Thursday, January 20, 2011

ಪೇಪರ್ ಟ್ಯೂಬ್ ಕಬ್ಬು

ಸಂಕ್ರಾಂತಿ ಹಬ್ಬಕ್ಕೆಂದು ಮಾಡಿದ ಮತ್ತೊಂದು ಕ್ರಾಫ್ಟ್ ಇದು. ಮೊದಲಿಗೆ ಖಾಲಿಯಾದ ಗಿಫ್ಟ್ ವ್ರಾಪ್ ಪೇಪರ್ ನ ಒಳಗಿನ ಪೇಪರ್ ಟ್ಯೂಬ್ ಗೆ ಬಣ್ಣ ಹಚ್ಚಲು ಪುಟ್ಟಿಗೆ ಕೊಟ್ಟೆ. ಅಡುಗೆಮನೆಯ ಪೇಪರ್ ಟವೆಲ್ ಅಥವಾ ಅಲುಮಿನಿಯಂ ಫಾಯಿಲ್ ಒಳಗಿನ ಟ್ಯೂಬ್ ಆದರೂ ಆಗುತ್ತೆ. ಕೆಂಪು ಬಣ್ಣಕ್ಕೆ ಸ್ವಲ್ಪೇ ಸ್ವಲ್ಪ ಕಪ್ಪು ಬೆರಸಿದ್ದೆ. ಅದು ಒಣಗಿದ ನಂತರ ಅದರ ಮೇಲೆ ಅಲ್ಲಲ್ಲಿ ಕಪ್ಪು ಮತ್ತು ಬಿಳಿಯ ಬಣ್ಣದ ಗೆರೆಗಳನ್ನು ಬರೆದೆ. ನಂತರ ಒಂದಷ್ಟು ಲಿಲ್ಲಿ ಹೂವಿನ ಎಲೆಗಳನ್ನು ತಂದು...

Monday, January 17, 2011

ಸಂಕ್ರಾಂತಿಗೆ ಸಿಹಿ ಸರ

ಸಂಕ್ರಾಂತಿ ದಿನ ಸಂಜೆ ಮಕ್ಕಳಿಗೆ ಆರತಿ ಮಾಡೋವಾಗ ಸಿಹಿ ಕುಸುರಿ ಕಾಳಿನ ಹಾರವನ್ನು ಹಾಕೋದು ವಾಡಿಕೆ. ಇವುಗಳ ಬಗ್ಗೆ ಅಂತರ್ಜಾಲದಲ್ಲಿ ಹುಡುಕುತ್ತಿದ್ದಾಗ ಇದು ಮಹಾರಾಷ್ಟ್ರದಲ್ಲಿ ಹೆಚ್ಚು ಪ್ರಚಲಿತ ಅಂತ ತಿಳಿಯಿತು. ಅಲ್ಲಿಯವರು ಸಂಕ್ರಾಂತಿ ಸಮಯದಲ್ಲಿ ಮಾಡುವ "ಬೋರ್ ನಹನ್" (ಬೋರ್ ಅಂದ್ರೆ ಒಂದು ರೀತಿಯ ಸಣ್ಣ ಹಣ್ಣು, ಮತ್ತು ನಹನ್ ಅಂದ್ರೆ ಸ್ನಾನ) ಅನ್ನುವ ಆಚಾರಣೆ ಸಂದರ್ಭದಲ್ಲಿ ಚಿಕ್ಕ ಮಕ್ಕಳಿಗೆ ಕಪ್ಪು ಬಣ್ಣದ ಹೊಸ ಬಟ್ಟೆ ತೊಡಿಸಿ ಕುಸುರಿ ಕಾಳಿನಿಂದ ಮಾಡಿದ...

