಳ ಬಗ್ಗೆ ಹೆಚ್ಚಿನ ವಿವರ ತಿಳಿಸಿದಕ್ಕೆ ಥ್ಯಾಂಕ್ಸ್

ಶ್ರೀಕಾಂತ್,
ನಿಮ್ಮ ಪ್ರೀತಿಯ ಅಭಿಮಾನದ ಮಾತುಗಳಿಗೆ ನಾವ್ ಋಣಿ:)

ಹೌದು ಪುಟ್ಟಿ ಬಹಳ ಬೇಗ ಬೆಳೆದು ಬಿಟ್ಟ್ಲು ಅನ್ನಿಸ್ತಾಯಿದೆ, ಛೆ ಮಕ್ಕಳು ಇಷ್ಟ್ ಬೇಗ ಯಾಕೆ ದೊಡ್ಡವರು ಆಗ್ತಾರೋ !

ಥ್ಯಾಂಕ್ಸ್ ವಿದ್ಯಾ!

Post a Comment