Wednesday, December 29, 2010

ಪುಟ್ಟಿಗೆ ಇವತ್ತಿಗೆ ಮೂರು ವರ್ಷ!!

ಸ ಮಯ ಎಷ್ಟು ಬೇಗ ಕಳೆದು ಹೋಗುತ್ತದಲ್ಲ? ಮೂರು ವರ್ಷ ನೋಡುತ್ತ ನೋಡುತ್ತ ಕಳೆದು ಹೋಗಿದೆ. ಪುಟ್ಟಿಗೆ ಇವತ್ತಿಗೆ ಮೂರು ವರ್ಷ!!! ನನ್ನನ್ನು ಬ್ಲಾಗ್ ಬರೆಯುವಂತೆ ಮಾಡಿ, ದಿನಕ್ಕೊಂದು ಹೊಸ ಆಟ ಕಲಿತು ಬ್ಲಾಗಿನಲ್ಲಿ ಬರೆಯಲು ಹೊಸ ವಿಚಾರ ಕೊಡುತ್ತಿರುವವಳು ಇವಳು.  ಅವಳೆಷ್ಟೇ ದೊಡ್ಡವಳಾದರೂ ಇಂದಿನ ಮುಗ್ಧತೆ ಹೀಗೆ ಇರಲಿ ಮತ್ತು ಸದಾ ಸಂತಸದಿ ಬಾಳಲಿ ಎಂಬುದೇ ಜನುಮದಿನದಂದು ನನ್ನ ಹಾರೈಕೆ. ಅಂದ ಹಾಗೆ, ‘ಪ್ರೇಮದ ಕಾಣಿಕೆ’ ಚಿತ್ರದಲ್ಲಿರುವ...

Wednesday, December 22, 2010

ಬ್ಯಾ ಬ್ಯಾ ಕುರಿ ಮರಿ..

ಇದು ಪುಟ್ಟಿ ಮಾಡಿರೋ ಕುರಿಮರಿ. ಇದನ್ನ ನೋಡ್ತಾ ಪುಟ್ಟಿ ’baa baa white sheep' ಅಂತ ಹಾಡನ್ನ ಮಾರ್ಪಡಿಸಿ ಹಾಡ್ತಾಳೆ!! ಈ ಆಂಗ್ಳ ಶಿಶುಗೀತೆಯ ಕನ್ನಡ ಅನುವಾದ ಹೀಗಿದೆ.. ಬ್ಯಾ ಬ್ಯಾ ಕುರಿ ಮರಿ ನಿನ್ ತವ ವುಲ್ ಐತ? ಇದೆ ಸಾರ್ ಇದೆ ಸಾರ್ ಮೂರ್ ಚೀಲದ್ ತುಂಬ ಒಂದ್ ನಮ್ ದಣಿಗೋಳ್ಗೆ ಒಂದ್ ಅವ್ರ್ ಎಂಡ್ರುಗೆ ಮತ್ತೊಂದ್ ಈ ರಸ್ತೆ ಮೂಲೇಲಿರೊ ಚಿಕ್ಕ್ ಮಗೀಗೆ -ಸುಚಿನ್ ಬಾ ಬಾರೋ ಕರಿ ಕುರಿ ಉಣ್ಣೆ ಇದೆಯಾ ಕುರಿ ಮರಿ ಇದೆ ಗುರು...

Sunday, December 19, 2010

ಅಮ್ಮ ಮುದ್ದು ಅಮ್ಮ

ಅಮ್ಮ ಮುದ್ದು ಅಮ್ಮ ಅಮ್ಮ ಮುದ್ದು ಅಮ್ಮ ಎಂತ ಸಿಹಿ ನಿನ್ನ ಮುತ್ತು ಅಮ್ಮ ನನ್ನ ಜೊತೆ ಆಡು ಬಾರೆ ಅಮ್ಮ ಪಾಪ ಮುದ್ದು ಪಾಪ ಪಾಪ ಮುದ್ದು ಪಾಪ ದಂತದ ಗೊಂಬೆ ನೀನು ಪಾಪ ದೈವ ತಂದ ಕೊಡುಗೆ ನೀನು ಪಾಪ ಅಮ್ಮ ಎತ್ತಿಕೋ ಒಮ್ಮೆ ಅಪ್ಪಿಕೋ ಅಮ್ಮ ಎತ್ತಿಕೋ ಒಮ್ಮೆ ಅಪ್ಪಿಕೋ ತೂಗಿಸು ತೂಗಿ ನಲಿಯಿಸು ನಗುವಲಿ ಮೈಮನ ಮರೆಯಿಸು ನಿನ್ನ ಪ್ರೀತಿ ಅಲೆಯಲಿ ಎನ್ನ ತೇಲಿಸು ಹೊತ್ತವಳಲ್ಲ ಹೆತ್ತವಳಲ್ಲ ತಾಯಿತನವ ನಾ ಕಂಡವಳಲ್ಲ ಬಂದೇ ನೀನು ಬಂದೆ ತಾಯಿಯ ... ತಂದೆ ಬಾಳಲಿಂದು ಬೆಳಕು ಚೆಲ್ಲಿ ನಿಂದೆ ಪಾಪ ಮುದ್ದು ಪಾಪ ಪಾಪ ಮುದ್ದು ಪಾಪ ದಂತದ ಗೊಂಬೆ ನೀನು ಪಾಪ ದೈವ ತಂದ ಕೊಡುಗೆ ನೀನು ಪಾಪ ತಬ್ಬಲಿ ಅಲ್ಲ ನಾ ತಾಯಿಯಾ ಪಡೆದೆ ನಾ ತಬ್ಬಲಿ ಅಲ್ಲ ನಾ ತಾಯಿಯಾ ಪಡೆದೆ ನಾ ಮರೆಯೆನಾ...

