ನನಗೆ ಮುದ್ದೆ ಮಾಡೋಕೆ ಬರೋಲ್ಲ. ಅದು ಅಷ್ಟಾಗಿ ಇಷ್ಟನೂ ಇಲ್ಲ. ರಾಗಿ ರೊಟ್ಟಿ ಇಷ್ಟ ಅದನ್ನ ತಪ್ಪದೇ ವಾರಕ್ಕೆ ಒಂದೆರೆಡು ಸರ್ತಿ ಮಾಡ್ತೀನಿ. ಪುಟ್ಟಿಗೂ ಬಲು ಇಷ್ಟ. ಪುಟ್ಟಿ ಅಜ್ಜ್ಜಿಇಲ್ಲಿ ಇದ್ದಾಗ ಅವರು ಆಗಾಗ್ಗೆ ಮುದ್ದೆ ಮಾಡುತ್ತಿದ್ದರು. ಆಗೆಲ್ಲಾ ಪುಟ್ಟಿ ಅವರ ಪಕ್ಕದಲ್ಲೇ ಕುಳಿತಿದ್ದು, ಅವರು ಮುದ್ದೆ ತಿರುವುದನ್ನೇ ನೋಡುತ್ತಾ ಕೊನೆಯಲ್ಲಿ ತಾನೂ ಒಂದೆರೆಡು ತುತ್ತು ಬಿಸಿ ಬಿಸಿ ಮುದ್ದೆ ತುಪ್ಪದಲ್ಲಿ ಹಾಕಿ ಗುಳುಮ್ ಮಾಡುತ್ತಿದ್ದಳು.
ಈಗ ಮುದ್ದೆ ಮಾಡುವ ಕೋಲಿಗೆ ಕೆಲಸವಿಲ್ಲ. ಆಗಾಗ್ಗೆ ಕಣ್ಣಿಗೆ ಕಾಣಿಸಿದಾಗ ಅದನ್ನ ಹಿಡಿದು ಪುಟ್ಟಿ ಮುದ್ದೆ ಮಾಡೋದು ಹೀಗೆ...
3 comments:
ಪುಟ್ಟಿ,
ಮುದ್ದೆ ಸೂಪರ್ ಆಗಿ ಇತ್ತು..
ನಾವು ನುಂಗಿಬಿಟ್ಟಿವಿ :)
ಥ್ಯಾಂಕ್ ಯೂ ಅಂಕಲ್ ಆಂಟಿ! ಮನೆಗೆ ಬನ್ನಿ ನಿಮಗೆ ಬೇಕಾದ್ದೆಲ್ಲಾ ನಿಮಿಷದಲ್ಲೇ ರೆಡಿ ಮಾಡಿ ಕೊಡ್ತೀನಿ:)
-ಪುಟ್ಟಿ
nice
Post a Comment