Sunday, January 16, 2011

ಸಂಕ್ರಾಂತಿ ಕಲರಿಂಗ್ ಪೇಜ್

ಸಂಕ್ರಾಂತಿ ಹಬ್ಬದ ವಿಶೇಷತೆಗಳನ್ನು ಬಿಂಬಿಸುವ ಒಂದೆರೆಡು ಕಲರಿಂಗ್ ಪೇಜ್ ಗಳನ್ನು ಗೂಗಲ್ ನಲ್ಲಿ ಸಿಕ್ಕ ಚಿತ್ರಗಳನ್ನು ಉಪಯೋಗಿಸಿಕೊಂಡು ಮಾಡಿಕೊಂಡೆ. ದಿನಕ್ಕೊಂದೆರೆಡು ಪೇಜ್ ಗಳಿಗೆ ಪುಟ್ಟಿ ಬಣ್ಣ ತುಂಬುತ್ತಿದ್ದಳು. ಅಕ್ಷರಗಳು ಸರಿಯಾಗಿ ಮೂಡದಿದ್ದರೂ ಕಲರಿಂಗ್ ಮಾಡಿದ್ದರ ಪರಿಣಾಮ ಜೊತೆಗೆ ನನ್ನ ಕಾಮೆಂಟರಿ ಎಲ್ಲಾ ಸೇರಿ ಇವತ್ತು ಪುಟ್ಟಿ ತಾತನ ಹತ್ರ ಫೋನ್ ನಲ್ಲಿ ಮಾತಾಡೋವಾಗ "ಸಂಕ್ರಾಂತಿ ಮಾಡಿದ್ವಿ" ಅಂತ ಹೇಳಿದ್ದು ಕೇಳಿ ನಾನು ಸಂತಸದಿಂದ ಸ್ವಲ್ಪ ಉಬ್ಬಿರುವೆ:) ಕಲರಿಂಗ್...

Thursday, January 13, 2011

ಮಕರ ಸಂಕ್ರಾಂತಿ ಶುಭಾಶಯಗಳು

ಭಾರತದಲ್ಲಿ ಬೆಳೆವ ಮಕ್ಕಳಿಗೆ ನಮ್ಮ ಹಬ್ಬ ಹರಿದಿನಗಳ ಬಗ್ಗೆ ಹೇಳಿಕೊಡಲು ಯಾವುದೇ ಪಠ್ಯಪುಸ್ತಕ ಬೇಕಿಲ್ಲ. ಅಲ್ಲಿ ಸುತ್ತಲಿನ ಹಬ್ಬದ ವಾತಾವರಣವೇ ಕಲಿಸುತ್ತದೆ. ಯಾವ ಹಬ್ಬಕ್ಕೆ ಏನು ವಿಶೇಷ ಅನ್ನುವುದು ಆ ಹಬ್ಬದ ದಿನ ಮನೆಯ ಹತ್ತಿರದ ಅಂಗಡಿ/ ಮಾರುಕಟ್ಟೆಗೆ ಒಂದು ಸುತ್ತು ಹೋಗಿ ಬಂದರೆ ಸಾಕು:) ಆದರೆ ಇದೆಲ್ಲದರಿಂದ ದೂರವಿರುವ ನನ್ನ ಪುಟ್ಟಿಗೆ ಇವುಗಳನ್ನ ನಾವೇ ಮನೆಯಲ್ಲಿ ಹೇಳಿಕೊಡಬೇಕು. ಇಲ್ಲಿನ ಹಬ್ಬಗಳು/ ಆಚರಣೆಗಳು ಬಂತೆಂದರೆ ಶಾಲೆಗಳಲ್ಲಿ ಆ ವಾರ/ ತಿಂಗಳೆಲ್ಲಾ...

Tuesday, January 04, 2011

ಹುಟ್ಟುಹಬ್ಬ ಪಾರ್ಟಿ ಫೋಟೋಗಳು..

 ಪುಟ್ಟಿ     ಸ್ನೇಹಿತರು ಕೇಕ್ ಕತ್ತರಿಸುತ್ತಾ.. ಮಿಕ್ಕ ಫೋಟೋಗಳು ಮತ್ತು ಆಡಿದ ಆಟಗಳ ವಿವರ ಮುಂದಿನ ಪೋಸ್ಟ್ ನಲ್ಲಿ....