Tuesday, December 14, 2010

ಮುದ್ದೆ ಮಾಡೋದು ಹೀಗೆ ...

ನನಗೆ ಮುದ್ದೆ ಮಾಡೋಕೆ ಬರೋಲ್ಲ. ಅದು ಅಷ್ಟಾಗಿ ಇಷ್ಟನೂ ಇಲ್ಲ. ರಾಗಿ ರೊಟ್ಟಿ ಇಷ್ಟ ಅದನ್ನ ತಪ್ಪದೇ ವಾರಕ್ಕೆ ಒಂದೆರೆಡು ಸರ್ತಿ ಮಾಡ್ತೀನಿ. ಪುಟ್ಟಿಗೂ ಬಲು ಇಷ್ಟ. ಪುಟ್ಟಿ ಅಜ್ಜ್ಜಿಇಲ್ಲಿ ಇದ್ದಾಗ ಅವರು ಆಗಾಗ್ಗೆ ಮುದ್ದೆ ಮಾಡುತ್ತಿದ್ದರು. ಆಗೆಲ್ಲಾ ಪುಟ್ಟಿ ಅವರ ಪಕ್ಕದಲ್ಲೇ ಕುಳಿತಿದ್ದು, ಅವರು ಮುದ್ದೆ ತಿರುವುದನ್ನೇ ನೋಡುತ್ತಾ ಕೊನೆಯಲ್ಲಿ ತಾನೂ ಒಂದೆರೆಡು ತುತ್ತು ಬಿಸಿ ಬಿಸಿ ಮುದ್ದೆ ತುಪ್ಪದಲ್ಲಿ ಹಾಕಿ ಗುಳುಮ್ ಮಾಡುತ್ತಿದ್ದಳು.  ಈಗ ಮುದ್ದೆ ಮಾಡುವ ಕೋಲಿಗೆ ಕೆಲಸವಿಲ್ಲ. ಆಗಾಗ್ಗೆ ಕಣ್ಣಿಗೆ ಕಾಣಿಸಿದಾಗ ಅದನ್ನ ಹಿಡಿದು ಪುಟ್ಟಿ ಮುದ್ದೆ ಮಾಡೋದು ಹೀಗೆ...  ...

Thursday, December 09, 2010

ಪುಟ್ಟ ಪುಟ್ಟ ಕಣ್ಣುಗಳನುಬೊಚ್ಚು ಬಾಯಿಯನ್ನು ಬಿಟ್ಟುಬೆರಳ ಚೀಪಿ ಮನವ ತಣಿಸುವವನು ಯಾರು?ಚುಳ್ ಎಂದು ಉಚ್ಚೆ ಹುಯ್ದುಹಾಸಿಗೆಯನು ಒದ್ದೆ ಮಾಡಿಆ ಇ ಊ ಎಂದರಚುವನಿವನು ಯಾರು?ಉರುಟು ಮುಖವ ದೊಡ್ಡ ಕಿವಿಯಉದ್ದುದ್ದದ ಬೆರಳ ಹೊಂದಿದಟ್ಟ ಕೂದಲುಗಳನು ಹೊಂದಿದವನು ಯಾರು?ಇರಲಿ ನೀ ಚಿರಾಯುವಾಗುನೆಮ್ಮದಿ ಆನಂದ ಹೊಂದಿನಿನಗೆ ಇರಲಿ ಲಕ್ಷ್ಮಿ ದಯೆಯುಈಶಪುತ್ರನೇ ಗಿರೀಶಪುತ್ರನೇ!ಮಂಜುಪುತ್ರನೇ!ಸಾಫ಼್ಟ್ ವೇರ್ ಅಪ್ಪ ತಾನುಅಮ್ಮನೊ ತಾ ವೈದ್ಯೆಯಾಗಿಪಡೆದನೀನು ಧನ್ಯನೇ ಅನಾಮಧೇಯನೇ!(ಕೌಶಿಕ ಮರಾಠೆ ಯನಾಮಕರಣದದಿನಕ್ಕೆರಚಿಸಿದ ಕಂದ ಪದ್ಯ.)ಪೋಸ್ಟ್ ಮಾಡಿದವರು mukundachiplunkarhttp://chipmukunda.blogspot.com/2010/10/blog-post_04.h...